• Home
  • »
  • News
  • »
  • entertainment
  • »
  • French Biryani: ಫ್ರೆಂಚ್ ಬಿರಿಯಾನಿಗೆ ಬೆಂಗಳೂರು ಮಸಾಲೆ!

French Biryani: ಫ್ರೆಂಚ್ ಬಿರಿಯಾನಿಗೆ ಬೆಂಗಳೂರು ಮಸಾಲೆ!

ಫ್ರೆಂಚ್ ಬಿರಿಯಾನಿ

ಫ್ರೆಂಚ್ ಬಿರಿಯಾನಿ

French Biryani: ಪನ್ನಗಾಭರಣ ನಿರ್ದೇಶನದ ಹಂಬಲ್ ಪೊಲಿಟಿಶಿಯನ್ ನೋಗರಾಜ್ ಖ್ಯಾತಿಯ ದಾನಿಶ್ ಸೇಠ್ ನಾಯಕನಾಗಿರುವ ‘ಫ್ರೆಂಚ್ ಬಿರಿಯಾನಿ’ ಇದೇ ಜುಲೈ 24ರಂದು ಡಿಜಿಟಲ್ ಫ್ಲಾಟ್​​ಫಾರ್ಮ್​ನಲ್ಲಿ ರಿಲೀಸ್ ಆಗಲಿದೆ. ಆ ಮೂಲಕ ಒಟಿಟಿಯಲ್ಲಿ ರಿಲೀಸ್ ಆಗಲಿರುವ ಎರಡನೇ ಕನ್ನಡ ಸಿನಿಮಾ ಎಂಬ ದಾಖಲೆ ಮಾಡಿದೆ.

ಮುಂದೆ ಓದಿ ...
  • Share this:

ಪಿಆರ್​ಕೆ  ಪ್ರೊಡಕ್ಷನ್ಸ್ ಅಡಿಯಲ್ಲಿ ಸ್ಯಾಂಡಲ್​ವುಡ್​ ಪವರ್​ಸ್ಟಾರ್ ಪುನೀತ್​​ ರಾಜ್​​​​ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ನಿರ್ಮಿಸಿರುವ ಸಿನಿಮಾ ‘ಲಾ’. ಈ ಚಿತ್ರ ಈಗಾಗಲೇ ಒಟಿಟಿ ಫ್ಲಾಟ್​ಫಾರ್ಮ್​ನಲ್ಲಿ ರಿಲೀಸ್ ಆದ ಮೊಟ್ಟ ಮೊದಲ ಕನ್ನಡ ಸಿನಿಮಾ ಎಂಬ ದಾಖಲೆ ಬರೆದಿದೆ. ಅದರ ಬೆನ್ನಲ್ಲೇ ಪಿಆರ್​​ಕೆ ಪ್ರೊಡಕ್ಷನ್ಸ್ ಬ್ಯಾನರ್​​ನಲ್ಲೇ ನಿರ್ಮಾಣವಾಗಿರುವ ಮತ್ತೊಂದು ಸಿನಿಮಾ ಕೂಡ ಒಟಿಟಿಯತ್ತ ಮುಖ ಮಾಡಿದೆ.


ಪನ್ನಗಾಭರಣ ನಿರ್ದೇಶನದ ಹಂಬಲ್ ಪೊಲಿಟಿಶಿಯನ್ ನೋಗರಾಜ್ ಖ್ಯಾತಿಯ ದಾನಿಶ್ ಸೇಠ್ ನಾಯಕನಾಗಿರುವ ‘ಫ್ರೆಂಚ್ ಬಿರಿಯಾನಿ’ ಇದೇ ಜುಲೈ 24ರಂದು ಡಿಜಿಟಲ್ ಫ್ಲಾಟ್​​ಫಾರ್ಮ್​ನಲ್ಲಿ ರಿಲೀಸ್ ಆಗಲಿದೆ. ಆ ಮೂಲಕ ಒಟಿಟಿಯಲ್ಲಿ ರಿಲೀಸ್ ಆಗಲಿರುವ ಎರಡನೇ ಕನ್ನಡ ಸಿನಿಮಾ ಎಂಬ ದಾಖಲೆ ಮಾಡಿದೆ.


ಈಗಾಗಲೇ ಫ್ರೆಂಚ್ ಬಿರಿಯಾನಿ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಕೇವಲ 4 ದಿನಗಳಲ್ಲೇ ಬರೋಬ್ಬರಿ 50 ಲಕ್ಷಕ್ಕೂ ಅಧಿಕ ವೀವ್ಸ್ ಪಡೆದು, ಯ್ಯೂಟೂಬ್​ನಲ್ಲಿ ಸಖತ್ ವೈರಲ್ ಆಗಿದೆ. ಆಟೋ ಡ್ರೈವರ್ ಅಸ್ಗರ್ ಪಾತ್ರದಲ್ಲಿ ದಾನಿಶ್ ಸೇಠ್ ನಟಿಸಿದ್ದು, ಫ್ರಾನ್ಸ್​​ನಿಂದ ಭಾರತಕ್ಕೆ ಬರುವ ವಿದೇಶಿ ಪ್ರವಾಸಿಗ ಸೈಮನ್ ಪಾತ್ರದಲ್ಲಿ ಹಲವು ಮಲಯಾಳಂ, ಹಿಂದಿ ಚಿತ್ರಗಳಲ್ಲಿ ನಟಿಸಿರುವ ಸಾಲ್ ಯೂಸುಫ್ ನಟಿಸಿದ್ದಾರೆ. ಹಾಗೆಯೇ ಬೆಂಗಾಲಿ ನಟ ಪಿತೋಬಾಷ್, ರಂಗಾಯಣ ರಘು, ದಿಶಾ ಮದನ್, ಮಹಾಂತೇಶ್ ಹಿರೇಮಠ್, ಸಂಪತ್ ಕುಮಾರ್, ನಾಗಭೂಷಣ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಟ್ರೇಲರ್ ಬೆನ್ನಲ್ಲೇ ಫ್ರೆಂಚ್ ಬಿರಿಯಾನಿ ಚಿತ್ರದ ಮೊದಲ ಸಾಂಗ್ ಅನ್ನು ರಿಲೀಸ್ ಮಾಡಲಾಗಿದೆ. ಅತಿಥಿ ದೇವೋಭವ ಬೆಂಗಳೂರು ಎಂದು ಸಾಗುವ ಈ ಹಾಡಿಗೆ ವಾಸುಕಿ ವೈಭವ್ ಸಂಗೀತ ನೀಡಿದ್ದು, ಅವರ ಜತೆಗೆ ಅವಿನಾಶ್ ಕೂಡ ಸೇರಿ ಸಾಹಿತ್ಯ ರಚಿಸಿದ್ದಾರೆ. ಇದೊಂದು ರಾಪ್ ಸಾಂಗ್ ಆಗಿದ್ದು, ಅದಿತಿ ಸಾಗರ್ ಧ್ವನಿಯಾಗಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಕೋವಿಡ್ 19 ಮಹಾಮಾರಿ ಹಬ್ಬುವುದಕ್ಕೂ ಮುನ್ನವೇ ಆಗಿರುವುದರಿಂದ ಕೊರೋನಾಗೂ ಮುಂಚಿನ ಬೆಂಗಳೂರನ್ನ ಮತ್ತೊಮ್ಮೆ ನೋಡಲು ವೀಕ್ಷಕರಿಗೆ ಈ ಹಾಡಿನ ಮೂಲಕ ಅವಕಾಶ ಸಿಗಲಿದೆ.
ಅಂದಹಾಗೆ ಕವಲುದಾರಿ, ಮಾಯಾಬಜಾರ್, ‘ಲಾ’ ಬಳಿಕ ಪಿಆರ್​​ಕೆ ಪ್ರೊಡಕ್ಷನ್ಸ್ ನಿರ್ಮಿಸಿರುವ ನಾಲ್ಕನೇ ಚಿತ್ರ ಫ್ರೆಂಚ್ ಬಿರಿಯಾನಿ. ಜೊತೆಗೆ ಇದೇ ವರ್ಷ ತೆರೆಗೆ ಬರುತ್ತಿರುವ ಮೂರನೇ ಚಿತ್ರ ಎಂಬುದು ವಿಶೇಷ. ಬಹುತೇಕ ಹೊಸ ಪ್ರತಿಭೆಗಳ ಜೊತೆಗೆ ಹೊಚ್ಚ ಹೊಸ ರೀತಿಯ ಸಿನಿಮಾಗಳನ್ನು ಮಾಡುವ ಮೂಲಕ ಪವರ್​​​ಸ್ಟಾರ್​​ ಪುನೀತ್  ರಾಜ್​ಕುಮಾರ್ ಹೊಸ ಟ್ಯಾಲೆಂಟ್​ಗಳಿಗೆ ಸ್ಯಾಂಡಲ್​ವುಡ್​​ನಲ್ಲಿ ವೇದಿಕೆ ನಿರ್ಮಿಸಿದ್ದಾರೆ. ಇನ್ನು ಇದೇ ಜುಲೈ 24ರಿಂದ ಭಾರತ ಸೇರಿದಂತೆ ವಿಶ್ವದಾದ್ಯಂತ 200ಕ್ಕೂ ಹೆಚ್ಚು ದೇಶಗಳಲ್ಲಿ ಫ್ರೆಂಚ್ ಬಿರಿಯಾಗಿ ವೀಕ್ಷಣೆಗೆ ಲಭ್ಯವಾಗಲಿದೆ.

Published by:Vinay Bhat
First published: