ಪವರ್​ ಸ್ಟಾರ್​ Puneeth Rajkumarಗೆ ಲಘು ಹೃದಯಾಘಾತ: ಆಸ್ಪತ್ರೆಗೆ ಭೇಟಿ ಕೊಟ್ಟ ಮುಖ್ಯಮಂತ್ರಿ-ನಟ ಯಶ್​

ಆರೋಗ್ಯದಲ್ಲಿ ಏರುಪೇರಾದ ಕಾರಣ ಪುನೀತ್ ರಾಜ್​ಕುಮಾರ್​ ಅವರನ್ನು ವಿಕ್ರಂ ಆಸ್ಪತ್ರೆಗೆ ಸೇರಿಸಲಾಗಿದ್ದು, ನುರಿತ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರಂತೆ.

ನಟ ಪುನೀತ್ ರಾಜ್​ಕುಮಾರ್​

ನಟ ಪುನೀತ್ ರಾಜ್​ಕುಮಾರ್​

  • Share this:
ನಟ ಪುನೀತ್ ರಾಜ್​ಕುಮಾರ್ (Puneeth Rajkumar) ಅವರಿಗೆ ಲಘು ಹೃದಯಾಘಾತವಾಗಿದ್ದು, ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ (Vikram Hospital) ಸೇರಿಸಲಾಗಿದೆ. ಈಗಾಗಲೇ ಆಸ್ಪತ್ರೆಯಲ್ಲಿ ಪುನೀತ್​ ರಾಜ್​ಕುಮಾರ್​ ಅವರಿಗೆ ಐಸಿಯುನಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರಂತೆ. ಇನ್ನು ಬೆಳಿಗ್ಗೆ ಮನೆಯಲ್ಲಿ ಜಿಮ್​ನಲ್ಲಿ ವ್ಯಾಯಾಮ ಮಾಡುವಾಗ ಸ್ವಲ್ಪ ಎದೆ ನೋವು ಕಾಣಿಸಿಕೊಂಡಿದ್ದು, ಆಗಲೇ ಅವರನ್ನು ವಿಕ್ರಂ ಆಸ್ಪತ್ರೆಗೆ ಕರೆತರಲಾಗಿದೆ ಎಂದು ಸದ್ಯಕ್ಕೆ ಮಾಹಿತಿ ಲಭ್ಯವಾಗಿದೆ. ಶಿವರಾಜ್​ಕುಮಾರ್​ ಅವರ ಮಗಳು ಆಸ್ಪತ್ರೆಗೆ ಈಗಾಗಲೇ ಭೇಟಿ ಕೊಟ್ಟಿದ್ದಾರೆ. ವಿಷಯ ಬಹಿರಂಗವಾಗುತ್ತಿದ್ದಂತೆಯೇ ಆಸ್ಪತ್ರೆಯ ಬಳಿ ಅಭಿಮಾನಿಗಳು ಗುಂಪು ಸೇರುತ್ತಿದ್ದಾರೆ. ಜತೆಗೆ ಪೊಲೀಸರು ಸಹ ಬಿಗಿ ಬಂದೋಬಸ್ತ್​ ಮಾಡಿದ್ದಾರೆ. ಇನ್ನು ಇಂದೇ ಶಿವರಾಜ್​ ಕುಮಾರ್ ಅಭಿನಯದ ಭಜರಂಗಿ ಸಿನಿಮಾ ರಿಲೀಸ್​ ಆಗಿದ್ದು, ಶಿವಣ್ಣ ಸಿನಿಮಾದ ಕೆಲಸಗಳಲ್ಲಿ  ಬ್ಯುಸಿಯಾಗಿದ್ದಾರೆ. ಈಗ ಅವರಿಗೂ ಮಾಹಿತಿ ಮುಟ್ಟಿಸಲಾಗಿದ್ದು, ಅವರೂ ಆಸ್ಪತ್ರೆಯ ಬಳಿ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 

ಬೆಳಿಗ್ಗೆ ಅವರು ವ್ಯಾಯಾಮ ಮಾಡುವಾಗ ಕುಸಿದು ಬಿದ್ದ ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ, ನಂತರ ಅವರನ್ನು ವಿಕ್ರಂ ಆಸ್ಪತ್ರೆಗೆ ಶಿಫ್ಟ್​ ಮಾಡಲಾಯಿತು ಅನ್ನೋ ಮಾಹೊತಿ ಲಭ್ಯವಾಗಿದೆ. ಇನ್ನು ವಿಕ್ರಂ ಆಸ್ಪತ್ರೆಯ ಬಳಿ ರಾಜ್​ ಕುಟುಂಬದವರು ಒಬ್ಬೊಬ್ಬರಾಗಿ ಬರುತ್ತಿದ್ದಾರೆ. ನಟ ಯಶ್​ ಸಹ ಈಗ ಆಸ್ಪತ್ರೆಗೆ ಬಂದಿದ್ದು, ಪುನೀತ್ ಅವರ ಆರೋಗ್ಯದ ಕುರಿತಾಗಿ ವೈದ್ಯರ ಬಳಿ ವಿಚಾರಿಸುತ್ತಿದ್ದಾರಂತೆ.

Puneeth Rajkumar, Dilip kumar, Rajkumar, Dilip Kumar, died, Bollywood, ದಿಲೀಪ್ ಕುಮಾರ್, ನಿಧನ, ಬಾಲಿವುಡ್, dileep kumar dead, dilip kumar, dileep kumar actor, bollywood, hindi cinema, 98 year old dileep, saira banu wife, mumbai hinduja hospital, santracruz final rites, ದಿಲೀಪ್​ ಕುಮಾರ್​ ಇನ್ನಿಲ್ಲ. ಇಹಲೋಕ ತ್ಯಜಿಸಿದ ದಿಲೀಪ್​ ಕುಮಾರ್​, RIP Dilip Kumar Puneeth Rajkumar shared an old photo of rajkumar and dilip kumar ae,
ನಟ ಪುನೀತ್ ರಾಜ್​ಕುಮಾರ್​


ಪುನೀತ್ ರಾಜ್​ಕುಮಾರ್ ಅವರ ಮನೆ ಹಾಗೂ ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಅಭಿಮಾನಿಗಳು ಬರುವ ಸಾಧ್ಯತೆ ಇರುವ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇನ್ನು ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಪುನೀತ್​ ರಾಜ್​ಕುಮಾರ್​ ಅವರ ಆರೋಗ್ಯ ಚಿಂತಾಜನಕವಾಗಿದ್ದು, ಚಿತ್ರರಂಗದ ಗಣ್ಯರು, ನಿರ್ದೇಶಕರು, ನಟ-ನಟಿಯರು ಹಾಗೂ ನಿರ್ಮಾಪಕರು ಆಸ್ಪತ್ರೆಗೆ ಬರುತ್ತಿದ್ದಾರೆ. ನಟ ಶ್ರೀಮುರಳಿ, ನಿರ್ದೇಶಕ ಸಂತೋಷ್​ ಆನಂದ್​ ರಾಮ್​ ಸಹ ಆಸ್ಪತ್ರೆಗೆ ಬಂದಿದ್ದಾರೆ.

ಇದನ್ನೂ ಓದಿ: Puneeth Rajkumar: ರಿಲೀಸ್ ಆಯ್ತು ಪುನೀತ್​ ರಾಜ್​ಕುಮಾರ್ ಅಭಿನಯದ ಹೊಸ ಸಿನಿಮಾದ ಟೈಟಲ್​ ಪೋಸ್ಟರ್ !

ಇನ್ನು ಪುನೀತ್​ ರಾಜ್​ಕುಮಾರ್​ ಅವರು ಫಿಟ್ನೆಸ್ ಬಗ್ಗೆ ತುಂಬಾ ಕಾಳಜಿವಹಿಸುತ್ತಿದ್ದ ವ್ಯಕ್ತಿಯಾಗಿದ್ದು, ಅವರ ನಿತ್ಯ ತಪ್ಪದೆ ವ್ಯಾಯಾಮ ಮಾಡುತ್ತಿದ್ದರು. ವಾರಾಂತ್ಯದಲ್ಲಿ ಕಿಲೋ ಮೀಡರ್​ ಗಟ್ಟಲೆ ಸೈಕ್ಲಿಂಗ್​ ಸಹ ಮಾಡುತ್ತಿದ್ದರು. ಇಂತಹ ವ್ಯಕ್ತಿಗೆ ಹೃದಯಾಘಾತವಾಗಿದೆ ಎಂದರೆ ನಂಬಲು ಯಾರಿಗೂ ಸಾಧ್ಯವಿಲ್ಲ. ಇನ್ನು ನಟನ ಆರೋಗ್ಯದ ಬಗ್ಗೆ ವಿದೇಶದಲ್ಲಿರುವ ಮಗಳಿಗೆ ಮಾಹಿತಿ ನೀಡಲಾಗಿದೆಯಂತೆ.

ಇದನ್ನೂ ಓದಿ: Puneeth at 43: ಸಿನಿ ಲೋಕದಲ್ಲಿ 43 ವರ್ಷ ಕಳೆದ ಪವರ್​ ಸ್ಟಾರ್​ ಪುನೀತ್​..!

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅಭಿನಯದ ಯುವರತ್ನ ಸಿನಿಮಾ ರಿಲೀಸ್​ ಆಗಿತ್ತು. ಇನ್ನು ಅವರ ಬಹುನಿರೀಕ್ಷಿತ ಸಿನಿಮಾ ಜೇಮ್ಸ್​ ಚಿತ್ರೀಕರಣದ ಹಂತದಲ್ಲಿತ್ತು. ಇದರ ಜೊತೆಗೆ ದ್ವಿತ್ವ ಸಿನಿಮಾ ಸಹ ಇತ್ತೀಚೆಗಷ್ಟೆ ಪ್ರಕವಾಗಿತ್ತು. ಹೊಂಬಾಳೆ ಫಿಲಂಸ್​ ಈ ಸಿನಿಮಾ ನಿರ್ಮಿಸುತ್ತಿದ್ದು, ಲೂಸಿಯಾ ಪವನ್​ ಕುಮಾರ್​ ಇದರ ನಿರ್ದೇಶನ ಮಾಡುತ್ತಿದ್ದಾರೆ.

ಕೆಜಿಎಫ್ ಸಿನಿಮಾದ​ ನಿರ್ಮಾಪಕ ವಿಜಯ್ ಕಿರಗಂದೂರು ಅವರು ನಿರ್ಮಿಸುತ್ತಿರುವ ದ್ವಿತ್ವ ಚಿತ್ರಕ್ಕೆ ಪವನ್​ ಕುಮಾರ್​ ಆ್ಯಕ್ಷನ್ ಕಟ್​ ಹೇಳುತ್ತಿದ್ದಾರೆ. ದ್ವಿತ್ವ ಸಿನಿಮಾ ಒಂದು ಸೈಕಲಾಜಿಕಲ್​ ಥ್ರಿಲ್ಲರ್​ ಡ್ರಾಮಾ ಆಗಿದೆ. 2018ರಲ್ಲಿ ತೆರೆಕಂಡ ಯೂಟರ್ನ್​ ಸಿನಿಮಾದ ನಂತರ ಪವನ್ ಕುಮಾರ್​ ಮತ್ತಾವ ಚಿತ್ರವನ್ನೂ ನಿರ್ದೇಶನ ಮಾಡಿರಲಿಲ್ಲ.
Published by:Anitha E
First published: