ಪವರ್ ಸ್ಟಾರ್ ಪುನೀತ್ ಜ್ಕುಮಾರ್ (Power Star Puneeth Rajkumar) ಹಾಗೂ ಹೊಂಬಾಳೆ ಫಿಲ್ಮ್ಸ್ (Hombale Films) ನಡುವೆ ಒಂದು ಗಟ್ಟಿಯಾದ ಬಂಧವಿತ್ತು. ಅಪ್ಪು(Appu) ಅಭಿನಯದ ‘ನಿನ್ನಿಂದಲೇ’ ಸಿನಿಮಾಗೆ ಹೊಂಬಾಳೆ ಬಂಡವಾಳ ಹಾಕಿತ್ತು. ಇದಾದ ಬಳಿಕ ‘ರಾಜಕುಮಾರ’ (Rajakumara) ಹಾಗೂ ‘ಯುವರತ್ನ’ (Yuvarathna) ನಿಗೂ ಅವರೇ ಬಂಡವಾಳ ಹಾಕಿದ್ದರು. ಈ ಎರಡು ಸಿನಿಮಾಗಳಿಗೆ ಅಪ್ಪು ಅವರ ನೆಚ್ಚಿನ ನಿರ್ದೇಶಕ ಸಂತೋಷ್ ಆನಂದ್ರಾಮ್ (Santhosh Anandram) ಆ್ಯಕ್ಷನ್ ಕಟ್ ಹೇಳಿದ್ದರು. ಅಪ್ಪು ಜೊತೆ ಮತ್ತೊಂದು ಸಿನಿಮಾ ಮಾಡುವ ಆಸೆ ಹೊಂದಿದ್ದರು ಹೊಂಬಾಳೆ ಪ್ರೊಡಕ್ಷನ್ (Hombale Production). ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಅಪ್ಪು ಹೇಳದೇ ಕೇಳದೇ ಬಾರದ ಲೋಕಕ್ಕೆ ಹೊರಟು ಹೋದರು. ಮುಂದೇನು ಅಂತ ಯೋಚಿಸುತ್ತಿರುವಾಗ ಹೊಂಬಾಳೆ ಫಿಲ್ಮ್ಸ್ ಗುಡ್ ನ್ಯೂಸ್ ನೀಡಿದೆ. ದೊಡ್ಮನೆ ಜೊತೆ ಇದ್ದ ಬಂಧವನ್ನು ಮುಂದುವರೆಸಲಿದ್ದಾರೆ. ಹೌದು, ರಾಘಣ್ಣನ ಕಿರಿಯ ಪುತ್ರನ ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡುತ್ತಿದೆ.
ಯುವರಾಜಕುಮಾರ ಸಿನಿಮಾಗೆ ಸಂತೋಷ್ ಆ್ಯಕ್ಷನ್ ಕಟ್!
ಯುವರಾಜಕುಮಾರ್ ಅವರ ಮೊದಲ ಚಿತ್ರ ‘ಯುವ’ ಪೋಸ್ಟರ್ ಲುಕ್ ಲಾಂಚ್ ಆಗಿದ ಅಪ್ಪು ನಿಧನದ ಬಳಿಕ ಎಲ್ಲವೂ ಬದಲಾಗುತ್ತಿದೆ. ಈಗ ಯುವ ರಾಜ್ ಮೊದಲ ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಜೊತೆಗೆ ಮೊದಲ ಚಿತ್ರ ಸೆಟ್ಟೇರುವ ಮೊದಲೇ, ಯುವ ರಾಜ್‌ಕುಮಾರ್ ಮತ್ತೆರಡು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಒಟ್ಟು ಯುವ ಈಗ ನಾಲ್ಕು ಚಿತ್ರಗಳು ಮಾಡಲು ಒಪ್ಪಿಗೆ ಸೂಚಿಸಿದ್ದಾರಂತೆ. ಈ ಮೂಲಕ ಯುವ ಕನ್ನಡ ಚಿತ್ರರಂಗದಲ್ಲಿ ತಮ್ಮ ಸಿನಿ ಜರ್ನಿ ಆರಂಭದಲ್ಲೇ, ದೊಡ್ಡ ಮಟ್ಟದ ಛಾಪು ಮೂಡಿಸಲಿದ್ದಾರೆ.
3 ಸಿನಿಮಾಗಳಿಗೆ ಸಹಿ ಹಾಕಿ ಯುವರಾಜ್!
ಯುವ ರಾಜ್‌ಕುಮಾರ್ ಬಗ್ಗೆ ಮತ್ತೊಂದು ಹೊಸ ಸುದ್ದಿ ಬಂದಿದೆ. ಅವರ ಮೊದಲ ಸಿನಿಮಾವನ್ನು ಸಂತೋಷ್ ಆನಂದ್ ನಿರ್ದೇಶನ ಮಾಡುತ್ತಾರೆ ಅಂತ ಕೆಲ ದಿನಗಳಿಂದ ಸುದ್ದಿಯಾಗಿತ್ತು. ಅದು ಕನ್ಫರ್ಮ್ ಆಗಿದೆ. ಆದರೆ, ಕೇವಲ ಒಂದು ಚಿತ್ರಕ್ಕೆ ಮಾತ್ರ ಸಂತೋಷ್ ಆನಂದ್ರಾಮ್ ಆ್ಯಕ್ಷನ್ ಕಟ್ ಹೇಳುತ್ತಿಲ್ಲ. ಯುವರಾಜ್ ಜೊತೆ ಸಂತೋಷ್ ಆನಂದ್ರಾಮ್ 3 ಸಿನಿಮಾ ಮಾಡಲಿದ್ದಾರಂತೆ.
ಇದನ್ನೂ ಓದಿ: ತಾಯಿ ಪ್ರೀತಿಗೆ ಮತ್ತೊಂದು ಹಾಡು, ಹೃದಯ ಮೀಟುವ ಹೊಸ ಹಾಡು ಕೇಳಿ
ಯುವರಾಜ್ ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ!
ಅಪ್ಪು ಜೊತೆ ಮತ್ತೊಂದು ಸಿನಿಮಾ ಮಾಡಲು ಸಂತೋಷ್ ಆನಂದ್ರಾಮ್ ಕಥೆಯೊಂದನ್ನು ರೆಡಿಮಾಡಿಕೊಂಡಿದ್ದರು. ಇದೀಗ ಅದೇ ಕಥೆಯಲ್ಲಿ ಯುವರಾಜ್ಕುಮಾರ್ ನಟಿಸಲಿದ್ದಾರೆ. ಇದರ ಜೊತೆ ಇನ್ನೂ ಎರಡು ಹೊಸ ಸಿನಿಮಾಗೆ ಯುವರಾಜ್ ಸಹಿ ಹಾಕಿದ್ದಾರೆ. ಯುವ ರಾಜ್‌ಕುಮಾರ್ ಮೊದಲ ಚಿತ್ರ ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಲಿದೆ ಎನ್ನುವ ಸುದ್ದಿ ಹೊರ ಬಂದಿದೆ. ಹೌದು, ಹೊಂಬಾಳೆ ಸಿನಿಮಾ ಯುವ ರಾಜ್‌ಕುಮಾರ್ ಮುಂದಿನ ಮೂರು ಚಿತ್ರಗಳನ್ನು ನಿರ್ಮಾಣ ಮಾಡಲು ಮುಂದಾಗಿದೆ. ಈಗಾಗಲೇ ಮಾತುಕತೆ ಮುಗಿದಿದ್ದು, ಯುವ ರಾಜ್‌ಕುಮಾರ್ ಕೂಡ ಸಹಿ ಹಾಕಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಯುಕೆಯಲ್ಲಿ ಕೆಜಿಎಫ್ 2 ಟಿಕೆಟ್ ಸೋಲ್ಡ್ಔಟ್, ಇದು ಕೇವಲ ಆರಂಭ.. ಪಿಕ್ಚರ್ ಅಭಿ ಬಾಕಿ ಹೈ!
ಅಪ್ಪು ಸ್ಥಾನ ತುಂಬಲಿದ್ದಾರಂತೆ ಯುವರಾಜ್!
ವಿಜಯ್ ಕಿರಗಂದೂರ್ ಅವರ ಹೊಂಬಾಳೆ ಫಿಲ್ಮ್ಸ್ ಶುರುವಾಗಿದ್ದು, ಅಪ್ಪು ಅವರಿಂದಲೇ. ಹೀಗಾಗಿ ಅಪ್ಪು ಅವರ ಸ್ಥಾನವನ್ನು ಈಗ ಯುವರಾಜ್ ಕುಮಾರ್ ತುಂಬಲಿದ್ದಾರೆ ಅಂತ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿರುವ ಕೆಜಿಎಫ್ 2 ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಇನ್ನೂ ಪ್ರಭಾಸ್ ಸಲಾರ್ ಸಿನಿಮಾ ಕೂಡ ಶೂಟಿಂಗ್ ಹಂತದಲ್ಲಿದೆ. ಸಲಾರ್ ಮುಗಿಯುತ್ತಿದ್ದಂತೆ ಯುವರಾಜ್ಕುಮಾರ್ ಅವರ ಸಿನಿಮಾ ಶೂಟಿಂಗ್ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ.
ಏಪ್ರಿಲ್ 24ಕ್ಕೆ ಮುಹೂರ್ತ!
ಡಾ.ರಾಜ್‌ಕುಮಾರ್ ಅವರ ಹುಟ್ಟುಹಬ್ಬದಂದು ಯುವರಾಜ್ಕುಮಾರ್ ಹಾಗೂ ಸಂತೋಷ್ ಆನಂದ್ರಾಮ್ ಸಿನಿಮಾದ ಮುಹೂರ್ತ ನೆರವೇರಲಿದೆ. ಹಾಗೂ ಅಂದೇ ಟೈಟಲ್ ಕೂಡ ಲಾಂಚ್ ಆಗಲಿದೆ ಎಂದು ಹೇಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ