Puneeth Rajkumar Birthday: ಅಪ್ಪುಗೆ ಗಿಫ್ಟ್​ ಅಂದ್ರೆ ತುಂಬಾ ಇಷ್ಟವಂತೆ; ಅವರಿಗೆ ಕಾರು ಉಡುಗೊರೆಯಾಗಿ ಸಿಕ್ಕಿದ್ದು ಯಾವಾಗ ಗೊತ್ತಾ?

Puneeth Rajkumar Birthday: ಅಭಿಮಾನಿಗಳ ಪ್ರೀತಿಗಿಂತ ಬೇರೆ ಗಿಫ್ಟ್​ ಇಲ್ಲ. ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಸಿಕೊಂಡರೆ ಅದೇ ಖುಷಿ. ಈ ವರ್ಷದಿಂದ ಇನ್ನಷ್ಟು ಒಳ್ಳೆಯ ಚಿತ್ರಗಳನ್ನು ಕೊಡಲು ಪ್ರಯತ್ನಿಸುವೆ-ಪುನೀತ್​ ರಾಜಕುಮಾರ್​​

news18
Updated:March 17, 2019, 1:41 PM IST
Puneeth Rajkumar Birthday: ಅಪ್ಪುಗೆ ಗಿಫ್ಟ್​ ಅಂದ್ರೆ ತುಂಬಾ ಇಷ್ಟವಂತೆ; ಅವರಿಗೆ ಕಾರು ಉಡುಗೊರೆಯಾಗಿ ಸಿಕ್ಕಿದ್ದು ಯಾವಾಗ ಗೊತ್ತಾ?
ನಟ ಪುನೀತ್​ ರಾಜಕುಮಾರ್​
news18
Updated: March 17, 2019, 1:41 PM IST
'ನನಗೆ ಚಿಕ್ಕವಯಸ್ಸಿನಿಂದಲೂ ಗಿಫ್ಟ್​ ಅಂದರೆ ಇಷ್ಟ. 18 ವರ್ಷದವನಿದ್ದಾಗ ಅಪ್ಪ- ಅಮ್ಮ ನನಗೆ ಕಾರು ಗಿಫ್ಟ್​​ ಕೊಟ್ಟಿದ್ದರು. ಅದೇ ನನ್ನ ಜೀವನದಲ್ಲಿ ನಾನು ಮರೆಯಲಾಗದ ಗಿಫ್ಟ್​​' ಎಂದು ಬರ್ತ್​​ಡೇ ಬಾಯ್​ ಪುನೀತ್​ ರಾಜಕುಮಾರ್​ ತಮ್ಮ ಹಳೆಯ ಹುಟ್ಟುಹಬ್ಬದ ಆಚರಣೆಯ ನೆನಪನ್ನು ಹಂಚಿಕೊಂಡಿದ್ದಾರೆ.

ನಟ ಪುನೀತ್​ ರಾಜ್​ಕುಮಾರ್​ಗೆ ಇಂದು 44 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಪ್ರತಿವರ್ಷದಂತೆ ಈ ಬಾರಿಯೂ ಸಹ ತಮ್ಮ ನೆಚ್ಚಿನ ನಟನಿಗೆ ಶುಭಕೋರಲು ಅಪ್ಪು ಮನೆ ಮುಂದೆ ಸಾಕಷ್ಟು ಅಭಿಮಾನಿಗಳು ಜಮಾಯಿಸಿದ್ದಾರೆ. ನಿನ್ನೆ ಮಧ್ಯರಾತ್ರಿ ಪುನೀತ್​​ ಇಲ್ಲದ ಕಾರಣ ಹುಟ್ಟುಹಬ್ಬ ಆಚರಣೆ ಇರಲಿಲ್ಲ. ಹಾಗಾಗಿ ಬೆಳಗ್ಗೆಯಿಂದಲೇ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗಾಗಿ ಕಾಯುತ್ತಿದ್ದರು.

ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಡಬಲ್​ ಗಿಫ್ಟ್​: ಪುನೀತ್​ ಹೊಸ ಸಿನಿಮಾದ ಮೋಷನ್​ ಪೋಸ್ಟರ್​ ಬಿಡುಗಡೆ..!

"ಅಭಿಮಾನಿಗಳ ಪ್ರೀತಿಗೆ ಏನು ಹೇಳಬೇಕೆಂದು ತೋಚುತ್ತಿಲ್ಲ. ಪ್ರತಿವರ್ಷ ನನ್ನ ಬರ್ತ್​​ಡೇಯನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಫ್ಯಾನ್ಸ್​​ ತರುವ ಹಲವು ಗಿಫ್ಟ್​​​​ಗಳು ಖುಷಿ ಕೊಡುತ್ತೆ. ಈ ವರ್ಷ 'ಯುವರತ್ನ' ಬಿಡುಗಡೆಯಾಗುತ್ತದೆ. 'ಜೇಮ್ಸ್​​' ಚಿತ್ರೀಕರಣದ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ. ಜೇಮ್ಸ್​ ಚಿತ್ರದ ಮೊದಲ ಪೋಸ್ಟರ್​​ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅಭಿಮಾನಿಗಳ ಪ್ರೀತಿಗಿಂತ ಬೇರೆ ಗಿಫ್ಟ್​ ಇಲ್ಲ. ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಸಿಕೊಂಡರೆ ಅದೇ ಖುಷಿ. ಈ ವರ್ಷದಿಂದ ಇನ್ನಷ್ಟು ಒಳ್ಳೆಯ ಚಿತ್ರಗಳನ್ನು ಕೊಡಲು ಪ್ರಯತ್ನಿಸುವೆ" ಎಂದು ಅಪ್ಪು ಹೇಳಿದರು.

"ಸಾಲುಮರದ ತಿಮ್ಮಕ್ಕ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿರುವುದು ಖುಷಿ ಕೊಟ್ಟಿದೆ. ಇನ್ನೂ ಈಗ ಬೇಸಿಗೆ ಬಂದಿದೆ. ನಾವುಗಳೆಲ್ಲಾ ಕಾಡು ಕಡಿದು ಮನೆ ಮಾಡಿಕೊಂಡಿದ್ದೇವೆ. ಎಲ್ಲರೂ ಮನೆ ಮುಂದೆ ನೀರಿಟ್ಟು ಪ್ರಾಣಿ-ಪಕ್ಷಿಗಳಿಗೆ ಸಹಾಯ ಮಾಡಿ" ಎಂದು ಅಭಿಮಾನಿಗಳಿಗೆ ಕರೆ ನೀಡಿದರು.

ಈ ಬಾರಿಯ ಅಪ್ಪು ಬರ್ತ್​ಡೇ ಕೊಂಚ ವಿಭಿನ್ನ. ಕೇಕ್​, ಹಾರ ತರಬೇಡಿ. ಆ ಹಣವನ್ನು ಒಳ್ಳೆಯ ಕಾರ್ಯಕ್ಕೆ ಉಪಯೋಗಿಸಿ ಎಂದು ಪುನೀತ್​ ಮನವಿ ಮಾಡಿದ್ದಾರೆ. ಈ ಬಾರಿ ನಟಸಾರ್ವಭೌಮನ ಹುಟ್ಟುಹಬ್ಬಕ್ಕೆ ಐದು ಆಲ್ಬಂ ಸಾಂಗ್ಸ್​​ ಮತ್ತು ಎರಡು ಕಿರುಚಿತ್ರ ತೆರೆಗೆ ಬರುತ್ತಿವೆ. 'ಯುವರತ್ನ' ಮತ್ತು 'ಜೇಮ್ಸ್​' ಚಿತ್ರಗಳ ಫಸ್ಟ್​​ ಲುಕ್​ ರಿಲೀಸ್​ ಆಗಿದೆ.
Loading...

ಪುನೀತ್​ ರಾಜಕುಮಾರ್​ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಚಿತ್ರತಂಡ, ಸ್ನೇಹಬಳಗ ಸೇರಿಂದತೆ ಹಲವಾರು ಮಂದಿ ಶುಭಾಷಯ ಕೋರಿದ್ದಾರೆ.













ಪುನೀತ್​ ರಾಜಕುಮಾರ್​ ಹುಟ್ಟುಹಬ್ಬಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಟ್ವೀಟ್​​ ಮಾಡುವ ಮೂಲಕ ಶುಭಕೋರಿದ್ದಾರೆ.



 

-ರಕ್ಷಾ ಜಾಸ್ಮಿನ್​

First published:March 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...