Puneeth Rajkumar: ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿದ ಪುನೀತ್​ ರಾಜ್​ಕುಮಾರ್​: ನಿಮ್ಮ ಊರಿಗೆ ನಿಮ್ಮ ಅಪ್ಪು..!

ಯುವಸಂಭ್ರಮ ಕಾರ್ಯಕ್ರಮ ಮೈಸೂರಿನಲ್ಲಿ ನಡೆಯುವುದನ್ನು ರದ್ದುಗೊಳಿಸಲಾಗಿದೆ. ಆದರೆ ಇದೇ ತಿಂಗಳು 21ರಿಂದ 23ರ ವರೆಗೆ ನಾವೇ ನಿಮ್ಮ ಊರುಗಳಿಗೆ ಬರುತ್ತೇವೆ. ನಾನೇ ನಿಮ್ಮನ್ನು ನೋಡಲು ನಿಮ್ಮ ನಿಮ್ಮ ಜಿಲ್ಲೆಗಳಿಗೆ ಬರುತ್ತೇವೆ. ನಿಮ್ಮ ಊರಿಗೆ ನಿಮ್ಮ ಅಪ್ಪು... ಹರಸಿ ಹಾಗೂ ಹಾರೈಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ ಯುವರತ್ನ ಪುನೀತ್.

ಯುವರತ್ನ ಸಿನಿಮಾದಲ್ಲಿ ಪುನೀರ್​ ರಾಜ್​ಕುಮಾರ್​

ಯುವರತ್ನ ಸಿನಿಮಾದಲ್ಲಿ ಪುನೀರ್​ ರಾಜ್​ಕುಮಾರ್​

  • Share this:
ನಾಳೆ ಅಂದರೆ ಮಾ.17ರಂದು ಸ್ಯಾಂಡಲ್​ವುಡ್​ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಹುಟ್ಟುಹಬ್ಬ. ಕಳೆದ ವರ್ಷ ಈ ಹೊತ್ತಿಗಾಗಲೇ ರಾಜ್ಯದಲ್ಲೂ ಕೊರೋನಾ ಕಾಟ ಆರಂಭವಾಗಿತ್ತು. ಕೊರೋನಾ ಕಾರಣದಿಂದಾಗಿ ಕಳೆದ ವರ್ಷ ಅಭಿಮಾನಿಗಳು ನೆಚ್ಚಿನ ನಟನನ್ನು ಭೇಟಿ ಮಾಡಲು ಆಗಿರಲಿಲ್ಲ. ಆದರೆ ಈ ಸಲ ನೆಚ್ಚಿನ ನಟನನ್ನು ಭೇಟಿ ಹುಟ್ಟುಹಬ್ಬಕ್ಕೆ ಶುಭ ಕೋರಬಹುದು ಎಂದು ಅಭಿಮಾನಿಗಳು ಕಾತರರಾಗಿದ್ದರು. ಆದರೆ ಈಗ ಲಾಕ್​ಡೌನ್​ ಇಲ್ಲ. ಆದರೆ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇನ್ನು ಈ ಸಲವೂ ಪುನೀತ್​ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ತಿಳಿಸಿದ್ದಾರೆ. ಜೊತೆಗೆ ಅಭಿಮಾನಿಗಳ ಬಳಿ ಕ್ಷಮೆ ಸಹ ಕೇಳಿದ್ದಾರೆ. ಹೌದು, ತಮ್ಮ ಹುಟ್ಟುಹಬ್ಬದಂದು ತಾನು ಮನೆಯಲ್ಲಿ ಇರುವುದಿಲ್ಲ ಎಂದಿರುವ ಪುನೀತ್​, ಕುಟುಂಬದವರೊಂದಿಗೆ ದೇವಾಲಯಕ್ಕೆ ಹೋಗುತ್ತಿದ್ದೇನೆ. ದಯವಿಟ್ಟು ಯಾರೂ ಮನೆಯ ಬಳಿ ಬರಬೇಡಿ. ನಿಮ್ಮನ್ನು ಭೇಟಿ ಮಾಡಲು ನಾನೇ ಬರುತ್ತೇನೆ ಎಂದಿದ್ದಾರೆ. 

ನಿನ್ನೆ ಸಂಜೆ ತಮ್ಮ ಫೇಸ್​ಬುಕ್ ಪುಟದಿಂದ ಲೈವ್​ ಬಂದಿದ್ದ ಪುನೀತ್ ರಾಜ್‍ಕುಮಾರ್ ಈ ಕುರಿತಾಗಿ ಮಾಹಿತಿ ನೀಡಿದ್ದಾರೆ. ಮೊದಲಿಗೆ ಹುಟ್ಟುಹಬ್ಬದ ಆಚರಣೆ ಕುರಿತಂತೆ ಬೇಸರದ ಸುದ್ದಿ ಕೊಟ್ಟ ಅಪ್ಪು, ನಂತರ ಮೈಸೂರಿನಲ್ಲಿ ನಡೆಯಲಿರುವ ಯುವಸಂಭ್ರಮ ಕಾರ್ಯಕ್ರಮವನ್ನು ರದ್ದುಗೊಳಿಸಿರುವುದಾಗಿಯೂ ತಿಳಿಸಿದ್ದಾರೆ.



ಏಪ್ರಿಲ್ 1ರಂದು ಯುವರತ್ನ ಚಿತ್ರ ರಿಲೀಸ್ ಹಿನ್ನಲೆ  ಇದೇ ತಿಂಗಳು  ಅಂದರೆ ಮಾ. 20ರಂದು ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ಪ್ರೀ ರಿಲೀಸ್ ಈವೆಂಟ್ ಯುವ ಸಂಭ್ರಮ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ರಾಜ್ಯದ ಎಲ್ಲ ಭಾಗದ ಅಭಿಮಾನಿಗಳು ತಮ್ಮ ಊರುಗಳಿಗೆ ಬರುವಂತೆ ಮನವಿ ಮಾಡಿದ್ದಾರೆ. ಈ ಕಾರಣದಿಂದಾಗಿ ಯುವಸಂಭ್ರಮ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದಿದ್ದಾರೆ.

 ಇದನ್ನೂ ಓದಿ: ಸ್ಲಿಟ್​ ಗೌನ್​ ತೊಟ್ಟು ಬೋಲ್ಡ್​ ಆಗಿ ಪೋಸ್​ ಕೊಟ್ಟ ಜಾಹ್ನವಿ​: ನಟಿಯ ಲುಕ್​ಗೆ ಸೆಲೆಬ್ರಿಟಿಗಳು ಫಿದಾ

ಯುವಸಂಭ್ರಮ ಕಾರ್ಯಕ್ರಮ ಮೈಸೂರಿನಲ್ಲಿ ನಡೆಯುವುದನ್ನು ರದ್ದುಗೊಳಿಸಲಾಗಿದೆ. ಆದರೆ ಇದೇ ತಿಂಗಳು 21ರಿಂದ 23ರ ವರೆಗೆ ನಾವೇ ನಿಮ್ಮ ಊರುಗಳಿಗೆ ಬರುತ್ತೇವೆ. ನಾನೇ ನಿಮ್ಮನ್ನು ನೋಡಲು ನಿಮ್ಮ ನಿಮ್ಮ ಜಿಲ್ಲೆಗಳಿಗೆ ಬರುತ್ತೇವೆ. ನಿಮ್ಮ ಊರಿಗೆ ನಿಮ್ಮ ಅಪ್ಪು... ಹರಸಿ ಹಾಗೂ ಹಾರೈಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ ಯುವರತ್ನ ಪುನೀತ್.

Yuvarathnaa Movie Pre Release Event, Yuvarathnaa Movie, Puneeth Rajkumar, Yuvarathnaa Movie Pre Release Event date, Yuvarathnaa Movie Pre Release Event venue, ಯುವರತ್ನ ಬಿಡುಗಡೆ ದಿನಾಂಕ, ಪುನೀತ್ ರಾಜ್ ಕುಮಾರ್ ಯುವರತ್ನ, ಯುವರತ್ನ ಸುದ್ದಿಗೋಷ್ಠಿ, ಯುವರತ್ನ ಪ್ರಿ-ರಿಲೀಸ್ ಕಾರ್ಯಕ್ರಮ, Yuvarathnaa Release Date, Puneeth Rajkumar Fitness Video, ಗೋಕರ್ಣದಲ್ಲಿ ಪುನೀತ್​, ಪುನೀತ್​ ಫಿಟ್ನೆಸ್​ ವಿಡಿಯೋ, Puneeth in Gokarna, Sandalwood, Puneeth Rajkumar Movie, Yuvarathna Movie, Yuvarathna Shooting Completed, Santhosh ananddram, ಪುನೀತ್ ರಾಜ್ ಕುಮಾರ್, ಯುವರತ್ನ ಸಿನಿಮಾ ಶೂಟಿಂಗ್, ಸಂತೋಷ್ ಆನಂದ್ ರಾಮ್, Yuvarathnaa Rampage Soon, Yuvarathnaa, thaman, Santhosh Anand Ram, Puneeth Rajkumar, Yuvarathna First Single, Sandalwood, Puneeth Rajkumar starrer Yuvarathnaa movie team celebrating pre release event as YuvaSambhrama ae 
ಯುವಸಂಭ್ರಮ ಕಾರ್ಯಕ್ರಮ ರದ್ದುಗೊಳಿಸಿದ ಚಿತ್ರತಂಡ


ಸಂತೋಷ್ ಆನಂದರಾಮ್ ನಿರ್ದೇಶನದ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟಿಸಿರುವ ಸಿನಿಮಾ ಯುವರತ್ನ ಈಗಾಗಲೇ ಸಿನಿಮಾದ ರಿಲೀಸ್​ ದಿನಾಂಕ ಪ್ರಕಟಿಸಿರುವ ಚಿತ್ರತಂಡ ಈಗ ಪ್ರೀ-ರಿಲೀಸ್​ ಇವೆಂಟ್​ ತಯಾರಿಯಲ್ಲಿದೆ. ರಾಜಕುಮಾರ ಸಿನಿಮಾದ ನಂತರ ಸಂತೋಷ್​ ಆನಂದ್​ ರಾಮ್​ ಹಾಗೂ ಪುನೀತ್ ರಾಜ್​ಕುಮಾರ್​ ಕಾಂಬಿನೇಶನ್​ನಲ್ಲಿ ಮೂಡಿ ಬರುತ್ತಿರುವ ಚಿತ್ರ ಇದಾಗಿದೆ.

ಇದನ್ನೂ ಓದಿ: Pawri Ho Rahi Hai: ಪಾವ್ರಿ ಹೋ ರಹೀ ಹೈ ಎಂಬ ವೈರಲ್‌ ಮೀಮ್‌ಗೆ ಬಾಲಿವುಡ್‌ ಬೇಬೊ ಕರೀನಾ ಕಪೂರ್‌ ಸ್ಫೂರ್ತಿ..!

ಏ.1ರಂದು ಯುವರತ್ನ ಸಿನಿಮಾ ರಾಜ್ಯದಾದ್ಯಂತ ರಿಲೀಸ್ ಆಗಲಿದೆ. ಈ ಸಲ ಯುವರತ್ನ ಕನ್ನಡ ಹಾಗೂ ತೆಲುಗಿನಲ್ಲಿ ತೆರೆ ಕಾಣಲಿದೆ. ಈಗಾಗಲೇ ಯುವರತ್ನ ಸಿನಿಮಾದ ಪ್ರಚಾರ ಕಾರ್ಯ ಆರಂಭಿಸಿರುವ ಚಿತ್ರತಂಡ ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡುವ ತಯಾರಿಯಲ್ಲಿದೆ. ಯಾವ ಜಿಲ್ಲೆಗೆ ಯಾವಾಗ ಹಾಗೂ ಎಲ್ಲಿ ಎಂದು ಸ್ಥಳ ಹಾಗೂ ಸಮಯ ನಿಗದಿ ಮಾಡುವ ತಯಾರಿ ನಡೆಸುತ್ತಿದೆ. ಒಮ್ಮೆ ದಿನಾಂಕ ಹಾಗೂ ಸ್ಥಳ ಫಿಕ್ಸ್​ ಆದ ಕೂಡಲೇ ಅದನ್ನು ಅಭಿಮಾನಿಗಳಿಗೆ ತಿಳಿಸಲಾಗುತ್ತದೆ ಎಂದು ಪುನೀತ್​ ತಿಳಿಸಿದ್ದಾರೆ.

Puneeth Rajkumar Visit To Kolhapur Ambabai Temple, Puneeth Rajkumar movie Yuvarathna, Yuvarathna release date, ಯುವರತ್ನ ಸಿನಿಮಾ ವಿತರಣೆ ಹಕ್ಕು, ಪುನೀತ್ ರಾಜ್ ಕುಮಾರ್ ಯುವರತ್ನ, ಯುವರತ್ನ ಬಿಡುಗಡೆ ದಿನಾಂಕ, ಕೊಲ್ಲಾಪುರದ ಅಂಬಾಬಾಯಿ ದೇವಿಯ ದರ್ಶನ ಪಡೆದ ಪುನೀತ್, Yuvarathnaa Release Date, Puneeth Rajkumar Fitness Video, ಗೋಕರ್ಣದಲ್ಲಿ ಪುನೀತ್​, ಪುನೀತ್​ ಫಿಟ್ನೆಸ್​ ವಿಡಿಯೋ, Puneeth in Gokarna, Sandalwood, Puneeth Rajkumar Movie, Yuvarathna Movie, Yuvarathna Shooting Completed, Santhosh ananddram, ಪುನೀತ್ ರಾಜ್ ಕುಮಾರ್, ಯುವರತ್ನ ಸಿನಿಮಾ ಶೂಟಿಂಗ್, ಸಂತೋಷ್ ಆನಂದ್ ರಾಮ್, Yuvarathnaa Rampage Soon, Yuvarathnaa, thaman, Santhosh Anand Ram, Puneeth Rajkumar, Yuvarathna First Single, Sandalwood
ಕೊಲ್ಲಾಪುರದ ಮಹಾಲಕ್ಷ್ಮಿ ದೇವಾಲಯದಲ್ಲಿ ಯುವರತ್ನ ಚಿತ್ರತಂಡ


ಧನಂಜಯ್​ ಈ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಪುನೀತ್​ಗೆ ನಾಯಕಿಯಾಗಿ ಸಯೇಷಾ ಕಾಣಿಸಿಕೊಂಡಿದ್ದಾರೆ. ಸಿನಿಮಾ ದಿನಾಂಕ ಪ್ರಕಟಿಸಿದ ನಂತರ ನಿರ್ನಾಪಕ ವಿಜಯ್​ ಕಿರಗಂದೂರು, ಸಂತೋಷ್​ ಆನಂದ್​ ರಾಮ್​ ಹಾಗೂ ಪುನೀತ್​ ರಾಜ್​ಕುಮಾರ್​ ಕೊಲ್ಲಾಪುರದ ಮಹಾಲಕ್ಷ್ಮಿ ಹಾಗೂ ಶಿರಡಿಯ ಸಾಯಿಬಾಬಾನ ದರ್ಶನ ಪಡೆದಿದ್ದಾರೆ.
Published by:Anitha E
First published: