Puneeth Rajkumar: ಶಿವಮೊಗ್ಗ ಜಿಲ್ಲೆಯಲ್ಲಿ ಅಪ್ಪು ಸ್ಮಾರಕ ನಿರ್ಮಾಣ, ನೆಚ್ಚಿನ ನಟನಿಗೆ ಅಭಿಮಾನಿಗಳಿಂದ ವಿಶೇಷ ಗೌರವ

Puneeth Rajkumar: ಅತ್ಯಾಕರ್ಷಕವಾಗಿ ಸ್ಮಾರಕವನ್ನು ಪುನೀತ್ ಅಭಿಮಾನಿಗಳು ನಿರ್ಮಿಸಿದ್ದು, ಜೊತೆಗೆ ಕಾರಂಜಿಯನ್ನು ಸಹ ನಿರ್ಮಾಣ ಮಾಡಿದ್ದಾರೆ.  ಗ್ರಾಮದವರೆಲ್ಲರೂ ಸೇರಿ ಈ ಅದ್ಭುತ ಕಾರ್ಯವನ್ನು ಮಾಡಿದ್ದಾರೆ.

ಪುನೀತ್​ ರಾಜ್​ಕುಮಾರ್​

ಪುನೀತ್​ ರಾಜ್​ಕುಮಾರ್​

  • Share this:
ರಾಜರತ್ನ ಪುನೀತ್ ರಾಜ್​ಕುಮಾರ್ (Puneeth Rajkumar) ನಮ್ಮನ್ನಗಲಿ ಸುಮಾರು 8 ತಿಂಗಳು ಕಳೆದಿದೆ. ಆದರೆ ಅಭಿಮಾನಿಗಳು (Fans) ಮಾತ್ರ ಎಂದಿಗೂ ಅವರನ್ನು ಮರೆತಿಲ್ಲ. ಅವರ ಹೆಸರಿನಲ್ಲಿ ದಿನಕ್ಕೊಂದು ಸಾಮಾಜಿಕ ಕಾರ್ಯಗಳು ನಡೆಯುತ್ತದೆ. ಅವರ ನೆನಪಿನಲ್ಲಿ ಸ್ಮಾರಕ, ಪುತ್ಥಳಿ ನಿರ್ಮಾಣ ಮಾಡಲಾಗುತ್ತಿದೆ. ಇದೀಗ ಅಭಿಮಾನಿಗಳು ಅವರ ಸ್ಮಾರಕ ನಿರ್ಮಾಣ ಮಾಡಿದ್ದಾರೆ.  ಶಿವಮೊಗ್ಗ ಜಿಲ್ಲೆಯ ಸಾಗರ (Sagar)  ತಾಲೂಕಿನ ತಳಗೆರೆ ಗ್ರಾಮದಲ್ಲಿ ಅಭಿಮಾನಿಗಳು ನೆಚ್ಚಿನ ನಟ ಪುನೀತ್ ರಾಜ್​ಕುಮಾರ್ ಸ್ಮಾರಕ ನಿರ್ಮಿಸಿದ್ದಾರೆ. ಅಗಲಿದ ಅಪ್ಪುವಿನ ನೆನಪಿಗೆ ಗ್ರಾಮಸ್ಥರು ಸ್ಮಾರಕ ನಿರ್ಮಾಣ ಮಾಡಿದ್ದು, ವಿಶೇಷ ಗೌರವ ನೀಡಿದ್ದಾರೆ.

ಪುನೀತ್ ಗುಣಗಾನ ಮಾಡಿದ ಅಭಿಮಾನಿಗಳು

ಅತ್ಯಾಕರ್ಷಕವಾಗಿ ಸ್ಮಾರಕವನ್ನು ಪುನೀತ್ ಅಭಿಮಾನಿಗಳು ನಿರ್ಮಿಸಿದ್ದು, ಜೊತೆಗೆ ಕಾರಂಜಿಯನ್ನು ಸಹ ನಿರ್ಮಾಣ ಮಾಡಿದ್ದಾರೆ.  ಗ್ರಾಮದವರೆಲ್ಲರೂ ಸೇರಿ ಈ ಅದ್ಭುತ ಕಾರ್ಯವನ್ನು ಮಾಡಿದ್ದು, ಗ್ರಾಮದ ಹಿರಿಯರಿಂದಲೇ ಸ್ಮಾರಕ ಉದ್ಘಾಟನೆ ಮಾಡಲಾಗಿದೆ.  ಕಾರ್ಯಕ್ರಮದಲ್ಲಿ ಅಭಿಮಾನಿಗಳು ಪುನೀತ್ ನೆನೆದು ಅವರ ಅದ್ಭುತ ಕೆಲಸಗಳನ್ನು ಗುಣಗಾನ ಮಾಡಿದ್ದು, ಪುನೀತ್ ಮರೆಯಲಾಗದ ಮಾಣಿಕ್ಯ ಎಂದು ಗ್ರಾಮಸ್ಥರು ಕೊಂಡಾಡಿದ್ದಾರೆ.


ಇನ್ನು ವಿಜಯನಗರದ ಹೊಸಪೇಟೆಯಲ್ಲಿ ಸಹ ಅಪ್ಪು ಅಭಿಮಾನಿಗಳು ಪ್ರತಿಮೆ ನಿರ್ಮಿಸಿದ್ದಾರೆ. ಅಪ್ಪುಗೆ ಅಭಿಮಾನಿಗಳು ಎಂದರೆ ಪ್ರಾಣ, ಅದರಲ್ಲೂ ಅವರು ಹೊಸಪೇಟೆಯ ಬಗ್ಗೆ ಹೆಚ್ಚಿನ ಪ್ರೀತಿ ಹೊಂದಿದ್ದರಂತೆ. ಇಲ್ಲಿ ಅಭಿಮಾನಿಗಳು ಅವರ ಪ್ರತಿಮೆ ನಿರ್ಮಿಸಿದ್ದಾರೆ. ಅದರಲ್ಲೂ ಬರೋಬ್ಬರಿ 7.4 ಅಡಿ ಎತ್ತರದ ಪ್ರತಿಮೆ ಇದಾಗಿದ್ದು, ಕರುನಾಡಿಗೆ ಹೆಮ್ಮೆಯ ವಿಚಾರ ಎನ್ನಬಹುದು. ಈ ಅಭೂತಪೂರ್ವ ಕ್ಷಣಕ್ಕೆ ಸಾವಿರಾರು ಅಪ್ಪು ಅಭಿಮಾನಿಗಳು ಸಾಕ್ಷಿಯಾಗಿದ್ದು, ಹಬ್ಬವಿತ್ತು ಎನ್ನುವ ರೀತಿ ಆಚರಣೆ ಮಾಡಲಾಗಿದೆ.ಇದನ್ನೂ ಓದಿ: ಮೈಸೂರಿನ ಹೋಟೆಲ್​ ಮುಂದೆ ರಮ್ಯಾ ಹೈಡ್ರಾಮಾ, ನರೇಶ್​ ಮೇಲೆ ಆರೋಪಗಳ ಸುರಿಮಳೆ

ಇನ್ನು ಪುನೀತ್ ರಾಜಕುಮಾರ್ ಅಕಾಲ ಮರಣ ಹೊಂದಿದ ಬಳಿಕ ಪ್ರತಿನಿತ್ಯ ರಾಜ್ಯದ ಒಂದಲ್ಲಾ ಒಂದು ಹಳ್ಳಿ ಗ್ರಾಮಗಳಲ್ಲಿ ಅವರ ಹೆಸರಲ್ಲಿ ಪುಣ್ಯ ಕಾರ್ಯಗಳು ನಡೆಯುತ್ತದೆ. ಅದೆಷ್ಟೋ ಜನರು ಪ್ರತಿನಿತ್ಯ ಪುನೀತ್ ಹೆಸರು ಹೇಳಿಕೊಂಡು ಹಸಿದವರಿಗೆ ಅನ್ನ ಸಂತರ್ಪಣೆ ಮಾಡುತ್ತಿದ್ದಾರೆ. ಅಲ್ಲದೇ ಹಲವಾರು ರಸ್ತೆಗಳಿಗೆ ಪುನೀತ್ ಹೆಸರನ್ನು ಸಹ ಇಡಲಾಗಿದೆ.ಇನ್ನು ಬೆಂಗಳೂರಿನಲ್ಲಿ ನಾಯಂಡಹಳ್ಳಿಯಿಂದ ಬನ್ನೇರುಘಟ್ಟದವರೆಗಿನ ರಸ್ತೆಗೆ ಪುನೀತ್​ ಹೆಸರು ಇಡುವಂತೆ ಅಭಿಮಾನಿಗಳು ಮನವಿ ಸಲ್ಲಿಸಿದ್ದರು. ಇದಕ್ಕೆ ಬಿಬಿಎಂಪಿ ಸ್ಪಂದಿಸಿ, ರಸ್ತೆಗೆ ಪುನೀತ್ ರಾಜ್​ಕುಮಾರ್ ರಸ್ತೆ ಎಂದು ಹೆಸರಿಟ್ಟಿದೆ.ಹಾಗೆಯೇ ಅಭಿಮಾನಿಯೊಬ್ಬರು ಪುನೀತ್ ಅವರ ಪ್ರೀತಿಗಾಗಿ ಮನೆಯಂಗಳದಲ್ಲಿ ಸಾವಿರಾರು ರೂಪಾಯಿ ಹಣ ಖರ್ಚುಮಾಡಿ ಪುನೀತ್ ರಾಜಕುಮಾರ್ ಅವರ ಪುತ್ಥಳಿಯನ್ನು ನಿರ್ಮಾಣ ಮಾಡಿದ್ದಾರೆ. ಕೂಡ್ಲಿಗಿ ತಾಲೂಕಿನ ಸಿದ್ದಾಪುರದ ವಡ್ಡರಹಟ್ಟಿಯಲ್ಲಿ ಆರ್.ಟಿ. ನಾಗರಾಜ ಮತ್ತು ಅವರ ಪತ್ನಿ ಮಲ್ಲಮ್ಮ ಅವರ ಅಭಿಮಾನಕ್ಕೆ ಪುನೀತ್ ರಾಜಕುಮಾರ್ ಅವರು ಪುತ್ಥಳಿ ಸಾಕ್ಷಿಯಾಗಿ ಅನೇಕರ ಗಮನ ಸೆಳೆದಿತ್ತು.

ಇನ್ನು ಅಭಿಮಾನಿಗಳು ಕೇದಾರನಾಥದಲ್ಲಿ ಸಹ ಅಪ್ಪು ನೆನಪಿಸಿಕೊಂಡಿದ್ದಾರೆ. ಕೇದಾರನಾಥನ ದರ್ಶನಕ್ಕೆ ಪುನೀತ್ ಭಾವಚಿತ್ರದೊಂದಿಗೆ ವಿಜಯಪುರದ ಯುವಕರು ಹೋಗಿದ್ದು, ಕೇದಾರನಾಥ ದೇವಸ್ಥಾನದಲ್ಲಿ ಪುನೀತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಕೆ ಮಾಡಿದ್ದರು.  ಅಪ್ಪು ಆತ್ಮಕ್ಕೆ ಶಾಂತಿ ಸಿಗಲೆಂದು ಕೇದಾರನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದು, ದೇವಸ್ಥಾನದ ಗರ್ಭಗುಡಿಯಲ್ಲಿ ಅರ್ಚಕರು ಅಪ್ಪು ಭಾವಚಿತ್ರಕ್ಕೆ ಪೂಜೆ ಮಾಡಿದ್ದರು.

ಇದನ್ನೂ ಓದಿ:ಮತ್ತೆ ಅಭಿಮಾನಿಗಳ ಎದೆ ಝಲ್ ಎನಿಸಿದ ಆಶಿಕಾ ರಂಗನಾಥ್, ಪಟಾಕಿ ಪೋರಿ ನೋಡಿ ಸುಸ್ತಾದ ಫ್ಯಾನ್ಸ್ 

ಸಚಿವರ ಕಚೇರಿಯಲ್ಲಿ ಅಪ್ಪು ಜಾಕೆಟ್​

ಅರಸು ಸಿನಿಮಾದಲ್ಲಿ ಅಪ್ಪು ಧರಿಸಿದ್ದ ಜಾಕೆಟ್​ ಅನ್ನು ಸಚಿವ ಆನಂದ್ ಸಿಂಗ್​ ಅವರು ಕಚೇರಿಯಲ್ಲಿ ಫೋಟೋ  ಫ್ರೆಮ್​ ಮಾಡಿಸಿ ಇಟ್ಟಿದ್ದಾರೆ. ಅರಸು ಸಿನಿಮಾದಲ್ಲಿ ಧರಿಸಿದ್ ಜಾಕೆಟ್​ ಅನ್ನು ಅಪ್ಪು ಅವರ ಅಭಿಮಾನಿಯಾದ ಹೊಸಪೇಟೆಯ ಕಿಚಡಿ ವಿಶ್ವ ಎಂಬುವವರಿಗೆ ನೀಡಿದ್ದರು. ಅಂದಿನಿಂದ ಇಂದಿನವರೆಗೂ ಆ ಜಾಕೆಟ್​ ಅನ್ನು ವಿಶ್ವ ಅವರು ತುಂಬಾ ಜೋಪಾನ ಮಾಡಿಕೊಂಡು ಬಂದಿದ್ದರು. ಅಪ್ಪು ಕೊಟ್ಟಿದ್ದ ಜಾಕೆಟ್​ ಅನ್ನು ಕಿಚಡಿ ವಿಶ್ವ ಅವರು ಆನಂದ್​ ಸಿಂಗ್​ ಅವರ ಪುತ್ರ ಸಿದ್ದಾರ್ಥ್​ ಸಿಂಗ್​​ಗೆ ನೀಡಿದ್ದರು.
Published by:Sandhya M
First published: