Puneeth Rajkumar: ಅಪ್ಪು ಮೆಚ್ಚಿದ್ದ ಕಥೆಗೆ ಮರುಜೀವ!; ಇವರೇ ‘ದ್ವಿತ್ವ’ ಚಿತ್ರಕ್ಕೆ ನಾಯಕ?

ಅಪ್ಪು ಆಯ್ಕೆ ಮಾಡಿದ್ದ ದ್ವಿತ್ವ  ಸಿನಿಮಾಗೆ ಮತ್ತೆ ಮರುಜೀವ ಕೊಡಲು ಪವನ್ ಸಜ್ಜಾಗಿದ್ದಾರಂತೆ.  ಮಲಯಾಳಂನ ಪ್ರಸಿದ್ಧ ನಟ ಫಯಾದ್ ಫಾಸಿಲ್ ಅವರನ್ನೇ ಆಯ್ಕೆ ಮಾಡಿಕೊಂಡಿರಬಹುದು ಎಂದು ಮೂಲಗಳು ಹೇಳುತ್ತಿದೆ.

ಪುನೀತ್ ರಾಜ್​ಕುಮಾರ್

ಪುನೀತ್ ರಾಜ್​ಕುಮಾರ್

  • Share this:
 ಸ್ಟಾರ್ ಪುನೀತ್​ ರಾಜ್​ಕುಮಾರ್ (Puneeth Rajkumar) ಸಾವನ್ನಪ್ಪಿ ತಿಂಗಳುಗಳೇ ಕಳೆದ್ರು, ಅವರು ಪ್ರತಿಯೊಬ್ಬ ಅಭಿಮಾನಿಯ (Appu Fans) ಮನದಲ್ಲಿ ಶಾಶ್ವತವಾಗಿದ್ದಾರೆ. ಅವರು ಅಕಾಲಿಕ ಮರಣ ಹೊಂದುವುದಕ್ಕೂ ಮುನ್ನ ನಿರ್ದೇಶಕ ಪವನ್ (Director Pawan) ಹೇಳಿದ ದ್ವಿತ್ವ ಕಥೆಯನ್ನು ಮೆಚ್ಚಿ ಸಿನಿಮಾದಲ್ಲಿ ನಟಿಸಲು ಓಕೆ ಹೇಳಿದ್ರು. ಅವರ ನಿಧನದ ಬಳಿಕ ದ್ವಿತ್ವ ಚಿತ್ರಕ್ಕೆ ನಿರ್ದೇಶಕ ಪವನ್ ಅವರು ಯಾರನ್ನು ನಾಯಕರನ್ನಾಗಿ ಆಯ್ಕೆ ಮಾಡ್ತಾರೆ ಅನ್ನೋ ಕುತೂಹಲ ಇತ್ತು. ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಸ್ಮ್ (Hombale Films)​ ಬ್ಯಾನರ್​ನಲ್ಲಿ ದ್ವಿತ್ವ ಸಿನಿಮಾ (Dvitva Movie) ಮೂಡಿಬರಲಿದೆ.

ಅಪ್ಪು ಪಾತ್ರಕ್ಕೆ ಫಯಾದ್​ ಫಾಸಿಲ್​

ಪುನೀತ್​ ರಾಜ್​ ಕುಮಾರ್​ ಅಭಿನಯಿಸಬೇಕಿದ್ದ ಚಿತ್ರಕ್ಕೆ ಮಲಯಾಳಂನ ಪ್ರಸಿದ್ಧ ನಟ ಫಯಾದ್ ಫಾಸಿಲ್ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗ್ತಿದೆ. ಫಯಾದ್ ಫಾಸಿಲ್‌ಗೆ ಲೂಸಿಯಾ ಪವನ್ ಕುಮಾರ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಈ ಇಬ್ಬರ ಕಾಂಬಿನೇಷನ್‌ಗೆ ಹೊಂಬಾಳೆ ಫಿಲ್ಸ್ಮ್​  ನಿರ್ಮಾಣದ ಹೊಣೆ ಹೊತ್ತಿದೆ ಎಂದು ಬಲ್ಲ ಮೂಲಗಳು ತಿಳಿಸಿದೆ.

ಫಯಾದ್ ಫಾಸಿಲ್


ಅಪ್ಪು ಮೆಚ್ಚಿದ ಕಥೆಗೆ ಮರುಜೀವ

ಅಪ್ಪು ಆಯ್ಕೆ ಮಾಡಿದ್ದ ದ್ವಿತ್ವ  ಸಿನಿಮಾಗೆ ಮತ್ತೆ ಮರುಜೀವ ಕೊಡಲು ಪವನ್ ಸಜ್ಜಾಗಿದ್ದಾರಂತೆ.  ಮಲಯಾಳಂನ ಪ್ರಸಿದ್ಧ ನಟ ಫಯಾದ್ ಫಾಸಿಲ್ ಅವರನ್ನೇ ಆಯ್ಕೆ ಮಾಡಿಕೊಂಡಿರಬಹುದು ಎಂದು ಮೂಲಗಳು ಹೇಳುತ್ತಿದೆ.

ಫಯಾದ್ ಹುಟ್ಟುಹಬ್ಬಕ್ಕೆ ಶುಭಕೋರಿದ ಹೊಂಬಾಳೆ

ಇದಕ್ಕೆ ಪುಷ್ಠಿ ನೀಡುವಂತೆ ನಟ ಫಯಾದ್ ಹುಟ್ಟುಹಬ್ಬಕ್ಕೆ ಹೊಂಬಾಳೆ ಸಂಸ್ಥೆ ಶುಭಹಾರೈಸಿದ್ದಾರೆ. ಈ ಮೂಲಕ ಹೊಂಬಾಳೆ ಸಂಸ್ಥೆ ಸುಳಿವು ನೀಡಿದೆ. ನಿರ್ದೇಶಕ ಪವನ್ ಮತ್ತು ಫಯಾದ್ ಕಾಂಬಿನೇಷನ್ ಚಿತ್ರಕ್ಕೆ  ಹೊರ ಬರೋದು ಪಕ್ಕ ಆಗಿದೆ. ಆದ್ರೆ . `ದ್ವಿತ್ವ’ಚಿತ್ರಕ್ಕೆ ಫಯಾದ್ ನಾಯಕರನ್ನಾಗಿ ಮಾಡ್ತಾರಾ ಅಥವಾ ಪವನ್​ಕುಮಾರ್​ ಬಳಿ ಬೇರೆ ಕಥೆಯೇ ಇದ್ಯಾ ಅನ್ನೋ ವಿಚಾರವನ್ನು ಅವರೇ ಬಹಿರಂಗ ಪಡಿಬೇಕಿದೆ.






ಸೈಕಲಾಜಿಕಲ್​ ಕಥೆಯನ್ನೇ ಆಯ್ಕೆ

ಸೈಕಲಾಜಿಕಲ್​ ಕಥಾಹಂದರ ಹೊಂದಿದ್ದ ‘ಲೂಸಿಯಾ’ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ಪವನ್​ ಕುಮಾರ್​ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದರು. ಈಗ ಅವರು ‘ದ್ವಿತ್ವ’ ಸಿನಿಮಾದಲ್ಲಿ ಮತ್ತೆ ಸೈಕಲಾಜಿಕಲ್​ ಕಥೆಯನ್ನೇ ಆಯ್ಕೆ ಮಾಡಿಕೊಂಡಿರುವುದು ವಿಶೇಷ. ಶೀರ್ಷಿಕೆ ಜೊತೆಗೆ ಡಿಫರೆಂಟ್​ ಆದಂತಹ ಪೋಸ್ಟರ್​ ಕೂಡ ಬಿಡುಗಡೆ ಮಾಡಲಾಗಿದೆ.

2018ರಲ್ಲಿ ಬಂದ ‘ಯೂ ಟರ್ನ್​’ ಚಿತ್ರದ ಬಳಿಕ ಕನ್ನಡದಲ್ಲಿ ಬೇರೆ ಯಾವುದೇ ಸಿನಿಮಾವನ್ನು ಪವನ್​ ಕುಮಾರ್​ ನಿರ್ದೇಶನ ಮಾಡಿಲ್ಲ. ದೊಡ್ಡ ಗ್ಯಾಪ್​ ಬಳಿಕ ಅವರು ಕನ್ನಡ ಪ್ರಾಜೆಕ್ಟ್​ ಕೈಗೆತ್ತಿಕೊಂಡಿರುವುದರಿಂದ ನಿರೀಕ್ಷೆ ಜೋರಾಗಿದೆ. ಲೂಸಿಯಾ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿ ಜನಪ್ರಿಯರಾಗಿದ್ದ ಪೂರ್ಣಚಂದ್ರ ತೇಜಸ್ವಿ ಅವರೇ ‘ದ್ವಿತ್ವ’ ಚಿತ್ರಕ್ಕೂ ಸಂಗೀತ ಸಂಯೋಜನೆ ಮಾಡಲಿದ್ದಾರೆ.





‘ದ್ವಿತ್ವ’ ಬಗ್ಗೆ ಕ್ರೇಜ್​ ಸೃಷ್ಟಿ

ಪ್ರೀತಾ ಜಯರಾಮನ್​ ಛಾಯಾಗ್ರಹಣ ಮಾಡಲಿದ್ದಾರೆ. ಸೆಪ್ಟೆಂಬರ್​ನಲ್ಲಿ ಚಿತ್ರೀಕರಣ ಆರಂಭಿಸಲು ಪ್ಲ್ಯಾನ್​ ಮಾಡಿಕೊಳ್ಳಲಾಗಿದೆ. ಹೊಂಬಾಳೆ ಫಿಲ್ಸ್ಮ್​ ಬ್ಯಾನರ್​ನಲ್ಲಿ ವಿಜಯ್​ ಕಿರಗಂದೂರು ಅವರು ನಿರ್ಮಾಣ ಮಾಡುತ್ತಿರುವ ಎಲ್ಲ ಪ್ರಾಜೆಕ್ಟ್​ಗಳು ಅದ್ದೂರಿಯಾಗಿ ಮೂಡಿಬರುತ್ತಿವೆ. ಆ ಕಾರಣದಿಂದಲೂ ‘ದ್ವಿತ್ವ’ ಬಗ್ಗೆ ಕ್ರೇಜ್​ ಸೃಷ್ಟಿಯಾಗುವಂತಾಗಿದೆ.
Published by:Pavana HS
First published: