James: ಪವರ್​ ಸ್ಟಾರ್ ಪುನೀತ್ ಜೇಮ್ಸ್​ಗೆ ಟಗರು ಟಚ್

Puneeth Rajkumar: ಯುವರತ್ನ ಚಿತ್ರದ ಬಳಿಕ ಅಪ್ಪು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೆಲ ತಿಂಗಳ ಹಿಂದೆ ಬಹಿರಂಗವಾಗಿತ್ತು. ಇದೀಗ ಚಿತ್ರತಂಡದಿಂದ ಮತ್ತೊಂದು ಬಿಗ್ ನ್ಯೂಸ್ ಹೊರಬಿದ್ದಿದೆ.

zahir | news18-kannada
Updated:December 2, 2019, 11:36 AM IST
James: ಪವರ್​ ಸ್ಟಾರ್ ಪುನೀತ್ ಜೇಮ್ಸ್​ಗೆ ಟಗರು ಟಚ್
ಜೇಮ್ಸ್​
  • Share this:
'ಜೇಮ್ಸ್'​, ವರ್ಷಗಳಿಂದ ಸ್ಯಾಂಡಲ್​ವುಡ್​ನಲ್ಲಿ ಕೇಳಿ ಬರುತ್ತಿರುವ ಪವರ್​ಫುಲ್ ಟೈಟಲ್. ಈ ಚಿತ್ರದಲ್ಲಿ ಪುನೀತ್ ರಾಜ್​ಕುಮಾರ್ ನಾಯಕನಾಗಿ ಅಭಿನಯಿಸಲಿರುವುದು ಗೊತ್ತಿರುವ ವಿಷಯ. ಹಾಗೆಯೇ ಆ್ಯಕ್ಷನ್ ಕಟ್ ಹೇಳುತ್ತಿರುವುದು ಭರ್ಜರಿ ನಿರ್ದೇಶಕ ಚೇತನ್. ಹೀಗಾಗಿಯೇ ಚಿತ್ರದ ಮೇಲೆ ಅಪಾರ ನಿರೀಕ್ಷೆ ಇದೆ.

'ಯುವರತ್ನ' ಚಿತ್ರದ ಬಳಿಕ ಅಪ್ಪು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೆಲ ತಿಂಗಳ ಹಿಂದೆ ಬಹಿರಂಗವಾಗಿತ್ತು. ಇದೀಗ ಚಿತ್ರತಂಡದಿಂದ ಮತ್ತೊಂದು ಬಿಗ್ ನ್ಯೂಸ್ ಹೊರಬಿದ್ದಿದೆ. ಅದೇನೆಂದರೆ 'ಜೇಮ್ಸ್'ಗಾಗಿ ಬ್ಯಾಂಡ್ ಬಜಾಯಿಸುತ್ತಿರುವುದು ಚರಣ್ ರಾಜ್ ಎಂಬುದು.

ಹೌದು, 'ಟಗರು' ಚಿತ್ರದಲ್ಲಿ ಭರ್ಜರಿಯಾಗಿ ಗಾನ ಬಜಾಯಿಸಿದ್ದ ಸಂಗೀತ ನಿರ್ದೇಶಕ ಚರಣ್ ರಾಜ್ 'ಜೇಮ್ಸ್'​ ಜೊತೆ ಕೈ ಜೋಡಿಸಲಿದ್ದಾರೆ. 'ಗೋಧಿ ಬಣ್ಣ ಸಾಧಾರಣ ಮೈ ಕಟ್ಟು', 'ಪುಷ್ಪಕ ವಿಮಾನ' ಚಿತ್ರಗಳಲ್ಲಿ ಮನ ಮಿಡಿಯುವ ಹಾಡುಗಳನ್ನು ನೀಡಿರುವ ಚರಣ್​ಗೆ 'ಜೇಮ್ಸ್'​ನಲ್ಲಿ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ. ಇಂತಹದೊಂದು ಆಫರ್​ನ್ನು  ಖುದ್ದು ಅಪ್ಪು ಅವರೇ ನೀಡಿದ್ದಾರೆ ಎನ್ನುತ್ತಿದೆ ಗಾಂಧಿನಗರದ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Viral Video: ಹಾಡು ಮರೆತು ಇಂಗ್ಲಿಷ್ ಮಾತಾಡಿ ಮತ್ತೆ ಟ್ರೋಲ್ ಆದ ರಾನು ಮಂಡಲ್

ಹೀಗಾಗಿ ಶಿವಣ್ಣನನ್ನು ಟಗರು ಬಂತು ಟಗರು... ಎಂದು ಕುಣಿಸಿದ್ದ ಚರಣ್ ಈ ಬಾರಿ ಅಪ್ಪು ಅವರಿಂದ ಭರ್ಜರಿ ಡ್ಯಾನ್ಸ್ ಮಾಡಿಸುವಂತಹ ಹಾಡುಗಳನ್ನೇ ನೀಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಒಟ್ಟಿನಲ್ಲಿ ವರ್ಷಗಳ ಹಿಂದೆಯೇ ಟೈಟಲ್ ಫಿಕ್ಸ್ ಆಗಿದ್ದ 'ಜೇಮ್ಸ್' ಇದೀಗ ಬ್ಯಾಕ್ ಟು ಬ್ಯಾಕ್ ಸುದ್ದಿಗಳನ್ನು ನೀಡುತ್ತಿರುವುದು ಅಭಿಮಾನಿಗಳಿಗೆ ಚಿತ್ರದ ಮೇಲೆ ನಿರೀಕ್ಷೆಯನ್ನು ಹುಟ್ಟುಹಾಕುತ್ತಿದೆ.

ಇದನ್ನೂ ಓದಿ: ಹಿಡ್ಕ ಹಿಡ್ಕ ಎಂದು ಹಾಡಿದರೂ ಒಂದು ಬಾರಿ ಕೂಡ ಅಪ್ಪಿಕೊಂಡಿಲ್ವಂತೆ..!
First published:December 1, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...