Puneeth RajKumar: ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಸೀಟು ಭರ್ತಿ ಪ್ರಸ್ತಾವನೆ ಕುರಿತಾಗಿ ಪ್ರತಿಕ್ರಿಯಿಸಿದ ಪುನೀತ್​ ರಾಜ್​ಕುಮಾರ್​..!

ಕೊರೋನಾ ಭೀತಿ ಬೆಂಗಳೂರಿನಲ್ಲೂ ಸಹ ಹೆಚ್ಚಾಗಿದೆ. ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆಯಿಂದಾಗಿ ಬಿಬಿಎಂಪಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಅದರಲ್ಲಿ ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಪ್ರೇಕ್ಷಕರಿಗೆ ಸಿನಿಮಾ ವೀಕ್ಷಣೆಗೆ ಮಾತ್ರ ಅವಕಾಶ ನೀಡುವಂತೆ ಮನವಿ ಮಾಡಲಾಗಿದೆಯಂತೆ. ಇದರಿಂದಾಗಿ ಈಗ ಮತ್ತೆ ಸಿನಿರಂಗದ ಮಂದಿಯಲ್ಲಿ ಆತಂಕ ಮನೆ ಮಾಡಿದೆ.

ಸಿನಿಮಾ ಥಿಯೇಟರ್

ಸಿನಿಮಾ ಥಿಯೇಟರ್

  • Share this:
ಲಾಕ್​ಡೌನ್​ ಸಡಿಲಗೊಂಡ ನಂತರ ಬಾಗಿಲು ತೆರೆದ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್​ಗಳಲ್ಲಿ ಶೇ 50 ಸೀಟಿಂಗ್​ಗೆ ಅವಕಾಶ ನೀಡಲಾಗಿತ್ತು. ಇದಾದ ಕೆಲ ಸಮಯದ ನಂತರ ಫೆ. ಮೊದಲ ವಾರದಿಂದ ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್​ಗಳಲ್ಲಿ ಶೇ 100ರಷ್ಟು ಪ್ರೇಕ್ಷಕರು ಈಗ ಸಿನಿಮಾ ವೀಕ್ಷಿಸಲು ಅವಕಾಶ ನೀಡಲಾಯಿತು. ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್​ಗಳಲ್ಲಿ ಎಲ್ಲಾ ಸೀಟ್​ಗಳನ್ನ ಭರ್ತಿ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿ ಹೊರಡಿಸಿರುವ ಮಾರ್ಗಸೂಚಿಯ ಅನುಸಾರವೇ ಇಂದಿಗೂ ಸಿನಿಮಾ ಪ್ರದರ್ಶನ ಮಾಡಲಾಗುತ್ತಿದೆ. ಕೇಂದ್ರ ಮಾಹಿತಿ ಮತ್ತು ಪ್ರಸರಣ ಇಲಾಖೆ ಜ.30ರ ಸಂಜೆಯ ನಂತರ ಬಿಡುಗಡೆ ಮಾಡಿದ ಹೊಸ ಮಾರ್ಗಸೂಚಿಯಲ್ಲಿರು ಅಂಶಗಳನ್ನೇ ಇಂದಿಗೂ ಪಾಲಿಸಲಾಗುತ್ತಿದೆ.  ಇದರಿಂದಾಗಿ ಚಿತ್ರರಂಗ ನಿರಾಳಗೊಂಡು ಕೊಂಚ ಉಸಿರಾಡುವಂತಾಯಿತು. ಆದರೆ ಈಗ ಕೊರೋನಾ ಭೀತಿ ಮತ್ತೆಆರಿಗೆ ತರುವ ಆಲೋಚನೆ ಹಾಗೂ ಸಿನಿಮಾ ಮಂದಿರಗಳಲ್ಲಿ ಶೇ 50ರಷ್ಟು ವೀಕ್ಷಕರಿಗೆ ಮಾತ್ರ ಅವಕಾಶ ನೀಡುವ  ಎಲ್ಲ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 

ಕೊರೋನಾ ಭೀತಿ ಬೆಂಗಳೂರಿನಲ್ಲೂ ಸಹ ಹೆಚ್ಚಾಗಿದೆ. ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆಯಿಂದಾಗಿ ಬಿಬಿಎಂಪಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಅದರಲ್ಲಿ ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಪ್ರೇಕ್ಷಕರಿಗೆ ಸಿನಿಮಾ ವೀಕ್ಷಣೆಗೆ ಮಾತ್ರ ಅವಕಾಶ ನೀಡುವಂತೆ ಮನವಿ ಮಾಡಲಾಗಿದೆಯಂತೆ. ಇದರಿಂದಾಗಿ ಈಗ ಮತ್ತೆ ಸಿನಿರಂಗದ ಮಂದಿಯಲ್ಲಿ ಆತಂಕ ಮನೆ ಮಾಡಿದೆ.

100% occupancy in cinema halls, 100 occupancy in cinema halls from february, film theatres, ಶೇ100ಆಸನ ಭರ್ತಿ, ಚಿತ್ರಮಂದಿರಗಳು, ಫೆಬ್ರವರಿ 1ರಿಂದ ಪೂರ್ಣ ಪ್ರಮಾಣದ ಚಿತ್ರಮಂದಿರಗಳು ಓಪನ್, film theaters, sop for movie release, sop for cinema theaters, guidelines for film theaters, news in kannada, ಚಿತ್ರಮಂದಿರ, ಸಿನಿಮಾ ಥಿಯೇಟರ್ ಓಪನ್, ಥಿಯೇಟರ್​ಗಳಿಗೆ ಮಾರ್ಗಸೂಚಿ, occupancy in Movie theaters from today ae, Dhruva Sarja tweeted about state government decision regarding occupancy movie theater
ಧ್ರುವ ಸರ್ಜಾ ಮಾಡಿರುವ ಟ್ವೀಟ್​


ಸಿನಿಮಾ ಮಂದಿರಗಳಲ್ಲಿ ಪೂರ್ಣ ಪ್ರಮಾಣದ ವೀಕ್ಷಣೆಗೆ ಅವಕಾಶ ನೀಡಿದ ಹಿನ್ನಲೆಯಲ್ಲಿ ಸಿನಿ ಮಂದಿ ಖುಷಿಯಾಗಿದ್ದರು. ಆದರೆ, ಪೊಗರು ರಿಲೀಸ್ ಆಗುವ ಹೊತ್ತಿಗೆ ಮತ್ತೆ ಶೇ. 50 ರಷ್ಟು ಎಂದು ಹೇಳಲಾಗಿತ್ತು. ಆಗ ಸಿನಿರಂಗದ ಗಣ್ಯರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ ಕಾರಣದಿಂದ ಅದನ್ನು ತಡೆ ಹಿಡಿಯಲಾಯಿತು. ಆದರೆ, ಕೊರೋನಾ ಹೆಚ್ಚಾದರೆ ಮತ್ತೆ ನಿರ್ಬಂಧ ಹೇರಲಾಗುವುದು ಎಂದು ರಾಜ್ಯ ಸರ್ಕಾರ ಈ ಹಿಂದೆಯೇ ಹೇಳಿತ್ತು.

ಇದನ್ನೂ ಓದಿ: ಪುನೀತ್​ ರಾಜ್​ಕುಮಾರ್​ ಟ್ವಿಟರ್​ ಖಾತೆಯಲ್ಲಿ ಹಿಂದಿ ಪದದ ಬಳಕೆ: ಗರಂ ಆದ ನೆಟ್ಟಿಗರು

ಈ ಕುರಿತಾಗಿ ನಟ ಪುನೀತ್​ ರಾಜ್​ಕುಮಾರ್​ ಹೇಳಿಕೆ ನೀಡಿದ್ದಾರೆ. ಥಿಯೇಟರ್​ಗಳಲ್ಲಿ ಶೇಕಡಾ 50ರಷ್ಟು ನಿರ್ಬಂಧ ಹೇರುವುದು ಬೇಡ. ಈಗಷ್ಟೇ ಚಿತ್ರರಂಗ ಚೇತರಿಸಿಕೊಂಡಿದೆ ಐದಾರು ಒಳ್ಳೆಯ ಸಿನಿಮಾಗಳು ರಿಲೀಸ್ ಆಗಿವೆ. ಸಾವಿರಾರು ಕುಟುಂಬಗಳು ಚಿತ್ರರಂಗವನ್ನು ನಂಬಿಕೊಂಡಿವೆ. ಎಲ್ಲರಿಗೂ ಸಮಸ್ಯೆ ಉಂಟಾಗಲಿದೆ. ಹೀಗಾಗಿ ಥಿಯೇಟರ್ ಸಿನಿಮಾ ವೀಕ್ಷಣೆಗೆ ಅವಕಾಶ ಶೇಕಡಾ 50ಕ್ಕೆ ಇಳಿಸೋದು ಬೇಡ ಎಂದಿದ್ದಾರೆ.






ಸಂತೋಷ್​ ಆನಂದ್ ರಾಮ್​ ಸಹ ಇದೇ ಮಾತುಗಳನ್ನಾಡಿದ್ದಾರೆ. ಇನ್ನು ಸಂತೋಷ್​ ಆನಂದ್​ ರಾಮ್​ ನಿರ್ದೇಶನದ ಹಾಗೂ ಪುನೀತ್​ ಅಭಿನಯ ಯುವರತ್ನ ಸಿನಿಮಾ ಏ.1ಕ್ಕೆ ಕನ್ನಡ ಹಾಗೂ ತೆಲುಗಿನಲ್ಲಿ ರಿಲೀಸ್​ ಆಗಲಿದೆ. ಇನ್ನು ನಾಳೆ ಯುವರತ್ನ ಸಿನಿಮಾದ ಟ್ರೇಲರ್​ ರಿಲೀಸ್ ಆಗಲಿದೆ.

ಸ್ಯಾಂಡಲ್​ವುಡ್​ನಲ್ಲಿ ಸಾಲು ಸಾಲಾಗಿ ಸಿನಿಮಾಗಳು ರಿಲೀಸ್​ಗೆ ಸಿದ್ಧವಾಗಿವೆ. ಸಲಗ, ಕೋಟಿಗೊಬ್ಬ 3, 777 ಚಾರ್ಲಿ ಸೇರಿದಂತೆ ಸಾಕಷ್ಟು ಚಿತ್ರಗಳು ತೆರೆ ಕಾಣುವ ಹೊಸ್ತಿಲಲ್ಲಿವೆ. ಈ ಸಿನಿಮಾಗಳಲ್ಲಿ ಕೆಲಸ ಮಾಡಿರುವವರು ಚಿತ್ರಗಳನ್ನೇ ನಂಬಿಕೊಂಡಿದ್ದಾರೆ. ಈಗ ಮತ್ತೆ ಶೇ. 50 ಆಸನಗಳ ಭರ್ತಿಗೆ ಆದೇಶ ಹೊರಡಿಸಿದರೆ, ಲಕ್ಷಾಂತರ ಮಂದಿ ಕಾರ್ಮಿಕರ ಜೀವನಕ್ಕೆ ಹೊಡೆತ ಬೀಳುತ್ತದೆ. ಮತ್ತೆ ಚಿತ್ರರಂಗ ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ಬಣ್ಣದ ಲೋಕದ ಮಂದಿ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
Published by:Anitha E
First published: