Puneeth Rajkumar: ಆಂಧ್ರದಲ್ಲೂ ಪುನೀತ್ ನೆನಪು, ಅಭಿಮಾನಿಗಳನ್ನು ಬಿಟ್ಟು ಹೋಗಿಲ್ಲ ನಮ್ಮ ಅಪ್ಪು

Puneeth Rajkumar: ಅವರಿಗೆ ಬೇರೆ ಬೇರೆ ಭಾಷೆಗಳಲ್ಲಿ ಸಹ ಅಭಿಮಾನಿಗಳಿದ್ದಾರೆ. ಬೇರೆ ರಾಜ್ಯಗಳಲ್ಲಿ ಸಹ ಅವರಿಗೆ ನಮನ ಸಲ್ಲಿಸಿ ಕಾರ್ಯಕ್ರಮ ಮಾಡಲಾಗಿತ್ತು. ಇದೀಗ ಅಲ್ಲಿನ ಜಾತ್ರಾ ಮಹೋತ್ಸವದಲ್ಲಿ ಅಪ್ಪು ಅವರನ್ನು ಅಭಿಮಾನಿಗಳು ನೆನಪಿಸಿಕೊಂಡಿದ್ದಾರೆ.

ಪುನೀತ್ ರಾಜ್​ಕುಮಾರ್

ಪುನೀತ್ ರಾಜ್​ಕುಮಾರ್

  • Share this:
ರಾಜರತ್ನ ಪುನೀತ್​ ರಾಜ್​ಕುಮಾರ್ (Puneet Rajkumar) ಅಕಾಲಿಕ ನಿಧನವನ್ನು ಅಭಿಮಾನಿಗಳಿಗೆ (Fans) ಮಾತ್ರವಲ್ಲ ಸ್ಯಾಂಡಲ್​ವುಡ್​ಗೆ (Sandalwood) ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರನ್ನು ನೆನಪಿಸಿಕೊಳ್ಳಲು ಒಂದು ಸಣ್ಣ ಚಾನ್ಸ್​ ಸಿಕ್ಕರೂ ಸಾಕು ಬಿಡುವುದಿಲ್ಲ. ಅವರು ನಮ್ಮಿಂದ ದೂರವಾಗಿ ಹಲವು ದಿನಗಳೇ ಕಳೆದಿದ್ದರೂ ಅವರ ನೆನಪುಗಳು ಅಭಿಮಾನಿಗಳನ್ನು ಬಿಟ್ಟು ಹೋಗಿಲ್ಲ ಎಂಬುದಕ್ಕೆ ಹಲವು ಬಾರಿ, ಹಲವು ಘಟನೆಗಳು ಸಾಕ್ಷಿಯಾಗುತ್ತಿವೆ. ಇದೀಗ ಕರ್ನಾಟಕದಲ್ಲಿ ಮಾತ್ರವಲ್ಲದೇ ಆಂಧ್ರದಲ್ಲಿ (Andrapradesh) ಸಹ ಅಪ್ಪು ನೆನಪು ಮೂಡಿದೆ. ಅಪ್ಪು ಸ್ಯಾಂಡಲ್​ವುಡ್​ನಲ್ಲಿ ಪವರ್ ಸ್ಟಾರ್​ (Power star) ಎಂದು ಫೇಮಸ್​ ಆಗಿರಬಹುದು. ಆದರೆ ಅವರಿಗೆ ಬೇರೆ ಬೇರೆ ಭಾಷೆಗಳಲ್ಲಿ ಸಹ ಅಭಿಮಾನಿಗಳಿದ್ದಾರೆ. ಬೇರೆ ರಾಜ್ಯಗಳಲ್ಲಿ ಸಹ ಅವರಿಗೆ ನಮನ ಸಲ್ಲಿಸಿ ಕಾರ್ಯಕ್ರಮ ಮಾಡಲಾಗಿತ್ತು. ಇದೀಗ ಅಲ್ಲಿನ ಜಾತ್ರಾ ಮಹೋತ್ಸವದಲ್ಲಿ ಅಪ್ಪು ಅವರನ್ನು ಅಭಿಮಾನಿಗಳು ನೆನಪಿಸಿಕೊಂಡಿದ್ದಾರೆ.

ಕಾವಡಿ ಉತ್ಸವದಲ್ಲಿ ಅಪ್ಪು ಫೋಟೋ

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂ ಮಂಡಲಂನ ಗುಡಿವಂಕ ಕಾವಡಿ ಉತ್ಸವ ನಡೆದಿದೆ. ಈ ಉತ್ಸವದಲ್ಲಿ ಅಪ್ಪು ಅಭಿಮಾನಿಗಳು ಪುನೀತ್ ರಾಜ್​ಕುಮಾರ್​ ಅವರ ದೊಡ್ಡ ಭಾವಚಿತ್ರ ಹಿಡಿದು ಕ್ರೇನ್‌ನಲ್ಲಿ ಕಾವಡಿ ಸಲ್ಲಿಸುವ ಮೂಲಕ ನೆಚ್ಚಿನ ನಟನನ್ನ ನೆನಪಿಸಿಕೊಂಡಿದ್ದಾರೆ. ಇದೊಂದೇ ಅಲ್ಲ ಶಿವಮೊಗ್ಗದಲ್ಲಿ ನಡೆದ ಜಾತ್ರೆಯಲ್ಲಿ ಸಹ ಅಭಿಮಾನಿಗಳು ಅಪ್ಪು ಫೋಟೋ ಹಿಡಿದುಕೊಂಡು ದೇವರ ದರ್ಶನ ಪಡೆದಿದ್ದಾರೆ. ಪುನೀತ್​ ರಾಜಕುಮಾರ್ ಅಭಿಮಾನಿಗಳು ಮಾತ್ರ ಅವರ ಫೋಟೋವನ್ನೇ ಜೊತೆಯಲ್ಲಿ ಇಟ್ಟುಕೊಂಡು ದೇಗುಲಕ್ಕೆ ಹೋಗಿ, ದೇವರ ದರ್ಶನ ಪಡೆದಿದ್ದಾರೆ.  ಈ ಜಾತ್ರೆಯಲ್ಲಿ ಹಲವಾರು ಅಪ್ಪು ಅಭಿಮಾನಿಗಳು, ಪುನೀತ್ ರಾಜ್​ಕುಮಾರ್ ಅವರ ಫೋಟೋವನ್ನು ತಮ್ಮ ಜೊತೆ ಹೊತ್ತುಕೊಂಡು ಹೋಗಿದ್ದಾರೆ.ಇನ್ನು ಅಭಿಮಾನಿಗಳು ಜಾತ್ರೆ, ಹಬ್ಬ ಹಾಗೂ ಯಾವುದೇ ವಿಶೇಷ ಸಂದರ್ಭದಲ್ಲಿ ಅಪ್ಪು ಅವರನ್ನು ನೆನಪಿಸಿಕೊಳ್ಳುತ್ತಾರೆ. ಕಳೆದ ತಿಂಗಳಲ್ಲಿ ಕೇದಾರನಾಥನ ಸನ್ನಿಧಿಯಲ್ಲಿ ಸಹ ಅಪ್ಪು ಕಂಪು ಹರಡಿದ್ದು, ಕೇದಾರನಾಥ ದೇವಸ್ಥಾನದಲ್ಲೂ ಅಭಿಮಾನಿಗಳು ಪುನೀತ್ ರಾಜಕುಮಾರ ನೆನಪು ಮಾಡಿಕೊಂಡಿದ್ದರು. ಕೇದಾರನಾಥನ ದರ್ಶನಕ್ಕೆ ಪುನೀತ್ ಭಾವಚಿತ್ರದೊಂದಿಗೆ ತೆರಳಿದ್ದ ವಿಜಯಪುರದ ಯುವಕರು, ಕೇದಾರನಾಥ ದೇವಸ್ಥಾನದಲ್ಲಿ ಪುನೀತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಕೆ ಮಾಡಿದ್ದರು.

ಅಪ್ಪು ನೆನಪಿಸಿಕೊಳ್ಳದ ದಿನವಿಲ್ಲ

ಅಪ್ಪು ಆತ್ಮಕ್ಕೆ ಶಾಂತಿ ಸಿಗಲೆಂದು ಕೇದಾರನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದು, ದೇವಸ್ಥಾನದ ಗರ್ಭಗುಡಿಯಲ್ಲಿ ಅರ್ಚಕರು ಅಪ್ಪು ಭಾವಚಿತ್ರಕ್ಕೆ ಪೂಜೆ ಮಾಡಿದ್ದರು. ಈ ಮೂಲಕ ಅಪ್ಪು ನೆನಪು ಎಂದಿಗೂ ಅಮರ ಎಂಬುದನ್ನ ಸಾಬೀತು ಮಾಡಿದ್ದರು.

ಇದನ್ನೂ ಓದಿ: ನಂಬರ್ ಒನ್​ ನಟಿಯಾಗಲು ಹಣ ಕೊಟ್ಟೆ ಎಂದ ಸಮಂತಾ! ಟ್ರೋಲಿಗರಿಗೆ ಪರೋಕ್ಷವಾಗಿ ಟಾಂಗ್​ ಕೊಟ್ರಾ ಸ್ಯಾಮ್​?ಇನ್ನು ಪುನೀತ್ ರಾಜಕುಮಾರ್ ಅಕಾಲ ಮರಣ ಹೊಂದಿದ ಬಳಿಕ ಪ್ರತಿನಿತ್ಯ ರಾಜ್ಯದ ಒಂದಲ್ಲಾ ಒಂದು ಹಳ್ಳಿ ಗ್ರಾಮಗಳಲ್ಲಿ ಅವರ ಹೆಸರಲ್ಲಿ ಪುಣ್ಯ ಕಾರ್ಯಗಳು ನಡೆಯುತ್ತದೆ. ಅದೆಷ್ಟೋ ಜನರು ಪ್ರತಿನಿತ್ಯ ಪುನೀತ್ ಹೆಸರು ಹೇಳಿಕೊಂಡು ಹಸಿದವರಿಗೆ ಅನ್ನ ಸಂತರ್ಪಣೆ ಮಾಡುತ್ತಿದ್ದಾರೆ. ಅಲ್ಲದೇ ಹಲವಾರು ರಸ್ತೆಗಳಿಗೆ ಪುನೀತ್ ಹೆಸರನ್ನು ಸಹ ಇಡಲಾಗಿದೆ. ಬೆಂಗಳೂರಿನಲ್ಲಿ ನಾಯಂಡಹಳ್ಳಿಯಿಂದ ಬನ್ನೇರುಘಟ್ಟದವರೆಗಿನ ರಸ್ತೆಗೆ ಪುನೀತ್​ ಹೆಸರು ಇಡುವಂತೆ ಅಭಿಮಾನಿಗಳು ಮನವಿ ಸಲ್ಲಿಸಿದ್ದರು. ಇದಕ್ಕೆ ಬಿಬಿಎಂಪಿ ಸ್ಪಂದಿಸಿ, ರಸ್ತೆಗೆ ಪುನೀತ್ ರಾಜ್​ಕುಮಾರ್ ರಸ್ತೆ ಎಂದು ಹೆಸರಿಟ್ಟಿದೆ.

ಇದನ್ನೂ ಓದಿ: ಅಭಿಮಾನಿಗಳ ಮನದಲ್ಲಿ ರಾಜರತ್ನ ಅಜರಾಮರ, ಜಾತ್ರೆಯಲ್ಲೂ ಮಿಂಚಿದ ಪುನೀತ್ ರಾಜ್​ಕುಮಾರ್ ಫೋಟೋ

ಹಾಗೆಯೇ ಅಭಿಮಾನಿಯೊಬ್ಬರು ಪುನೀತ್ ಅವರ ಪ್ರೀತಿಗಾಗಿ ಮನೆಯಂಗಳದಲ್ಲಿ ಸಾವಿರಾರು ರೂಪಾಯಿ ಹಣ ಖರ್ಚುಮಾಡಿ ಪುನೀತ್ ರಾಜಕುಮಾರ್ ಅವರ ಪುತ್ಥಳಿಯನ್ನು ನಿರ್ಮಾಣ ಮಾಡಿದ್ದರು. ಕೂಡ್ಲಿಗಿ ತಾಲೂಕಿನ ಸಿದ್ದಾಪುರದ ವಡ್ಡರಹಟ್ಟಿಯಲ್ಲಿ ಆರ್.ಟಿ. ನಾಗರಾಜ ಮತ್ತು ಅವರ ಪತ್ನಿ ಮಲ್ಲಮ್ಮ ಅವರ ಅಭಿಮಾನಕ್ಕೆ ಪುನೀತ್ ರಾಜಕುಮಾರ್ ಅವರು ಪುತ್ಥಳಿ ಸಾಕ್ಷಿಯಾಗಿ ಅನೇಕರ ಗಮನ ಸೆಳೆದಿತ್ತು
Published by:Sandhya M
First published: