Puneeth Rajkumar: ಅಭಿಮಾನಿಗಳಿಂದ `ರಾಜರತ್ನ’ ಮೂರ್ತಿ ಪ್ರತಿಷ್ಠಾಪನೆ, ಪುನೀತ್​ ತತ್ವ-ಆದರ್ಶ ಪಾಲನೆಗಾಗಿ ಪತ್ರಿಮೆ ಅನಾವರಣ!

ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಮೊದಲನೇ ಅಪ್ಪು ಮೂರ್ತಿಯನ್ನು ಯಾದಗಿರಿ(Yadagiri)ಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳೂರು ಎಂ. ಗ್ರಾಮದ ಅಪ್ಪು ಅಭಿಮಾನಿ ಸ್ನೇಹಿತರು ಕೂಡಿ ಗ್ರಾಮದಲ್ಲಿ ಪುನೀತ್ ಅವರ 6 ಅಡಿ ಉದ್ದವಿರುವ ಅಪ್ಪು ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ.

ಪುನೀತ್​ ರಾಜ್​ಕುಮಾರ್​ ಪುತ್ಥಳಿ

ಪುನೀತ್​ ರಾಜ್​ಕುಮಾರ್​ ಪುತ್ಥಳಿ

  • Share this:
ಯಾದಗಿರಿ: ಅಪ್ಪು(Appu) ಅಜರಾಮರ.. ಅಪ್ಪು ನಿಧನರಾಗಿ ಮೂರು ತಿಂಗಳು ಕಳೆಯುತ್ತಾ ಬಂದರು ಅಪ್ಪು ಅಭಿಮಾನಿಗಳು ಮಾತ್ರ ನೆಚ್ಚಿನ ನಟ ಅಪ್ಪು ಮೇಲಿನ ಅಭಿಮಾನ ಮರೆಯುತ್ತಿಲ್ಲ. ಅಪ್ಪು ಇಲ್ಲದಿದ್ದರು ನಿತ್ಯವು ಪುನೀತ್(Puneeth)​ ಸ್ಮರಣೆ ಮಾಡುತ್ತಿದ್ದಾರೆ. ಹೀಗಾಗಿ ,ಅಪ್ಪು ಮೇಲಿರುವ ಅಭಿಮಾನದಿಂದ ಪುನೀತ್ ರಾಜಕುಮಾರ ಅವರ ಅಭಿಮಾನಿಗಳು ಪುತ್ಥಳಿ(Statue) ಪ್ರತಿಷ್ಠಾಪನೆ ಮಾಡಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಮೊದಲನೇ ಅಪ್ಪು ಮೂರ್ತಿಯನ್ನು ಯಾದಗಿರಿ(Yadagiri)ಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳೂರು ಎಂ. ಗ್ರಾಮದ ಅಪ್ಪು ಅಭಿಮಾನಿ ಸ್ನೇಹಿತರು ಕೂಡಿ ಗ್ರಾಮದಲ್ಲಿ ಪುನೀತ್ ಅವರ 6 ಅಡಿ ಉದ್ದವಿರುವ ಅಪ್ಪು ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಅಪ್ಪು ಅಭಿಮಾನಿಗಳಾದ ಹಣಮಂತ ಕೊರಿ, ಅಂಜನೇಯ, ಮಲ್ಲು, ಶಿವಶಂಕರ, ಮಹೇಶ ಹಾಗೂ ಮಹಾದೇಶ ಅವರು ಕೂಡಿಕೊಂಡು ವ್ಯಯಕ್ತಿಕವಾಗಿ ತಾವೆ ಹಣ ಸಂಗ್ರಹಿಸಿ ಅಪ್ಪು ಅವರ ಮೂರ್ತಿ ಪ್ರತಿಷ್ಠಾಪನೆ ಮಾಡಿ ಅಪ್ಪು ಅವರ ಮೇಲಿನ ಅಭಿಮಾನ ಮೆರೆದಿದ್ದಾರೆ.

ಅಪ್ಪು ನಡೆದ ದಾರಿಯಲ್ಲಿ ಹೋಗುತ್ತಿದ್ದಾರೆ ಅಭಿಮಾನಿಗಳು!

ಈಗಾಗಲೇ ಅಪ್ಪು ನಿಧನರಾದ ನಂತರ ಅಭಿಮಾನಿಗಳು ನೇತ್ರದಾನ ದೇಹ ದಾನ ಹೀಗೆ ಹತ್ತು ಹಲವಾರು ರೀತಿ ನೆಚ್ಚಿನ ನಟ ಪುನೀತ್ ರಾಜ್​ಕುಮಾರ ಪ್ರೇರಣೆಯಿಂದ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಅದೆ ರೀತಿ ಯಾದಗಿರಿ ‌ಜಿಲ್ಲೆಯಲ್ಲಿ ಅಪ್ಪು ಅಭಿಮಾನಿಗಳು ಮೂರ್ತಿ ಅನಾವರಣ ಮಾಡಿ ಮೂರ್ತಿ ನೋಡಿಯಾದರು ಜನರು ಅವರ ತತ್ವ ಆದರ್ಶಗಳನ್ನು ಪಾಲಿಸಿಕೊಂಡು ಹೋಗಲಿ ಎಂದು ಅಪ್ಪು ಅಭಿಮಾನಿಗಳು ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಅಪ್ಪು ಅವರು ಈಗ ನಮ್ಮ ಜೊತೆ ಇರದಿದ್ದರು ಅವರ ಮೂರ್ತಿಯನ್ನು ನೋಡಿಯಾದರು ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಸಮಾಜ ಸೇವೆ ಮಾಡಬೇಕೆಂಬ ಉದ್ದೇಶದಿಂದ ಮೂರ್ತಿ ಅನಾವರಣ ಮಾಡಿದ್ದಾರೆ.

ಇದನ್ನು ಓದಿ: `ಶಕ್ತಿಧಾಮ‘ದ ಮಕ್ಕಳಿಗಾಗಿ ಡ್ರೈವರ್​ ಆದ ಶಿವಣ್ಣ, ಯಾರೇ ಬರಲಿ-ಯಾರೇ ಇರಲಿ ನಿಮ್ಮ ರೇಂಜಿಗೆ ಯಾರಿಲ್ಲ!

ಅಪ್ಪು ಅಭಿಮಾನಿಯ ಮನದಾಳದ ಮಾತು!

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಅಪ್ಪು ಅಭಿಮಾನಿ ಮಹಾದೇಶ ಮಾತನಾಡಿ, ಪುನೀತ್ ರಾಜ್​​ಕುಮಾರ ಅವರು ನಿಸ್ವಾರ್ಥ ಸೇವೆ ಮಾಡಿದ್ದಾರೆ. ಅವರ ಸಮಾಜ ಸೇವೆಯು ನಮ್ಮಲ್ಲರಿಗು ಪ್ರೇರಣೆಯಾಗಿದ್ದು, ಊರಿನ ಅಪ್ಪು ಅಭಿಮಾನಿ ಸ್ನೇಹಿತರು ನಾವು ಕೂಡಿಕೊಂಡು ಚರ್ಚೆ ಮಾಡಿ ಅಪ್ಪು ನೆನಪಿಗಾಗಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದೆವೆ. ಅಪ್ಪು ಅವರ ಮೂರ್ತಿಯನ್ನು ನೋಡಿಯಾದರು ಅವರ ಸ್ಮರಣೆ ಮಾಡಿಕೊಂಡು  ಜನರು ಅವರ ತತ್ವ ಆದರ್ಶಗಳನ್ನು ಪಾಲಿಸಲು ಪ್ರೇರಣೆಯಾಗಲು ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದೆವೆಂದರು.

ಕೊಳ್ಳೂರು ಗ್ರಾಮದಲ್ಲಿ ಹಬ್ಬದ ವಾತಾವರಣ!

ಅಪ್ಪು ಮೂರ್ತಿ ಪ್ರತಿಷ್ಠಾಪನೆಯಿಂದ ಕೊಳ್ಳೂರು ಎಂ ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ.ಅಭಿಮಾನಿಗಳು ಅಪ್ಪು ಅವರಿಗೆ ಜೈಕಾರ ಹಾಕಿದರು. ಅಪ್ಪು ಮೂರ್ತಿಯನ್ನು ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಹಾಗೂ ಗ್ರಾಮದ ಮುಖಂಡರು ಹಾಗೂ ಅಭಿಮಾನಿಗಳು ಸೇರಿ ಅಪ್ಪು  ಅವರ ಮೂರ್ತಿ  ಅನಾವರಣ ಮಾಡಿದರು.

ಇದನ್ನು ಓದಿ: `ಶಕ್ತಿಧಾಮ’ದ ಮಕ್ಕಳೊಂದಿಗೆ ಗಣರಾಜ್ಯೋತ್ಸವ ಆಚರಿಸಿದ ಶಿವಣ್ಣ.. ಸರಳತೆಯ ಸಾಮ್ರಾಟ್​ ನೀವು!

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಶಾಸಕ ವೆಂಕಟರೆಡ್ಡಿ ಮುದ್ನಾಳ ಅನೇಕ ರೀತಿಯಲ್ಲಿ ಅವರು ಸೇವೆ ಮಾಡಿ ರಾಜ್ಯದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಯಾದಗಿರಿ ಜಿಲ್ಲೆಯ ಕೊಳ್ಳೂರು ಎಂ ಗ್ರಾಮದಲ್ಲಿ ಅಪ್ಪು ಅಭಿಮಾನಿಗಳಿಂದ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು ಹೆಮ್ಮೆಯ ಸಂಗತಿಯಾಗಿದೆ. ಸಮಾಜದಲ್ಲಿ ಪ್ರತಿಯೊಬ್ಬರು ನಾವು ಅಪ್ಪು ಅವರ ತತ್ವ ಆದರ್ಶಗಳನ್ನು ಪಾಲಿಸಿಕೊಂಡು ಹೋಗಬೇಕಿದೆ ಎಂದರು. ನೆಚ್ಚಿನ ನಟ ಪುನೀತ್ ಅವರು ಈಗ ನಮ್ಮೊಂದಿಗೆ ಇಲ್ಲ ಆದರೂ, ಅಪ್ಪು ಅವರ ತತ್ವ ಆದರ್ಶಗಳು ಪಾಲಿಸುವದು ಅವಶ್ಯವಿದೆ.ಕೊಳ್ಳೂರು ಎಂ ಗ್ರಾಮದಲ್ಲಿ ಪುನೀತ್ ಅಭಿಮಾನಿಗಳು ಮೂರ್ತಿ ಪ್ರತಿಷ್ಠಾಪನೆ ಮಾಡಿ ಅಪ್ಪು ಅವರ ಮೇಲಿನ ಪ್ರೇಮ ಮೆರೆದಿದ್ದು ಶ್ಲಾಘನೀಯ ಕಾರ್ಯವಾಗಿದೆ.
Published by:Vasudeva M
First published: