• Home
  • »
  • News
  • »
  • entertainment
  • »
  • Gandhada Gudi: ಅಪ್ಪು ಸಮಾಧಿ ಬಳಿ ಫ್ಯಾನ್ಸ್, ಪುನೀತ್ ಕಟೌಟ್​ಗೆ ಪೂಜೆ ಸಲ್ಲಿಸಿದ ಮಗು

Gandhada Gudi: ಅಪ್ಪು ಸಮಾಧಿ ಬಳಿ ಫ್ಯಾನ್ಸ್, ಪುನೀತ್ ಕಟೌಟ್​ಗೆ ಪೂಜೆ ಸಲ್ಲಿಸಿದ ಮಗು

ಪುನೀತ್ ರಾಜ್‌ಕುಮಾರ್

ಪುನೀತ್ ರಾಜ್‌ಕುಮಾರ್

ಗಂಧದ ಗುಡಿ ಸಿನಿಮಾ ರಿಲೀಸ್ ಡೇಟ್ ಹತ್ತಿರ ಬಂದಂತೆ ಅಪ್ಪು ಸಮಾಧಿ ಬಳಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಿದ್ದಾರೆ.

  • Share this:

ಗಂಧದ ಗುಡಿ ಸಿನಿಮಾ ರಿಲೀಸ್​​ಗೆ ಕೌಂಟ್​ಡೌನ್ ಸ್ಟಾರ್ಟ್ ಆಗಿದ್ದು ಪವರ್ ಸ್ಟಾರ್  (Powerstar) ಪುನೀತ್ ರಾಜ್ ಕುಮಾರ್ (Puneeth Rajkumar) ಅಭಿಮಾನಿಗಳು ಫುಲ್ ಜೋಶ್​ನಲ್ಲಿದ್ದಾರೆ. ಸಿನಿಮಾ ಬಿಡುಗಡೆ ದಿನ ಸಮೀಪಿಸುತ್ತಿರುವಾಗ ಅವರ ಸಮಾಧಿಗೆ ಭೇಟಿ ಕೊಡುತ್ತಿರುವ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಅಪ್ಪು ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಕಟೌಟ್ ಗೆ ಪೂಜೆ ಸಲ್ಲಿಸಿದ್ದಾರೆ. ಕಂಠೀರವ ಸ್ಟೂಡಿಯೋದಲ್ಲಿ (Kanthirava Studio) ಅಪ್ಪು ಸಮಾಧಿ ಬಳಿ ತಲೆ ಎತ್ತಿರುವ ಅಪ್ಪು ಕಟೌಟ್ ಗಳು ಗಮನ ಸೆಳೆದಿವೆ. ಕುಂಬಳಕಾಯಿ, ಈಡುಗಾಯಿ ಒಡೆದು ಅಪ್ಪು ಅಭಿಮಾನಿಗಳು ನಟನಿಗೆ ಜೈಕಾರ ಹಾಕಿದ್ದಾರೆ. ಅಭಿಮಾನಿಗಳು ಯಾವುದೇ ವಿಘ್ನವಾಗದಂತೆ ಗಂಧದಗುಡಿ (Gandhada Gudi.) ರಿಲೀಸ್ ಅಗಲಿ ಎಂದು ಪರಮಾತ್ಮನಿಗೆ ಭಕ್ತಿಯಿಂದ ಪೂಜೆ (Pooja) ಸಲ್ಲಿಸಿದ್ದಾರೆ.


ಪುಟ್ಟ ಮಗುವೊಂದು ಅಪ್ಪು ಕಟೌಟ್ ಗೆ ಪೂಜೆ ಸಲ್ಲಿಸಿದ್ದು ಈ ಘಟನೆ ಗಮನ ಸೆಳೆದಿದೆ.  ಇಂದೂ ಕೂಡಾ ಕೂಡ ಅಪ್ಪು ಸಮಾಧಿಗೆ ಅಭಿಮಾನಿಗಳ ದಂಡು ಹರಿದುಬಂದಿದೆ. ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಅಭಿಮಾನಿಗಳು ಅಪ್ಪು ಸಮಾಧಿ ದರ್ಶನ ಮಾಡಿದ್ದಾರೆ.


ಗಂಧದ ಗುಡಿಗೆ ಕೌಂಟ್ ಡೌನ್ ಶುರು


ಪವರ್ ಸ್ಟಾರ್ ಕನಸಿನ ಗಂಧದಗುಡಿ ರಿಲೀಸ್ ಕೌಂಟ್ ಡೌನ್ ಶುರುವಾಗಿದ್ದು ಅಕ್ಟೋಬರ್ 28 ಕ್ಕೆ ವಿಶ್ವದಾದ್ಯಂತ ಗಂಧದಗುಡಿ ರಿಲೀಸ್ ಆಗಲಿದೆ. ಅ.28 ರಿಲೀಸ್ ಆಗುವ ಎಲ್ಲಾ ಚಿತ್ರಮಂದಿರಗಳ ಮುಂಗಡ ಟಿಕೆಟ್ ಬುಕಿಂಗ್ ಒಪನ್ ಆಗಿದ್ದು ಇಂದಿನಿಂದಲೇ ಆನ್ ಲೈನ್ ಬುಕಿಂಗ್ ಒಪನ್ ಆಗಿದೆ. 40 ಪೇಯ್ಡ್ ಪ್ರೀಮಿಯರ್ ಶೋ ಗಳ ಟಿಕೆಟ್ 24 ಗಂಟೆಗಳಲ್ಲಿ ಸೋಲ್ಡ್ ಔಟ್ ಆಗಿದ್ದು ಸಿನಿಮಾ ಹವಾ ಜೋರಾಗಿದೆ.


ಇದನ್ನೂ ಓದಿ: Puneeth Rajkumar: ಯುವರತ್ನನಿಗೆ ಕರ್ನಾಟಕ ರತ್ನ ಪ್ರದಾನ ಮಾಡ್ತಾರಾ ರಜನಿಕಾಂತ್? ರಾಜ್ಯೋತ್ಸವಕ್ಕೆ ಬರುತ್ತಾರಾ ತಲೈವಾ?


ಅದ್ಧೂರಿಯಾಗಿ ನಡೆದ ಪ್ರಿ-ರಿಲೀಸ್ ಇವೆಂಟ್


ಇತ್ತೀಚೆಗೆ ಗಂಧದ ಗುಡಿ ಪ್ರಿ ರಿಲೀಸ್ ಇವೆಂಟ್ ಅದ್ಧೂರಿಯಾಗಿ ನಡೆದಿತ್ತು. ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ತಮಿಳು ನಟರಾದ ಸಿದ್ಧಾರ್ಥ್, ಸೂರ್ಯ, ತೆಲುಗು ನಟ ನಂದಮೂರಿ ಬಾಲಕೃಷ್ಣ, ರಾಣಾ ದಗ್ಗುಬಾಟಿ ಸೇರಿ ಸೌತ್​ನ ಟಾಪ್ ಸ್ಟಾರ್ ನಟರು ಉಪಸ್ಥಿತರಾಗಿದ್ದರು. ಕಮಲ್ ಹಾಸನ್ ಹಾಗೂ ಅಮಿತಾಭ್ ಬಚ್ಚನ್ ಅವರು ವಿಡಿಯೋ ಕಳುಹಿಸಿ ಸಿನಿಮಾಗೆ ಶುಭ ಕೋರಿದ್ದರು.


ರಾಕಿಂಗ್ ಸ್ಟಾರ್ ಯಶ್ ಶುಭಾಶಯ


ಎಲ್ಲರೂ ಹೋಗಿ ಸಿನಿಮಾ ನೋಡಿ ಎಂದು ಕೇಳಿಕೊಂಡ ರಾಕಿಂಗ್ ಸ್ಟಾರ್​ ಯಶ್ ಗಂಧದ ಗುಡಿ ಸಿನಿಮಾ ಎಲ್ಲಾ ದಾಖಲೆಗಳನ್ನು ಬ್ರೇಕ್ ಮಾಡಬೇಕು ಎಂದು ಹೇಳಿದರು. ಕೆಜಿಎಫ್ ಕೂಡಾ ಉಳಿಯಬಾರದು. ಎಲ್ಲ ದಾಖಲೆಗಳನ್ನು ಮುರಿದು ಗಂಧದ ಗುಡಿ ಸಕ್ಸಸ್ ಆಗಬೇಕು ಎಂದು ರಾಕಿಂಗ್ ಸ್ಟಾರ್ ಶುಭಾಶಯ ತಿಳಿಸಿದ್ದರು.


ಇದನ್ನೂ ಓದಿ: Kantara-Isha Foundation: ಇಶಾ ಫೌಂಡೇಷನ್​ನಲ್ಲಿ ಕಾಂತಾರ! ಒಟ್ಟಿಗೇ ಸಿನಿಮಾ ನೋಡಿದ್ರು 3,000 ಜನ


ರಮ್ಯಾ ಡ್ಯಾನ್ಸ್


ಗಂಧದ ಗುಡಿ ಪ್ರಿ ರಿಲೀಸ್ ಇವೆಂಟ್​ನಲ್ಲಿ ರಮ್ಯಾ ಡ್ಯಾನ್ಸ್ ಮಾಡಿ ಸಿನಿಮಾಗೆ ಶುಭಾಶಯ ತಿಳಿಸಿದ್ದರು. ಈ ಸಂದರ್ಭ ನಟಿ ತಮಗೆ ಅಪ್ಪು ಡ್ಯಾನ್ಸ್ ಕಲಿಯಲು ಸಹಾಯ ಮಾಡುತ್ತಿದ್ದನ್ನು ನೆನಪಿಸಿಕೊಂಡಿದ್ದಾರೆ. ನನಗೆ ಡ್ಯಾನ್ಸ್ ಮಾಡೋಕೆ ಬರಲ್ಲ. ಅವರೇ ನನ್ನ ಸ್ಟೆಪ್ಸ್ ತಿದ್ದುತ್ತಿದ್ದರು. ನನಗೆ ಮಾಡೋಕೆ ತುಂಬಾ ಕಷ್ಟವಾದ ಸ್ಟೆಪ್ ಬದಲಾಯಿಸುವಂತೆ ಡ್ಯಾನ್ಸ್ ಮಾಸ್ಟರ್​ಗೆ ಕೇಳುತ್ತಿದ್ದರು ಎಂದು ನಟಿ ರಮ್ಯಾ ಗಂಧದ ಗುಡಿ ಪ್ರಿ ರಿಲೀಸ್  ವೇದಿಕೆಯಲ್ಲಿ ನೆನಪಿಸಿಕೊಂಡಿದ್ದಾರೆ.

Published by:Divya D
First published: