Puneeth Rajkumar: ಫೈಟ್ ಸೀನ್​ಗೆ ಎಂದೂ Dupe ಬಳಸೇ ಇಲ್ಲ ಪವರ್ ಸ್ಟಾರ್, ಅವರ ಆಕ್ಷನ್ ನೋಡಿ Allu Arjun ಕೂಡಾ ಶಾಕ್ ಆಗಿದ್ರಂತೆ!

Puneeth Rajkumar: ಅಪ್ಪು ಸಿನಿಮಾದಲ್ಲೂ ಹೀರೋ(Hero), ರಿಯಲ್​ ಲೈಫ್​ನಲ್ಲೂ ಹೀರೋ (Real Life Hero). ತಮ್ಮ ತಂದೆಯ ಆದರ್ಶಗಳನ್ನೇ ಮೈಗೂಡಿಸಿಕೊಂಡವರು ನಮ್ಮ ಪುನೀತ್ ರಾಜ್​ಕುಮಾರ್​. ಯಾರಿಗೂ ಇಲ್ಲಿಯವರೆಗೂ ತಿಳಿಯದ ಕೆಲವೊಂದು ಇಂಟ್ರೆಸ್ಟಿಂಗ್​(Interesting) ಸಂಗತಿಗಳು ಇಲ್ಲಿದೆ ಮಿಸ್​ ಮಾಡದೇ ನೋಡಿ.. 

ಪುನೀತ್​ ರಾಜ್​ಕುಮಾರ್​, ಅಲ್ಲು ಅರ್ಜುನ್​

ಪುನೀತ್​ ರಾಜ್​ಕುಮಾರ್​, ಅಲ್ಲು ಅರ್ಜುನ್​

  • Share this:
ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್(Power Star Puneeth Rajkumar)​ ಅಗಲಿ ಒಂದು ತಿಂಗಳು ಕಳೆದರು, ಅವರ ನೆನಪು, ಅವರ ನಗು ನಮ್ಮನ್ನು ಕಾಡಿ ಕೊಲ್ಲುತ್ತಿದೆ. ದೇವರು(God) ಅವರಿಗೆ ಮಾಡಿದ ಅನ್ಯಾಯವನ್ನು ನೆನೆದು ಅಭಿಮಾನಿಗಳು ಹಿಡಿಶಾಪ ಹಾಕಿದ್ದರು. ಕರುನಾಡಿನ ಪ್ರತಿ ಮನೆಯಲ್ಲೂ ಇನ್ನೂ ಮೌನ ಆವರಿಸಿದೆ. ಎಲ್ಲೆ ಹೋಗಲಿ, ಏನೇ ಮಾಡುತ್ತಿರಲಿ ಅಪ್ಪು ಅವರ ನೆನಪು ಮರಳಿ ಮರಳಿ ನಮ್ಮ ಕಣ್ಮುಂದೆ ಬಂದು ಕಾಡುತ್ತಿದೆ. ಎಲ್ಲೇ ನೋಡು ಹಳೇ ಗುರುತು.. ಬಾಳೋದೇಗೆ ಎಲ್ಲ ಮರೆತು.. ಎಂಬ ಹಾಡು(Song) ಕಿವಿಯಲ್ಲಿ ಇನ್ನೂ ಗುನುಗುತ್ತಿದೆ. ಕಾಣದಂತೆ ನಮ್ಮ ಅಪ್ಪು(Appu) ಮಾಯವಾಗಿದ್ದಾರೆ. ಆದರೆ ಅವರು ಮಾಡಿರುವ, ಮಾಡುತ್ತಿದ್ದ ಕೆಲಸಗಳು ಅನೇಕ ಜನರಿಗೆ ಸ್ಪೂರ್ತಿಯಾಗಿದೆ. ಅವರು ಬದುಕಿದ್ದಾಗ ಎಂದೂ ತಾನು ಮಾಡುತ್ತಿದ್ದ ಸಹಾಯ(Help)ಗಳ ಬಗ್ಗೆ ಎಂದು ಎಲ್ಲಿಯೂ ಹೇಳಿಕೊಂಡವರಲ್ಲ. ಅವರ ನಿಧನದ ಬಳಿಕ ಅವರ ಕೆಲಸಗಳು ಒಂದೊಂದೆ ಹೊರ ಬರುತ್ತಿದೆ. ಅವರ ಸಮಾಜಸೇವೆಯ ಕೆಲಸಗಳು ಅಬ್ಬಬ್ಬಾ.. ಒಂದಾ..ಎರಡಾ..ನೂರಾರಿವೆ. ಅಪ್ಪು ಸರ್​ ನಿಮಗೆ ನಮ್ಮದೊಂದು ಸಲಾಂ. ಅಪ್ಪು ಸಿನಿಮಾದಲ್ಲೂ ಹೀರೋ(Hero), ರಿಯಲ್​ ಲೈಫ್​ನಲ್ಲೂ ಹೀರೋ (Real Life Hero). ತಮ್ಮ ತಂದೆಯ ಆದರ್ಶಗಳನ್ನೇ ಮೈಗೂಡಿಸಿಕೊಂಡವರು ನಮ್ಮ ಪುನೀತ್ ರಾಜ್​ಕುಮಾರ್​. ಯಾರಿಗೂ ಇಲ್ಲಿಯವರೆಗೂ ತಿಳಿಯದ ಕೆಲವೊಂದು ಇಂಟ್ರೆಸ್ಟಿಂಗ್​(Interesting) ಸಂಗತಿಗಳು ಇಲ್ಲಿದೆ ಮಿಸ್​ ಮಾಡದೇ ನೋಡಿ.. 

ಎಂದೂ ಡೂಪ್ ಹಾಕದ ಏಕೈಕ ನಟ ಅಪ್ಪು!

ಅಪ್ಪು ಸಿನಿಮಾಗಳಲ್ಲಿ ಆ್ಯಕ್ಷನ್​ ಸೀನ್​ಗಳೇ ಹೈಲೆಟ್​. ಯಾಕೆಂದರೆ ಎಂಥ ಕಷ್ಟಕರವಾದ ಫೈಟ್​ ಸೀನ್​ ಇದ್ದರು ಅಪ್ಪು ಮಾತ್ರ ಎಂದಿಗೂ ಡೂಪ್​ ಹಾಕದವರಲ್ಲ. ಎಲ್ಲವನ್ನೂ ತಾವೇ ಮಾಡುತ್ತಿದ್ದರು. ಅಪ್ಪು ಸಿನಿಮಾದಿಂದ ಕೊನೆಯ ಸಿನಿಮಾ ಯುವರತ್ನ ಚಿತ್ರದವರೆಗೂ ಅಪ್ಪು ಡೂಪ್​ ಹಾಕಿಲ್ಲ. ಎಲ್ಲವೂ ನೈಜವಾಗಿ ಬರಲಿ ಎಂದು ನಿರ್ದೇಶಕರಿಗೆ ಹೇಳುತ್ತಿದ್ದರಂತೆ. ಇವರ ಜೋಶ್​ ಕಂಡು ಫೈಟ್​ ಮಾಸ್ಟರ್​​ಗಳೇ ಅಚ್ಚರಿಗೊಂಡಿದ್ದರಂತೆ.  ಬೈಕ್​ ರೈಡ್​, ಜಂಪಿಂಗ್, ಫೈಟ್​ ಸೀನ್​ ಯಾವುದರಲ್ಲೂ ಡೂಪ್ ಮಾಡುತ್ತಿರಲಿಲ್ಲ. ಎಲ್ಲವನ್ನು ತಾವೇ ಕಲಿತು ಧೈರ್ಯವಾಗಿ ಆ್ಯಕ್ಷನ್​ ಮಾಡುತ್ತಿದ್ದ ಏಕೈಕ ನಟ ಅಂದರೆ ಅದು ನಮ್ಮ ಪುನೀತ್​ ರಾಜ್​​ಕುಮಾರ್​. ಜಾಕಿ ಸಿನಿಮಾದ  ದೃಶ್ಯವೊಂದರಲ್ಲಿ ಫೈಟ್​ ಸೀನ್​ ಮಾಡುವಾಗ, ಬೆಂಕಿಯ ಕಿಡಿಗಳಿಂದ ಪುನೀತ್​ರವರಿಗೆ ಗಾಯವಾಗಿತ್ತು ಅದನ್ನು ಲೆಕ್ಕಿಸದೇ ಫೈಟ್ ಮಾಡಿದ್ದರು ನಮ್ಮ ಅಪ್ಪು..

ಅಪ್ಪು ಅವರ ಹಾಗೇ ಫೈಟ್​ ಸಾಧ್ಯವಿಲ್ಲ ಎಂದಿದ್ದರು ಅಲ್ಲು ಅರ್ಜುನ್​

ಟಾಲಿವುಡ್​ನ ಸೂಪರ್​ ಸ್ಟಾರ್​ ಅಲ್ಲು ಅರ್ಜುನ್​ ಫೈಟ್​, ಡ್ಯಾನ್ಸ್​ ಎರಡರಲ್ಲೂ ಸೈ ಎನಿಸಿಕೊಂಡವರು. ಆದರೆ, ಅವರು ಕೂಡ ಅಪ್ಪುಗೆ ಮಾಡಿಸುವ ಫೈಟ್​ಗಳನ್ನು ನನಗೆ ಮಾಡಿಸಬೇಡಿ ಎಂದು ಫೈಟ್​ ಮಾಸ್ಟರ್​ ರವಿವರ್ಮ ಅವರ ಬಳಿ ಹೇಳಿದ್ದರಂತೆ. ಅವರ ಹಾಗೇ ನಮಗೆ ಫೈಟ್ ಮಾಡಲು ಬರವುದಿಲ್ಲ. ಅಪ್ಪು ಸರ್​ ಸ್ಟೈಲ್​ ಮಾಡಲು ನಿಜ ಆಗುವುದಿಲ್ಲ ಎಂದು ಅಲ್ಲು ಅರ್ಜುನ್​ ರವಿವರ್ಮ ಅವರ ಬಳಿ ಹೇಳಿದ್ದರಂತೆ.

ಇದನ್ನು ಓದಿ : ಪುನೀತ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಲಾಲ್‌ಬಾಗ್

ಸರಳಗೆಯ ಸಾಮ್ರಾಟ್​ ಪುನೀತ್​ ರಾಜ್​ಕುಮಾರ್​!

ಪುನೀತ್​ ರಾಜ್​ಕುಮಾರ್​ ಸೆಟ್​ನಲ್ಲೂ ಕೂಡ ಸಾಮನ್ಯರಂತೆ ಇದ್ದರು. ಹಿರಿಯರು, ಕಿರುಯರು ಯಾರೇ ಇರಲಿ ಎಲ್ಲರನ್ನೂ ಪ್ರೀತಿಯಿಂದ ಅಪ್ಪಿಕೊಂಡು ಮಾತನಾಡುತ್ತಿದ್ದವರು ನಮ್ಮ ಪವರ್​ಸ್ಟಾರ್​. ತಮ್ಮ ಪಾಡಿಗೆ ಶೂಟಿಂಗ್​ ಮುಗಿಸಿತ್ತಿದ್ದರು. ಯಾರ ಬಳಿಯೂ ಬೇಡದೇ ಇರುವ ವಿಚಾರವನ್ನು ಎಂದಿಗೂ ಯಾರೊಂದಿಗೂ ಮಾತನಾಡಿದವರಲ್ಲ ಅಪ್ಪು. ಮತ್ತೊಬ್ಬರ ಮನಸ್ಸನ್ನು ನೋಯಿಸುವ ಕೆಲಸವನ್ನು ಮಾಡೇ ಇಲ್ಲ ಪವರ್​ ಸ್ಟಾರ್​. ಅದಕ್ಕೆ ಅಲ್ವಾ ವಯಸ್ಸಾದ ಹಿರಿಯರಿಗೂ ಅಪ್ಪು ಅವರೇ ನೆಚ್ಚಿನ ನಟರಾಗಿದ್ದರು. ಪುಟ್ಟ ಪುಟ್ಟ ಮಕ್ಕಳು ಕೂಡು ಅಪ್ಪು ಅಂದರೆ ಎದ್ದು ಕುಣಿಯುತ್ತಿದ್ದರು.

ಇದನ್ನು ಓದಿ : ಶೀಘ್ರದಲ್ಲೇ ತೆರೆ ಮೇಲೆ ಅಪ್ಪು ಬಯೋಪಿಕ್​, ಸಂತೋಷ್​ ಆನಂದ್​ರಾಮ್​ ಕೊಟ್ಟ ಸುಳಿವೇನು?

ಸೋಲಿಲ್ಲದ ಸರದಾರ ಪುನೀತ್​ ರಾಜ್​ಕುಮಾರ್!

ಈಗ ಒಂದು ಸಿನಿಮಾ ಹಿಟ್​ ಆದರೆ ಸಾಕು ಕೈಗೆ ಸಿಗುವುದಿಲ್ಲ. ಆದರೆ ಪವರ್​ ಸ್ಟಾರ್​ ಪುನೀತ್​ ಅವರ ಎಲ್ಲ ಸಿನಿಮಾಗಳು ಸೂಪರ್​ ಹಿಟ್​. ಯಾವ ಸಿನಿಮಾ ಕೂಡ ನೋಡಲು ಆಗುವುದೇ ಇಲ್ಲ ಎಂದು ಅನ್ನಿಸಿಲ್ಲ. ಪ್ರತಿಯೊಂದು ಸಿನಿಮಾನನೂ ಫ್ಯಾಮಿಲಿ ಸಮೇತ ಹೋಗಿ ನೋಡುತ್ತಿದ್ದರು. ಅಪ್ಪು ಅವರ ಸಿನಿಮಾ ಜರ್ನಿಯಲ್ಲಿ ಒಂದೂ ಕಪ್ಪು ಚುಕ್ಕೆ ಇರಲಿಲ್ಲ. ಒಂದು ಸಿನಿಮಾದಲ್ಲೂ ಕೆಟ್ಟ ದೃಶ್ಯಗಳು ಇರಲಿಲ್ಲ. ಅವರ ತಂದೆಯಂತೆಯೇ ಸಿನಿಮಾ ಒಪ್ಪಿಕೊಳ್ಳುತ್ತಿದ್ದರು ಅಪ್ಪು. ಸಿನಿಮಾ ಶೂಟಿಂಗ್​ ಮುಗಿದ ಬಳಿಕವೂ ನಿರ್ದೇಶಕರ ಬಳಿ ಹೋಗಿ ಹೋಗಬಹುದಾ ಎಂದು ಕೇಳುತ್ತಿದ್ದರಂತೆ ಪುನೀತ್​ ರಾಜ್​ಕುಮಾರ್​. ಅವರ ಮಗ್ಧತೆ, ಸರಳತೆಗೆ ಅವರಿಗೆ ಅವರೇ ಸಾಟಿ.
Published by:Vasudeva M
First published: