• Home
  • »
  • News
  • »
  • entertainment
  • »
  • Puneetha Parva: ಪವರ್ ಸ್ಟಾರ್‌ಗೆ ಸೌತ್ ಸ್ಟಾರ್‌ಗಳಿಂದ ನಮನ; ಸಿದ್ಧಾರ್ಥ್, ರಾಣಾ, ಅಖಿಲ್‌ ಅಕ್ಕಿನೇನಿಯಿಂದ ಅಪ್ಪು ಸ್ಮರಣೆ

Puneetha Parva: ಪವರ್ ಸ್ಟಾರ್‌ಗೆ ಸೌತ್ ಸ್ಟಾರ್‌ಗಳಿಂದ ನಮನ; ಸಿದ್ಧಾರ್ಥ್, ರಾಣಾ, ಅಖಿಲ್‌ ಅಕ್ಕಿನೇನಿಯಿಂದ ಅಪ್ಪು ಸ್ಮರಣೆ

ಪುನೀತ ಪರ್ವ ಕಾರ್ಯಕ್ರಮ

ಪುನೀತ ಪರ್ವ ಕಾರ್ಯಕ್ರಮ

ಕನ್ನಡ ಚಿತ್ರರಂಗ ಅಷ್ಟೇ ಅಲ್ಲದೇ, ತೆಲುಗು, ತಮಿಳು, ಮಲಯಾಳಂ ಚಿತ್ರರಂಗದ ನಟ, ನಟಿಯರು ಸಮಾರಂಭದಲ್ಲಿ ಹಾಜರಾಗಿದ್ದಾರೆ. ಕನ್ನಡ ಚಿತ್ರರಂಗದ ಸ್ಟಾರ್ ನಟರಾದ ಡಾಲಿ ಧನಂಜಯ್, ರಕ್ಷಿತ್ ಶೆಟ್ಟಿ, ತೆಲುಗು ಚಿತ್ರರಂಗದ ತಾರೆಯರಾದ ಸಿದ್ಧಾರ್ಥ್, ರಾಣಾ ದಗ್ಗುಬಾಟಿ, ಅಖಿಲ್ ಅಕ್ಕಿನೇನಿ ಸೇರಿದಂತೆ ಅಪ್ಪು ಸ್ಮರಣೆ ಮಾಡಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರು: ಅರಮನೆ ಮೈದಾನದಲ್ಲಿ (Palace Ground) ‘ಪುನೀತ ಪರ್ವ’ (Punitha Parva) ಕಾರ್ಯಕ್ರಮ ನಡೆಯುತ್ತಿದೆ. ಪುನೀತ್ ರಾಜ್‌ಕುಮಾರ್ (Puneeth Rajkumar) ಅಭಿನಯದ ಬಹು ನಿರೀಕ್ಷಿತ ‘ಗಂಧದಗುಡಿ’ (Gandhada Gudi) ಚಿತ್ರದ ಪ್ರೀ ರಿಲೀಸ್ ಇವೆಂಟ್ (pre-release event) ಇದಾಗಿದ್ದು, ಅರಮನೆ ಮೈದಾನದಲ್ಲಿ ತಾರಾ ಲೋಕವೇ ಧರೆಗಿಳಿದಿದೆ. ಕನ್ನಡ ಚಿತ್ರರಂಗ (Kannada Film Industry) ಅಷ್ಟೇ ಅಲ್ಲದೇ, ತೆಲುಗು, ತಮಿಳು, ಮಲಯಾಳಂ ಚಿತ್ರರಂಗದ ನಟ, ನಟಿಯರು, ನಿರ್ದೇಶಕರು, ಗಾಯಕರು ಸಮಾರಂಭದಲ್ಲಿ ಹಾಜರಾಗಿದ್ದಾರೆ. ಕನ್ನಡ ಚಿತ್ರರಂಗದ ಸ್ಟಾರ್ ನಟರಾದ ಡಾಲಿ ಧನಂಜಯ್, ರಕ್ಷಿತ್ ಶೆಟ್ಟಿ, ತೆಲುಗು ಚಿತ್ರರಂಗದ ತಾರೆಯರಾದ ಸಿದ್ಧಾರ್ಥ್, ರಾಣಾ ದಗ್ಗುಬಾಟಿ, ಅಖಿಲ್ ಅಕ್ಕಿನೇನಿ ಸೇರಿದಂತೆ ಅಪ್ಪು ಸ್ಮರಣೆ ಮಾಡಿದ್ದಾರೆ.


 ಧನಂಜಯ್, ರಕ್ಷಿತ್‌ ಶೆಟ್ಟಿಯಿಂದ ಅಪ್ಪು ಸ್ಮರಣೆ


 ಕನ್ನಡ ಚಿತ್ರರಂಗದ ಸ್ಟಾರ್ ನಟರಾದ ಡಾಲಿ ಧನಂಜಯ್, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಪುನೀತ ಪರ್ವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಡಾಲಿ ಧನಂಜಯ್, ನಮ್ಮ ಹೆಡ್‌ ಬುಷ್ ಸಿನಿಮಾ ರಿಲೀಸ್ ಆಗಿದೆ. ಇದರ ಮುಹೂರ್ತಕ್ಕೆ ಅಪ್ಪ ಬಂದು, ಹಾರೈಸಿದ್ದರು. ಇದೀಗ ಅವರ ಪುನೀತ ಪರ್ವ ಕಾರ್ಯಕ್ರಮದ ಹೊಸ್ತಿಲಲ್ಲೇ ಸಿನಿಮಾ ರಿಲೀಸ್ ಆಗಿದೆ ಅಂತ ಸಂತಸ ವ್ಯಕ್ತಪಡಿಸಿದರು. ಇದು ದುಃಖದ ದಿನವಲ್ಲ, ಅಪ್ಪು ಅವರನ್ನು ಸಂಭ್ರಮಿಸುವ ದಿನ ಎಂದರು.


ತೆಲುಗು ನಟರಿಂದ ಅಪ್ಪು ಗುಣಗಾನ


ಇನ್ನು ತೆಲುಗು ಸ್ಟಾರ್‌ ಸಿದ್ಧಾರ್ಥ್‌ ಕನ್ನಡದಲ್ಲೇ ಮಾತು ಆರಂಭಿಸಿ, ಅಪ್ಪು ಗುಣಗಾನ ಮಾಡಿದರು. ಬಳಿಕ ರಾಣಾ ದಗ್ಗುಬಾಟಿ, ಅಖಿಲ್ ಅಕ್ಕಿನೇನಿ ಮುಂತಾದವರು ಮಾತನಾಡಿ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಒಡನಾಟ ನೆನಪಿಸಿ ಕೊಂಡರು.


ಇದನ್ನೂ ಓದಿ: Puneeth Rajkumar: ಪುನೀತ ಪರ್ವದಲ್ಲಿ ತಾರೆಯರ ಸಮಾಗಮ; ಮುಗಿಲು ಮುಟ್ಟಿದ ಅಪ್ಪು ಗುಣಗಾನ!


ಪುನೀತ ಪರ್ವದಲ್ಲಿ ತಾರೆಯರ ಸಮಾಗಮ


ಪುನೀತ್​ ರಾಜ್​ಕುಮಾರ್​ ಅವರಿಗೆ ಎಲ್ಲರೂ ಸೇರಿ ವಿಶೇಷ ರೀತಿಯಲ್ಲಿ ನಮನ ಸಲ್ಲಿಸುತ್ತಿದ್ದಾರೆ. ಡಾ. ರಾಜ್​ಕುಮಾರ್​ ಕುಟುಂಬದವರು ತುಂಬ ಕಾಳಜಿ ವಹಿಸಿ ಈ ಕಾರ್ಯಕ್ರಮ ಮಾಡುತ್ತಿದ್ದಾರೆ.  ಅಶ್ವಿನಿ ಪುನೀತ್​ ರಾಜ್​ಕುಮಾರ್ (Ashwini Puneeth Rajkumar)​, ಶಿವರಾಜ್​ಕುಮಾರ್​, ರಾಘವೇಂದ್ರ ರಾಜ್​ ಕುಮಾರ್​ ಸೇರಿದಂತೆ ರಾಜ್​ ಕುಟುಂಬಸ್ಥರು ಭಾಗಿ ಆಗಿದ್ದಾರೆ.


ಸುಧಾಮೂರ್ತಿ ಬಾಯಲ್ಲಿ ಅಪ್ಪು ಗುಣಗಾನ


ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಇನ್ಫೋಸಿಸ್ ಸುಧಾ ಮೂರ್ತಿ ಅವರು ಪುನೀತ್​ ಬಗ್ಗೆ ಗುಣಗಾನ ಮಾಡಿದ್ದಾರೆ.  ಒಮ್ಮೆ ವಿಮಾನ ನಿಲ್ದಾಣದಲ್ಲಿ ಪುನೀತ್​ ಸಿಕ್ಕಾಗ ಅಲ್ಲೇ ಅವ್ರು ನನ್ನ ಆಶೀರ್ವಾದ ಪಡೆದ್ರು. ಈ ವೇಳೆ ನಾನು ಇಲ್ಲೆಲ್ಲಾ ಬೇಡ ಎಂದೆ. ಅದಕ್ಕೆ ಅವ್ರು ಎಲ್ಲಿದ್ರೂ ದೊಡ್ಡವರು ದೊಡ್ಡವರೇ ಎಂದ್ರು.  ಅವರ ಸರಳತೆಯನ್ನು ಮೆಚ್ಚಲೇಬೇಕು. ನಾನು ಅವ್ರನ್ನು ಲೋಹಿತ್ ಎಂದೇ ಕರೆಯುತ್ತಿದ್ದೆ. ಅವ್ರು ಲೋಹಿತ್​ ಎಂದೇ ನನಗೆ ಪರಿಚಯವಾಗಿದ್ದವರು ಎಂದು ಸುಧಾಮೂರ್ತಿ ಹೇಳಿದ್ರು.


ಇದನ್ನೂ ಓದಿ: Puneetha Parva: ನೀನೇ ರಾಜಕುಮಾರ ಎಂದು ಹಾಡಿದ ರಾಜ್​ ಫ್ಯಾಮಿಲಿ; ವೇದಿಕೆ ಮೇಲೆ ಅಶ್ವಿನಿ ಕಣ್ಣೀರು


 ಗಾಯಕರಿಂದ ಅಪ್ಪು ಸ್ಮರಣೆ


ಖ್ಯಾತ ಗಾಯಕ ಕುನಾಲ್ ಗಾಂಜಾವಾಲ ಅಪ್ಪು ಹಾಡು ಹಾಡಿ ರಂಜಿಸಿದರು. ಬಳಿಕ ಮಾತನಾಡಿದ ಅವರು, ನನಗೆ ಅಪ್ಪು ಗೊತ್ತಿರಲಿಲ್ಲ, ರಾಜ್ ಕುಮಾರ್ ಗೊತ್ತಿತ್ತು. ರಾಜ್ ಕುಮಾರ್ ಮಗ ಎಂದಾಕ್ಷಣ ಗೊತ್ತಾಯಿತು. ಬಳಿಕ ಅಪ್ಪು ಹಾಡುಗಳಿನ್ನು ನಾನು ಹಾಡಿದೆ. ನೀನೆ ನೀನೆ....ಹಾಡು ಹಾಗೂ ಕಿವಿ ಮಾತೊಂದು ಹಾಡು ತುಂಬಾ ಇಷ್ಟ ಎಂದು ಹೇಳಿದರು. ಇವತ್ತು ಅಪ್ಪುಗಾಗಿ ಎಷ್ಟು ಬೇಕಾದರೂ ಹಾಡುತ್ತೇನೆ ಎಂದು ಹೇಳಿದರು.

Published by:Annappa Achari
First published: