Puneeth Rajkumar Death: ಮಂತ್ರಾಲಯದಲ್ಲಿ ವೀಣೆ ಜಾರಿಕೊಂಡಿದ್ದು ಪುನೀತ್ ಸಾವಿನ ಮುನ್ಸೂಚನೆಯಾ? ವಿಡಿಯೋ ವೈರಲ್

‘‘ ಈ ಬಾರಿ ಆರಾಧನೆಗೆ ಬರುತ್ತೇನೆ‘‘ ಎನ್ನುತ್ತಿದ್ದಂತೆ ಸಿಂಹಾಸನದ ಮೇಲಿದ್ದ ರಾಯರ ಉತ್ಸವ ಮೂರ್ತಿ ಹಾಗೂ ಬೆಳ್ಳಿ ವೀಣೆ ಜಾರಿಕೊಂಡಿತ್ತು. ಇದು ಪುನೀತ್​ ಸಾವಿನ ಮುನ್ಸೂಚನೆಯಾಗಿತ್ತೇ? ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ.

ಪುನೀತ್ ಮಾತನಾಡುವ ವೇಳೆ ವೀಣೆ ಜಾರಿಕೊಂಡಿದ್ದ ದೃಶ್ಯ

ಪುನೀತ್ ಮಾತನಾಡುವ ವೇಳೆ ವೀಣೆ ಜಾರಿಕೊಂಡಿದ್ದ ದೃಶ್ಯ

  • Share this:
ರಾಯಚೂರು(ಅ.31): ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್(Power Star Puneeth Rajkumar) ಸಾವನ್ನಪ್ಪಿದ ಬಳಿಕ ಅವರು ಮಂತ್ರಾಲಯ(Mantralayam)ಕ್ಕೆ ಭೇಟಿ ನೀಡಿದ್ದ ವಿಡಿಯೋವೊಂದು ಸಖತ್ ವೈರಲ್ ಆಗ್ತಿದೆ. ಅವರು 2020ರ ಮಾರ್ಚ್​​ನಲ್ಲಿ ಮಂತ್ರಾಲಯದ ರಾಯರ ಮಠಕ್ಕೆ ಭೇಟಿ ನೀಡಿದ್ದರು. ಅಪ್ಪು ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಯ ದರ್ಶನ ಪಡೆಯುವ ವೇಳೆ ತೊಟ್ಟಿಲು ಮತ್ತು ವೀಣೆ ಅಲುಗಾಡಿತ್ತು. ಈ ವಿಡಿಯೋ ಪುನೀತ್​ ರಾಜ್​ಕುಮಾರ್​ ಸಾವಿನ ಬಳಿಕ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್​ ವೈರಲ್ ಆಗುತ್ತಿದೆ. ಅನೇಕರು ಇದು ಅಪ್ಪು ಸಾವಿನ ಮುನ್ಸೂಚನೆ ಎಂದು ಭಾವಿಸಿ ವದಂತಿ ಹಬ್ಬಿಸಿದ್ದಾರೆ.

ಮಂತ್ರಾಲಯದಲ್ಲಿ ಕಳೆದ ವರ್ಷ ಆಗಿದ್ದೇನು?

ಭೇಟಿ ವೇಳೆ, ಪುನೀತ್ ಅವರು ಭಕ್ತರನ್ನು ಉದ್ದೇಶಿಸಿ ಮಾತನಾಡಿದ್ದರು. ‘‘ ಈ ಬಾರಿ ಆರಾಧನೆಗೆ ಬರುತ್ತೇನೆ‘‘ ಎನ್ನುತ್ತಿದ್ದಂತೆ ಸಿಂಹಾಸನದ ಮೇಲಿದ್ದ ರಾಯರ ಉತ್ಸವ ಮೂರ್ತಿ ಹಾಗೂ ಬೆಳ್ಳಿ ವೀಣೆ ಜಾರಿಕೊಂಡಿತ್ತು. ಇದು ಪುನೀತ್​ ಸಾವಿನ ಮುನ್ಸೂಚನೆಯಾಗಿತ್ತೇ? ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ.

ವಿಡಿಯೋ ವೈರಲ್​ ಬಳಿಕ ಪೀಠಾಧಿಪತಿಗಳು ಹೇಳಿದ್ದೇನು?

ಆದರೆ ಈ ಊಹಾಪೋಹಗಳಿಗೆ ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರು ಸ್ಪಷ್ಟನೆ ನೀಡಿದ್ದಾರೆ. ಅವರ ಸಾವಿಗೂ ವೀಣೆ ಜಾರಿದ್ದಕ್ಕೂ ಸಂಬಂಧವಿಲ್ಲ. ಇದು ಆಕಸ್ಮಿಕ ಘಟನೆ ಎಂದು ಹೇಳಿದ್ದಾರೆ. ಪುನೀತ್ ರಾಜ್​​ಕುಮಾರ್ ಅವರು ಮಂತ್ರಾಲಯದ ರಾಯರ ಪರಮ ಭಕ್ತರಾಗಿದ್ದರು. ಅಣ್ಣ-ತಮ್ಮಂದಿರು ಬಂದು ಸಂಗೀತ ಸೇವೆ ಮಾಡುವುದಾಗಿ ಹೇಳಿದ್ದರು. ಅವರು ರಾಯರ ಅನುಗ್ರಹದಿಂದಲೇ ಜನಿಸಿದ್ದಾರೆ ಎಂದು ಅವರ ತಂದೆ ಹೇಳಿದ್ದರು.

ತಮ್ಮ ನೆಚ್ಚಿನ ಗುರುಗಳಾದ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಬಂದಾಗ ಪುನೀತ್ ಹಾಡನ್ನೂ ಸಹ ಹಾಡಿದ್ದರು. ಯಾರೂ ಕೂಡಾ ಅನ್ಯತಾ ಭಾವಿಸಬಾರದು. ಇದೊಂದು ಕಾಕತಾಳೀಯ. ಸಾವಿಗೂ ಇದಕ್ಕೂ ಸಂಬಂಧ ಇಲ್ಲ ಎಂದು ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರು ಸ್ಪಷ್ಟನೆ ನೀಡಿದ್ದಾರೆ.

ಮಣ್ಣಲ್ಲಿ ಮಣ್ಣಾದ ಪುನೀತ್​ ರಾಜ್​ಕುಮಾರ್

ಕರುನಾಡಿನ ‘ಯುವರತ್ನ‘ ನಟ ಪುನೀತ್ ರಾಜ್​ಕುಮಾರ್​ ಇಂದು ಮಣ್ಣಲ್ಲಿ ಮಣ್ಣಾಗಿ ಭೂತಾಯಿಯ ಮಡಿಲು ಸೇರಿದ್ದಾರೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿ ತಾಯಿ ಪಾರ್ವತಮ್ಮನವರ ಸಮಾಧಿ ಪಕ್ಕದಲ್ಲೇ ಅಂತ್ಯಸಂಸ್ಕಾರ ನಡೆಸಲಾಯಿತು. ಈಡಿಗ ಸಂಪ್ರದಾಯದಂತೆ ಅಂತಿಮ ವಿಧಿ-ವಿಧಾನ ನಡೆಸಲಾಯಿತು. ರಾಘವೇಂದ್ರ ರಾಜ್​ಕುಮಾರ್​ ಮಗ ವಿನಯ್​ ರಾಜ್​ಕುಮಾರ್​ ಅಂತಿಮ ಸಂಸ್ಕಾರ ನೆರವೇರಿಸಿದರು. ಡಾ.ರಾಜ್​ಕುಮಾರ್​ ಕುಟುಂಬಸ್ಥರು ಹಾಗೂ ಸಿಎಂ ಸೇರಿ ಗಣ್ಯಾತಿಗಣ್ಯರು, ಚಿತ್ರರಂಗದ ನಟ-ನಟಿಯರು ದೊಡ್ಮನೆ ಹುಡುಗನಿಗೆ ಅಂತಿಮ ನಮನ ಸಲ್ಲಿಸಿದರು. ಎಲ್ಲರ ಪ್ರೀತಿಯ ಅಪ್ಪು ಕುಟುಂಬಸ್ಥರ ‘ಮೈತ್ರಿ‘ ತೊರೆದು ‘ಪೃಥ್ವಿ‘ ಸೇರಿದರು. ಅಂತ್ಯಕ್ರಿಯೆ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಮಂಗಳವಾರ ಪುನೀತ್​ ಸಮಾಧಿಗೆ ಹಾಲು-ತುಪ್ಪ ಬಿಡುವ ಕಾರ್ಯ ಮಾಡಲಾಗುತ್ತದೆ. ಅಲ್ಲಿಯವರೆಗೂ ಕಂಠೀರವ ಸ್ಟುಡಿಯೋಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಕಂಠೀರವ ಸ್ಟುಡಿಯೋ ಬಳಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಮಾಡಿಕೊಂಡು ನಂತರ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಿದೆ ಎಂದು ಜಿಲ್ಲಾಧಿಕಾರಿ ಮಂಜುನಾಥ್ ಹೇಳಿದ್ದಾರೆ.
Published by:Latha CG
First published: