• Home
  • »
  • News
  • »
  • entertainment
  • »
  • Puneetha Parva: ಪುನೀತ ಪರ್ವ ಕಾರ್ಯಕ್ರಮ ನೋಡುತ್ತಿದ್ದ ಅಭಿಮಾನಿ ಹೃದಯಾಘಾತದಿಂದ ಸಾವು

Puneetha Parva: ಪುನೀತ ಪರ್ವ ಕಾರ್ಯಕ್ರಮ ನೋಡುತ್ತಿದ್ದ ಅಭಿಮಾನಿ ಹೃದಯಾಘಾತದಿಂದ ಸಾವು

ಪುನೀತ ಪರ್ವ ಕಾರ್ಯಕ್ರಮ

ಪುನೀತ ಪರ್ವ ಕಾರ್ಯಕ್ರಮ

Puneetha Parva: ಪುನೀತ ಪರ್ವ ಕಾರ್ಯಕ್ರಮದ ನೋಡುತ್ತಲೇ ಅಪ್ಪು ಅಭಿಮಾನಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

  • News18 Kannada
  • Last Updated :
  • Bangalore, India
  • Share this:

ಪುನೀತ್ (Puneeth) ಅಭಿಮಾನಿ ಹೃದಯಾಘಾತದಿಂದ (Heart attack) ಸಾವನ್ನಪ್ಪಿರುವ ಘಟನೆ  ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನಲ್ಲಿ (Bengaluru) ಅದ್ಧೂರಿಯಾಗಿ ನಡೆದ ಪುನೀತ ಪರ್ವ ಕಾರ್ಯಕ್ರಮವನ್ನು ಟಿವಿಯಲ್ಲಿ ನೋಡುವಾಗಲೇ ಅಭಿಮಾನಿ ಹೃದಯಾಘಾತಕ್ಕೊಳಗಾಗಿದ್ದಾರೆ. ನಿನ್ನೆ ಮನೆಯಲ್ಲಿ ಪುನೀತ ಪರ್ವ ಕಾರ್ಯಕ್ರಮ  (Puneetha Prva) ನೋಡುವಾಗಲೇ ಹೃದಯಾಘಾತದಿಂದ ಸಾವು ಸಂಭವಿಸಿದೆ. ಪುನೀತ್ ಪರ್ವ ಕಾರ್ಯಕ್ರಮ ನೋಡುವಾಗ ಎಂಥ ಮನುಷ್ಯ ಸತ್ತು ಹೋದ್ರು ಎಂದು ಅಭಿಮಾನಿ ಕಣ್ಣೀರಿಟ್ಟಿದ್ದರು. ಮಲ್ಲೇಶ್ವರಂನ ಲಿಂಕ್ ರೋಡ್ ನಲ್ಲಿ ಇರುವ ಪುನೀತ್ ಅಭಿಮಾನಿಯನ್ನು ಹೃದಯಾಘಾತವಾದ ತಕ್ಷಣವೇ ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೋಯಲಾಗಿತ್ತು. ಆದರೆ ಅಷ್ಟರಲ್ಲಿ ಅಭಿಮಾನಿ ಗಿರಿರಾಜ್ ಸಾವನ್ನಪ್ಪಿದ್ದರು.


ಗಂಧದ ಗುಡಿ ಅದ್ಧೂರಿ ಪ್ರಿ-ರಿಲೀಸ್


ಗಂಧದ ಗುಡಿ ಡಾಕ್ಯುಮೆಂಟರಿ ಪ್ರಿ-ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ಬೆಂಗಳೂರಿನಲ್ಲಿ ನಡೆದಿದ್ದು ಸೌತ್ ಸೂಪರ್ ಸ್ಟಾರ್ ನಟ, ನಟಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಲ್ಲೆಡೆ ಅಬ್ಬರದ ಪ್ರಚಾರ ಪಡೇತ ಪುನೀತ ಪರ್ವ ಕಾರ್ಯಕ್ರಮದಲ್ಲಿ ಅಭಿಮಾನಿಗಳೂ ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ.


ಪ್ರಕಾಶ್ ರೈ, ಕಮಲ್ ಹಾಸನ್, ನಂದಮೂರಿ ಬಾಲೃಷ್ಣ, ಪ್ರಭುದೇವ ಸೇರಿದಂತೆ ಸ್ಟಾರ್ ನಟರ ದಂಡೇ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ. ಕಾರ್ಯಕ್ರಮದಲ್ಲಿ ಸಕಲ ವ್ಯವಸ್ಥೆಗಳನ್ನೂ ಮಾಡಲಾಗಿತ್ತು.


ಇದನ್ನೂ ಓದಿ: Puneetha Parva: ಮುಸ್ಲಿಂಮರು ಮಾಡಿದ ಬಿರಿಯಾನಿ ಅಂದ್ರೆ ಅಪ್ಪುಗೆ ಅಚ್ಚುಮೆಚ್ಚು!


ಡಾಕ್ಯುಮೆಂಟ್​ ಶೂಟಿಂಗ್​ ಕಷ್ಟ


ವೈಲ್ಡ್​ ಲೈಫ್​ ಡಾಕ್ಯುಮೆಂಟ್​ ಚಿತ್ರೀಕರಣ ಮಾಡುವುದು ಸುಲಭದ ಮಾತಲ್ಲ. ಕಾಡು ಅಲೆದು ಅನ್ನ, ನೀರು ಸರಿಯಾಗಿ ಸಿಗದೆ ಶ್ರಮ ಹಾಕಬೇಕು. ಇಂತಹ ಸಾಹಸಕ್ಕೆ​ ಅಪ್ಪು ಲಾಕ್​ಡೌನ್​ ಸಮಯದಲ್ಲಿ ಕೈ ಹಾಕಿದ್ದರು. ಕರ್ನಾಟಕದ ಪ್ರಸಿದ್ಧ ಅರಣ್ಯಗಳನ್ನೆಲ್ಲಾ ಅಪ್ಪು ಸುತ್ತಿದ್ರು. ರಾಜ್ಯದ ಬಹುತೇಕ ಎಲ್ಲ ಭಾಗಗಳಿಗೆ ಪುನೀತ್, ಅಮೋಘ ವರ್ಷ ಹಾಗೂ ಚಿತ್ರತಂಡ ಪ್ರವಾಸ ಮಾಡಿದೆ. ಸಮುದ್ರ ಆಳದಲ್ಲಿಯೂ ಶೂಟಿಂಗ್ ಮಾಡಲಾಗಿದೆ. ಪುನೀತ್ ರಾಜ್‌ಕುಮಾರ್ ಇದೇ ಮೊದಲ ಬಾರಿಗೆ ಕ್ಯಾಮರಾ ಇಲ್ಲದೆ ಸಿನಿಮಾವೊಂದರಲ್ಲಿ ನಟಿಸಿದ್ದಾರೆ.

Published by:Divya D
First published: