Puneeth Rajkumar: ಲಾಕ್​ಡೌನ್​ನಲ್ಲಿ ಅಡುಗೆ ಮಾಡೋದನ್ನು ಕಲಿತ ಪುನೀತ್ ರಾಜ್​ಕುಮಾರ್​..!

ಪುನೀತ್​ ರಾಜ್​ಕುಮಾರ್​ ಲಾಕ್​ಡೌನ್​ ವೇಳೆ ಮನೆಯಲ್ಲಿ ಸದಾ ವ್ಯಾಯಾಮ ಮಾಡುತ್ತಾ ಫಿಟ್ನೆಸ್​ ಕಾಯ್ದುಕೊಳ್ಳುತ್ತಿದ್ದ ವಿಷಯ, ಅವರ ವಿಡಿಯೋ ನೋಡಿದ್ರೆ ಅರ್ಥವಾಗುತ್ತದೆ. ಆದರೆ ಉಳಿದ ಸಮಯವನ್ನು ಅವರಿಗೆ ಇಷ್ಟವಾದಂತೆ ಹೇಗೆಲ್ಲ ಸದುಪಯೋಗ ಪಡಿಸಿಕೊಂಡಿದ್ದಾರೆ ಅನ್ನೋದ್ರ ವಿವರ ಮುಂದಿದೆ. 

Anitha E | news18-kannada
Updated:August 5, 2020, 9:15 PM IST
Puneeth Rajkumar: ಲಾಕ್​ಡೌನ್​ನಲ್ಲಿ ಅಡುಗೆ ಮಾಡೋದನ್ನು ಕಲಿತ ಪುನೀತ್ ರಾಜ್​ಕುಮಾರ್​..!
ಪುನೀತ್​ ರಾಜ್​ಕುಮಾರ್
  • Share this:
ಪುನೀತ್​ ರಾಜ್​ಕುಮಾರ್​ ಸದಾ ಚಟುವಟಿಕೆಯಿಂದ ಕೂಡಿರುವಂತಹ ನಟ. ಸಿನಿಮಾ ಚಿತ್ರೀಕರಣ, ತಿರುಗಾಟ ಹಾಗೂ ವ್ಯಾಯಾಮ ಅಂತ ಆದಷ್ಟು ಬ್ಯುಸಿಯಾಗಿರುತ್ತಾರೆ. ಇಂತಹ ನಟ ಲಾಕ್​ಡೌನ್​ ವೇಳೆ ಮನೆಯಲ್ಲಿ ಹೇಗೆ ಕಾಲ ಕಳೆಯುತ್ತಿದ್ದರು ಅಂತ ತಿಳಿಯೋ ಕುತೂಹಲ ಅಭಿಮಾನಿಗಳಲ್ಲಿ ಇದ್ದೇ ಇರುತ್ತದೆ. 

ಪುನೀತ್​ ರಾಜ್​ಕುಮಾರ್​ ಲಾಕ್​ಡೌನ್​ ವೇಳೆ ಮನೆಯಲ್ಲಿ ಸದಾ ವ್ಯಾಯಾಮ ಮಾಡುತ್ತಾ ಫಿಟ್ನೆಸ್​ ಕಾಯ್ದುಕೊಳ್ಳುತ್ತಿದ್ದ ವಿಷಯ, ಅವರ ವಿಡಿಯೋ ನೋಡಿದ್ರೆ ಅರ್ಥವಾಗುತ್ತದೆ. ಆದರೆ ಉಳಿದ ಸಮಯವನ್ನು ಅವರಿಗೆ ಇಷ್ಟವಾದಂತೆ ಹೇಗೆಲ್ಲ ಸದುಪಯೋಗ ಪಡಿಸಿಕೊಂಡಿದ್ದಾರೆ ಅನ್ನೋದ್ರ ವಿವರ ಮುಂದಿದೆ.

A day without workout is a day wasted..... pic.twitter.com/QhnbPzR8Wwಹೌದು, ಲಾಕ್​ಡೌನ್​ನಲ್ಲಿ ಅವರು ಅಡುಗೆ ಮಾಡುವುದನ್ನು ಅಭ್ಯಾಸ ಮಾಡಿದ್ದಾರಂತೆ. ದೊಡ್ಡ ಮಟ್ಟಕ್ಕೆ ಅಲ್ಲದಿದ್ದರೂ, ಪುಟ್ಟದಾಗಿ ಆಲೂ ಸಬ್ಜಿ, ಪನ್ನೀರ್ ಬುರ್ಜಿ, ಸಾಂಬಾರ್​ ಮಾಡುವುದನ್ನು ಕಲಿತ್ತಿದ್ದಾರಂತೆ. ಹೀಗಾಗಿ ಈಗ ಅವರಿಗೆ ಅಡುಗೆ ಮನೆಯಲ್ಲಿನ ಕಷ್ಟಗಳು ಅರಿವಿಗೆ ಬಂದಿದೆಯಂತೆ.ಇನ್ನು, ಇನ್​ಸ್ಟಾಗ್ರಾಂ ಲೈವ್​ನಲ್ಲಿ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿರುವ ಅಪ್ಪು, ಅವರ ಜೀವನದ ಸಂತಸದ​ ಕ್ಷಣ ಹಾಗೂ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ. ಅವರು ಅಪ್ಪನಾದ ಘಳಿಗೆ ತುಂಬಾ ಖುಷಿಕೊಟ್ಟ ಬೆಸ್ಟ್​ ಟೈಮ್​ ಎಂದಿದ್ದಾರೆ ಪುನೀತ್​.ಲಾಕ್​ಡೌನ್​ನಲ್ಲಿ ಸಾಕಷ್ಟು ಸಿನಿಮಾಗಳು ಹಾಗೂ ವೆಬ್​ ಸರಣಿಗಳನ್ನು ನೋಡಿರುವ ಅವರಿಗೆ, ಪುಸ್ತಕ ಓದುವುದರಲ್ಲಿ ಅಷ್ಟಾಗಿ ಆಸಕ್ತಿ ಇರಲಿಲ್ಲವಂತೆ. ಇನ್ನು ಟಾಮ್ಸ್​ ಹ್ಯಾಂಕ್ಸ್​, ಅರ್ನಾಲ್ಡ್​ ಸೇರಿದಂತೆ ಇನ್ನು ಕೆಲವು ಆ್ಯಕ್ಷನ್​ ಹೀರೋಗಳ ಸಿನಿಮಾ ನೋಡುತ್ತಾರಂತೆ. ಅವರು ಇಷ್ಟ ಪಡುವ ಡ್ಯಾನ್ಸರ್​ ಮೈಕೆಲ್​ ಜಾಕ್ಸನ್​ ಅಂತೆ.

ಇದನ್ನೂ ಓದಿ: Puneeth Rajkumar: ವರ್ಕೌಟ್​ ಮಾಡದೆ ಹೋದರೆ ಇಡೀ ದಿನವೇ ವ್ಯರ್ಥ ಎನ್ನುತ್ತಲೇ ಹೊಸ ವಿಡಿಯೋ ಪೋಸ್ಟ್​ ಮಾಡಿದ ಪುನೀತ್​..!

ಅಪ್ಪು ನಿನ್ನೆ, ಇನ್​ಸ್ಟಾಗ್ರಾಂನಲ್ಲಿ ಲೈವ್​ ಬಂದು ಅಭಿಮಾನಿಗಳ ಪ್ರಶ್ನೆಗೆ ಉತ್ತರ ಕೊಟ್ಟಿರುವ ವಿಡಿಯೋ ಈಗ ವೈರಲ್​ ಆಗುತ್ತಿದೆ. ಅಭಿಮಾನಿಗಳು ಅದನ್ನು ರೆಕಾರ್ಡ್​ ಮಾಡಿಕೊಂಡಿದ್ದು, ಅದನ್ನು ಖುಷಿಯಿಂದ ಹಂಚಿಕೊಳ್ಳುತ್ತಿದ್ದಾರೆ.
Published by: Anitha E
First published: August 5, 2020, 8:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading