Puneeth Rajkumar: ಮಾಸದ `ಕರುನಾಡ ರತ್ನ’ನ ನೆನಪು: ಹನುಮಜಯಂತಿ ಕಾರ್ಯಕ್ರಮದಲ್ಲಿ ಪುನೀತ್ ಭಜನೆ!

ಅಪ್ಪು ಫೋಟೋ ಹಿಡಿದು ಮೆರವಣಿಗೆ

ಅಪ್ಪು ಫೋಟೋ ಹಿಡಿದು ಮೆರವಣಿಗೆ

  • Share this:
ಅಪ್ಪು(Appu), ಪವರ್​ ಸ್ಟಾರ್​(Power Star), ನಟಸಾರ್ವಭೌಮ, ಸರಳತೆಯ ಸಾಮ್ರಾಟ್​, ಬೆಟ್ಟದ ಹೂ, ಹೀಗೆ ಪುನೀತ್​ ರಾಜ್​ಕುಮಾರ್(Puneeth Rajkumar)​ ಅವರನ್ನು ಕರೆಯಲು ಇರುವ ಹೆಸರು ಒಂದೇ..?ಎರಡೇ..? ಕರುನಾಡಿನ ಮಗ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ದೈಹಿಕವಾಗಿ ಇಂದು ನಮ್ಮ ಜೊತೆ ಇಲ್ಲ. ಅವರು ನಮ್ಮನ್ನು ಅಗಲಿ ಒಂದೂವರೆ ತಿಂಗಳು ಕಳೆದಿದೆ. ಆದರೆ ಇಡೀ ಕರ್ನಾಟಕಕ್ಕೆ ಆವರಿಸಿರುವ ಸೂತಕ ಮಾತ್ರ ಹಾಗಯೇ ಇದೆ. ಎಷ್ಟೆ ಆದರೂ ಯಾರ ಮಗ ಹೇಳಿ.. ಡಾ.ರಾಜ್​​ಕುಮಾರ್(Dr. Rajkumar)​ ಅವರ ತೃತೀಯ ಪುತ್ರ ಪವರ್​ ಸ್ಟಾರ್​ ಅಪ್ಪನ ಹಾಗೇ ಅಪ್ಪು ಬದುಕಿದರೇ ಹೀಗೆ ಬದುಕಬೇಕು ಎಂದು ಎಲ್ಲರಿಗೂ ತೋರಿಸಿ ಇಹಲೋಕ ತ್ಯಜಿಸಿದ್ದಾರೆ. ಅಪ್ಪು ಇಲ್ಲ ಎಂಬ ಕಹಿ ಸತ್ಯವನ್ನು ಎಲ್ಲರೂ ಒಪ್ಪಿಕೊಂಡು ಹೋಗಬೇಕು. ಆದರೂ ಇದು ಆಗದ ಕೆಲಸ. ನಮ್ಮ ಕೆಲಸದಲ್ಲಿ ಅಪ್ಪು ಅವರನ್ನು ನೆನದು ಸಾಗಬೇಕು. ಬೇಸರದ ರಾಟೆಯೂ..ಎದೆಯಲ್ಲಿ ತಿರುಗಿ.. ತಿರುಗುವ ಈ ಭೂಮಿಯೇ ನಿಂತಿದೆ ಕೊರಗಿ.. ಅನ್ನೋ ಹಾಡಿನಂತಾಗಿದೆ ಅಪ್ಪು ಅಭಿಮಾನಿಗಳ ಜೀವನ. ಹಾಸನ ಹನುಮ ಜಯಂತಿ(Hanuma Jayanthi) ಕಾರ್ಯಕ್ರಮದಲ್ಲಿ ಪುನೀತ್​ ರಾಜ್​ಕುಮಾರ್​​ ಪೋಟೋಗಳನ್ನು ಹಿಡಿದು ಅಭಿಮಾನಿಗಳು ಕಣ್ಣೀರಿಟ್ಟಿದ್ದಾರೆ. 

ಹನುಮಜಯಂತಿ ಕಾರ್ಯಕ್ರಮದಲ್ಲಿ ಪುನೀತ್​​ ಭಜನೆ!

ಹಾಸನದಲ್ಲಿ ನಿನ್ನೆ ಹನುಮಜಯಂತಿಗ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಾವಿರಾರು ಹನುಮ ಭಕ್ತರು ಭಾಗಿಯಾಗಿದ್ದರು. ಹಾಸನ ಜಿಲ್ಲೆಯ ಬೇಲೂರಿನಲ್ಲಿ ಅದ್ಧೂರಿಯಾಗಿ ಹನುಮಜಯಂತಿ ಕಾರ್ಯಕ್ರಮ ನಡೀತು. ಇದೇ ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳು ಅಪ್ಪು ಫೋಟೋ ಹಿಡಿದುಕೊಂಡು ಮೆರವಣಿಗೆ ಮಾಡಿದ್ದಾರೆ. ಇದೇ ವೇಳೆ ಡಿಜೆ ಕಾರ್ಯಕ್ರಮ ಕೂಡ ಆಯೋಜಿಸಲಾಗಿತ್ತು. ಪುನೀತ್ ಅಭಿನಯದ ಹಾಡುಗಳನ್ನು ಒಟ್ಟಿಗೆ ಹಾಡಿದ್ದಾರೆ.ತಮ್ಮ ನೆಚ್ಚಿನ ನಾಯಕನ ನೆನೆದು ಭಾವುಕರಾಗಿದ್ದಾರೆ.


ನೋವಿನಿಂದ ಹೊರ ಬಾರದ ನಾಡಿನ ಜನತೆ!

ಹೌದು, ಅಪ್ಪು ಅವರನ್ನು ನೆನೆದು ಪ್ರತಿದಿನ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಪುನೀತ್ ಮರೆಯಾಗಿ ಎರಡು ತಿಂಗಳಾದ್ರೂ ನೋವಿನಿಂದ ನಾಡಿನ ಜನತೆ ಹೊರಬಂದಿಲ್ಲ. ಪುನೀತ್ ಅಜರಾಮರ ಎಂಬುದಕ್ಕೆ ಮತ್ತೊಮ್ಮೆ ಕಾರ್ಯಕ್ರಮ ಸಾಕ್ಷಿಯಾಯ್ತು. ಹನುಮ ಜಯಂತಿ ಕಾರ್ಯಕ್ರಮದಲ್ಲಿ ಅಪ್ಪು ನೆನೆದು ಅವರನ್ನು ದೇವರು ಎಂದು ಕೂಗುತ್ತಾ ಜೈಕಾರ ಹಾಕಿದ್ದಾರೆ. ಈ ವಿಡಿಯೋಗಳು ಇದೀಗ ಸಖತ್​ ವೈರಲ್​ ಆಗುತ್ತಿದೆ. ಇನ್ನೂ ಕೆಲವರು ಅಪ್ಪು ಅವರ ಫೋಟೋವನ್ನು ದೇವರ ಮನೆಯಲ್ಲಿಟ್ಟು ಪೂಜೆ ಮಾಡಿರುವುದನ್ನು ನೋಡಿದ್ದೇವೆ.

ಇದನ್ನು ಓದಿ: ದೊಡ್ಮನೆಯ ದೊಡ್ಡತನಕ್ಕೆ ಮತ್ತೊಂದು ನಿದರ್ಶನ: ಅಪ್ಪು ಪಡೆದಿದ್ದ 2.5 ಕೋಟಿ ಅಡ್ವಾನ್ಸ್​ ವಾಪಸ್​ ಕೊಟ್ಟ ಅಶ್ವಿನಿ!

ದೊಡ್ಮನೆ ಸೊಸೆಯ ದೊಡ್ಡ ಗುಣಕ್ಕೆ ಫ್ಯಾನ್ಸ್​ ಫಿದಾ!

ಹೌದು, ಪವರ್​ ಸ್ಟಾರ್ ಪುನೀತ್​​ ರಾಜಕುಮಾರ್​ ಒಂದು ಸಿನಿಮಾಗೆ ಡೇಟ್ಸ್​ ನೀಡಿದ್ದರು. ಜೊತೆಗೆ ಆ ನಿರ್ಮಾಪಕರು 2 ಕೋಟಿ ಅಡ್ವಾನ್ಸ್​ ಕೊಟ್ಟಿದ್ದರಂತೆ. ಪುನೀತ್ ನಿಧನದ ನಂತರ ಆ ನಿರ್ಮಾಪಕರು ಕೂಡ ಅಪ್ಪು ಇಲ್ಲ ಎಂಬುದನ್ನು ನೆನೆದು ಕಣ್ಣೀರಿಟ್ಟಿದ್ದರು. ಹಣದ ಬಗ್ಗೆ ಆ ನಿರ್ಮಾಕರು ಯಾರ ಬಳಿಯೂ ಏನೂ ಕೇಳಿಲ್ಲ. ಆದರೂ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರು ಆ ನಿರ್ಮಾಪಕರಿಗೆ ತಾವು ಕೊಟ್ಟಿರುವ 2 ಕೋಟಿ ಹಣವನ್ನು ವಾಪಸ್​ ಪಡೆಯುವಂತೆ ಕರೆ ಮಾಡಿ ಹೇಳಿದ್ದಾರೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇದನ್ನು ಓದಿ: Katrina Kaif - Vicky Kaushal ದಂಪತಿಗೆ ಮೊದಲ ಕ್ರಿಸ್​ಮಸ್​: ಪತ್ನಿಯನ್ನು ತಬ್ಬಿ ಹಿಡಿದ ಫೋಟೋ ವೈರಲ್​!

ರಾಬರ್ಟ್ ಸಿನಿಮಾದ ನಿರ್ಮಾಪಕ ಉಮಾಪತಿ ಪುನೀತ್​ ರಾಜ್​ಕುಮಾರ್​ ಅವರಿಗೆ 2,5 ಕೋಟಿ ಅಡ್ವಾನ್ಸ್​ ಕೊಟ್ಟಿದ್ದರು. ಅದನ್ನು ಡೈರಿಯಲ್ಲಿ ಅಪ್ಪು ಬರೆದಿಟ್ಟಿದ್ದರಂತೆ. ಹೀಗಾಗಿ ಆ ಹಣವನ್ನು ಪುನೀತ್​ ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ರಿರ್ಟನ್​ ಮಾಡಿದ್ದಾರೆ. 
Published by:Vasudeva M
First published: