Lucky Man In USA: ಅಮೆರಿಕಾದಲ್ಲಿ ಈ ವಾರ ಪವರ್ ಸ್ಟಾರ್ ಪುನೀತ್ ಲಕ್ಕಿಮ್ಯಾನ್ ಸಿನಿಮಾ ರಿಲೀಸ್

ಅಮೆರಿಕದ 17 ಕಡೆಗಳಲ್ಲಿ ಲಕ್ಕಿಮ್ಯಾನ್ ಸಿನಿಮಾ ರಿಲೀಸ್ ಆಗುತ್ತಿದೆ. ಇದೇ ವಾರ 16 ರಂದು ಅಮೆರಿಕಾದ ರಿಜೋನಾ (Arizona), ಕ್ಯಾಲಿಫೋರ್ನಿಯಾ (California), ಫ್ಲೋರಿಡಾ (Florida), ನ್ಯೂ ಜರ್ಸಿ (New Jersey), ಟೆಕ್ಸಾಸ್ (Texas) ನಲ್ಲಿ ಲಕ್ಕಿಮ್ಯಾನ್ ರಿಲೀಸ್ ಆಗುತ್ತಿದೆ.

ಅಮೆರಿಕಾದಲ್ಲಿ ಲಕ್ಕಿ ಮ್ಯಾನ್ ಈ ವಾರ  ಸೆ.16ಕ್ಕೆ ರಿಲೀಸ್

ಅಮೆರಿಕಾದಲ್ಲಿ ಲಕ್ಕಿ ಮ್ಯಾನ್ ಈ ವಾರ ಸೆ.16ಕ್ಕೆ ರಿಲೀಸ್

  • Share this:
ಪವರ್ ಸ್ಟಾರ್ ಪುನಿತ್ ರಾಜಕುಮಾರ್ (Puneeth  Rajkumar) ಅಭಿನಯದ ಲಕ್ಕಿಮ್ಯಾನ್ (Lucky Man) ಲಕ್ ಚೆನ್ನಾಗಿದೆ. ಇಡೀ ಕರ್ನಾಟಕದ ಜನತೆ ಈ ಚಿತ್ರದ ಬಗ್ಗೆ ಮಾತನಾಡುತ್ತಿದ್ದಾರೆ. ಸಿನಿಮಾ ಪ್ರೇಮಿಗಳು ಅಪ್ಪಿಕೊಂಡು ಮೆಚ್ಚಿದ್ದಾರೆ. ಕಳೆದುಕೊಂಡ ಅಪ್ಪು (Puneeth Fans) ಅಭಿಮಾನಿಗಳು ತಮ್ಮ ಆರಾಧ್ಯ ದೈವ ಅಪ್ಪು ವಾಪಸ್ ಬಂದ್ರು ಅನ್ನೋ ಫೀಲ್ (Feel Good Cinema) ಅಲ್ಲಿಯೇ ಇದ್ದಾರೆ. ಸಿನಿಮಾ ನೋಡಿ ಕಂಬನಿ ಮಿಡಿದಿದ್ದಾರೆ. ಸಿನಿಮಾ ನೋಡಿದ ಚಿತ್ರ ಪ್ರೇಮಿಗಳಿಗೂ ಅಪ್ಪು ಅಭಿನಯದ ಲಕ್ಕಿಮ್ಯಾನ್ ನಿರಾಶೆ ಮಾಡಿಲ್ಲ. ದುಡ್ಡುಕೊಟ್ಟು ಚಿತ್ರ ವೀಕ್ಷಿಸಿದವ್ರು, ಬೇಸರದಿಂದ ಎದ್ದು ಹೋಗಿಲ್ಲ. ಒಳ್ಳೆ ಸಿನಿಮಾ ವೀಕ್ಷಿಸಿದ ಫೀಲ್ ಅಲ್ಲಿಯೇ ಹೋಗಿದ್ದಾರೆ. ಕನ್ನಡಿಗರ ಈ ಒಂದು ಚಿತ್ರ ಈ ವಾರ ವಿದೇಶದಲ್ಲೂ ರಿಲೀಸ್ ಆಗುತ್ತಿದೆ. ವಿದೇಶದಲ್ಲಿ ಒಂದಲ್ಲ ಎರಡಲ್ಲ ಹತ್ತು ಹಲವು ಥಿಯೇಟರ್​ ನಲ್ಲಿಯೇ ಲಕ್ಕಿಮ್ಯಾನ್ ರಿಲೀಸ್ ಆಗುತ್ತಿದೆ.

ಲಕ್ಕಿಮ್ಯಾನ್ ಕರ್ನಾಟಕದಲ್ಲಿ ಕಳೆದ ವಾರ 09 ರಂದು ರಿಲೀಸ್ ಆಗಿತ್ತು. ಮೊದಲ ದಿನವೇ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಬಂದಿದೆ. ರಾಜ್​​ ಫ್ಯಾಮಿಲಿಯ ಬಹುತೇಕ ಎಲ್ಲ ಸದಸ್ಯರು ಚಿತ್ರವನ್ನು ವೀಕ್ಷಿಸಿದ್ದಾರೆ. ಸಿನಿಮಾದಲ್ಲಿ ಅಪ್ಪು ಅಭಿನಯ ಮತ್ತು ಅಪ್ಪುನನ್ನ ಕಂಡು ಭಾವುಕರಾದರು.

ಲಕ್ಕಿಮ್ಯಾನ್ ಚಿತ್ರ ವೀಕ್ಷಿಸಲು ಕಾತರಿಸುತ್ತಿರೋ ಪವರ್ ಫ್ಯಾನ್ಸ್
ಪವರ್ ಸ್ಟಾರ್ ಕೇವಲ ಕರ್ನಾಟಕ್ಕೆ ಸೀಮಿತವಾಗಿಲ್ಲ. ಅವರ ಅಭಿಮಾನಿಗಳು ಸಪ್ತಸಾಗರದ ಆಚೆಯಲ್ಲೂ ಇದ್ದಾರೆ. ಕನ್ನಡದ ಸಿನಿಮಾಗಳನ್ನ ಪ್ರೀತಿಸೋ ಕನ್ನಡ ಸಿನಿಮಾಗಳನ್ನ ಪ್ರೋತ್ಸಾಹಿಸೋ ಕನ್ನಡಿಗರು ದೂರದ ಅಮೆರಿಕದಲ್ಲೂ ಇದ್ದಾರೆ. ಅವರಿಗಾಗಿಯೇ ಅಪ್ಪು ಅಭಿನಯದ ಲಕ್ಕಿಮ್ಯಾನ್ ರಿಲೀಸ್ ಆಗುತ್ತಿದೆ.

ಇದನ್ನೂ ಓದಿ: Gattimela: 900 ಸಂಚಿಕೆ ಪೂರೈಸಿದ ಗಟ್ಟಿಮೇಳ ಧಾರಾವಾಹಿ, ಕಡಿಮೆಯಾಗಿಲ್ಲ ಕ್ರೇಜ್!

ಪರದ ದೇಶದ ಯಾವ ಯಾವ ಸ್ಥಳದಲ್ಲಿ ಲಕ್ಕಿಮ್ಯಾನ್ ರಿಲೀಸ್
ಅಮೆರಿಕಾದ ತುಂಬೆಲ್ಲ ಕನ್ನಡದ ಲಕ್ಕಿಮ್ಯಾನ್ ರಿಲೀಸ್ ಆಗುತ್ತಿದೆ. ಹೆಚ್ಚು ಕಡಿಮೆ ಈ ದೇಶದ 17 ಕಡೆಗೆ ಲಕ್ಕಿಮ್ಯಾನ್ ಬಿಡುಗಡೆ ಆಗುತ್ತಿದೆ. ಇವುಗಳಲ್ಲಿ ಪ್ರಮುಖವಾದ ಸ್ಥಳಗಳನ್ನ ಹೇಳೋದಾದರೆ, ಅವು ಈ ಕೆಳಗಿನಂತಿವೆ ಓದಿ.

ಅಮೆರಿಕಾದ ಈ ಪ್ರದೇಶದಲ್ಲಿ ಲಕ್ಕಿಮ್ಯಾನ್ ಚಿತ್ರ ರಿಲೀಸ್
ಅರಿಜೋನಾ (Arizona), ಕ್ಯಾಲಿಫೋರ್ನಿಯಾ (California), ಫ್ಲೋರಿಡಾ (Florida), ನ್ಯೂ ಜರ್ಸಿ (New Jersey), ಟೆಕ್ಸಾಸ್ (Texas) ಈ ಎಲ್ಲ ಪ್ರದೇಶಗಳಲ್ಲಿ ಲಕ್ಕಿಮ್ಯಾನ್ ರಿಲೀಸ್ ಪ್ಲಾನ್ ಆಗಿದೆ.

Lucky Man Film Going to Release this week on USA
ಇದೇ 16ಕ್ಕೆ ಅಮೆರಿಕಾದಲ್ಲಿ ಲಕ್ಕಿ ಮ್ಯಾನ್ ರಿಲೀಸ್


ಸ್ಯಾಂಡಲ್​ವುಡ್ ಗೆಳೆಯರ ಬಳಗದಿಂದ ಲಕ್ಕಿಮ್ಯಾನ್ ರಿಲೀಸ್
ಹೌದು, ಈ ಚಿತ್ರವನ್ನ ಅಮೆರಿಕದಲ್ಲಿ ರಿಲೀಸ್ ಮಾಡೋ ಪ್ಲಾನ್ ಪಕ್ಕಾ ಆಗಿದೆ. ಇದನ್ನ ರಿಲೀಸ್ ಮಾಡೋ ಹೊಣೆಯನ್ನ ಅಮೆರಿಕದಲ್ಲಿರೋ ಒಂದು ಗೆಳೆಯರ ಬಳಗ ಮಾಡುತ್ತಿದೆ. ನಿಜ, ಇಲ್ಲಿ ಒಂದು ಸ್ಯಾಂಡಲ್​ವುಡ್ ಗೆಳೆಯರ ಬಳಗ ಅಂತ ಇದೆ. ಅದು ಲಕ್ಕಿಮ್ಯಾನ್​ ಸಿನಿಮಾವನ್ನ ಈಗ ರಿಲೀಸ್ ಮಾಡಲು ಮುಂದಾಗಿದೆ.

ಅಮೆರಿಕಾದಲ್ಲಿ ಲಕ್ಕಿಮ್ಯಾನ್ ಯಾವಾಗ ರಿಲೀಸ್
ಪವರ್ ಸ್ಟಾರ್ ಪುನಿತ್ ದೇವರಾಗಿ ಅಭಿನಯಿಸಿದ ಲಕ್ಕಿಮ್ಯಾನ್ ಸಿನಿಮಾ ಇದೇ ವಾರ 16 ಕ್ಕೆ ಅಮೆರಿಕಾದ ಬಹುತೇಕ ಕಡೆಗೆ ರಿಲೀಸ್ ಆಗುತ್ತಿದೆ. ಕನ್ನಡದ ಈ ಚಿತ್ರವನ್ನ ವಿದೇಶದಲ್ಲಿರೋ ಕನ್ನಡಿಗರೂ ನೋಡುವ ಅವಕಾಶ ಈಗ ಸಿಕ್ಕಿದೆ.

ಇದನ್ನೂ ಓದಿ:  Duniya Vijay: ಭೀಮನ ಅಂಗಳಕ್ಕೆ Ash Melo ಎಂಟ್ರಿ, ಸ್ಕೈಲರ್​ಗೂ ಚಾನ್ಸ್ ಕೊಟ್ಟ ದುನಿಯಾ ವಿಜಯ್

ಲಕ್ಕಿಮ್ಯಾನ್ ಸಿನಿಮಾ ಚೆನ್ನಾಗಿಯೇ ಓಡ್ತಿದೆ
ಒಂದ್ ಒಳ್ಳೆ ಸಿನಿಮಾ ಮಾಡಿರೋ ಖುಷಿಯಲ್ಲಿಯೇ ಚಿತ್ರ ನಾಯಕ ಡಾರ್ಲಿಂಗ್ ಕೃಷ್ಣ ಮತ್ತು ನಾಯಕಿ ಸಂಗೀತಾ ಶೃಂಗೇರಿ ಇದ್ದಾರೆ. ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶನದ ಈ ಸಿನಿಮಾ ಚೆನ್ನಾಗಿಯೇ ಹೋಗುತ್ತಿದೆ. ತಮ್ಮ ಆರಾಧ್ಯ ದೈವ ಅಪ್ಪು ಕಾಣಲು ಜನ ಥಿಯೇಟರ್​ನತ್ತ ಕೂಡ ಬರ್ತಿದ್ದಾರೆ.
First published: