Puneeth Rajkumar: ಅಪ್ಪು ನಮ್ಮನ್ನಗಲಿ ಇಂದಿಗೆ 8 ತಿಂಗಳು, ಪುನೀತ್ ಇಲ್ಲದೇ ರಿಲೀಸ್ ಆಗ್ತಿದೆ ಶಿವಣ್ಣನ ಮೊದಲ ಸಿನಿಮಾ

ಅಭಿಮಾನಿಗಳ ಪಾಲಿನ ಅಪ್ಪು  (Appu) ಪುನೀತ್ ರಾಜ್​ಕುಮಾರ್ (Puneeth Rajkumar) ನಮ್ಮಿಂದ ದೂರವಾಗಿ ಇಂದಿಗೆ 8 ತಿಂಗಳುಗಳು ಕಳೆದು ಹೋಗಿವೆ.

ಪುನೀತ್ ರಾಜ್​ಕುಮಾರ್

ಪುನೀತ್ ರಾಜ್​ಕುಮಾರ್

  • Share this:
ಅಂದು ಕೇವಲ ಕೇವಲ ಸ್ಯಾಂಡಲ್​ ವುಡ್ (Sandalwood)​ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗವೇ ದುಂಖದ ಮಡುವಿನಲ್ಲಿತ್ತು. ಇಂದಿಗೆ ಸರಿಯಾಗಿ 8 ತಿಂಗಳ ಹಿಂದೆ ಅಕ್ಟೋಬರ್ 29ರಂದು ಕರ್ನಾಟಕದ ಮುತ್ತು, ಅಭಿಮಾನಿಗಳ ಪಾಲಿನ ಅಪ್ಪು, ಸ್ಯಾಂಡಲ್​ವುಡ್​ನ ಪವರ್​ ಒಂದು ಎಲ್ಲರನ್ನೂ ಬಿಟ್ಟು ಬಾರದ ಊರಿನತ್ತ ಪಯಣ ಬೆಳೆಸಿದ್ದರು. ಹೌದು, ಅಭಿಮಾನಿಗಳ ಪಾಲಿನ ಅಪ್ಪು  (Appu) ಪುನೀತ್ ರಾಜ್​ಕುಮಾರ್ (Puneeth Rajkumar) ನಮ್ಮಿಂದ ದೂರವಾಗಿ ಇಂದಿಗೆ 8 ತಿಂಗಳುಗಳು ಕಳೆದು ಹೋಗಿವೆ. ನೋಡನೋಡುತ್ತಿದ್ದಂತೆ  ಎಂಟು ತಿಂಗಳಾಗಿದ್ದರೂ ಅವರು ಇಲ್ಲದ ನೋವನ್ನು ಅಭಿಮಾನಿಗಳು ಇನ್ನೂ ಅನುಭವಿಸುತ್ತಿದ್ದಾರೆ. ಇಂದಿಗೂ ಅವರನ್ನು ನೆನೆದು ಅದೆಷ್ಟೋ ಅಭಿಮಾನಿಗಳು ಕಣ್ಣೀರಿಡುತ್ತಿದ್ದಾರೆ. 

ಪ್ರತಿನಿತ್ಯ ಅಪ್ಪು ಸಮಾಧಿ ಬಳಿ ಸಾವಿರಾರು ಅಭಿಮಾನಿಗಳು ಬರುತ್ತಿರುತ್ತಾರೆ.  ಅಲ್ಲದೇ ಶಿವಣ್ಣನ ಮೆಚ್ಚಿನ ತಮ್ಮ ಪುನೀತ್​ ಇಲ್ಲದೇ ಅವರ ಸಿನಿಮಾ ಇದೇ ಮೊದಲ ಬಾರಿಗೆ ಬಿಡುಗಡೆ ಆಗುತ್ತಿದೆ.  ಶಿವಣ್ಣನ "ಭೈರಾಗಿ"  (Bairagee)  ಚಿತ್ರ ಇದೇ ಜುಲೈ 1ರಂದು ರಾಜ್ಯಾಂದ್ಯಂತ ಬಿಡುಗಡೆ ಆಗುತ್ತಿದೆ.

ಅಪ್ಪು ನಮ್ಮನ್ನು ಅಗಲಿ ಇಂದಿಗೆ 8 ತಿಂಗಳು:

ಹೌದು, ನಮ್ಮೆಲ್ಲರ ಪ್ರೀತಿಯ ಅಪ್ಪು ಇಂದು ಭೌತಿಕವಾಗಿ ನಮ್ಮೊಂದಿಗಿಲ್ಲ. ಆದರೂ ಅವರ ನೆನಪುಗಳು ಎಂದೆಂದಿಗೂ ಎಲ್ಲರ ಮನದಲ್ಲಿ ಹಾಗೆಯೇ ಇರುತ್ತದೆ. ಅವರು ಇಂದಿಗೆ ಸರಿಯಾಗಿ ನಮ್ಮಿಂದ ದೂರವಾಘಿ 8 ತಿಂಗಳು ಕಳೆದಿವೆ. ಆದರೂ ಅವರ ನೆನಪುಗಳು ಇಂದಿಗೂ ಪ್ರತಿಯೊಬ್ಬ ಕನ್ನಡಿಗನ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿದೆ. ಅದಕ್ಕೆ ಸಾಕ್ಷಿಯೆಂಬಂತೆ ಇಂದಿಗೂ ಅಪ್ಪು ಸಮಾಧಿ ಬಳಿ ಪ್ರತಿನಿತ್ಯ ಸಾವಿರಾರು ಮಂದಿ ಬಂದು ತಮ್ಮ ಮೆಚ್ಚಿನ ನಟನ ದರ್ಶನ ಪಡೆದು ಹೋಗುತ್ತಿದ್ದಾರೆ. ಅಲ್ಲದೇ ಪ್ರೀತಿಯ ತಮ್ಮನನ್ನು ಶಿವಣ್ಣ ಯಾವುದೇ ಕಾರ್ಯಕ್ರಮದಲ್ಲಾದರೂ ನೆನೆದು ಇಂದಿಗೂ ಭಾವುಕರಾಗುತ್ತಿದ್ದಾರೆ.

ಇದನ್ನೂ ಓದಿ: ತಮಿಳಿನ ಖ್ಯಾತ ಡೈರೆಕ್ಟರ್ Yash ಗೆ ಆಕ್ಷನ್ ಕಟ್ ಹೇಳ್ತಾರಾ? ಈ ಚಿತ್ರದ ಬಜೆಟ್ ಕೇಳಿದ್ರೆ ಶಾಕ್ ಆಗೋದಂತೂ ಗ್ಯಾರೆಂಟಿ!

ಅಪ್ಪು ಇಲ್ಲದೇ ಬಿಡುಗಡೆ ಆಗುತ್ತಿದೆ ಶಿವಣ್ಣನ ಮೊದಲ ಸಿನಿಮಾ:

ಪುನೀತ್ ನಿಧನದ ವೇಳೆ ಶಿವರಾಜ್​ ಕುಮಾರ್ ಅವರ ಭಜರಂಗಿ 2 ಚಿತ್ರ ಬಿಡುಗಡೆಗೊಂಡಿತ್ತು. ಆದರೆ ಅಪ್ಪು ನಿದನದ ಹಿನ್ನಲೆ ಅದನ್ನು ಕೆಲ ದಿನಗಳ ತನಕ ಚಿತ್ರವನ್ನು ಸ್ಥಗಿತಗೊಳಿಸಲಾಗಿತ್ತು. ಬಳಿಕ ರಿಲಿಸ್ ಮಾಡಲಾಗಿತ್ತು. ಆದರೆ ಇದೀಗ ಪುನೀತ್ ರಾಜ್​ ಕುಮಾರ್, ಶಿವಣ್ಣನ ಮುದ್ದಿನ ತಮ್ಮನ್ನಿಲ್ಲದೇ ಅವರ ಮೊದಲ ಸಿನಿಮಾ ‘ಭೈರಾಗಿ‘ ಬಿಡುಗಡೆ ಸಿದ್ಧವಾಗಿದೆ. ಶಿವರಾಜ್​ ಕುಮಾರ್, ಡಾಲಿ ಧನಂಜಯ್​, ಪ್ರಥ್ವಿ ಅಂಬರ್ ಸೇರಿದಂತೆ ಅನೇಕ ಸ್ಟಾರ್​ ನಟರುಗಳು ನಟಿಸಿರುವ ಭೈರಾಗಿ ಚಿತ್ರವು ಇದೇ ಜುಲೈ 1ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ತಮ್ಮನಿಲ್ಲದೇ ಮೊದಲ ಬಾರಿ ಶಿವಣ್ಣನ ಚಿತ್ರವೊಂದು ಬಿಡುಗಡೆ ಆಗುತ್ತಿದೆ.

ಇದನ್ನೂ ಓದಿ:Golden Star Ganesh: ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದ ಗೋಲ್ಡನ್ ಸ್ಟಾರ್, ​ಫ್ಯಾನ್ಸ್ ಬಳಿ ವಿಶೇಷ ಮನವಿ ಮಾಡಿದ ಗಣೇಶ್

ಶತದಿನೋತ್ಸವ ಆಚರಿಸಿದ ಪುನೀತ್ ಕೊನೆಯ ಸಿನಿಮಾ :

ಪುನೀತ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಶತದಿನೋತ್ಸವ ಆಚರಿಸಿದೆ. ನೆಚ್ಚಿನ ನಟನ ಕೊನೆಯ ಸಿನಿಮಾ ನೂರು ದಿನ ಯಶಸ್ವಿ  ಪ್ರದರ್ಶನ ಕಂಡ ಹಿನ್ನೆಲೆ ಅಭಿಮಾನಿಗಳು ಅದರ ಸಂಭ್ರಮಾಚರಣೆ ಮಾಡಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಪೋಸ್ಟರ್ ಬಿಡುಗಡೆ ಸಹ ಮಾಡಲಾಗಿದೆ.  ಜೇಮ್ಸ್ ಸಿನಿಮಾ ರಾಜರತ್ನ ಪುನೀತ್ ಅಭಿನಯದ ಕೊನೆಯ ಚಿತ್ರ. ಇದು ಮಾರ್ಚ್ 17ರಂದು ಅವರ ಜನ್ಮದಿನದಂದು ಬಿಡುಗಡೆಯಾಗಿತ್ತು. ಬಿಡುಗಡೆಯಾದ ದಿನದಿಂದಲೂ ಚಿತ್ರಮಂದಿರ ಫುಲ್ ಆಗಿತ್ತು. ಅಲ್ಲದೇ ರಿಲೀಸ್​ ಆದ ಕೆಲವೇ ದಿನಗಳಲ್ಲಿ ನೂರು ಕೋಟಿ ಕ್ಲಬ್ ಸೇರಿತ್ತು.

ಜೇಮ್ಸ್ ಶತದಿನೋತ್ಸವಕ್ಕೆ ಸ್ಪೆಷಲ್ ಪೋಸ್ಟರ್


ಜುಲೈ 1ಕ್ಕೆ ‘ಭೈರಾಗಿ‘ ರಿಲೀಸ್:

ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ‘ಭೈರಾಗಿ ಚಿತ್ರ ಇದೇ ಜುಲೈ 1ಕ್ಕೆ ಬಿಡುಗಡೆ ಆಗಲಿದೆ. ಈಗಾಗಲೇ ಚಿತ್ರದ ಪ್ರೀ ರಿಲೀಸ್ ಇವೆಂಟ್ ನಲ್ಲಿ ಚಿತ್ರಕ್ಕೆ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು, ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿದೆ. ಇನ್ನು, ಚಿತ್ರದಲ್ಲಿ ನಾಯಕನಾಗಿ ಶಿವಣ್ಣ ನಟಿಸಿದರೆ, ಡಾಲಿ ಧನಂಜಯ್ ಶಿವಣ್ಣನಿಗೆ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಟಗರು ನಂತರ ಮತ್ತೆ ಈ ಜೋಡಿ ಒಂದಾಗಿದ್ದು, ತೆರೆ ಮೇಲೆ ಇವರಿಬ್ಬರ ಅಬ್ಬರ ನೊಡಲು ಪ್ರೇಕ್ಷಕರು ಕಾತುರರಾಗಿದ್ದಾರೆ.
Published by:shrikrishna bhat
First published: