ಸದ್ಯ ಎಲ್ಲೆಲ್ಲೂ ಪವರ್ ಸ್ಟಾರ್ (Power Star) ಪುನೀತ್ ರಾಜ್ ಕುಮಾರ್ (Puneeth Rajkumar) ಅಭಿನಯದ ಜೇಮ್ಸ್ (James) ಚಿತ್ರದ್ದೇ ಮಾತು. ಅಪ್ಪು (Appu) ಅಭಿನಯದ ಕೊನೆಯ ಸಿನಿಮಾ (Last Movie) ಆಗಿರೋದ್ರಿಂದ ಈ ಸಿನಿಮಾ (Cinema) ಮೇಲೆ ಪುನೀತ್ ಅಭಿಮಾನಿಗಳಿಗಷ್ಟೇ (Fans) ಅಲ್ಲ, ಎಲ್ಲಾ ಕನ್ನಡಿಗರಿಗೂ ಪ್ರೀತಿ, ಅಭಿಮಾನ ಮತ್ತು ಸಾಕಷ್ಟು ನಿರೀಕ್ಷೆಗಳು ಇವೆ. ಇದೇ ಮಾರ್ಚ್ 17ರಿಂದ ಜೇಮ್ಸ್ ಸಿನಿಮಾ ಜಾತ್ರೆ(James Festival) ಶುರುವಾಗಲಿದೆ. ಸಿನಿಮಾದಲ್ಲಿ ಪುನೀತ್ ಪಾತ್ರದ ಹೆಸರು ಸಂತೋಷ್ ಕುಮಾರ್. ಇದೇ ಹೆಸರಿನ ಟ್ಯಾಗ್ ಹಾಕಿಕೊಂಡು, ಪುನೀತ್ ರಾಜ್ಕುಮಾರ್ ಸೈನಿಕ(Solider)ನ ಡ್ರೆಸ್ನಲ್ಲಿ ಮಿಂಚಿದ್ದಾರೆ. ನಾಳೆ ಈ ಸಿನಿಮಾವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಒಂದು ತಿಂಗಳಿನಿಂದ ಹಗಲು-ಇರುಳು ನೋಡದೇ ಅಪ್ಪು(Appu) ಅಭಿಮಾನಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಸಮಯದಲ್ಲಿ ಸರ್ಕಾರದ ಒಂದು ನಡೆಗೆ ಅಪ್ಪು ಅಭಿಮಾನಿಗಳಷ್ಟೇ ಅಲ್ಲದೇ ಕನ್ನಡ ಸಿನಿರಸಿಕರು ಗರಂ ಆಗಿದ್ದಾರೆ.
ಸಂಭ್ರಮಾಚರಣೆ ಹತ್ತಿಕ್ಕುವ ಕೆಲಸ ಮಾಡ್ತಾ ಸರ್ಕಾರ?
ನಾಳೆ ಮಾರ್ಚ್ 17 ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ. ಹೀಗಾಗಿ ಈ ದಿನವನ್ನು ಮತ್ತಷ್ಟು ವಿಶೇಷವಾಗಿಸಲು ‘ಜೇಮ್ಸ್’ ಚಿತ್ರತಂಡ ನಾಳೆ ಸಿನಿಮಾ ಮಾಡಲು ಮೂರು ತಿಂಗಳಿನಿಂದ ಸಿದ್ಧತೆ ಮಾಡಿಕೊಂಡಿದೆ. ಇದೀಗ ಮಾರ್ಚ್ 17ಕ್ಕೆ ಧಿಡೀರ್ ಕರ್ನಾಟಕ ಬಂದ್ಗೆ ಹಲವು ಸಂಘಟನೆಗಳು ಕರೆ ನೀಡಿವೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬೆಂಗಳೂರು ಸೇರಿ ಸೂಕ್ಷ್ಮ ಜಿಲ್ಲೆಗಳಲ್ಲಿ 144 ಸೆಕ್ಷನ್ ಜಾರಿ ಮಾಡಿದೆ. ಬೆಂಗಳೂರಿನಲ್ಲಿ 144 ಸೆಕ್ಷನ್ ಕಾರಣ ಕೊಟ್ಟು ಅಪ್ಪು ಅಭಿಮಾನಿಗಳ ಸಂಭ್ರಮಕ್ಕೆ ಬ್ರೇಕ್ ಹಾಕಲು ಮುಂದಾಗಿದ್ಯಾ ಎಂಬ ಪ್ರಶ್ನೆ ಮೂಡಿದೆ.
ಇದನ್ನೂ ಓದಿ: `ಜೇಮ್ಸ್’ ಜೊತೆ ಥಿಯೇಟರ್ಗೆ ಬರ್ತಿದ್ದಾರೆ `ಬೈರಾಗಿ’.. ಅಪ್ಪು ಜೊತೆ ಶಿವಣ್ಣ ಕೂಡ ಎಂಟ್ರಿ!
ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆಗೂ ಸಿಕ್ಕಿಲ್ಲ ಅನುಮತಿ!
ಪುನೀತ್ ರಾಜ್ಕುಮಾರ್ ಅವರ ಕೊನೆಯ ಸಿನಿಮಾ ‘ಜೇಮ್ಸ್’ ನಾಳೆ ತೆರೆಗೆ ಬರ್ತಿದೆ. ಅಪ್ಪು ಅಭಿಮಾನಿಗಳು ಅಪ್ಪು ಕಟೌಟ್ಗೆ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ಈಗ ಪುನೀತ್ ಕಟೌಟ್ಗಳಿಗೆ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆಗೂ ಅನುಮತಿ ಸಿಕ್ಕಿಲ್ಲ ಎಂಬ ಮಾಹಿತಿಯನ್ನು ಅಪ್ಪು ಅಭಿಮಾನಿಗಳೇ ನೀಡಿದ್ದಾರೆ.
ಇದನ್ನೂ ಓದಿ : ಅಪ್ಪು ಹುಟ್ಟುಹಬ್ಬಕ್ಕೂ ಮುನ್ನ ಡಬಲ್ ಗಿಫ್ಟ್! `ಪವರಿಸಮ್’ - `ಮಹಾನುಭಾವ’ ಸಾಂಗ್ ರಿಲೀಸ್
ಆರ್ಆರ್ಆರ್ಗೆ ಸಿಕ್ಕ ಅನುಮತಿ ಜೇಮ್ಸ್ಗೆ ಯಾಕಿಲ್ಲ!
ಚಿಕ್ಕಬಳ್ಳಾಪುರದಲ್ಲಿ ಮೊದಲು ಮಾ.15 ರಿಂದ 20 ರ ವರೆಗೂ 144 ಘೋಷಣೆ ಮಾಡಲಾಗಿದೆ. 144, ಸೆಕ್ಷನ್ ಘೋಷಸಿದ ಕೆಲವು ಘಂಟೆಗಳಲ್ಲಿ ಮತ್ತೆ ಹೊಸ ನಿಯಮ ಜಾರಿ ಮಾಡಲಾಗಿದೆ. ಮಾ. 20 ರವರೆಗೂ ಇದ್ದ 144ಸೆಕ್ಷನ್ ಅನ್ನು ಮಾ.17 ರವರೆಗೆ ಜಿಲ್ಲಾಡಳಿತ ಕಡಿತ ಮಾಡಿದೆ. ಪರಭಾಷ ಚಿತ್ರದ ಸೆಲೆಬ್ರೇಶನ್ಗೆ ಸಿಕ್ಕ ಅನುಮತಿ ಕನ್ನಡದ ಚಿತ್ರಕ್ಕೆ ಯಾಕೆ ಸಿಕ್ಕಿಲ್ಲ ಅಂತ ಅಪ್ಪು ಅಭಿಮಾನಿಗಳು ಸರ್ಕಾರದ ನಡೆ ವಿರುದ್ಧ ಸಖತ್ ಗರಂ ಆಗಿದ್ದಾರೆ.
ಶಿವಣ್ಣನ ಮೊರೆ ಹೋಗ್ತಾರಾ ಅಪ್ಪು ಫ್ಯಾನ್ಸ್?
ಒಂದು ವೇಳೆ ಹೆಲಿಕಾಪ್ಟರ್ನಲ್ಲಿ ಪುಷ್ಪಾರ್ಚನೆಗೆ ಅನುಮತಿ ಸಿಕ್ಕದಿದ್ದರೆ, ಅಪ್ಪು ಅಭಿಮಾನಿಗಳು ಶಿವಣ್ಣನ ಮೊರೆ ಹೋಗುವ ಸಾಧ್ಯತೆ ಹೆಚ್ಚಿದೆ. ನಟ ಶಿವರಾಜ್ಕುಮಾರ್ ಅವರ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿಸುವ ಸಾಧ್ಯತೆ ಹೆಚ್ಚಿದೆ. ಶಿವಣ್ಣನ ಮಾತಿಗೆ ಸಿಎಂ ಏನು ಹೇಳುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ