James Movie: ಜೇಮ್ಸ್​ ಚಿತ್ರಕ್ಕೆ ತೆರಿಗೆ ವಿನಾಯಿತಿ? 'ಅಪ್ಪು'ಗೆ ಉಘೇ ಉಘೇ ಎಂದ ರಾಜಕೀಯ ನಾಯಕರು

ಅಪ್ಪು ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅಪ್ಪು ನೆನಪು ಎಂದಿಗೂ ಅಮರ, ಅಪ್ಪು ಎಂದೆಂದಿಗೂ ಅಜರಾಮರ. ಹ್ಯಾಪಿ ಬರ್ತಡೇ ಅಪ್ಪು ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಕೂ ಮಾಡಿದ್ದಾರೆ.

ಜೇಮ್ಸ್

ಜೇಮ್ಸ್

  • Share this:
ಪುನೀತ್ ರಾಜ್​ಕುಮಾರ್ ಅವರು ಅಜಾತಶತ್ರು, ಅಂದರೆ ಅವರನ್ನು ಕಂಡರೆ ಆಗಲ್ಲ ಎಂದು ಹೇಳುವವರೇ ಇಲ್ಲ. ಅಂತಹ ಸರಳ ಸಜ್ಜನ ವ್ಯಕ್ತಿತ್ವ ಹೊಂದಿದ್ದ ಪುನೀತ್ ರಾಜ್​ಕುಮಾರ್ ಅವರ ಜನ್ಮದಿನವಾದ ಇಂದು ವಿವಿಧ ರಾಜಕಾರಣಿಗಳು (Karnataka Politicians) ನೆಚ್ಚಿನ ಅಪ್ಪುವನ್ನು (Appu)  ನೆನೆಸಿಕೊಂಡಿದ್ದಾರೆ. ಅಲ್ಲದೇ ಇಂದು (ಫೆಬ್ರುವರಿ 17) ಕರುನಾಡ ಯುವರತ್ನ ಅಭಿನಯದ ಜೇಮ್ಸ್ ಚಲನಚಿತ್ರ (James Movie Released) ಬಿಡುಗಡೆಯೂ ಇದ್ದು ಪಕ್ಷಾತೀತವಾಗಿ ರಾಜಕೀಯ ನಾಯಕರು ಪುನೀತ್(Puneeth Rajkumar Birthday)ಅವರನ್ನು ಸ್ಮರಿಸಿಕೊಂಡಿದ್ದಾರೆ.  ಜೊತೆಗೆ ಜೇಮ್ಸ್ ಸಿನಿಮಾಗೆ ತೆರಿಗೆ ವಿನಾಯಿತಿ ನೀಡುವ ಕುರಿತು ಒತ್ತಡ ವ್ಯಕ್ತವಾಗುತ್ತಿದೆ.

ಅಲ್ಲದೇ ಇಂದು ಬೆಳಗ್ಗೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್, ಪುನೀತ್ ರಾಜ್​ಕುಮಾರ್ ಅವರ ಜೇಮ್ಸ್ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಲು ಹಲವರು ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಈ ಬಗ್ಗೆ ಚರ್ಚಿಸುತ್ತೇವೆ. ಚರ್ಚೆ ನಡೆಸಿದ ನಂತರ ಜೇಮ್ಸ್ ಸಿನಿಮಾಗೆ ತೆರಿಗೆ ವಿನಾಯಿತಿ ನೀಡುವ ಬಗ್ಗೆ ನಿರ್ಧರಿಸುತ್ತೇವೆ ಎಂದು ತಿಳಿಸಿದ್ದಾರೆ.ನಾಡಿನ ಖ್ಯಾತ ನಟ, ಪವರ್ ಸ್ಟಾರ್ ದಿ. ಶ್ರೀ ಪುನೀತ್ ರಾಜ್‌ಕುಮಾರ್ ಅವರ ಜನ್ಮ ಜಯಂತಿಯಂದು ಅವರಿಗೆ ಗೌರವಪೂರ್ವಕ ನಮನಗಳು. ಅವರ ಸರಳ ವ್ಯಕ್ತಿತ್ವ, ಬದುಕು, ಸಾಧನೆಗಳು ಒಂದು ಸ್ಪೂರ್ತಿಯ ಸೆಲೆ. ನಮ್ಮ ನಾಡು ನುಡಿಗೆ ಅವರ ಕೊಡುಗೆಗಳನ್ನು ಎಂದೂ ಮರೆಯಲಾಗದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕೂ ಮಾಡಿ ಪುನೀತ್ ಅವರನ್ನು ನೆನೆದಿದ್ದಾರೆ.
ಬೆಟ್ಟದ ಹೂವಾಗಿ ಅರಳಿದೆ
ಎರಡು ನಕ್ಷತ್ರಗಳಾಗಿ ಮಿಂಚಿದೆ
ಅರಸುವಾಗಿ ಚಂದನವನದ ಯುವರತ್ನನಾದೆ
ವೀರ ಕನ್ನಡಿಗನಾಗಿ ಪೃಥ್ವಿಯ ಮೈತ್ರಿ ತೊರೆದು ಪರಮಾತ್ಮನ ಮಿಲನವಾದೆ

ಇದನ್ನೂ ಓದಿ: Viral Photos: ಶಿರಸಿ ಮಾರಿಕಾಂಬಾ ಜಾತ್ರೆಯಲ್ಲಿ ಪುನೀತ್ ರಾಜ್‌ಕುಮಾರ್ ಪ್ರತ್ಯಕ್ಷ! ನೀವೇ ಫೋಟೋ ನೋಡಿ

ಅಪ್ಪು ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅಪ್ಪು ನೆನಪು ಎಂದಿಗೂ ಅಮರ, ಅಪ್ಪು ಎಂದೆಂದಿಗೂ ಅಜರಾಮರ. ಹ್ಯಾಪಿ ಬರ್ತಡೇ ಅಪ್ಪು ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಕೂ ಮಾಡಿದ್ದಾರೆ.
Koo App


ಕರುನಾಡ ರತ್ನ ಡಾ. ಪುನೀತ್ ರಾಜ್ ಕುಮಾರ್ ಅವರು ಕನ್ನಡಿಗರ ಮನೆ ಮಗನಂತಿದ್ದರು. ಸರ್ಕಾರಿ ಶಾಲೆಗಳ ಅಭಿವೃದ್ಧಿ, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವುದು, ಅನಾಥ ಹೆಣ್ಣು ಮಕ್ಕಳಿಗೆ ಶಕ್ತಿಧಾಮದ ಮೂಲಕ ಆಸರೆಯಾಗಿ, ಗೋವುಗಳ ಸಂರಕ್ಷಣೆ, ಅಶಕ್ತ ಕಲಾವಿದರು ಹಾಗೂ ತನ್ನಲ್ಲಿ ಯಾರೇ ಕಷ್ಟ ಹೇಳಿಕೊಂಡು ಬಂದಾಗಲೂ ಕೊಡುಗೈ ದಾನಿಯಾಗಿ ಸಹಾಯ ಮಾಡಿದ ಮಾನವತಾವಾದಿ ಪುನೀತ್. ಇಂದು ಅವರ ಜನ್ಮದಿನದಂದು ಅವರನ್ನು ನೆನೆಯುತ್ತ ಗೌರವಪೂರ್ವಕವಾಗಿ ನಮಿಸುವೆ. #puneethrajkumar #kannada #sandalwood

- GT Devegowda (@gtdevegowda) 17 Mar 2022


ಇದನ್ನೂ ಓದಿ: James Twitter Review: ಪುನೀತ್ ರಾಜ್​ಕುಮಾರ್ 'ಜೇಮ್ಸ್' ಹೇಗಿದೆ? ಇಲ್ಲಿದೆ ಟ್ವಿಟರ್ ರಿವ್ಯೂ

ಕರುನಾಡ ರತ್ನ ಡಾ. ಪುನೀತ್ ರಾಜ್ ಕುಮಾರ್ ಅವರು ಕನ್ನಡಿಗರ ಮನೆ ಮಗನಂತಿದ್ದರು. ಸರ್ಕಾರಿ ಶಾಲೆಗಳ ಅಭಿವೃದ್ಧಿ, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವುದು, ಅನಾಥ ಹೆಣ್ಣು ಮಕ್ಕಳಿಗೆ ಶಕ್ತಿಧಾಮದ ಮೂಲಕ ಆಸರೆಯಾಗಿ, ಗೋವುಗಳ ಸಂರಕ್ಷಣೆ, ಅಶಕ್ತ ಕಲಾವಿದರು ಹಾಗೂ ತನ್ನಲ್ಲಿ ಯಾರೇ ಕಷ್ಟ ಹೇಳಿಕೊಂಡು ಬಂದಾಗಲೂ ಕೊಡುಗೈ ದಾನಿಯಾಗಿ ಸಹಾಯ ಮಾಡಿದ ಮಾನವತಾವಾದಿ ಪುನೀತ್. ಇಂದು ಅವರ ಜನ್ಮದಿನದಂದು ಅವರನ್ನು ನೆನೆಯುತ್ತ ಗೌರವಪೂರ್ವಕವಾಗಿ ನಮಿಸುವೆ ಎಂದು ಜಿ ಟಿ ದೇವೇಗೌಡ ಕೂ ಮಾಡಿದ್ದಾರೆ.
Published by:guruganesh bhat
First published: