ನೆರೆಪೀಡಿತರಿಗೆ ನೆರವು ನೀಡಿದ ರಾಜರತ್ನ ಪುನೀತ್ ರಾಜ್​ಕುಮಾರ್

ನಾನು ಇಂದು ಚೆಕ್ ನೀಡಲು ಸಿಎಂ ನಿವಾಸಕ್ಕೆ ಬಂದಿದ್ದೇನೆ. ನನ್ನ ಕೈಲಾದಷ್ಟು ಸಹಾಯ ಮಾಡುತ್ತಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ನೀಡಿದ ಕರೆಗೆ ಅಭಿಮಾನಿಗಳು ಹಾಗೂ ಸಾಕಷ್ಟು ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ.

zahir | news18-kannada
Updated:August 15, 2019, 4:58 PM IST
ನೆರೆಪೀಡಿತರಿಗೆ ನೆರವು ನೀಡಿದ ರಾಜರತ್ನ ಪುನೀತ್ ರಾಜ್​ಕುಮಾರ್
ಪುನೀತ್​ ರಾಜ್​ಕುಮಾರ್​
  • Share this:
ಕರುನಾಡ 'ರಾಜರತ್ನ' ಪುನೀತ್ ರಾಜ್​ಕುಮಾರ್ ಪ್ರಕೃತಿ ವಿಕೋಪಕ್ಕೀಡಾದ ಸಂತ್ರಸ್ತರಿಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ 5 ಲಕ್ಷ ರೂ. ನೀಡಿದ್ದಾರೆ. ಇಂದು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಅಪ್ಪು ಐದು ಲಕ್ಷ ರೂ. ಚೆಕ್​ ನೀಡಿದರು.

ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಪವರ್ ಸ್ಟಾರ್ 'ನಾನು ಇಂದು ಚೆಕ್ ನೀಡಲು ಸಿಎಂ ನಿವಾಸಕ್ಕೆ ಬಂದಿದ್ದೇನೆ. ನನ್ನ ಕೈಲಾದಷ್ಟು ಸಹಾಯ ಮಾಡುತ್ತಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ನೀಡಿದ ಕರೆಗೆ ಅಭಿಮಾನಿಗಳು ಹಾಗೂ ಸಾಕಷ್ಟು ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಹಲವರು ಸಂತ್ರಸ್ತರಿಗಾಗಿ ಕೆಲಸ ಮಾಡಿದ್ದಾರೆ. ಇದೆಲ್ಲವನ್ನು ನೋಡಿದಾಗ ತುಂಬಾ ಖುಷಿಯಾಗುತ್ತದೆ' ಎಂದರು.

ಈಗ ಆಗಿರುವ ನಷ್ಟಗಳ ಪರಿಹಾರಕ್ಕೆ ಧನ ಸಹಾಯ ಮಾಡಿದ್ದೇನೆ. ಇದರ ಜೊತೆಗೆ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿರುವೆ. ಈ ಮೂಲಕ ನಿರಾಶ್ರಿತರಿಗೆ ಮುಂದಿನ ದಿನಗಳಲ್ಲಿ ನೆರವಾಗುವುದಾಗಿ ಪುನೀತ್ ರಾಜ್​ಕುಮಾರ್ ತಿಳಿಸಿದರು.

ಸದ್ಯ 'ಯುವರತ್ನ' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಲ್ಲಿರುವ ಪವರ್​ಸ್ಟಾರ್ ಕೆಲ ದಿನಗಳ ಹಿಂದೆಯಷ್ಟೇ ಅಭಿಮಾನಿಗಳಲ್ಲಿ ನೆರೆ ಪೀಡಿತರಿಗೆ ನೆರವಾಗುವಂತೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದರು. ತಮ್ಮ ನೆಚ್ಚಿನ ನಟನ ಕೋರಿಕೆಯಂತೆ ಅಪ್ಪು ಫ್ಯಾನ್ಸ್ ಸಂತ್ರಸ್ತರ ಸಹಾಯಕ್ಕೆ ಕೈ ಜೋಡಿಸಿದ್ದರು.ಇನ್ನು ನಟ ಉಪೇಂದ್ರ ಈಗಾಗಲೇ ಪರಿಹಾರ ನಿಧಿಗೆ 5 ಲಕ್ಷ ರೂ. ನೀಡಿದ್ದು, ರೋರಿಂಗ್ ಸ್ಟಾರ್ ಶ್ರೀಮುರುಳಿ 'ಭರಾಟೆ' ಚಿತ್ರದ ಆಡಿಯೋದಿಂದ ಬರುವ ಲಾಭವನ್ನು ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ನೀಡುವುದಾಗಿ ಘೋಷಿಸಿಕೊಂಡಿದ್ದಾರೆ.
First published:August 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...