ಅಪ್ಪು ಅಭಿಮಾನಿಗಳಲ್ಲಿ 'ನಟಸಾರ್ವಭೌಮ'ನ ಫೀವರ್​: ಎರಡು ಚಿತ್ರಮಂದಿರಗಳಲ್ಲಿ ಸತತ 24 ಗಂಟೆಗಳ ಶೋ..!

ಯಾವುದೇ ಸ್ಟಾರ್​ಗಳ ಸಿನಿಮಾ ತೆರೆಗೆ ಸಿದ್ದವಾದರೆ ಸಾಕು, ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡುತ್ತದೆ. ಈಗ ಅಪ್ಪು ಅಭಿನಯದ 'ನಟಸಾರ್ವಭೌಮ' ಚಿತ್ರ ಇದೇ 7ಕ್ಕೆ ರಿಲೀಸ್​ ಆಗಲಿದ್ದು, ಪುನೀತ್​ ಅಭಿಮಾನಿಗಳಲ್ಲಿ 'ನಟಸಾರ್ವಭೌಮ'ನ ಫೀವರ್​ ಆರಂಭವಾಗಿದೆ.

Anitha E | news18
Updated:February 4, 2019, 1:59 PM IST
ಅಪ್ಪು ಅಭಿಮಾನಿಗಳಲ್ಲಿ 'ನಟಸಾರ್ವಭೌಮ'ನ ಫೀವರ್​: ಎರಡು ಚಿತ್ರಮಂದಿರಗಳಲ್ಲಿ ಸತತ 24 ಗಂಟೆಗಳ ಶೋ..!
'ನಟಸಾರ್ವಭೌಮ' ಸಿನಿಮಾದಲ್ಲಿ ಪುನೀತ್​ ಹಾಗೂ ರಚಿತಾ ರಾಮ್​
Anitha E | news18
Updated: February 4, 2019, 1:59 PM IST
- ಅನಿತಾ ಈ,

ದೊಡ್ಮನೆ ಹುಡುಗ ಪುನೀತ್‍ರಾಜ್‍ಕುಮಾರ್ ಅಭಿನಯದ 'ನಟಸಾರ್ವಭೌಮ' ಸಿನಿಮಾ ತೆರೆಗಪ್ಪಳಿಸಲು ಕೇವಲ ಮೂರು ದಿನಗಳಷ್ಟೇ ಬಾಕಿ ಇದೆ. ಸಿನಿಮಾ ತೆರೆಗೆ ಒಂದು ವಾರ ಇರುವಾಗಲೇ ಪುನೀತ್ ಅಭಿಮಾನಿಗಳಲ್ಲಿ 'ನಟಸಾರ್ವಭೌಮ' ಜ್ವರ ಶುರುವಾಗಿದ್ದು, ನೆಚ್ಚಿನ ನಟನ 25ನೇ ಸಿನಿಮಾದ ಭರ್ಜರಿ ಸ್ವಾಗತಕ್ಕೆ ಸಜ್ಜುಗೊಂಡಿದ್ದಾರೆ.

ಇದನ್ನೂ ಓದಿ: PHOTOS: ಖ್ಯಾತ ಛಾಯಾಗ್ರಾಹಕ ಡಬೂ ರತ್ನಾನಿರ ಸೆಲೆಬ್ರಿಟಿ ಕ್ಯಾಲೆಂಡರ್​ನ 20ನೇ ಸಂಚಿಕೆಯ ಚಿತ್ರಗಳು..!

ಹೌದು, ಪವರ್​ಸ್ಟಾರ್​ ಪುನೀತ್ ರಾಜ್‍ಕುಮಾರ್ ಸಿನಿಮಾ ತೆರೆಗೆ ಬರುತ್ತೆ ಅಂದರೆ ಸಾಕು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿರುತ್ತದೆ. ಅದು 'ನಟಸಾರ್ವಭೌಮನ' ವಿಷಯದಲ್ಲಿಯೂ ಹಾಗೇ ಇದೆ. 'ನಟಸಾರ್ವಭೌಮ' ಇದೇ ತಿಂಗಳು 7ರಂದು ತೆರೆಗಪ್ಪಳಿಸಲಿದ್ದು, ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ.ಕಳೆದ ಒಂದು ವಾರದಿಂದಲೇ 'ನಟಸಾರ್ವಭೌಮನ' ಸ್ವಾಗತಕ್ಕೆ ಚಿತ್ರಮಂದಿರಗಳು ಸಿದ್ದಗೊಂಡಿವೆ. ಅಪ್ಪು ಅಭಿಮಾನಿಗಳು ಉತ್ಸಾಹದಿಂದ ಚಿತ್ರಮಂದಿರಗಳನ್ನ ಅಲಂಕರಿಸುತ್ತಿದ್ದಾರೆ. ಕಟೌಟ್‍ಗಳು, ಬ್ಯಾನರ್​ಗಳು ಥಿಯೇಟರ್​ಗಳ ಮುಂದೆ ರಾರಾಜಿಸುತ್ತಿವೆ. ಗೌಡನಪಾಳ್ಯದ ಶ್ರೀನಿವಾಸ ಚಿತ್ರಮಂದಿರದಲ್ಲಿ ನಿನ್ನೆ ಪುನೀತ್ ಅಭಿಮಾನಿಗಳು, ಡಾ.ರಾಜ್ ಹಾಗೂ ಅಪ್ಪು ಬ್ಯಾನರ್​ಗೆ​ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದರು.

ಸತತ 24 ಗಂಟೆಗಳ ಕಾಲ 'ನಟಸಾರ್ವಭೌಮ' ಸಿನಿಮಾ ಪ್ರದರ್ಶನ

ಊರ್ವಶಿ ಹಾಗೂ ಗೌಡನಪಾಳ್ಯದ ಶ್ರೀನಿವಾಸ ಚಿತ್ರಮಂದಿರಗಳಲ್ಲಿ  ಅಲ್ಲಿ ಫೆ.6ರ ಮಧ್ಯರಾತ್ರಿ 12ರಿಂದ ಫೆ.7 ಮಧ್ಯರಾತ್ರಿ 12ರವರೆಗೆ ಸಿನಿಮಾ ಪ್ರದರ್ಶನ ನಡೆಯಲಿದೆ.ಕರ್ನಾಟಕದಲ್ಲಿ ಮೊದಲು ವಿಶೇಷ ಪ್ರದರ್ಶನಗೊಳ್ಳುವ ಚಿತ್ರಮಂದಿರ #ಶ್ರೀನಿವಾಸ_ಗೌಡನ್_ಪಾಳ್ಯ #ನಟಸಾರ್ವಭೌಮ ಚಿತ್ರ ವಿಶೇಷ ಪ್ರದರ್ಶನವನ್ನು #೧೨_ಗಂಟೆಗೆ ಏರ್ಪಡಿಸಲಾಗಿದೆಇನ್ನು ನೆಚ್ಚಿನ ನಟನ ಸಿನಿಮಾ ನೋಡಲು ಕೆಲ ಅಭಿಮಾನಿಗಳು ಕೆಲಸ ಮಾಡುತ್ತಿರುವ ಕಂಪೆನಿಗೆ ರಜೆ ಕೋರಿ ಅರ್ಜಿ ಸಹ ಸಲ್ಲಿಸಿದ್ದಾರೆ.ಹಾಗೆ ಕಳೆದ ಶುಕ್ರವಾರದಿಂದಲೇ 'ನಟಸಾರ್ವಭೌಮ' ಚಿತ್ರದ ಮುಂಗಡ ಬುಕ್ಕಿಂಗ್ ಓಪನ್ ಆಗಿದ್ದು. ಪ್ರಸನ್ನ, ಊರ್ವಶಿ, ಸೇರಿದಂತೆ ಕೆಲವು ಚಿತ್ರಮಂದಿರಗಳ ಮುಂಜಾನೆ ಪ್ರದರ್ಶನದ ಟಿಕೆಟ್​ಗಳು ಸಂಪೂರ್ಣವಾಗಿ ಮಾರಾಟವಾಗಿ ಹೋಗಿವೆ.

ಇದನ್ನೂ ಓದಿ: 'ನಟಸಾರ್ವಭೌಮ'ನಿಗೆ ಮಿಸ್​ ಆಯ್ತು 'ಸಂತೋಷ': ಪವರ್​ ಸ್ಟಾರ್​ಗೂ ಇದು ಬೇಸರದ ಶಾಕ್​..!

ಒಟ್ಟಾರೆ 'ಕೆಜಿಎಫ್' ನಂತರ ಸ್ಯಾಂಡಲ್‍ವುಡ್‍ನಲಿ ರಿಲೀಸ್ ಆಗ್ತಿರೋ ಮತ್ತೊಂದು ಬಿಗ್ ಸಿನಿಮಾ 'ನಟಸಾರ್ವಭೌಮ' ಆಗಿರುವುದರಿಂದ ಈ ಸಿನಿಮಾ ಮೇಲೆ ಚಿತ್ರಪ್ರೇಮಿಗಳು ಹಾಗೂ ಚಿತ್ರೋದ್ಯಮ ನಿರೀಕ್ಷೆ ಇಟ್ಟುಕೊಂಡಿರೋದಂತು ಸುಳ್ಳಲ್ಲ.

 

PHOTOS: ಬಿ-ಟೌನ್​ನಲ್ಲಿ ಈ ವರ್ಷ ನಡೆಯಲಿದೆ ಬಯೋಪಿಕ್​ ಉತ್ಸವ..

First published:February 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...