• Home
  • »
  • News
  • »
  • entertainment
  • »
  • Gandhadagudi Review: ನಮ್ಮ ನಾಡಿನ ಅನ್ಯ ಲೋಕಕ್ಕೆ ಅಪ್ಪು ಪಯಣ! ವನ್ಯ ಸಂಪತ್ತಿನ ಸಂಪೂರ್ಣ ಚಿತ್ರಣ

Gandhadagudi Review: ನಮ್ಮ ನಾಡಿನ ಅನ್ಯ ಲೋಕಕ್ಕೆ ಅಪ್ಪು ಪಯಣ! ವನ್ಯ ಸಂಪತ್ತಿನ ಸಂಪೂರ್ಣ ಚಿತ್ರಣ

ಗಂಧದ ಗುಡಿಯ ವನ್ಯ ಸಂಪತ್ತಿನ ಸಂಪೂರ್ಣ ಚಿತ್ರಣ

ಗಂಧದ ಗುಡಿಯ ವನ್ಯ ಸಂಪತ್ತಿನ ಸಂಪೂರ್ಣ ಚಿತ್ರಣ

ನಾಗರಹೊಳೆಯಲ್ಲಿ ಹುಲಿ ಸಂರಕ್ಷಿತ ಫಾರೆಸ್ಟ್ ಕೂಡ ಇದೆ. ಇದರ ಗಾರ್ಡ್ ಗಳ ಜೊತೆಗೆ ಅಪ್ಪು ಕಾಲ ಕಳೆಯುತ್ತಾರೆ. ಇವರೊಟ್ಟಿಗೆ ಕಾಡನ್ನ ಗಸ್ತು ಕೂಡ ಹೊಡೆಯುತ್ತಾರೆ. ರಾತ್ರಿ ವೇಳೆ ಕಾಡಿನಲ್ಲಿ ಏನೆಲ್ಲ ಆಗುತ್ತದೆ ಅನ್ನೋ ವಿಷಯವನ್ನೂ ತಿಳಿದುಕೊಳ್ತಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡ ನಾಡಿನಲ್ಲಿ (Gandhada Gudi) ಅಪರೂಪದ (Rare Places) ಜಾಗಗಳಿವೆ. ಅವುಗಳನ್ನ ಎಲ್ಲರೂ ನೋಡೋಕೆ ಆಗೋದಿಲ್ಲ. ಆದರೆ ಅಪ್ಪು ಆ ಎಲ್ಲ ಸೌಂದರ್ಯವನ್ನ ಕಣ್ತುಂಬಿಕೊಂಡು ಹೋಗಿದ್ದಾರೆ. ಹೋಗುವಾಗ ತಾವು ಕಂಡ ಅಮೋಘ ಜಗತ್ತನ್ನ ಕನ್ನಡಿಗರಿಗೂ ಕೊಟ್ಟು ಹೋಗಿದ್ದಾರೆ. ಹಾಗೆ ಅಪ್ಪು ಕೊಟ್ಟ ಕಟ್ಟ ಕಡೆಯ ಕೊಡುಗೆಯೇ ಈ ಗಂಧದ ಗುಡಿ (Gandhada Gudi Cinema) ಸಿನಿಮಾ. ಇದು ಸಿನಿಮಾ ಅಲ್ಲ ಒಂದು ಪಯಣ. ಜೀವಂತಿಕೆಯ ಪಯಣ. ಬದುಕಿನ ಅಷ್ಟೂ ಬೇಸರಗಳನ್ನ ಕಳೆಯೋಕೆ ಈ ಒಂದು ಸಿನಿಮಾ ಸಾಕು. ಇಲ್ಲಿ ಟ್ರೆಕಿಂಗ್ ಅನುಭವ ಇದೆ. ಕಾಡಂಚಿನ ಜನರ ಮುಗ್ಧ ಮನಸ್ಸಿನ ಚಿತ್ರಣವೂ ಇದೆ. ಕಾಡೊಳಗಿನ ಅಪೂರದ ದೃಶ್ಯ ಕಾವ್ಯವೂ ನಿಮ್ಮನ್ನ ಅನ್ಯ ಜಗತ್ತಿಗೆ ಆಪ್ತವಾಗಿಯೇ ಕರೆದುಕೊಂಡು ಹೋಗುತ್ತದೆ. ಪವರ್ (Puneeth Rajkumar) ಸ್ಟಾರ್ ಪುನೀತ್ ರಾಜಕುಮಾರ್ ಆ ಪಯಣದಲ್ಲಿ ನಿಮ್ಮ ಜೊತೆಗೆ ಇರುತ್ತಾರೆ.


ನಾಗರಹೊಳೆಯ ಗಂಧದ ಗುಡಿಯಲ್ಲಿ ಅಪ್ಪು ಪಯಣ


ಗಂಧದ ಗುಡಿ ಆರಂಭದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ನಿರೂಪಣೆ ಇದೆ. ಇದರಲ್ಲಿ ಅಪ್ಪು ವ್ಯಕ್ತಿತ್ವದ ಚಿತ್ರಣವೂ ಸಿಗುತ್ತದೆ. ಇಲ್ಲಿಂದ ಅಪ್ಪು ಪಯಣದ ಕಥೆಯನ್ನ ಡೈರೆಕ್ಟರ್ ಹಾಗೂ ವೈಲ್ಡ್ ಲೈಫ್ ಫೋಟೋಗ್ರಾಫರ್ ಅಮೋಘವರ್ಷ ನಿಮ್ಮನ್ನ ಪುನೀತ್ ಜೊತೆಗೆ ಕರೆದುಕೊಂಡು ಹೋಗುತ್ತಾರೆ.


ನಾಗರಹೊಳೆಯಲ್ಲಿ ಹುಲಿಯನ್ನ ಕಂಡು ಮುಗ್ಧ ಮನಸ್ಸಿನಿಂದಲೇ ಅಪ್ಪು ಖುಷಿ ಪಡ್ತಾರೆ. ನೇರವಾಗಿಯೇ ಕಾಡಿನ ಆನೆಗಳನ್ನ ಕಂಡು ಭಕ್ತ ಪ್ರಹ್ಲಾದ ಸಿನಿಮಾದ ಚಿತ್ರೀಕರಣದ ಸಮಯವನ್ನು ಇಲ್ಲಿ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: Gandhada Gudi: ಗಂಧದಗುಡಿ ನೋಡಲು ಕ್ಲಾಸ್ ಬಂಕ್ ಮಾಡಿದ ವಿದ್ಯಾರ್ಥಿಗಳು, ಕಾಲೇಜ್ ಖಾಲಿ ಖಾಲಿ


ಅಮೋಘವರ್ಷ ಅಪ್ಪುಗೆ ಇಲ್ಲಿ ಕಾಡಿನ ಕೌತುಕಗಳ ಬಗ್ಗೆ ಮಾಹಿತಿ ಕೊಡ್ತಾ ಹೋಗ್ತಾರೆ. ಪುಟ್ಟ ಮಗುವಿನ ರೀತಿನೇ ಅಪ್ಪು ಇಲ್ಲಿ ಹುಲಿ ನೋಡಿ ಚಕಿತಗೊಳ್ತಾರೆ. ಹುಲಿ ಮತ್ತು ಕಾಡು ನಾಯಿಯ ಹೋರಾಟ ಕಂಡು ವಾವ್ ಅಂತಲೇ ಹೇಳಿ ಬಿಡ್ತಾರೆ.


ನಾಗರಹೊಳೆಯಲ್ಲಿ ಗಂಧದ ಗುಡಿಯ ಚಿತ್ರೀಕರಣದ ಜಾಗ


ಡಾಕ್ಟರ್ ರಾಜಕುಮಾರ್ ಅಭಿನಯದ ಗಂಧದ ಗುಡಿ ಸಿನಿಮಾ ಯಾರಿಗೆ ಗೊತ್ತಿಲ್ಲ ಹೇಳಿ? ಎಲ್ಲರೂ ಇದನ್ನ ನೋಡಿ ಖುಷಿ ಪಟ್ಟಿದ್ದಾರೆ. ಆ ಗಂಧದ ಗುಡಿ ಸಿನಿಮಾ ಇದೇ ನಾಗರಹೊಳೆ ಫಾರೆಸ್ಟ್ ನಲ್ಲಿಯೇ ಚಿತ್ರೀಕರಣ ಆಗಿದೆ.


Puneeth Rajkumar Gandhada Gudi Film Review
ನಾಗರಹೊಳೆಯಲ್ಲಿ ಗಂಧದ ಗುಡಿಯ ಚಿತ್ರೀಕರಣದ ಜಾಗ


ಆ ಜಾಗಕ್ಕೂ ಪುನೀತ್ ಅವರನ್ನ ಅಮೋಘವರ್ಷ ಕರೆದುಕೊಂಡು ಹೋಗ್ತಾರೆ. ಅದು ನಿಜಕ್ಕೂ ಅದ್ಭುತ ಜಾಗವೇ ಆಗಿದೆ. ಇದೇ ಜಾಗದಲ್ಲಿಯೇ ನಿಂತು ಗಂಧದ ಗುಡಿಯ ಒಂದಷ್ಟು ಮಾಹಿತಿಯನ್ನೂ ಅಪ್ಪು ಇಲ್ಲಿ ಶೇರ್ ಮಾಡಿಕೊಳ್ತಾರೆ.


ರಾಜ್ ಹುಟ್ಟಿದ ಊರು ಗಾಜನೂರಿಗೆ ಅಪ್ಪು-ಅಮೋಘ ಭೇಟಿ


ರಾಜಕುಮಾರ್ ಹುಟ್ಟೂರು ಗಾಜನೂರಿಗೂ ಪುನೀತ್ ಭೇಟಿ ಕೊಡ್ತಾರೆ. ಇಲ್ಲಿಯ ತಮ್ಮ ತಂದೆಯ ಅಪರೂಪದ ವಿಶೇಷ ಜಾಗದಲ್ಲೂ ಕುಳಿತುಕೊಳ್ತಾರೆ. ಅದರ ವಿಶೇಷತೆಗಳನ್ನೂ ಹೇಳ್ತಾರೆ. ರಾಜಕುಮಾರ್ ಹುಟ್ಟಿದ ಮನೆಯಲ್ಲೂ ಕೆಲ ಸಮಯ ಕಳೆಯುತ್ತಾರೆ. ಕಾಡುಗಳ್ಳ ವೀರಪ್ಪನ್ ಘಟನೆಯನ್ನೂ ಇಲ್ಲಿ ಅಪ್ಪು ನೆನಪಿಸಿಕೊಂಡು ಮುಂದೆ ಸಾಗ್ತಾರೆ.


ಬಿ.ಆರ್.ಟಿ ಹುಲಿ ಸಂರಕ್ಷಣಾ ಫಾರೆಸ್ಟ್​ ನಲ್ಲಿ ಅಪ್ಪು-ಅಮೋಘ


ಹೌದು, ನಾಗರಹೊಳೆಯಲ್ಲಿ ಹುಲಿ ಸಂರಕ್ಷಿತ ಫಾರೆಸ್ಟ್ ಕೂಡ ಇದೆ. ಇದರ ಗಾರ್ಡ್ ಗಳ ಜೊತೆಗೆ ಅಪ್ಪು ಕಾಲ ಕಳೆಯುತ್ತಾರೆ. ಇವರೊಟ್ಟಿಗೆ ಕಾಡನ್ನ ಗಸ್ತು ಕೂಡ ಹೊಡೆಯುತ್ತಾರೆ. ರಾತ್ರಿ ವೇಳೆ ಕಾಡಿನಲ್ಲಿ ಏನೆಲ್ಲ ಆಗುತ್ತದೆ ಅನ್ನೋ ವಿಷಯವನ್ನೂ ತಿಳಿದುಕೊಳ್ತಾರೆ.


Puneeth Rajkumar Gandhada Gudi Film Review
ನೇತ್ರಾಣಿ ದ್ವೀಪದಾಳದಲ್ಲಿ ಅಪ್ಪು ಪಯಣ


ನೇತ್ರಾಣಿ ದ್ವೀಪದಾಳದಲ್ಲಿ ಅಪ್ಪು ಪಯಣ


ನೇತ್ರಾಣಿ ದ್ವೀಪ ಕರ್ನಾಟಕದಲ್ಲಿಯೇ ಇದೆ. ಕರಾವಳಿಯ ಬದಿಯಲ್ಲಯೇ ಈ ದ್ವೀಪ ಇರೋದು ವಿಶೇಷ. ಮುರುಡೇಶ್ವರದಿಂದ 10 ಕಿಲೋ ಮೀಟರ್ ದೂರದಲ್ಲಿಯೇ ಇದೆ. ಇದು ಸ್ಕೂಬಾ ಡೈವಿಂಗ್ ಗೆ ಅದ್ಭುತ ಜಾಗವೇ ಆಗಿದೆ. ಇಲ್ಲಿ ಅಪ್ಪು ಮತ್ತು ಅಮೋಘ ವರ್ಷ ಬರ್ತಾರೆ. ಅದ್ಭುತವಾಗಿಯೇ ಸ್ಕೂಬಾ ಡೈವಿಂಗ್ ಕೂಡ ಮಾಡ್ತಾರೆ.


ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಎಂದ ಪವರ್ ಸ್ಟಾರ್


ಪುನೀತ್ ರಾಜಕುಮಾರ್ ಸ್ಕೂಬಾ ಡೈವಿಂಗ್ ಬಳಿಕ ಒಂದು ಬೇಸರವನ್ನೂ ವ್ಯಕ್ತಪಡಿಸುತ್ತಾರೆ. ಸಮುದ್ರದಾಳೊಗಿನ ಪ್ಲಾಸ್ಟಿಕ್ ಬಾಟಲ್​ ಹೊರ ತಂದು ಹೀಗೆ ಮಾಡ್ಬೇಡಿ. ಪ್ಲಾಸ್ಟಿಕ್ ಅನ್ನ ಕಡಿಮೆ ಬಳಸೋಣ ಪರಿಸರ ರಕ್ಷಿಸೋಣ ಅಂತಲೂ ಸಂದೇಶ ಕೊಡ್ತಾರೆ.


ಮಲೆನಾಡಿಗೆ ಕಾಲಿಡೋ ಪವರ್ ಸ್ಟಾರ್ ಪುನೀತ್ ರಾಜಕುಮಾರ್


ಮುಂಗಾರು ಮಳೆಯ ಸಮಯದಲ್ಲಿ ಅಪ್ಪು ಮತ್ತು ಅಮೋಘವರ್ಷ ಮೆಲೆನಾಡಿಗೆ ಕಾಲಿಡುತ್ತಾರೆ. ಅಲ್ಲಿಯ ಸ್ವರ್ಗವನ್ನ ಕಂಡು ಪುಳಕಿತಗೊಳ್ಳುತ್ತಾರೆ. ಮಲೆನಾಡಿನ ಡ್ಯಾನ್ಸಿಂಗ್ ಕಪ್ಪೆ ಕಂಡು ಖುಷಿ ಪಡ್ತಾರೆ.


ಜೋಗ ಜಲಪಾತದ ವೈಭವವನ್ನು ಕಂಡು ಸಂತೋಷ ಪಡ್ತಾರೆ. ಗೌರಿ ಶಂಕರ್ ಅವರೊಟ್ಟಿಗೆ ಕಾಳಿಂಗ ಸರ್ಪ ಹಿಡಿಯೋದನ್ನ ಕೂಡ ನೋಡ್ತಾರೆ. ಇಲ್ಲಿಂದ ಅಪ್ಪು ಪಯಣ ಬಳ್ಳಾರಿಯ ಕಡೆಗೂ ಹೋಗುತ್ತದೆ.


ಕರ್ನಾಟಕದ ಬಳ್ಳಾರಿಯ ಡೆಕ್ಕನ್ ಪ್ರದೇಶ


ವಿಜಯನಗರ-ಬಳ್ಳಾರಿಯ ಕಡೆಗೂ ಅಪ್ಪು ಜರ್ನಿ ಮಾಡಿದ್ದಾರೆ. ಇಲ್ಲಿ ಬಯಲು ಪ್ರದೇಶದ ಕಾಡು ಗಲ್ಲಿನ ಗುಡ್ಡದಲ್ಲೂ ಪಯಣಿಸುತ್ತಾರೆ. ಬೆಟ್ಟದ ಮೇಲಿನ ಕರಡಿಯನ್ನ ಕಂಡು ರೋಮಾಂಚನಗೊಳ್ಳುತ್ತಾರೆ. ಇಲ್ಲಿಂದ ತುಂಗ ಭದ್ರಾ ನದಿ ದಡದಲ್ಲಿ ಕುಳಿತು ಉತ್ತರ ಕರ್ನಾಟಕದ ಜನರ ಮೇಲಿನ ತಮ್ಮ ಪ್ರೀತಿಯನ್ನ ಹೇಳಿಕೊಳ್ತಾರೆ.


Puneeth Rajkumar Gandhada Gudi Film Review
ಮಲೆನಾಡಿಗೆ ಕಾಲಿಡೋ ಪವರ್ ಸ್ಟಾರ್ ಪುನೀತ್


ಕುರುಬರ ಜೊತೆಗೆ ಕುಳಿತು ಅವರ ತೋಳದ ಕಥೆಗಳನ್ನ ಕೇಳ್ತಾರೆ. ರೊಟ್ಟಿ ತಿಂದು ಸಂತೋಷ ಪಡ್ತಾರೆ. ಇಲ್ಲಿಂದ ದಾಂಡೇಲಿಯ ಕಾಳಿ ನದಿಯತ್ತ ಪಯಣ ಬೆಳೆಸುತ್ತಾರೆ. ಕಾಳಿನದಿಯಲ್ಲಿ ಬೋಟಿಂಗ್ ಮಾಡಿ ದಡದಲ್ಲಿ ಕ್ಯಾಂಪ್ ಕೂಡ ಮಾಡ್ತಾರೆ.


ಕಾಳಿ ನದಿಯನ್ನ ನಂಬಿಕೊಂಡು ಜೀವಿಸುತ್ತಿರೋ ಬುಡುಕಟ್ಟು ಜನಾಂಗದ ಆ ಪುಟ್ಟ ಊರಿಗೂ ಕಾಲಿಡುತ್ತಾರೆ. 9 ಮನೆಗಳಿರೋ 50 ಜನರ ಈ ಊರಲ್ಲಿ ಅಪ್ಪು ಯಾರು ಅನ್ನೋದೇ ಗೊತ್ತಿಲ್ಲ. ಆದರೂ ಅವರೊಟ್ಟಿಗೆ ಇದ್ದು ಸಮಯ ಕಳೆದು ಊಟ ಮಾಡಿ ಕಟ್ಟ ಕಡೆಯದಾಗಿ ಕಾಳಿ ಹುಟ್ಟಿದ ಆ ಉಗಮ ಸ್ಥಾನಕ್ಕೂ ಭೇಟಿಕೊಡ್ತಾರೆ.


ಇದನ್ನೂ ಓದಿ: Gandhadagudi: ಗಂಧದಗುಡಿ ರಿಲೀಸ್​ ಸಂಭ್ರಮ, ಥಿಯೇಟರ್​ಗೆ ಆನೆ ಕರೆತಂದ ಫ್ಯಾನ್ಸ್


ಹೀಗೆ ಅಪ್ಪು ಇಡೀ ಕನ್ನಡದ ನಾಡಿನ ಅಪರೂಪದ ಸ್ಥಳಗಳನ್ನ ಮೈಮನದಲ್ಲಿ ತುಂಬಿಕೊಂಡು ಹೋಗಿದ್ದಾರೆ. ಗಂಧದ ಗುಡಿ ಮೂಲಕ ಅದನ್ನ ಎಲ್ಲರಿಗೂ ಕೊಟ್ಟು ಹೋಗಿದ್ದಾರೆ. ಅಪ್ಪು ವೀ ಲವ್ ಯು ಅಂತಲೇ ಸಿನಿಮಾ ನೋಡಿದ ಜನರ ಹೊರಗಡೆ ಹೊರಟು ಹೋಗುತ್ತಾರೆ.

First published: