Puneeth Rajkumar: ಅಪ್ಪು ನೆನಪಲ್ಲಿ ತನ್ನ 3 ಮಕ್ಕಳ ಜೊತೆ 500km ಓಟಕ್ಕೆ ಮುಂದಾದ ತಾಯಿ..!
Appu Fans :ಎಷ್ಟೋ ಜನರು ತಮ್ಮತಮ್ಮ ಊರುಗಳಿಂದ ಅಪ್ಪು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜಕುಮಾರ್ ಸಮಾಧಿ ದರ್ಶನ ಪಡೆಯಲು ಪಾದಯಾತ್ರೆಯ ಮೂಲಕ, ಬೈಕ್ ರಾಲಿ ಮೂಲಕ ಬರುತ್ತಿದ್ದಾರೆ.. ಈಗ ಅದೇ ರೀತಿ ಈಗ ಅಪ್ಪು ಅಪ್ಪಟ ಅಭಿಮಾನಿಯಾಗಿರುವ ಮಹಿಳೆಯೊಬ್ಬಳು ಪುನೀತ್ ಗಾಗಿ ತನ್ನ ಮೂರು ಮಕ್ಕಳ ಜೊತೆ 500ಕಿಮೀ ಓಟಕ್ಕೆ ಮುಂದಾಗಿದ್ದಾರೆ.
ಪವರ್ ಸ್ಟಾರ್ ( Power star)ಪುನೀತ್ ರಾಜಕುಮಾರ್( Puneeth Rajkumar ) ಅವರ ಅಕಾಲಿಕ ನಿಧನ( sudden death ) ಇನ್ನು ಅಭಿಮಾನಿಗಳ (Fans)ಮನಸ್ಸಿನಿಂದ ಮಾಸಿಲ್ಲ.. ಬದುಕಿದ್ರೆ ಹೇಗೆ ಮಾದರಿಯಾಗಿ ಬದುಕ ಬೇಕು, ಎಲ್ಲರೊಂದಿಗೆ ನಗುನಗುತ್ತಾ ಬದುಕಬೇಕು ಎಂದು ಜಗತ್ತಿಗೆ ಸಾರಿ ಹೋದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳ ಮನಸ್ಸಿನಲ್ಲಿ ಅಜರಾಮರರಾಗಿದ್ದಾರೆ.. ಸಾವಿನಲ್ಲೂ ನೇತ್ರದಾನ ( Eye donation )ಮಾಡಿ ಸಾರ್ಥಕತೆಯ ಮೆರೆದ ಅಪ್ಪು ಮಹಾನ್ ಸಂದೇಶವನ್ನು ಸಾರಿ ಹೋಗಿದ್ದಾರೆ..ಕರ್ನಾಟಕದ ( Karnataka)ಪ್ರತಿಯೊಂದು ಹಳ್ಳಿಹಳ್ಳಿಯಲ್ಲೂ( villages) ಪುನೀತ್ ರಾಜಕುಮಾರ್ ಹೆಸರಲ್ಲಿ ಅನ್ನದಾನ, ಶ್ರಮದಾನ, ರಕ್ತದಾನ ಸೇರಿ ಅನೇಕ ಪುಣ್ಯ ಕಾರ್ಯಗಳು ನಡೆಯುತ್ತಿವೆ.. ಅಲ್ಲದೆ ಪುನೀತ್ ಮಾಡಿದ ಸಾಮಾಜಿಕ ಕಾರ್ಯಗಳ ನೆನಪಿನಲ್ಲಿ ರಾಜ್ಯದ ಹಲವು ಹಳ್ಳಿಗಳು, ನಗರಗಳ ರಸ್ತೆಗಳಿಗೆ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ಪ್ರತಿಯೊಂದು ಗ್ರಾಮಗಳ ರಸ್ತೆಗಳಿಗೆ ಪುನೀತ್ ಹೆಸರು ಇಟ್ಟು ಅವರ ಹೆಸರನ್ನು ಚಿರಸ್ಥಾಯಿಯನ್ನಾಗಿಸಲು ಅಪ್ಪು ಅಭಿಮಾನಿಗಳು ಮುಂದಾಗಿದ್ದಾರೆ.. ಅದೇ ರೀತಿ ಈಗ ನಟ ಪುನೀತ್ ರಾಜಕುಮಾರ್ ಅವರ ಸವಿ ನೆನಪಿನಲ್ಲಿ ತಾಯಿಯೊಬ್ಬರು 500 ಕಿ.ಮೀ. ಓಟಕ್ಕೆ ಮುಂದಾಗಿದ್ದಾರೆ.
ಅಪ್ಪುಗಾಗಿ 500 ಕಿಮೀ ಓಟಕ್ಕೆ ಮುಂದಾದ ಮೂರು ಮಕ್ಕಳ ತಾಯಿ!
ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದ ಹಣ್ಣು ಹಣ್ಣು ಮುದುಕರವರೆಗೂ ಪುನೀತ್ ರಾಜಕುಮಾರ್ ಅಂದ್ರೆ ಅಚ್ಚುಮೆಚ್ಚು.. ಪುನೀತ್ ನಿಧನರಾದ ದಿನದಿಂದ ಹಿಡಿದು ಇಲ್ಲಿಯವರೆಗೂ ಪುನೀತ್ ನೆನೆದುಕೊಂಡು ಕಣ್ಣೀರು ಹಾಕುತ್ತಲೇ ಇದ್ದಾರೆ.. ಹಲವಾರು ಅಭಿಮಾನಿಗಳು ಹಲವಾರು ರೀತಿಯಲ್ಲಿ ಅಪ್ಪುನನ್ನ ಪ್ರತಿನಿತ್ಯ ನೆನಪು ಮಾಡಿಕೊಂಡು ಎಲ್ಲರಲ್ಲೂ ಪುನೀತ್ ಇನ್ನೂ ಬದುಕಿದ್ದಾರೆ ಎಂದು ತೋರಿಸುತ್ತಿದ್ದಾರೆ.. ಎಷ್ಟೋ ಜನರು ತಮ್ಮತಮ್ಮ ಊರುಗಳಿಂದ ಅಪ್ಪು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜಕುಮಾರ್ ಸಮಾಧಿ ದರ್ಶನ ಪಡೆಯಲು ಪಾದಯಾತ್ರೆಯ ಮೂಲಕ, ಬೈಕ್ ರಾಲಿ ಮೂಲಕ ಬರುತ್ತಿದ್ದಾರೆ..
ಈಗ ಅದೇ ರೀತಿ ಈಗ ಅಪ್ಪು ಅಪ್ಪಟ ಅಭಿಮಾನಿಯಾಗಿರುವ ಮಹಿಳೆಯೊಬ್ಬಳು ಪುನೀತ್ ಗಾಗಿ ತನ್ನ ಮೂರು ಮಕ್ಕಳ ಜೊತೆ 500 ಕಿಮೀ ಓಟಕ್ಕೆ ಮುಂದಾಗಿದ್ದಾರೆ. ಹೌದು ಪುನೀತ್ರ ಕಟ್ಟ ಅಭಿಮಾನಿಯಾಗಿರುವ ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದ ದಾಕ್ಷಾಯಣಿ ಉಮೇಶ ಪಾಟೀಲ, ಸ್ವಗ್ರಾಮದಿಂದ ಪುನೀತ್ರ ಸಮಾಧಿವರೆಗೂ ಅಂದರೆ ಮನಗುಂಡಿ ಗ್ರಾಮದಿಂದ ಬೆಂಗಳೂರಿನ ಕಂಠೀರವ ಸ್ಟುಡಿಯೋವರೆಗೂ ಓಟದ ಮೂಲಕ ಆಗಮಿಸಿ ಪುನೀತ್ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.
ಬಾಲ್ಯದಿಂದಲೂ ಪುನೀತ್ ರಾಜಕುಮಾರ್ ಅಪ್ಪಟ ಅಭಿಮಾನಿಯಾಗಿರುವ ದ್ರಾಕ್ಷಾಯಿಣಿ ಅವರು,ಪುನೀತ್ ನಿಧನದಿಂದ ಬಹಳ ನೊಂದುಕೊಂಡಿದ್ದಾರೆ.. ಹೀಗಾಗಿ ಪುನೀತ್ ಸಮಾಧಿ ದರ್ಶನಕ್ಕೆ ಓಟದ ಮೂಲಕ ಬಂದು ಶ್ರದ್ಧಾಂಜಲಿ ಸಲ್ಲಿಸುವ ಯೋಚನೆಯಲ್ಲಿದ್ದಾರೆ.. ಹೀಗಾಗಿ ಈ ಬಗ್ಗೆ ಮಾಹಿತಿ ನೀಡಿರುವ ದ್ರಾಕ್ಷಾಯಿಣಿ , ನಾನು ಮೂರು ಮಕ್ಕಳ ತಾಯಿ. ನನ್ನ ಓರ್ವ ಪುತ್ರಿಯ ವಯಸ್ಸಿನ್ನೂ 11 ತಿಂಗಳು. ಬಾಲ್ಯದಿಂದ ಪುನೀತ್ ರಾಜಕುಮಾರ್ ಅಭಿಮಾನಿಯಾಗಿ ಬೆಳೆದಿದ್ದೇನೆ.
ಅವರ ಹಠಾತ್ ನಿಧನದಿಂದ ಬಹಳ ದುಃಖಿತಳಾಗಿದ್ದೇನೆ. ಅವರು ಮಾಡಿದ ಸಮಾಜ ಸೇವೆಗಳಿಂದ ಪ್ರೇರೇಪಿತಳಾಗಿ ನೇತ್ರದಾನ ಮತ್ತು ರಕ್ತದಾನ ಶಿಬಿರಗಳನ್ನು ಪ್ರೋತ್ಸಾಹಿಸಲು ನಿರ್ಧಾರ ಕೈಗೊಂಡಿದ್ದೇನೆ. ಬಾಲ್ಯದಿಂದ ಓಟದಲ್ಲಿ ಆಸಕ್ತಳಾಗಿದ್ದು, ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದೇನೆ. ಕ್ರೀಡೆಯ ಮೂಲಕವೇ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಅದಕ್ಕಾಗಿ ಮನಗುಂಡಿ ಗ್ರಾಮದಿಂದ ನ.29ರಂದು ಓಟ ಆರಂಭಿಸಲಿದ್ದು ಧಾರವಾಡದಿಂದ ಬೆಂಗಳೂರಿನಲ್ಲಿರುವ ಅವರ ಸಮಾಧಿವರೆಗೆ ಓಡಲು ನಿಶ್ಚಯಿಸಿದ್ದೇನೆ. ಇದಕ್ಕೆ ಕುಟುಂಬ, ಸಂಬಂಧಿಕರು ಹಾಗೂ ಗ್ರಾಮಸ್ಥರ ಪ್ರೋತ್ಸಾಹವಿದೆ ಎಂದಿದ್ದಾರೆ.
Published by:ranjumbkgowda1 ranjumbkgowda1
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ