Puneeth Rajkumar: ಅಭಿಮಾನಿಗಳ ಮನೆ-ಮನದಲ್ಲಿ ಇನ್ನೂ ನಿಂತಿಲ್ಲ ಅಪ್ಪು ಸ್ಮರಣೆ! ಚಾಮರಾಜಪೇಟೆಯಲ್ಲಿ ನಿರ್ಮಾಣವಾಗಿದೆ ಪುನೀತ್ ಬಡಾವಣೆ

Puneeth Rajkumar: ಪುನೀತ್ ರಾಜ್​ ಕುಮಾರ ಅವರ ಹೆಸರನ್ನು ಈ ಬಡಾವಣೆಗೆ ಇಟ್ಟಿರುವುದು ನನಗೆ ತುಂಬಾ ಹರ್ಷ ತಂದಿದೆ. ಪುನೀತ್ ರಾಜ್ ಕುಮಾರ್ ಅವರು ಅಪರೂಪದ ವ್ಯಕ್ತಿ ಅಷ್ಟೇ ಅಲ್ಲ, ಅವರೊಂದು ಅದ್ಭುತ ಶಕ್ತಿ.

ನಟ ಪುನೀತ್​​ ರಾಜ್​ಕುಮಾರ್​

ನಟ ಪುನೀತ್​​ ರಾಜ್​ಕುಮಾರ್​

  • Share this:
ಪುನೀತ್ ರಾಜ್​ಕುಮಾರ್(Puneeth Rajkumar), ಇವರನ್ನು ನೆನೆಯದ ದಿನವೇ ಇಲ್ಲವೇನೋ. ಅಕಾಲಿಕವಾಗಿ ಅಭಿಮಾನಿ (Fans)  ಬಳಗವನ್ನು ಬಿಟ್ಟು ಹೋದ ಈ ನಟ ಅಭಿಮಾನಿಗಳ ಮನಸ್ಸಲ್ಲಿ ಅಜರಾಮರ. ಇದೀಗ ಅವರಿಗೆ ಮತ್ತೊಂದು ರೀತಿಯಲ್ಲಿ ಗೌರವ ನೀಡಲಾಗಿದೆ. ಚಾಮರಾಜಪೇಟೆ (Chamarajpete) ಕ್ಷೇತ್ರದ ಆಜಾದ್ (Azad Nagar) ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಬಡಾವಣೆಯೊಂದಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Power Star) ಅವರ ಹೆಸರು ಇಡಲಾಗಿದೆ. ಇದು ನಿಜಕ್ಕೂ ಪುನೀತ್ ಅಭಿಮಾನಿಗಳ ಸಂತೋಷಕ್ಕೆ ಕಾರಣವಾಗಿದೆ. 

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೆಸರಿನ ನೂತನ ಬಡಾವಣೆಯನ್ನು ಉದ್ಘಾಟಿಸಿ ಮಾತನಾಡಿದ ಚಾಮರಾಜಪೇಟೆ ಕ್ಷೇತ್ರದ ಶಾಸಕ ಮತ್ತು ಮಾಜಿ ಸಚಿವ ಬಿ ಜೆಡ್ ಜಮೀರ್ ಅಹ್ಮದ್ ಖಾನ್, ಪುನೀತ್ ರಾಜ್​ ಕುಮಾರ ಅವರ ಹೆಸರನ್ನು ಈ ಬಡಾವಣೆಗೆ ಇಟ್ಟಿರುವುದು ನನಗೆ ತುಂಬಾ ಹರ್ಷ ತಂದಿದೆ. ಪುನೀತ್ ರಾಜ್ ಕುಮಾರ್ ಅವರು ಅಪರೂಪದ ವ್ಯಕ್ತಿ ಅಷ್ಟೇ ಅಲ್ಲ, ಅವರೊಂದು ಅದ್ಭುತ ಶಕ್ತಿ. ಅವರೇನು  ಎಂಬುದು ಅಭಿಮಾನಿಗಳು ಅವರ ಮೇಲಿಟ್ಟಿರುವ ಪ್ರೀತಿ ಗೌರವದಿಂದ ಸಾಬೀತಾಗಿದೆ ಅಭಿಪ್ರಾಯಪಟ್ಟಿದ್ದಾರೆ.

ಪುನೀತ್ ಜೊತೆಗಿನ ಸ್ನೇಹವನ್ನು ನೆನೆದ ಜಮೀರ್

ನಾನು ರಾಜಕೀಯಕ್ಕೆ ಬರುವ ಮೊದಲಿನಿಂದಲೂ ನಮ್ಮ ಮತ್ತು ಡಾ.ರಾಜ್ ಕುಮಾರ್ ಅವರ ಕುಟುಂಬದ ನಡುವೆ ಅವಿನಾಭಾವ ಬಾಂಧವ್ಯ ಇದೆ. ಪುನೀತ್ ರಾಜ್ ಕುಮಾರ್ ಅವರನ್ನು ‌ನಾನು ಬಾಲ್ಯದಿಂದಲೂ ನೋಡಿದ್ದೇನೆ. ಅವರಲ್ಲಿದ್ದ ಸರಳತೆ, ಸಾಮಾಜಿಕ ಕಳಕಳಿ, ಮಾನವೀಯ ಮೌಲ್ಯಗಳು ಪ್ರತಿಯೊಬ್ಬರಿಗೂ ಸ್ಪೂರ್ತಿ ಎಂದಿದ್ದಾರೆ.

ಅವರು ನಮ್ಮನ್ನು ಅಗಲುವ ಮುನ್ನಾ ದಿನ ನನ್ನ ಮಗನೊಂದಿಗೆ ಫೋನ್ ಕಾಲ್ ನಲ್ಲಿ ನಡೆಸಿದ ಸಂಭಾಷಣೆ ಇಂದಿಗೂ ಕಿವಿಯಲ್ಲಿ ಗುನುಗುವಂತಿದೆ ಎಂದು, ಆಡಿಯೋ ಪ್ಲೇ ಮಾಡಿ, ಪವರ್ ಸ್ಟಾರ್ ಮತ್ತು ತಮ್ಮ ನಡುವಿನ ಸ್ನೇಹವನ್ನು ಮೆಲುಕು ಹಾಕಿದ್ದಾರೆ ಶಾಸಕರು.  ಇನ್ನು ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಡಿ.ಸಿ ರಮೇಶ್‌ , ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಂಘದ ಅಧ್ಯಕ್ಷರಾದ ಸಿದ್ದಯ್ಯ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ: ಥೈಲ್ಯಾಂಡ್​ನಲ್ಲಿ ಆಶಿಕಾ ರಂಗನಾಥ್ ಜಬರ್ದಸ್ತ್​ ಪೋಸ್​, ಚುಟು ಚುಟು ಬೆಡಗಿ ನೋಡಿ ಫ್ಯಾನ್ಸ್ ಕ್ಲೀನ್ ಬೋಲ್ಡ್​

ಇದೊಂದು ಕೇವಲ ಉದಾಹರಣೆಯಷ್ಟೇ

ಅಪ್ಪು ಮೇಲಿನ ಅಭಿಮಾನಕ್ಕೆ ಹಲವಾರು ಸಾಕ್ಷಿಗಳಿದೆ. ಮೊನ್ನೆಯಷ್ಟೇ ರಾಘವೇಂದ್ರ ರಾಜ್​ಕುಮಾರ್ ಒಂದು ವಿಡಿಯೋ ಶೇರ್ ಮಾಡಿಕೊಂಡಿದ್ದರು. ಅದರಲ್ಲಿ ಅಪ್ಪುವಿನ ಅಭಿಮಾನಿಯೊಬ್ಬರು, ದೇವರ ಕಾರ್ಯಕ್ರಮದಲ್ಲಿ ತಲೆಯ ಮೇಲೆ ದೇವರ ಹೊತ್ತುಕೊಳ್ಳುವ ಹಾಗೆ ಅಪ್ಪುವಿನ ಮೂರ್ತಿಯನ್ನು ಹೊತ್ತುಕೊಂಡಿದ್ದಾರೆ. ಇದು ಅಪ್ಪು ಎಂದರೆ ಅಭಿಮಾನಿಗಳಿಗೆ ಅದೆಷ್ಟು ಪ್ರೀತಿ ಎಂಬುದು ತಿಳಿಯುತ್ತದೆ.

ಅಪ್ಪು ಹೋದ ನಂತರ ಅಭಿಮಾನಿಗಳು ಒಂದೆಲ್ಲಾ ಒಂದು ರೀತಿಯಲ್ಲಿ ಅವರನ್ನು ಪೂಜಿಸುತ್ತಿದ್ದಾರೆ. ಇತ್ತೀಚೆಗಷ್ಟೇ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಅಪ್ಪು ಪ್ರತಿಮೆಯನ್ನು ಅನಾವರಣ ಮಾಡಲಾಗಿತ್ತು.  ಅಪ್ಪುಗೆ ಅಭಿಮಾನಿಗಳು ಎಂದರೆ ಪ್ರಾಣ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರಲ್ಲೂ ಅವರು ಹೊಸಪೇಟೆಯ ಬಗ್ಗೆ ಹೆಚ್ಚಿನ ಪ್ರೀತಿ ಹೊಂದಿದ್ದರಂತೆ. ಹಾಗಾಗಿ ಅವರಿಗಾಗಿ ಇಲ್ಲಿ ಅಭಿಮಾನಿಗಳು ಅವರ ಪ್ರತಿಮೆ ನಿರ್ಮಿಸಿದ್ದಾರೆ.

ಇದನ್ನೂ ಓದಿ: 777 Charlie ಸಿನಿಮಾದಲ್ಲಿ ಚಾರ್ಲಿಗೆ ಕೊಟ್ಟ ಸಂಬಳ ಎಷ್ಟು ಗೊತ್ತಾ? ಹೀರೋಗೂ ಇಷ್ಟು ಸಂಭಾವನೆ ಇಲ್ವಂತೆ

ಅದರಲ್ಲೂ ಇದು ಬರೋಬ್ಬರಿ 7.4 ಅಡಿ ಎತ್ತರದ ಪ್ರತಿಮೆ ಇದಾಗಿದ್ದು, ಕರುನಾಡಿಗೆ ಹೆಮ್ಮೆಯ ವಿಚಾರ ಎನ್ನಬಹುದು. ಈ ಅಭೂತಪೂರ್ವ ಕ್ಷಣಕ್ಕೆ ಸಾವಿರಾರು ಅಪ್ಪು ಅಭಿಮಾನಿಗಳು ಸಾಕ್ಷಿಯಾಗಿದ್ದು, ಹಬ್ಬವಿತ್ತು ಎನ್ನುವ ರೀತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.  ಈ ಕಾರ್ಯಕ್ರಮಕ್ಕೆ ಸಾವಿರಾರು ಅಭಿಮಾನಿಗಳ ಜೊತೆ ರಾಘವೇಂದ್ರ ರಾಜ್​ಕುಮಾರ್, ನಟ ಅಜಯ್ ರಾವ್, ನಿರ್ದೇಶಕ ಸಂತೋಷ್ ಆನಂದ್ ರಾಮ್​ ಸೇರಿದಂತೆ ಆನೇಕ ಗಣ್ಯರು ಭಾಗವಹಿಸಿದ್ದರು.
Published by:Sandhya M
First published: