• Home
  • »
  • News
  • »
  • entertainment
  • »
  • Puneeth Rajkumar Gandhadagudi: ದೊಡ್ಮನೆ ಹುಡುಗನಿಗಾಗಿ ಮಿಡಿದ ಅನಿವಾಸಿ ಭಾರತೀಯರ ಮನ, ಅಮೆರಿಕಾ-ದುಬೈನಲ್ಲೂ ಗಂಧದ ಗುಡಿ ಪ್ರದರ್ಶನ!

Puneeth Rajkumar Gandhadagudi: ದೊಡ್ಮನೆ ಹುಡುಗನಿಗಾಗಿ ಮಿಡಿದ ಅನಿವಾಸಿ ಭಾರತೀಯರ ಮನ, ಅಮೆರಿಕಾ-ದುಬೈನಲ್ಲೂ ಗಂಧದ ಗುಡಿ ಪ್ರದರ್ಶನ!

ಅಕ್ಟೋಬರ್-28 ರಂದು ಸಿಂಗಾಪುರ್​ ನಲ್ಲಿ ಗಂಧದ ಗುಡಿ

ಅಕ್ಟೋಬರ್-28 ರಂದು ಸಿಂಗಾಪುರ್​ ನಲ್ಲಿ ಗಂಧದ ಗುಡಿ

ಕನ್ನಡದ ನಾಡಿನ ಗಂಧದ ಗುಡಿ ಸಿನಿಮಾ ಇಡೀ ಕರ್ನಾಟಕ ಸೇರಿದಂತೆ ವಿದೇಶದಲ್ಲೂ ರಿಲೀಸ್ ಆಗುತ್ತಿದೆ. ಕನ್ನಡದ ಗಂಧದ ಗುಡಿಯ ಮಾಣಿಕ್ಯನ ಈ ಸಿನಿಮಾ ಅಭಿಮಾನಿಗಳಲ್ಲಿ ಭಾವನಾತ್ಮಕವಾಗಿಯೇ ಕನೆಕ್ಟ್ ಆಗಿದೆ.

  • News18 Kannada
  • Last Updated :
  • Bangalore [Bangalore], India
  • Share this:

ಪವರ್ ಸ್ಟಾರ್ ಪುನೀತ್ (Puneeth Rajkumar) ರಾಜಕುಮಾರ್ ಅಭಿನಯದ ಗಂಧದ (Gandhad Gudi) ಗುಡಿ ರಿಲೀಸ್ ಆಗುತ್ತಿದೆ. ಅಕ್ಟೋಬರ್-28 ರಂದು ದೇಶ-ವಿದೇಶದಲ್ಲೂ ರಿಲೀಸ್ ಆಗುತ್ತಿದೆ. ರಿಲೀಸ್ ಹಿಂದಿನ ಅಕ್ಟೋಬರ್-27 ರಂದು ಚಿತ್ರದ ಪ್ರಿಮಿಯರ್ ಶೋ ಕೂಡ ಆಯೋಜನೆ ಆಗಿದೆ. ಅಮೆರಿಕಾದಂತಹ (America) ದೇಶದಲ್ಲಿ ಅಕ್ಟೋಬರ್-27 ರಂದು ಗಂಧದ ಗುಡಿ ತೆರೆಗೆ ಬಂದಿದೆ. (Singapore) ಸಿಂಗಪೂರ್ ನಲ್ಲಿ 28 ರಂದು ಗಂಧದ ಗುಡಿ ರಿಲೀಸ್ ಆಗುತ್ತಿದೆ. ಯುಎಇ ಯಲ್ಲಿ ದೊಡ್ಡ ಲಿಸ್ಟೇ ಇದೆ. ಈ ಒಂದು ಸಿನಿಮಾ ಇಷ್ಟೊಂದು ಹೈಪ್ ತೆಗೆದುಕೊಳ್ಳಲು ಕಾರಣ ಒಂದೇ. ಅದು ಅಪ್ಪು ಅನ್ನೋದನ್ನ ಮತ್ತೆ ಮತ್ತೆ ಹೇಳಬೇಕಿಲ್ಲ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕಟ್ಟ ಕಡೆ ಸಿನಿಮಾವನ್ನ ಎಲ್ಲರೂ ನೋಡೋಕೆ ಇಷ್ಟ ಪಡ್ತಿದ್ದಾರೆ. ಅಕ್ಟೋಬರ್-28 ರಂದು ಚಿತ್ರದ ರಿಲೀಸ್ ಅನ್ನ ಅಪ್ಪು ಅಭಿಮಾನಿಗಳು ಹಬ್ಬದ ರೀತಿಯಲ್ಲಿಯೇ ಆಚರಿಸುತ್ತಿದ್ದಾರೆ.


ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕೊನೆ ಸಿನಿಮಾ
ಗಂಧದ ಗುಡಿ ಅಪ್ಪು ಅಭಿನಯದ ಕೊನೆಯ ಸಿನಿಮಾ. ಇದನ್ನ ಸಿನಿಮಾ ಅಂದ್ರೆ ತಪ್ಪಾಗುತ್ತದೆ. ಇದು ಅಪ್ಪು ತಮಗನಿಸಿದ ರೀತಿಯಲ್ಲಿ ಜೀವಿಸಿ ಹೋದ ಅತ್ಯದ್ಭುತ ಜೀವನವೇ ಆಗಿದೆ.


Puneeth Rajkumar Gandhada Guri Release in UAE And USA
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕೊನೆ ಸಿನಿಮಾ


ಗಂಧದ ಗುಡಿ ಅಪ್ಪು ಅಭಿನಯದ ಕಟ್ಟೆ ಕಡೆಯ ಸಿನಿಮಾ. ಈ ಕಟ್ಟ ಕಡೆಯ ಸಿನಿಮಾ ಅನ್ನೋದೇ ನೋವಿನ ಸಂಗತಿ. ಆದರೆ, ಆ ಸತ್ಯವನ್ನ ಒಪ್ಪಿಕೊಳ್ಳಲೇಬೇಕು. ಅಂತಹ ಈ ನೆನಪುಗಳ ಬುತ್ತಿಯೊಂದಿಗೆ ಅಪ್ಪು ಅಭಿಮಾನಿಗಳು ಗಂಧದ ಗುಡಿಯನ್ನ ವೆಲ್ ಕಮ್ ಮಾಡುತ್ತಿದ್ದಾರೆ.


ಅಮೆರಿಕದಲ್ಲಿ 27 ರಂದು ಗಂಧದ ಗುಡಿ ರಿಲೀಸ್
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಗಂಧದ ಗುಡಿ ಸಿನಿಮಾ ಅಮೆರಿಕದಲ್ಲಿ ರಿಲೀಸ್ ಆಗಿದೆ. ಅಮೆರಿಕಾದಲ್ಲಿ ಅಕ್ಟೋಬರ್-27 ರಂದು ಗಂಧದ ಗುಡಿ ರಿಲೀಸ್ ಆಗಿದೆ.


Puneeth Rajkumar Gandhada Guri Release in UAE And USA
ಅಮೆರಿಕದಲ್ಲಿ 27 ರಂದು ಗಂಧದ ಗುಡಿ ರಿಲೀಸ್


ಅಮೆರಿಕದ ಕ್ಯಾಲಿಪೋರ್ನಿಯಾ, ಆರಿಜೋನಾ, ಪ್ಲೋರಿಡಾ, ನ್ಯೂಯಾರ್ಕ್, ಟೆಕ್ಸಾಸ್, ನ್ಯೂ ಜರ್ಸಿ ಹೀಗೆ ಇಲ್ಲಿಯ ಪ್ರಮುಖ ಏರಿಯಾದಲ್ಲಿ ಗಂಧದ ಗುಡಿ ಸಿನಿಮಾ ರಿಲೀಸ್ ಆಗಿದೆ.


ಅಕ್ಟೋಬರ್-28 ರಂದು ಸಿಂಗಾಪುರ್​ ನಲ್ಲಿ ಗಂಧದ ಗುಡಿ


ಪವರ್ ಸ್ಟಾರ್ ಪುನೀತ್ ಅಭಿನಯದ ಗಂಧದ ಗುಡಿ ಸಿನಿಮಾದ ಮೇಲಿನ ಪ್ರೀತಿ ಅಮೆರಿಕಾ ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ.

ಇದನ್ನೂ ಓದಿ: Gandhadagudi: ಶುರುವಾಯ್ತು ಗಂಧದಗುಡಿಯ ಕಂಪು, ಅಪ್ಪು ಕಣ್ತುಂಬಿಕೊಳ್ಳಲು ಬಂದ ಸೆಲಬ್ರಿಟಿಗಳು


ಸಿಂಗಾಪುರ್ ನಲ್ಲೂ ಗಂಧದ ಗುಡಿಯಲ್ಲೂ ಪುನೀತ್ ಅಭಿನಯದ ಈ ಚಿತ್ರ ರಿಲೀಸ್ ಆಗುತ್ತಿದೆ. ಯಾವ ಏರಿಯಾದಲ್ಲಿ ಗಂಧದ ಗುಡಿ ರಿಲೀಸ್ ಆಗುತ್ತಿದೆ. ಇಲ್ಲಿದೆ ಒಂದಷ್ಟು ಮಾಹಿತಿ ಇಲ್ಲಿದೆ ಓದಿ:


ಕ್ಯಾಥೆ ಸಿನಿಪ್ಲೆಕ್ಸ್:-ವೆಸ್ಟ್ ಮಾಲ್, ಪಾರ್ಕ್​ವೇ ಪರೇಡ್, ಕ್ಯಾಸ್ವೇ ಪಾಯಿಂಗ್ ನಲ್ಲಿ ಗಂಧದ ಗುಡಿ ಸಿನಿಮಾ ರಿಲೀಸ್ ಆಗುತ್ತಿದೆ.
ಕಾರ್ನಿವಲ್ ಸಿನಿಮಾಸ್:- ಕಾರ್ನಿವಲ್ ಸಿನಿಮಾಸ್: ಗೋಲ್ಡನ್ ಮೈಲ್​ ಟವರ್ ನಲ್ಲೂ ಗಂಧದ ಗುಡಿ ಚಿತ್ರ ಪ್ರದರ್ಶನ ಆಗುತ್ತದೆ.


UAE ಮತ್ತು GCCಯಲ್ಲೂ ಗಂಧದ ಗುಡಿ ರಿಲೀಸ್
ದೂರ ಅರಬ್ ಕಂಟ್ರಿಯಲ್ಲೂ ಕನ್ನಡದ ಗಂಧದ ಗುಡಿ ರಿಲೀಸ್ ಆಗುತ್ತಿದೆ. ಆ ಲೆಕ್ಕದಂತೆ ಇಲ್ಲಿಯ ಪ್ರಮುಖ ನಗರಗಳ ಮಾಹಿತಿ ಇಲ್ಲಿದೆ.


ದುಬೈ, ಶಾರ್ಜಾ, ಮಸ್ಕಟ್, ಕತಾರ್, ಬಹ್ರೇನ್, ಕುವೈತ್, ಸೌದಿ ಅರೇಬಿಯಾ, ಅಬುಧಾಬಿ ಇಲ್ಲಿ ಗಂಧದ ಗುಡಿ ಸಿನಿಮಾ ರಿಲೀಸ್ ಆಗುತ್ತಿದೆ.


ಕನ್ನಡದ ನಾಡಿನ ಗಂಧದ ಗುಡಿ ಸಿನಿಮಾ ಇಡೀ ಕರ್ನಾಟಕ ಸೇರಿದಂತೆ ವಿದೇಶದಲ್ಲೂ ರಿಲೀಸ್ ಆಗುತ್ತಿದೆ. ಕನ್ನಡದ ಗಂಧದ ಗುಡಿಯ ಮಾಣಿಕ್ಯನ ಈ ಸಿನಿಮಾ ಅಭಿಮಾನಿಗಳಲ್ಲಿ ಭಾವನಾತ್ಮಕವಾಗಿಯೇ ಕನೆಕ್ಟ್ ಆಗಿದೆ.


ಇದನ್ನೂ ಓದಿ: Puneeth Rajkumar on Gandhadagudi: ನಿಮ್ಮನ್ನೆಲ್ಲ ನೋಡುವ ಕಾತರದಲ್ಲಿ! ಗಂಧದಗುಡಿ ಕುರಿತು ಟ್ವೀಟ್ ಮಾಡಿದ ಅಪ್ಪು!


ಈ ಹಿನ್ನೆಲೆಯಲ್ಲಿ ಗಂಧದ ಗುಡಿ ಸಿನಿ ಪ್ರೇಮಿಗಳಿಗೆ ಮಹತ್ವದ ಸಿನಿಮಾ ಕೂಡ ಆಗಿದೆ. ಅಂತಲೇ ಹೇಳಬಹದು.

First published: