• Home
  • »
  • News
  • »
  • entertainment
  • »
  • Puneeth Rajkumar: ಎಲ್ಲೆಲ್ಲೂ ಅಪ್ಪು ನೆನಪು, ಕಾರ ಹುಣ್ಣಿಮೆ ಆಚರಣೆಯಲ್ಲಿ ಎತ್ತಿನ ಮೇಲೆ ಪುನೀತ್ ಫೋಟೋ

Puneeth Rajkumar: ಎಲ್ಲೆಲ್ಲೂ ಅಪ್ಪು ನೆನಪು, ಕಾರ ಹುಣ್ಣಿಮೆ ಆಚರಣೆಯಲ್ಲಿ ಎತ್ತಿನ ಮೇಲೆ ಪುನೀತ್ ಫೋಟೋ

ಪುನೀತ್ ರಾಜ್​ಕುಮಾರ್

ಪುನೀತ್ ರಾಜ್​ಕುಮಾರ್

Puneeth Rajkumar: ಪುನೀತ್ ರಾಜ್​ಕುಮಾರ್ ಇವರನ್ನು ನೆನೆಯದ ದಿನವೇ ಇಲ್ಲವೇನೋ. ಅಕಾಲಿಕವಾಗಿ ಅಭಿಮಾನಿ ಬಳಗವನ್ನು ಬಿಟ್ಟು ಹೋದ ಈ ನಟ ಅಭಿಮಾನಿಗಳ ಮನಸ್ಸಲ್ಲಿ ಅಜರಾಮರ. ಇತ್ತೀಚೆಗೆ ಅವರಿಗೆ ಮತ್ತೊಂದು ರೀತಿಯಲ್ಲಿ ಗೌರವ ನೀಡಲಾಗಿದೆ.

  • Share this:

ಪುನೀತ್ ರಾಜಕುಮಾರ್ (Puneeth Rajkumar) , ಅವರ ಬಗ್ಗೆ ಹೇಳುತ್ತಾ ಹೋದಷ್ಟೂ ಮುಗಿಯುವುದಿಲ್ಲ. ಅವರನ್ನು ಜನರು (People) ನೆನಪಿಸಿಕೊಳ್ಳದ ದಿನವಿಲ್ಲ. ದಿನಕ್ಕೊಂದು ಅವರ ನೆನಪಿನಲ್ಲಿ ಉತ್ತಮ ಕಾರ್ಯಗಳನ್ನು ಮಾಡಿರುವ ಬಗ್ಗೆ ಸುದ್ದಿ ಕೇಳುತ್ತೇವೆ. ಇದೀಗ ನಿನ್ನೆ ಸಹ ಕಾರಹುಣ್ಣಿಮೆಯಲ್ಲಿ ಎತ್ತಿನ‌ ಮೈಮೇಲೆ ಪುನೀತ್ ರಾಜಕುಮಾರ ರಾರಾಜಿಸಿದ್ದಾರೆ.  


ಎತ್ತುಗಳ ಮೇಲೆ ಅಪ್ಪು ಚಿತ್ರ


ಹೌದು, ಕಾರಹುಣ್ಣಿಮೆ ಪ್ರಯುಕ್ತ ಎತ್ತಿನ ಮೈಮೇಲೆ ಅಪ್ಪುವಿನ ಭಾವಚಿತ್ರ ಬಿಡಿಸಿ ಅಭಿಮಾನವನ್ನು ರೈತರು ವ್ಯಕ್ತಪಡಿಸಿದ್ದು, ಬಬಲೇಶ್ವರ ತಾಲೂಕಿನ ಶಿರಬೂರ ಗ್ರಾಮದಲ್ಲಿ ಅಪ್ಪುವನ್ನು ನೆನಪಿಸಿಕೊಳ್ಳಲಾಗಿದೆ.  ಯಮನಪ್ಪ ಕುಂಬಾರ ಎನ್ನುವವರು ಎತ್ತಿನ ಮೈಮೇಲೆ ಅಪ್ಪು ಚಿತ್ರ ಬಿಡಿಸಿ ಅಭಿಮಾನ ಮೆರೆದಿದ್ದು, ಎತ್ತಿನ ಮೈಮೇಲೆ ಅಪ್ಪು ಚಿತ್ರ ಬಿಡಿಸಿದ್ದರಿಂದ ನೆರೆದಿದ್ದ ಅಪ್ಪು ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿತ್ತು.


ಎಲ್ಲರ ಮನದಲ್ಲಿ ನೆಲೆಸಿರುವ ಪುನೀತ್ ರಾಜಕುಮಾರ್ ಅವರ ಮೇಲೆ  ಅಭಿಮಾನ ಎಷ್ಟಿದೆ ಎಂಬುದಕ್ಕೆ ಶಿರಬೂರ ನಲ್ಲಿ ನಡೆದ ಕಾರಹುಣ್ಣಿಮೆ ಸಾಕ್ಷಿಯಾಗಿದೆ.  ಇದೊಂದೇ ಕಡೆ ಅಲ್ಲದೇ, ಬಾಗಲಕೋಟೆ ಜಿಲ್ಲೆಯ ಕರಡಿ ಗ್ರಾಮದಲ್ಲಿ ಸಹ ಎತ್ತುಗಳ ಮೇಲೆ ಅಪ್ಪು ಚಿತ್ರ ಬಿಡಿಸಿ ಅಗಲಿದ ನಟನಿಗೆ ಗೌರವ ನೀಡಿದ್ದಾರೆ.


ನಿಲ್ಲದ ಅಪ್ಪು ಆರಾಧನೆ


ಪುನೀತ್ ರಾಜ್​ಕುಮಾರ್ ಇವರನ್ನು ನೆನೆಯದ ದಿನವೇ ಇಲ್ಲವೇನೋ. ಅಕಾಲಿಕವಾಗಿ ಅಭಿಮಾನಿ ಬಳಗವನ್ನು ಬಿಟ್ಟು ಹೋದ ಈ ನಟ ಅಭಿಮಾನಿಗಳ ಮನಸ್ಸಲ್ಲಿ ಅಜರಾಮರ. ಇತ್ತೀಚೆಗೆ ಅವರಿಗೆ ಮತ್ತೊಂದು ರೀತಿಯಲ್ಲಿ ಗೌರವ ನೀಡಲಾಗಿದೆ. ಚಾಮರಾಜಪೇಟೆ ಕ್ಷೇತ್ರದ ಆಜಾದ್  ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಬಡಾವಣೆಯೊಂದಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹೆಸರು ಇಡಲಾಗಿದೆ. ಇದು ನಿಜಕ್ಕೂ ಪುನೀತ್ ಅಭಿಮಾನಿಗಳ ಸಂತೋಷಕ್ಕೆ ಕಾರಣವಾಗಿತ್ತು.


ಇದನ್ನೂ ಓದಿ: ತೆಲುಗಿನಲ್ಲಿ ಮಿಂಚಲು ಮತ್ತೊಬ್ಬ ಕನ್ನಡತಿ ಸಜ್ಜು, ಮಿಥುನ ರಾಶಿ ನಟಿ ಸಂಪದಾಗೆ ಅವಕಾಶಗಳ ಸುರಿಮಳೆ


ಅಪ್ಪು ಮೇಲಿನ ಅಭಿಮಾನಕ್ಕೆ ಹಲವಾರು ಸಾಕ್ಷಿಗಳಿದೆ. ಮೊನ್ನೆಯಷ್ಟೇ ರಾಘವೇಂದ್ರ ರಾಜ್​ಕುಮಾರ್ ಒಂದು ವಿಡಿಯೋ ಶೇರ್ ಮಾಡಿಕೊಂಡಿದ್ದರು. ಅದರಲ್ಲಿ ಅಪ್ಪುವಿನ ಅಭಿಮಾನಿಯೊಬ್ಬರು, ದೇವರ ಕಾರ್ಯಕ್ರಮದಲ್ಲಿ ತಲೆಯ ಮೇಲೆ ದೇವರ ಹೊತ್ತುಕೊಳ್ಳುವ ಹಾಗೆ ಅಪ್ಪುವಿನ ಮೂರ್ತಿಯನ್ನು ಹೊತ್ತುಕೊಂಡಿದ್ದಾರೆ. ಇದು ಅಪ್ಪು ಎಂದರೆ ಅಭಿಮಾನಿಗಳಿಗೆ ಅದೆಷ್ಟು ಪ್ರೀತಿ ಎಂಬುದು ತಿಳಿಯುತ್ತದೆ.


ಅಪ್ಪು ಹೋದ ನಂತರ ಅಭಿಮಾನಿಗಳು ಒಂದೆಲ್ಲಾ ಒಂದು ರೀತಿಯಲ್ಲಿ ಅವರನ್ನು ಪೂಜಿಸುತ್ತಿದ್ದಾರೆ. ಇತ್ತೀಚೆಗಷ್ಟೇ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಅಪ್ಪು ಪ್ರತಿಮೆಯನ್ನು ಅನಾವರಣ ಮಾಡಲಾಗಿತ್ತು.  ಅಪ್ಪುಗೆ ಅಭಿಮಾನಿಗಳು ಎಂದರೆ ಪ್ರಾಣ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರಲ್ಲೂ ಅವರು ಹೊಸಪೇಟೆಯ ಬಗ್ಗೆ ಹೆಚ್ಚಿನ ಪ್ರೀತಿ ಹೊಂದಿದ್ದರಂತೆ. ಹಾಗಾಗಿ ಅವರಿಗಾಗಿ ಇಲ್ಲಿ ಅಭಿಮಾನಿಗಳು ಅವರ ಪ್ರತಿಮೆ ನಿರ್ಮಿಸಿದ್ದಾರೆ.



ಅದರಲ್ಲೂ ಇದು ಬರೋಬ್ಬರಿ 7.4 ಅಡಿ ಎತ್ತರದ ಪ್ರತಿಮೆ ಇದಾಗಿದ್ದು, ಕರುನಾಡಿಗೆ ಹೆಮ್ಮೆಯ ವಿಚಾರ ಎನ್ನಬಹುದು. ಈ ಅಭೂತಪೂರ್ವ ಕ್ಷಣಕ್ಕೆ ಸಾವಿರಾರು ಅಪ್ಪು ಅಭಿಮಾನಿಗಳು ಸಾಕ್ಷಿಯಾಗಿದ್ದು, ಹಬ್ಬವಿತ್ತು ಎನ್ನುವ ರೀತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.  ಈ ಕಾರ್ಯಕ್ರಮಕ್ಕೆ ಸಾವಿರಾರು ಅಭಿಮಾನಿಗಳ ಜೊತೆ ರಾಘವೇಂದ್ರ ರಾಜ್​ಕುಮಾರ್, ನಟ ಅಜಯ್ ರಾವ್, ನಿರ್ದೇಶಕ ಸಂತೋಷ್ ಆನಂದ್ ರಾಮ್​ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.


ಇದನ್ನೂ ಓದಿ: ಥೈಲ್ಯಾಂಡ್​​, ಫುಕೆಟ್​ ಅಂತ ಬ್ಯುಸಿ ಇದ್ದಾರೆ ಅನುಪಮಾ ಗೌಡ, ಸೋಲೋ ಟ್ರಿಪ್​ನಲ್ಲಿ ಮೂಗುತಿ ಸುಂದರಿ ಫುಲ್ ಮಸ್ತಿ


ಇನ್ನು ಪುನೀತ್ ರಾಜಕುಮಾರ್ ಅಕಾಲ ಮರಣ ಹೊಂದಿದ ಬಳಿಕ ಪ್ರತಿನಿತ್ಯ ರಾಜ್ಯದ ಒಂದಲ್ಲಾ ಒಂದು ಹಳ್ಳಿ ಗ್ರಾಮಗಳಲ್ಲಿ ಅವರ ಹೆಸರಲ್ಲಿ ಪುಣ್ಯ ಕಾರ್ಯಗಳು ನಡೆಯುತ್ತದೆ. ಅದೆಷ್ಟೋ ಜನರು ಪ್ರತಿನಿತ್ಯ ಪುನೀತ್ ಹೆಸರು ಹೇಳಿಕೊಂಡು ಹಸಿದವರಿಗೆ ಅನ್ನ ಸಂತರ್ಪಣೆ ಮಾಡುತ್ತಿದ್ದಾರೆ. ಅಲ್ಲದೆ ಬಲಗೈಯಲ್ಲಿ ಮಾಡಿದ ದಾನ ಎಡಗೈಗೆ ಗೊತ್ತಾಗಬಾರದು ಎನ್ನುವಂತೆ ಬದುಕಿದ್ದ ಪುನೀತ್ ರಾಜಕುಮಾರ್ ಅವರು ಎಲ್ಲರಿಗೂ ಸ್ಫೂರ್ತಿ ಎನ್ನುತ್ತಾರೆ ಅಭಿಮಾನಿಗಳು.


Published by:Sandhya M
First published: