ಡಾಕ್ಟರ್ ರಾಜ್ಕುಮಾರ್ (Dr Rajkumar) ಅವರು ತಮ್ಮ ಸಿನಿಮಾ ನೋಡುವ ಜನರನ್ನ ಅಭಿಮಾನಿ ದೇವರು ಅಂತಲೇ ಹೇಳಿದರು. ಅದು ಆ ಫ್ಯಾಮಿಲಿಯ ಸ್ಲೋಗನ್ ಆಯಿತು. ಅದು ಮನಸಿನಿಂದಲೇ ಹೇಳಿದ ಸತ್ಯವೂ ಆಗಿತ್ತು. ರಾಜ್ ಅಲ್ಲದೇ ಅವರ ಮಕ್ಕಳು (Rajkumar Family) ಅಭಿಮಾನಿಗಳನ್ನ ದೇವರು ಅಂತಲೇ ತಿಳಿದಿದ್ದಾರೆ. ಹಾಗೇನೆ ನಡೆದುಕೊಳ್ಳುತ್ತಾರೆ. ಅದೇ ಅಭಿಮಾನಿಗಳನ್ನ ತಮ್ಮ ಎದೆ ಮೇಲೆ ಹಚ್ಚೆ ಮೂಲಕ ಬರೆಸಿಕೊಳ್ಳಬೇಕು ಅನ್ನೋ ಆಸೆಯನ್ನೂ ಈ ಫ್ಯಾಮಿಲಿಯ ಪವರ್ ಸ್ಟಾರ್ (Puneeth Rajkumar) ಅಂದುಕೊಂಡಿದ್ರು. ಅದಕ್ಕೂ ಮೊದಲೇ ಅಪ್ಪು ಎಲ್ಲರ ಮನಸ್ಸಿನಲ್ಲಿ ನೆನಪಾಗಿ ಉಳಿದು ಹೋದ್ರು. ಅಪ್ಪು ಅಮರ ಅನ್ನೋಮಟ್ಟಿಗೆ ಅಪ್ಪು ಅಭಿಮಾನಿಗಳು ಎಲ್ಲೆಡೆ ಇದ್ದಾರೆ. ಈ ಅಪ್ಪು ಹೇಳಿದ ಆ ಮಾತಿನ ಒಂದು ವೀಡಿಯೋ (Puneeth Rajkumar Video viral) ವೈರಲ್ ಆಗಿದೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳ ದೇವರು
ಪವರ್ ಸ್ಟಾರ್ ಪುನಿತ್ ರಾಜಕುಮಾರ್ ಎಲ್ಲರ ಫೇವರಿಟ್ ನಾಯಕ ನಟರು. ಇಂತಹ ನಾಯಕ ನಟರ ಅಭಿಮಾನಿಗಳು ಕೇವಲ ಸಿನಿಮಾ ನೋಡುವವರಾಗಿರಲಿಲ್ಲ. ಸಿನಿಮಾಕ್ಕಾಗಿ ದುಡಿಯೋ ಅಪ್ಪು ಚಿತ್ರ ತಂಡದಲ್ಲೂ ಇರುತ್ತಿದ್ದರು.
ಅಪ್ಪು ಎಲ್ಲರ ಹೃದಯದಲ್ಲಿ ಇನ್ನೂ ಹಾಗೆ ಇದ್ದಾರೆ. ಇಂಡಸ್ಟ್ರಿಯ ಇತರ ತಾರೆಯರು ಕೂಡ ಅಪ್ಪು ಅಭಿಮಾನಿ ಆಗಿದ್ದಾರೆ. ಹೊರ ರಾಜ್ಯದಲ್ಲೂ ಅಪ್ಪುಗೆ ಅಭಿಮಾನಿಗಳಿದ್ದಾರೆ.
ಅಭಿಮಾನಿಗಳನ್ನ ಮನೆ ದೇವ್ರು ಎಂದಿದ್ದ ಪವರ್ ಸ್ಟಾರ್
ಇಷ್ಟೊಂದು ಜನರ ಪ್ರೀತಿ ಗಳಿಸಿರೋ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳನ್ನ ದೇವರು ಅಂತಲೇ ಕರೆಯುತ್ತಿದ್ದರು. ಅವರನ್ನ ದೇವರ ರೀತಿಯಲ್ಲಿಯೇ ನೋಡಿಕೊಳ್ಳುತ್ತಿದ್ದರು. ಅಂತಹ ಅಭಿಮಾನಿಗಳನ್ನ ತಮ್ಮ ಎದೆಯೊಳೆಗೆ ಇಟ್ಟುಕೊಂಡು ಅಪ್ಪು ಪ್ರೀತಿಸುತ್ತಿದ್ದರು.
Video make you more closer to#DrPuneethRajkumar❤️#Appu🥺🥺pic.twitter.com/Gpx12jxBbS
— MNV Gowda (@MNVGowda) December 12, 2022
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹೆಸರನ್ನ ಅದೆಷ್ಟೋ ಅಭಿಮಾನಿಗಳು ತಮ್ಮ ಎದೆ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಅದೆಷ್ಟೋ ಫ್ಯಾನ್ಸ್ ಅಪ್ಪು ಮುಖವನ್ನ ಎದೆ ಮೇಲೆ ಬಿಡಿಸಿಕೊಂಡಿದ್ದಾರೆ. ಆದರೆ ಇದೇ ಅಪ್ಪು ತಮ್ಮ ಅಭಿಮಾನಿಗಳನ್ನ ದೇವರು ಅಂತಲೇ ಕರೆದು, ಅದನ್ನ ಎದೆ ಮೇಲೆ ಬರೆಸಿಕೊಳ್ಳಬೇಕು ಅಂತಲೇ ಅಂದುಕೊಂಡಿದ್ದರು.
ಜೇಮ್ಸ್ ಚಿತ್ರದ ನಿರ್ಮಾಪಕ ಕಿಶೋರ್ ಹಳೇ ವೀಡಿಯೋ ವೈರಲ್
ಈ ಒಂದು ವಿಷಯವನ್ನ ಸ್ವತಃ ಅಪ್ಪು ತಮ್ಮ ಜೇಮ್ಸ್ ಚಿತ್ರದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಅವರ ಬಳಿಯೇ ಹೇಳಿದ್ದರು. ಈ ಒಂದು ವಿಚಾರವನ್ನ ಕಿಶೋರ್ ಪತ್ತಿಕೊಂಡ ಮಾಧ್ಯಮದ ಮುಂದೇನೆ ಹೇಳಿದ್ದರು. ಅದೇ ವೀಡಿಯೋ ಈಗ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆ ವೀಡಿಯೋದ ಕಂಟೆಂಟ್ ಹೀಗಿದೆ ನೋಡಿ.
ಪವರ್ ಸ್ಟಾರ್ ಅಪ್ಪು ಹೇಳಿದ ಆ ಮಾತು ಸ್ಪೂರ್ತಿದಾಯಕ
"ನನ್ನ ಎದೆ ಮೇಲೆ ಅಭಿಮಾನಿಗಳು ದೇವರು ಅಂತಲೇ ಬರೆಸಿಕೊಳ್ಳುತ್ತೇನೆ. ಚಿತ್ರೀಕರಣ ಎಲ್ಲ ಮುಗಿದ್ಮೇಲೆ ಟೈಮ್ ನೋಡಿಕೊಂಡು ಈ ಕೆಲಸ ಮಾಡುತ್ತೇನೆ" ಎಂದು ಪುನೀತ್ ರಾಜಕುಮಾರ್, ಜೇಮ್ಸ್ ಚಿತ್ರದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಮುಂದೆ ಹೇಳಿಕೊಂಡಿದ್ದರು.
ಜೇಮ್ಸ್ ಚಿತ್ರದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಅವರ ಈ ಒಂದು ವೀಡಿಯೋ ಮತ್ತೆ ಮತ್ತೆ ವೈರಲ್ ಆಗುತ್ತಲೇ, ಪುನೀತ್ ರಾಜಕುಮಾರ್ ಅವರು ಅಭಿಮಾನಿಗಳ ಬಗ್ಗೆ ಇಟ್ಟುಕೊಂಡಿದ್ದ ಪ್ರೀತಿಯನ್ನೂ ಇದು ಸಾರಿ ಸಾರಿ ಹೇಳುತ್ತಿದೆ.
ಇದನ್ನೂ ಓದಿ: Dr RajKumar Yoga Guru Secret: ರಾಜ್ ಅವರ ಯೋಗ ಗುರು ಅವರನ್ನ ಭೇಟಿಯಾದಾಗ ಆಗಿದ್ದೇನು ಗೊತ್ತೇ?
ಇನ್ನುಳಿದಂತೆ ಪುನೀತ್ ರಾಜಕುಮಾರ್ ಎಂದು ಮರೆಯಾಗದೇ ಇರೋ ತಾರೆನೇ ಆಗಿದ್ದಾರೆ. ಅಪ್ಪು ಮಾಡಿ ಹೋದ ಕೆಲಸಗಳೂ ಎಲ್ಲರಿಗೂ ಮಾದರಿನೇ ಆಗಿವೆ. ಅದನ್ನ ನೆನೆದು ಅಪ್ಪು ಫ್ಯಾನ್ಸ್ ಈಗಲೂ ಅವರನ್ನ ಮಿಸ್ ಮಾಡಿಕೊಳ್ತಾರೆ. ಆ ನೆನಪಿಗೆ ಈಗ ಹರಿದಾಡುತ್ತಿರೋ ವೀಡಿಯೋ ಮತ್ತೆ ಅಪ್ಪು ಬಗ್ಗೆ ಅಭಿಮಾನ ಪಡುವ ಹಾಗೇನೆ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ