ಬಾಲ ನಟನಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟು ಆ ಸಣ್ಣ ವಯಸ್ಸಿನಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದ ಬಾಲ ಪ್ರತಿಭೆಯಾಗಿ ಹೊರಹೊಮ್ಮಿದ ಪುನೀತ್ ಅವರ ಸಿನಿ ಪಯಣಕ್ಕೆ ಈಗ 45ರ ಸಂಭ್ರಮ. ಸ್ಯಾಂಡಲ್ವುಡ್ನಲ್ಲಿ ಪವರ್ ಸ್ಟಾರ್ ಎಂದೇ ಖ್ಯಾತರಾಗಿರುವ ದೊಡ್ಮನೆ ಹುಡುಗ ಪುನೀತ್ ರಾಜ್ಕುಮಾರ್ ಅಭಿನಯಿಸಿದ ಮೊದಲ ಸಿನಿಮಾ ಪ್ರೇಮದ ಕಾಣಿಕೆ. ಈ ಸಿನಿಮಾದಲ್ಲಿ ಅಭಿನಯಿಸಿದಾಗ ಪುನೀತ್ ಅವರಿಗೆ ಕೇವಲ ಆರು ತಿಂಗಳು. ಪುನೀತ್ ರಾಜ್ಕುಮಾರ್ ಹುಟ್ಟಿದ್ದು 1975 ಅದೇ ವರ್ಷ ರಾಜ್ಕುಮಾರ್ ಅಭಿನಯದ ಪ್ರೇಮದ ಕಾಣಿಕೆ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಅದೇ ಸಿನಿಮಾದಲ್ಲಿ ಪುನೀತ್ ಪುಟ್ಟ ಕಂದಮ್ಮನಾಗಿ ಬೆಳ್ಳಿತೆರೆ ಮೇಲೆ ಮಿಂಚಿದ್ದರು. ನಂತರ ಬಾಲ ನಟನಾಗಿ ಸಿನಿಮಾಗಳಲ್ಲಿ ಅಭಿನಯಿಸಿದರು. ಚಲಿಸುವ ಮೋಡಗಳು ಹಾಗೂ ಎರಡು ಕನಸು ಸಿನಿಮಾಗಳಲ್ಲಿನ ಅಭಿನಯಕ್ಕಾಗಿ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ ಅಪ್ಪು.
ಪ್ರೇಮಕ ಕಾಣಿಕೆ ಸಿನಿಮಾ 1976ರಲ್ಲಿ ರಿಲೀಸ್ ಆಗಿತ್ತು. ಹೀಗೆ ಹುಟ್ಟಿದ ಮೊದಲ ವರ್ಷದಲ್ಲೇ ಬಣ್ಣದ ಲೋಕಕ್ಕೆ ಕಾಲಿಟ್ಟ ಕೀರ್ತಿ ಪುನೀತ್ ಅವರಗೆ ಸಲ್ಲುತ್ತದೆ. ಬಾಲ ನಟನಾಗಿ ಅಭಿನಯಿಸಿರುವ ಹಾಗೂ 1985ರಲ್ಲಿ ತೆರೆಕಂಡ ಬೆಟ್ಟ ಹೂವು ಸಿನಿಮಾದಲ್ಲಿನ ಅಭಿನಯಕ್ಕಾಗಿ ಪುನೀತ್ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಪುನೀತ್ ಅವರ ಸಿನಿ ಜರ್ನಿಗೆ 45ರ ಸಂಭ್ರಮವನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅದ್ದೂರಿಯಾಗಿ ಸೆಲಬ್ರೇಟ್ ಮಾಡಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ 45 ವರ್ಷ ಪೂರೈಸಿರುವ ಪುನೀತ್ ರಾಜ್ಕುಮಾರ್ ಸ್ಯಾಂಡಲ್ವುಡ್ನಲ್ಲಿ 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಂದು ಇದೇ ಖುಷಿಗೆ ಅಭಿಮಾನಿಗಳು ಕಾಮನ್ ಡಿಪಿ ಸಹ ರಿಲೀಸ್ ಮಾಡಿದ್ದಾರೆ.
Happy to launch our believed
Power stars CDP
On completing 45 years on kfi #45YearsOfKingAPPUDarbar#Yuvarathnaa #PuneethRajkumar@PuneethRajkumar #James pic.twitter.com/goBlIK5zQ1
— Therri maa kaa.. ashirvad 😊 (@oorigobba) February 27, 2021
Congrats @PuneethRajkumar ..
45 years is almost ur entire life. HUGE ACHIEVEMENT THIS.
Many more years to come and Wishing U more Power.
🥂🥂
— Kichcha Sudeepa (@KicchaSudeep) February 28, 2021
ಇದನ್ನೂ ಓದಿ: ಏಪ್ರಿಲ್ನಲ್ಲಿ ರಿಲೀಸ್ ಆಗಲಿದೆ ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ..!
ಇನ್ನು, ಈ ವಿಶೇಷ ದಿನದಂದು ಶುಭಕೋರಿದವರಿಗೆ ಪುನೀತ್ ರಾಜ್ಕುಮಾರ್ ಟ್ವೀಟ್ ಮಾಡುವ ಮೂಲಕ ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ ಈ ದಿನವನ್ನು ವಿಶೇಷಗೊಳಿಸಿದವರಿಗೆ ಹಾಗೂ 45 ವರ್ಷಗಳ ಪಯಣದಲ್ಲಿ ಪ್ರೋತ್ಸಾಹಿಸಿ, ಪ್ರೀತಿಸಿದ ಅಭಿಮಾನಿಗಳಿಗೆ, ಸಹೋದ್ಯೋಗಿಗಳಿಗೆ ಹಾಗೂ ಬಂಧುಮಿತ್ರರಿಗೆ ನಮಸ್ಕರಿಸಿದ್ದಾರೆ.
ಈ ದಿನವನ್ನು ವಿಶೇಷಗೊಳಿಸಿದ ನಿಮ್ಮೆಲ್ಲರಿಗೂ ನನ್ನ ಅಭಿನಂದನೆಗಳು. ೪೫ ವರ್ಷದ ಈ ಪಯಣದಲ್ಲಿ ನನ್ನನ್ನು ಪ್ರೋತ್ಸಾಹಿಸಿ, ಪ್ರೀತಿಸಿದ ಅಭಿಮಾನಿಗಳಿಗೆ, ಸಹಉದ್ಯೋಗಿಗಳಿಗೆ, ಬಂಧುಮಿತ್ರರಿಗೆ ನನ್ನ ಹೃದಯಪೂರ್ವಕ ನಮನಗಳು.
— Puneeth Rajkumar (@PuneethRajkumar) February 28, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ