Puneeth Rajkumar: ತನ್ನನ್ನೇ ಇಮಿಟೇಟ್​ ಮಾಡಿದ ಪುನೀತ್ ವಿಡಿಯೋ ಹಂಚಿಕೊಂಡ ಜಗ್ಗೇಶ್​​: ಮತ್ತೆ ರಮ್ಯಾರನ್ನು ನೆನಪಿಸಿಕೊಂಡ ನವರಸ ನಾಯಕ..!

Jaggesh And Ramya: ಸಾಮಾನ್ಯವಾಗಿ ಕಿರುತೆ ಹಾಗೂ ಸಾರ್ವಜನಿಕ ಸಮಾರಂಭಗಳಲ್ಲಿ ಒಬ್ಬ ಕಲಾವಿದನನ್ನು ಮತ್ತೊಬ್ಬರು ಅನುಕರಣೆ ಮಾಡುತ್ತಾರೆ. ಆದರೂ ಹಿರಿಯ ಕಲಾವಿದರನ್ನು ಅನುಕರಣೆ ಮಾಡುವಾಗ ಕೊಂಚ ಹಿಂಜರಿಯುತ್ತಾರೆ. ಕಾರಣ ಎಲ್ಲಾದರೂ ಏನಾದರೂ ಅಚಾತುರ್ಯ ನಡೆದೀತು ಅನ್ನೋ ಅಳುಕು ಮನದಲ್ಲಿರುತ್ತದೆ. ಆದರೆ ದೊಡ್ಮನೆ ಹುಡುಗ ಪುನೀತ್​ ರಾಜ್​ ಕುಮಾರ್​, ಜಗ್ಗೇಶ್​ ಅವರನ್ನು ಎಷ್ಟು ಚೆನ್ನಾಗಿ ಇಮಿಟೇಟ್​ ಮಾಡಿದ್ದಾರೆ ಗೊತ್ತಾ?

ಜಗ್ಗೇಶ್​, ರಮ್ಯಾ ಹಾಗೂ ಪುನೀತ್​ ರಾಜ್​ಕುಮಾರ್​

ಜಗ್ಗೇಶ್​, ರಮ್ಯಾ ಹಾಗೂ ಪುನೀತ್​ ರಾಜ್​ಕುಮಾರ್​

  • Share this:
ಜಗ್ಗೇಶ್​ ಯಾವ ಪಾತ್ರವನ್ನಾದರೂ ಅಭಿನಯಿಸುವ ಕಲಾವಿದ. ಅವರ ನಟನೆಯಲ್ಲಿ ನವರಸಗಳೂ ಇರುತ್ತವೆ. ಹೀಗಾಗಿಯೇ ಅವರನ್ನು ನವರಸ ನಟ ಎನ್ನುತ್ತಾರೆ. ಇಂತಹ ಹಿರಿಯ ನಟನನ್ನು ಅನುಕರಣೆ (ಇಮಿಟೇಟ್​) ಮಾಡೋದು ಅಂದರೆ ಅಷ್ಟು ಸುಲಭದ ಮಾತಲ್ಲ.

ಸಾಮಾನ್ಯವಾಗಿ ಕಿರುತೆರೆ ಹಾಗೂ ಸಾರ್ವಜನಿಕ ಸಮಾರಂಭಗಳಲ್ಲಿ ಒಬ್ಬ ಕಲಾವಿದನನ್ನು ಮತ್ತೊಬ್ಬರು ಅನುಕರಣೆ ಮಾಡುತ್ತಾರೆ. ಆದರೂ ಹಿರಿಯ ಕಲಾವಿದರನ್ನು ಅನುಕರಣೆ ಮಾಡುವಾಗ ಕೊಂಚ ಹಿಂಜರಿಯುತ್ತಾರೆ. ಕಾರಣ ಎಲ್ಲಾದರೂ ಏನಾದರೂ ಅಚಾತುರ್ಯ ನಡೆದೀತು ಅನ್ನೋ ಅಳುಕು ಮನದಲ್ಲಿರುತ್ತದೆ. ಆದರೆ ದೊಡ್ಮನೆ ಹುಡುಗ ಪುನೀತ್​ ರಾಜ್​ ಕುಮಾರ್​, ಜಗ್ಗೇಶ್​ ಅವರನ್ನು ಎಷ್ಟು ಚೆನ್ನಾಗಿ ಇಮಿಟೇಟ್​ ಮಾಡಿದ್ದಾರೆ ಗೊತ್ತಾ?

#PowerStar #PuneethRajkumar & #JaggeshSir at #KannadadaKotyadipati 😍🙂@PuneethRajkumar @Jaggesh2 @27parims @ColorsKannada pic.twitter.com/qKW0WEJzy9ಪುನೀತ್​ ರಾಜ್​ಕುಮಾರ್​ ಕಿರುತೆರೆಯಲ್ಲಿ ನಡೆಸಿಕೊಡುವ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಬಹಳ ಹಿಂದೆ ನಟಿ ರಮ್ಯಾ ಭಾಗವಹಿಸಿದ್ದರು. ಆಗ ರಮ್ಯಾ, ಜಗ್ಗೇಶ್​ ಅವರನ್ನು ಅನುಕರಿಸುವಂತೆ ಪುನೀತ್​ಗೆ ಮನವಿ ಮಾಡುತ್ತಾರೆ. ಅದಕ್ಕೆ ಪುನೀತ್​, ಜಗ್ಗಣ್ಣನ ಸಿನಿಮಾದ ಡೈಲಾಗ್​ ಅನ್ನು ಥೇಟ್​ ಅವರಂತೆಯೇ ಹೇಳುತ್ತಾರೆ. ಈ ವಿಡಿಯೋವನ್ನು ಜಗ್ಗೇಶ್ ಇತ್ತೀಚೆಗಷ್ಟೆ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿ ತುಂಬಾ ಖುಷಿಯಾಯಿತು ಎಂದೂ ಬರೆದುಕೊಂಡಿದ್ದಾರೆ.
ಜೊತೆಗೆ ಈ ವಿಡಿಯೋ ನೋಡಿ ಇದ್ದಕ್ಕಿದ್ದಂತೆ ನಟಿ ರಮ್ಯಾರನ್ನೂ ನೆನೆಸಿಕೊಂಡಿರುವ ಜಗ್ಗೇಶ್​, 'ಮತ್ತೆ ರಮ್ಯಾ ಸಿನಿಮಾಗೆ ಬರಬೇಕು. ಕೆಲ ವೈಯಕ್ತಿಕ ಸಿದ್ಧಾಂತದಿಂದಾಗಿ ಮನಸ್ಸು ಒಡೆದ ಹಾಲಾಯಿತು. ಈಕೆ ಒಳ್ಳೆಯ ನಟಿ, ವೈಯಕ್ತಿಕವಾಗಿ ನಾನು ಆಕೆಯನ್ನು ಬಹಳ ಇಷ್ಟಪಡುತ್ತೇನೆ' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ರಣಬೀರ್​ ಕಪೂರ್ ಜೊತೆ ಮದುವೆ ಬಗ್ಗೆ ಸ್ಪಷ್ಟನೆ ಕೊಟ್ಟ ಅಲಿಯಾ ಭಟ್​..!

ರಮ್ಯಾ ಈ ಹಿಂದೆ ಜಗ್ಗೇಶ್​ ಅವರ 'ನೀರ್​ ದೋಸೆ' ಸಿನಿಮಾದಲ್ಲಿ ನಟಿಸಿ, ಚಿತ್ರೀಕರಣ ಅರ್ಧ ಮುಗಿದಾಗ ಚಿತ್ರದಿಂದ ಹೊರ ನಡೆದಿದ್ದರು. ಆಗ ಜಗ್ಗೇಶ್​ ಹಾಗೂ ರಮ್ಯಾ ನಡುವಿದ್ದ ಸ್ನೇಹ ಸಂಬಂಧದಲ್ಲಿ ಬಿರುಕುಂಟಾಗಿತ್ತು.

Rashmika Mandanna: ಹಾಲಿವುಡ್​ ಸಿನಿಮಾಗಾಗಿ ಸಿಕ್ಕಾಪಟ್ಟೆ ಬೋಲ್ಡ್​ ಆಗುತ್ತಿದ್ದಾರಾ ರಶ್ಮಿಕಾ ಮಂದಣ್ಣ: ಮುಂದಿನ ವಂಡರ್​ ವುಮನ್​ ಕಿರಿಕ್​ ಬೆಡಗಿನಾ?

First published: