Gandhada Gudi: ಶೀಘ್ರದಲ್ಲೇ ರಿಲೀಸ್​ ಆಗಲಿದೆ ಅಪ್ಪು ಕನಸಿನ ಪ್ರಾಜೆಕ್ಟ್​, ‘ಗಂಧದಗುಡಿ‘ ಬಿಡುಗಡೆ ಬಗ್ಗೆ ಹೊಸ ಅಪ್​​ಡೇಟ್ಸ್​

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರ ಡ್ರೀಮ್​ ಪ್ರಾಜೆಕ್ಟ್ ಗಂಧದಗುಡಿ ಪಿಆರ್‌ಕೆ ಸ್ಟುಡಿಯೋ ನಿರ್ಮಾಣ ಮಾಡುತ್ತಿದೆ. ಇದರ ನಡುವೆ ಗಂಧದಗುಡಿ ರಿಲೀಸ್ ಬಗ್ಗೆ ಹೊಸ ಅಫ್​ಡೇಟ್​ ಕೇಳಿಬರುತ್ತಿದ್ದು, ಫ್ಯಾನ್ಸ್​ ಖುಷಿಯಾಗಿದ್ದಾರೆ.

ಗಂಧದಗುಡಿ

ಗಂಧದಗುಡಿ

  • Share this:
ಸ್ಯಾಂಡಲ್ವುಡ್(Sandalwood) ಯುವರಾಜ, ಕರುನಾಡ ರತ್ನ, ಪವರ್ ಸ್ಟಾರ್ ಪುನೀತ್ (Power star Puneeth Rajkumar) ರಾಜಕುಮಾರ್ ನಮ್ಮನ್ನಗಲಿ 8 ತಿಂಗಳುಗಳು(Months) ಕಳೆದಿವೆ. ಪುನೀತ್ (Puneeth) ನಮ್ಮೊಂದಿಗೆ ದೈಹಿಕವಾಗಿ (Physical) ಇಲ್ಲದೆ ಇದ್ದರೂ ಭಾವನಾತ್ಮಕವಾಗಿ ಪ್ರತಿಯೊಬ್ಬರಲ್ಲೂ ಬೆರೆತುಹೋಗಿದ್ದಾರೆ. ಇನ್ನೂ ಅಪ್ಪು ಗಂಧದ ಗುಡಿ (Gandhada Gudi) ಸಿನಿಮಾ ಕೂಡ ಚಿತ್ರಮಂದಿರದಲ್ಲಿ ರಿಲೀಸ್ ಆಗಲಿದೆ. ಇದು ಕಮಷಿರ್ಯಲ್​ ಸಿನಿಮಾ ಅಲ್ಲ. ಕಾಡು ಮೇಡಿನ ಕಾಡು ಅಲೆದು ಅಪ್ಪು ಡಾಕ್ಯುಮೆಂಟರಿ (Documentary) ಮಾಡಿದ್ದಾರೆ. ಇದೀಗ ಈ ಸಿನಿಮಾದಿಂದ ಬಿಗ್​ ಅಪಡೇಟ್​ ಬಗ್ಗೆ ಸುದ್ದಿಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಹೌದು, ಗಂಧದ ಗುಡಿ ಡಾಕ್ಯುಮೆಂಟರಿ ರಿಲೀಸ್​ ಡೇಟ್​ ಬಗ್ಗೆ ಬಿಗ್​ ಅಫ್​ಡೇಟ್​ ಒಂದು ಹೊರಬಿದ್ದಿದೆ.

ಗಂಧದಗುಡಿ ರಿಲೀಸ್ ಡೇಟ್ ಅನೌನ್ಸ್?:

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರ ಡ್ರೀಮ್​ ಪ್ರಾಜೆಕ್ಟ್ ಗಂಧದಗುಡಿ ಪಿಆರ್‌ಕೆ ಸ್ಟುಡಿಯೋ ನಿರ್ಮಾಣ ಮಾಡುತ್ತಿದೆ. ಈ ಸಾಕ್ಷ್ಯಾ ಚಿತ್ರವನ್ನು 2021ರ ನವೆಂಬರ್​ ನಲ್ಲಿ ಬಿಡುಗಡೆ ಮಾಡಲು ಅಪ್ಪು ಚಿಂತಿಸಿದ್ದರಂತೆ. ಆದರೆ ಅವರು ನಿಧನ ಹೊಂದಿದ ಕಾರಣದಿಂದಾಗಿ ಇನ್ನು ಮುಂದೂಡಲಾಗಿದೆ. ಅಲ್ಲದೇ ಗಂಧದಗುಡಿ ಚಿತ್ರವನ್ನು ಥಿಯೇಟರ್​ ನಲ್ಲಿ ರಿಲೀಸ್ ಮಾಡುವುದಾಗಿ ಈಗಾಗಲೇ ಘೋಷಣೆ ಮಾಡಲಾಗಿದೆ. ಇದರ ನಡುವೆ ಗಂಧದಗುಡಿ ರಿಲೀಸ್ ಬಗ್ಗೆ ಹೊಸ ಅಫ್​ಡೇಟ್​ ಕೇಳಿಬರುತ್ತಿದ್ದು, ಫ್ಯಾನ್ಸ್​ ಖುಷಿಯಾಗಿದ್ದಾರೆ.

ಇನ್ನು, ಗಂಧದಗುಡಿ ಸಾಕ್ಷ್ಯಾಚಿತ್ರವು ಅಕ್ಟೋಬರ್​ 27 ಅಥವಾ ನವೆಂಬರ್​ 3ರಂದು ಚಿತ್ರಮಂದಿರದಲ್ಲಿ ಬಿಡುಗಡೆ ಆಗಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಷಯವೊಂದು ಹರಿದಾಡುತ್ತಿದೆ. ಅಲ್ಲದೇ ಪೋಸ್ಟರ್​ ಸಹ ಒಂದು ಬಿಡುಗಡೆ ಆಗಿದೆ. ಇನ್ನು, ಪಿಆರ್​ಕೆ ಸ್ಟುಡಿಯೋಸ್​ ನಿರ್ಮಾಣದಲ್ಲಿ ಎಲ್ಲಾ ಸಿನಿಮಾಗಳು ಹೆಚ್ಚಾಗಿ ಗುರುವಾರ ರಿಲೀಸ್ ಆಗುವುದರಿಂದ ಗಂಧದಗುಡಿ ಡಾಕ್ಯೂಮೇಂಟರಿ ಬಿಡುಗಡೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: Samantha: ಸೌತ್‌ ಬ್ಯೂಟಿ ಸಮಂತಾ ಮೊದಲ ಸಂಭಾವನೆ ಎಷ್ಟು ಗೊತ್ತಾ? ಕೇಳಿದ್ರೆ ನೀವು ಆಶ್ಚರ್ಯಪಡ್ತೀರಿ

ಶೀಘ್ರವೇ ಗಂಧದ ಗುಡಿಯಲ್ಲಿ ಅಪ್ಪು ದರ್ಶನ:

‘ಕರ್ನಾಟಕದ ಕಾಡು ಉಳಿಸಿ’ ಎಂಬ ಡಾ. ರಾಜ್ ಸಂದೇಶದ ಮರುಜನ್ಮವೇ ಹೊಸ ಗಂಧದ ಗುಡಿಯ ಕಥೆಯ ಸೀಕ್ರೇಟ್. ನಾನು ಪವರ್ ಸ್ಟಾರ್ ಅಲ್ಲ, ಸಾಮಾನ್ಯ ವ್ಯಕ್ತಿಯಾಗಿ ಕಾಣಿಸಿಕೊಳ್ತೀನಿ ಎಂದು ‘ಪವರ್ ಸ್ಟಾರ್’ ಬದಿಗೆ ಸರಿಸಿ ದಿವಂಗತ ನಟ ಪುನೀತ್ ನಟಿಸಿರುವ 'ಗಂಧದ ಗುಡಿ' ಕಥೆ ಹುಟ್ಟಿ ಬೆಳೆದಿದ್ದು, ನಿರ್ಮಾಣ, ಪುನೀತ್ ನಟನೆ ಕುರಿತು ವೈಲ್ಡ್ ಕರ್ನಾಟಕ ಖ್ಯಾತಿ ನಿರ್ದೇಶಕ ಅಮೋಘವರ್ಷ ಈ ಹಿಂದೆ ಹೇಳಿದ್ದರು. ಇದೀಗ ಈ ಡಾಕ್ಯುಮೆಂಟರಿ ರಿಲೀಸ್​ ಬಗ್ಗೆ ಅಪ್​ಡೇಟ್​ ಸಿಕ್ಕಿದೆ.

ಇದನ್ನೂ ಓದಿ: Sandalwood: ಚಂದನವನದಲ್ಲಿ ಈವರೆಗೆ ಅರ್ಧ ಸಿಹಿ, ಅರ್ಧ ಕಹಿ! 6 ತಿಂಗಳ ಸಿನಿ ರಿಪೋರ್ಟ್ ಇಲ್ಲಿದೆ

ಚಿತ್ರಮಂದಿರದಲ್ಲೇ ರಿಲೀಸ್​ ಆಗುತ್ತೆ `ಗಂಧದ ಗುಡಿ’:

ಸಾಮನ್ಯವಾಗಿ ಡಾಕ್ಯುಮೆಂಟ್​ ಸಿನಿಮಾಗಳನ್ನು ಥಿಯೇಟರ್​​ನಲ್ಲಿ ರಿಲೀಸ್​ ಮಾಡುವುದು ಕಡಿಮೆ. ಆದರೆ ಅಪ್ಪು ಅವರ ಗಂಧದ ಗುಡಿ ಸಿನಿಮಾವನ್ನು ಚಿತ್ರಮಂದಿರದಲ್ಲೇ ರಿಲೀಸ್​ ಆಗಲಿದೆ. 2022ಕ್ಕೆ ಈ ಸಿನಿಮಾ ತೆರೆಕಾಣಲಿದೆ. ಅಪ್ಪು ಅವರನ್ನು ಮತ್ತೆ ತೆರೆ ಮೇಲೆ ನೋಡುವ ಭಾಗ್ಯ ಸಿಕ್ಕಿದೆ.
Published by:shrikrishna bhat
First published: