ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar) ಅಭಿನಯದ ಜೇಮ್ಸ್ (James) ಇಂದು ಬಿಡುಗಡೆಯಾಗಿದ್ದು, ಅಭಿಮಾನಿಗಳ ಸಂತಸಕ್ಕೆ ಮಿತಿಯೇ ಇಲ್ಲ ಎನ್ನಬಹುದು. ಕೊನೆಯ ಬಾರಿ ತೆರೆಯ ಮೇಲೆ ನೆಚ್ಚಿನ ನಟನನ್ನ ಅಭಿಮಾನಿಗಳು(Fans) ಕಣ್ತುಂಬಿಕೊಂಡಿದ್ದು, ವಿ ಮಿಸ್ ಯೂ ಅಪ್ಪು ಎನ್ನುತ್ತಿದ್ದಾರೆ. ಬೆಂಗಳೂರು (Bangalore) ಸೇರಿದಂತೆ ರಾಜ್ಯಾದ್ಯಂತ ಮುಂಜಾನೆ 5 ಗಂಟೆಯಿಂದಲೇ ಜೇಮ್ಸ್ ಜಾತ್ರೆ ಶುರುವಾಗಿದೆ. ಅಪ್ಪು ನೋಡಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ನಿದ್ದೆಗೆಟ್ಟು, ಸರತಿ ಸಾಲಿನಲ್ಲಿ ನಿಂತು ಟಿಕೆಟ್ (Ticket) ಖರೀದಿಸಿದ್ದಾರೆ. ಮುಂಜಾನೆಯೇ ಫ್ಯಾಮಿಲಿ ಜೊತೆಗೆ ಬಂದು ಸಿನಿಮಾ ನೋಡಿದ್ದಾರೆ. ಈ ಎಲ್ಲಾ ಸಂಭ್ರಮದ ಮಧ್ಯೆ, ಜೇಮ್ಸ್ ದಾಖಲೆ ಬರೆದಿದ್ದು, KGF ದಾಖಲೆ ಪುಡಿಮಾಡಿದೆ.
ಹೌದು, ಈಗಷ್ಟೇ ಬಿಡುಗೆಯಾಗಿರುವ ಅಪ್ಪು ಅಭಿನಯದ ಜೇಮ್ಸ್, ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ದಾಖಲೆ ಬರೆದಿದ್ದು, ಜೇಮ್ಸ್ ಸ್ಯಾಟಲೈಟ್ ರೈಟ್ಸ್ ಕನ್ನಡದಲ್ಲಿ ಬರೋಬ್ಬರಿ 13.80 ಕೋಟಿಗೆ ಮಾರಾಟವಾಗಿದೆ. ಈ ಹಿಂದೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸ್ಯಾಟಲೈಟ್ ರೈಟ್ಸ್ ಬರೋಬ್ಬರಿ 6 ಕೋಟಿಗೆ ಮಾರಾಟವಾಗಿ ದಾಖಲೆ ಮಾಡಿತ್ತು, ಆದರೆ ಇದೀಗ ಬಿಡುಗಡೆಗೂ ಮುನ್ನವೇ ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿದ್ದು, ಕೆಜಿಎಫ್ ಗಿಂತ ಎರಡು ಪಟ್ಟು ಹೆಚ್ಚಿನ ಬೆಲೆಗೆ ಜೇಮ್ಸ್ ರೈಟ್ಸ್ ಸೇಲ್ ಆಗಿದ್ದು, ಮೂಲಗಳ ಪ್ರಕಾರ ವಿವಿಧ ಭಾಷೆಗಳು ಸೇರಿ 80 ಕೋಟಿಗೆ ಟಿವಿ ರೈಟ್ಸ್ ಗೆ ಸೇಲಾಗಿದೆ ಎನ್ನಲಾಗಿದೆ.
ಸದ್ಯದ ಮಾಹಿತಿ ಪ್ರಕಾರ ಸೋನಿ ಡಿಜಿಟಲ್ಗೆ 40 ಕೋಟಿ, ಕನ್ನಡ ಸುವರ್ಣಕ್ಕೆ13.80 ಕೋಟಿ ಹಾಗೂ ತೆಲುಗು ಮಾ ಟಿವಿಗೆ ಸುಮಾರು 5.70 ಕೋಟಿಗೆ ಮಾರಾಟವಾಗಿದೆ, ಇನ್ನು ತಮಿಳಿನಲ್ಲಿ ಸನ್ ನೆಟ್ ವರ್ಕ್ಗೆ 5.17 ಕೋಟಿ, ಮಲೆಯಾಳಂ 1.2 ಕೋಟಿ, ಭೋಜಪುರಿ 5.50 ಕೋಟಿ, ಹಿಂದಿ ಸೋನಿಗೆ 2.70 ಕೋಟಿಗೆ ಮಾರಾಟವಾಗಿದ್ದು, ನಿಜಕ್ಕೂ ಇದು ಅಭಿಮಾನಿಗಳಿಗೆ ಸಂತಸದ ವಿಚಾರವಾಗಿದೆ.
ಇದನ್ನೂ ಓದಿ: 'ಜೇಮ್ಸ್' ಅವತಾರದಲ್ಲಿ 'ಅಪ್ಪು' ಅಬ್ಬರ, 'ಪವರ್ ಸ್ಟಾರ್' ಕಣ್ತುಂಬಿಕೊಂಡ ಜನಸಾಗರ!
ಇನ್ನು ಬಿಡುಗಡೆಗೂ ಮುನ್ನವೇ ಹಲವಾರು ಚಿತ್ರಮಂದಿರಗಳಲ್ಲಿ ಹೆಚ್ಚು ಶೋಗಳು ಬುಕ್ ಆಗಿದ್ದು, ಬೆಂಗಳೂರಿನ ಮಾಗಡಿ ರಸ್ತೆಯ ವೀರೇಶ್ ಚಿತ್ರಮಂದಿರಲ್ಲಿ ಮುಂಜಾನೆ 5 ಗಂಟೆಗೆ ಶೋ ಆರಂಭವಾಗಿದೆ. ವೀರೇಶ್ ಚಿತ್ರಮಂದಿರದ ಇಂದು 12 ಶೋ ಗಳ ಟಿಕೆಟ್ ಸೋಲ್ಡ್ ಔಟ್ ಆಗಿದೆ.
ಕೇವಲ ಬೆಂಗಳೂರು ಮಾತ್ರವಲ್ಲದೇ ರಾಯಚೂರಿನ ನೀಲಕಂಠೇಶ್ವರ ಥಿಯೇಟರ್, ಚಿಕ್ಕಬಳ್ಳಾಪುರ ನಗರದ ವಾಣಿ ಟಾಕೀಸ್ ಹಾಗೂ ಬಾಲಾಜಿ ಟ್ಯಾಕೀಸ್ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಅಪ್ಪು ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದು, ಕಲೆವೆಡೆ ನಿಂತುಕೊಂಡು ಅಭಿಮಾನಿಗಳು ಚಿತ್ರ ನೋಡಿರುವ ಘಟನೆ ನಡೆದಿದ್ದು, ಇಂದು ಅಪ್ಪು ಹಬ್ಬ ಎಂದರೆ ತಪ್ಪಾಗಲಾರದು.
ಇದನ್ನೂ ಓದಿ: ರಾಜರತ್ನ’ನಿಲ್ಲದೇ ಮೊದಲ ಹುಟ್ಟುಹಬ್ಬ.. ನಮ್ಮಿಂದ ದೂರಾದರೂ 'ಜೇಮ್ಸ್' ಅವತಾರದಲ್ಲಿ ರಂಜಿಸಿದ ಅಪ್ಪು!
ಇದು ಪವರ್ ಸ್ಟಾರ್ ಇಲ್ಲದ ಮೊದಲ ಜನ್ಮದಿನವಾಗಿದ್ದು, ಅಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರಿರುವ ಅಪ್ಪು ಅವರನ್ನು ಮರೆಯುವುದು ಬಹಳ ಕಷ್ಟ ಎನ್ನಬಹುದು. ಅಪ್ಪು ಅವರ ಅಭಿನಯ, ಡ್ಯಾನ್ಸ್, ಫೈಟ್ ಎಲ್ಲವೂ ಜೇಮ್ಸ್ ಸಿನಿಮಾದಲ್ಲಿದ್ದು, ಅದನ್ನೆಲ್ಲ ನೋಡಿ ಅಪ್ಪು ಅಭಿಮಾನಿಗಳು ಚಿತ್ರಮಂದಿರದಲ್ಲೇ ಕೊರಗುತ್ತಿದ್ದಾರೆ. ಅಪ್ಪು ಪ್ಲೀಸ್ ವಾಪಸ್ ಬಂದು ಬಿಡಿ ಅಂತ ಬೆಳ್ಳೆ ಪರದೆ ಬಳಿ ನೋವನ್ನು ತೋಡಿಕೊಳ್ಳುತ್ತಿದ್ದಾರೆ. ಜೊತೆಗಿರದ ಜೀವ ಎಂದಿಗಿಂತ ಜೀವಂತ ಎನ್ನುತ್ತಿದ್ಧಾರೆ ಅಭಿಮಾನಿಗಲು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ