Puneeth Rajkumar ನಮ್​ ಜೊತೆ ಇಲ್ಲ ಅಂತ ಅದೊಂದು ಜೀವಕ್ಕೆ ಗೊತ್ತೇ ಇಲ್ಲ.. `ಜೇಮ್ಸ್​’ಗೆ ವಿಶ್​ ಮಾಡಿದ ಸೋದರತ್ತೆ ನಾಗಮ್ಮ!

ಪುನೀತ್ ರಾಜ್ ಕುಮಾರ್ ಸೊದರತ್ತೆ ನಾಗಮ್ಮ ಜೇಮ್ಸ್ ಚಿತ್ರ ನೋಡುವ ಸಾಧ್ಯತೆಯಿದೆ. ಅವರಿಗೆ ಅಪ್ಪು ಇಲ್ಲ ಅನ್ನುವ ವಿಚಾರವನ್ನು ಯಾರು ಹೇಳಿಲ್ಲ. ಇನ್ನೂ ಇಂದು ಅಪ್ಪು ಹುಟ್ಟುಹಬ್ಬ, ಹೀಗಾಗಿ ನಾಗಮ್ಮ ಪಕ್ಕದಲ್ಲಿದ್ದವರು ವಿಶ್​ ಮಾಡಿ ಎಂದು ಹೇಳಿದಾಗ ನಾಗಮ್ಮ ಹುಟ್ಟುಹಬ್ಬದ ಶುಭಾಶಯಗಳು ಎಂದು ಹೇಳಿದ್ದಾರೆ.

`ಜೇಮ್ಸ್​’ಗೆ ವಿಶ್​ ಮಾಡಿದ ಸೋದರತ್ತೆ ನಾಗಮ್ಮ

`ಜೇಮ್ಸ್​’ಗೆ ವಿಶ್​ ಮಾಡಿದ ಸೋದರತ್ತೆ ನಾಗಮ್ಮ

  • Share this:
ಸ್ಯಾಂಡಲ್‌ವುಡ್‌ನಲ್ಲಿ ಹೈವೋಲ್ಟೇಜ್ ಕರೆಂಟ್ ಆಗಿದ್ದವರು ‘ಪವರ್ ಸ್ಟಾರ್’ ಪುನೀತ್ ರಾಜ್‌ಕುಮಾರ್. ಕೋಟ್ಯಂತರ ಅಭಿಮಾನಿಗಳ ಮನಗೆದ್ದಿರುವ.. ಎಲ್ಲರಿಂದ ಪ್ರೀತಿಯಿಂದ ಅಪ್ಪು ಅಂತ ಕರೆಯಿಸಿಕೊಳ್ಳುತ್ತಿದ್ದ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರ ಹುಟ್ಟುಹಬ್ಬ. ಜನಮಾನಸದಲ್ಲಿ ಅಪ್ಪು (Appu)  ಎಂದಿಗೂ ಅಮರ ಎಂದರೆ ತಪ್ಪಲ್ಲ. ಅವರು ಇಲ್ಲ ಎನ್ನುವ ಸುದ್ದಿ ಬಂದಾಗಿನಿಂದಲೂ ಅವರ ಬಗ್ಗೆ ಒಂದೆಲ್ಲ ಒಂದು ವಿಚಾರಗಳು ಹೊರಬರುತ್ತಿವೆ. ಅವರ ಸಾಮಾಜಿಕ ಕೆಲಸಗಳು, ಅವರು ಅಭಿಮಾನಿಗಳ ಜೊತೆ ಇರುತ್ತಿದ್ದ ರೀತಿ ಎಲ್ಲವೂ ಮಾದರಿ.  ಪುನೀತ್‌ ರಾಜ್‌ಕುಮಾರ್‌ ಬಗ್ಗೆ ಇಡೀ ಜಗತ್ತೇ ಮಾತಾಡಿದೆ. ಬೇರೆ ದೇಶದ ಸುದ್ದಿ ಮಾಧ್ಯಮಗಳು ಅಪ್ಪುಗೆ ನಮನ ಸಲ್ಲಿಸಿವೆ. ಇಡೀ ಜಗತ್ತಿಗೆ ಅಪ್ಪು ಅಗಲಿರುವ ವಿಚಾರ ತಿಳಿದಿದೆ. ಆದರೆ ಅವರ ಕುಟುಂಬದ ಒಬ್ಬರಿಗೆ ಮಾತ್ರ ಆ ವಿಚಾರ ತಿಳಿದಿಲ್ಲ. ಅಪ್ಪು ಬಗ್ಗೆ ಗೊತ್ತಿರದ ಸೋದರತ್ತೆ ನಾಗಮ್ಮ ‘ಜೇಮ್ಸ್​’ ಚಿತ್ರಕ್ಕೆ ಶುಭಕೋರಿದ್ದಾರೆ.

ಈ ವಿಡಿಯೋ ನೋಡಿದ್ರೆ ಕರುಳು ಕಿತ್ತು ಬರುತ್ತೆ!

ಡಾ.ರಾಜ್‌ಕುಮಾರ್‌ ಅವರ ಸಹೋದರಿ ನಾಗಮ್ಮ, ಪುನೀತ್‌ ರಾಜ್‌ಕುಮಾರ್‌ ಅವರ ಸೋದರ ಅತ್ತೆ. ಇವರಿಗೆ ಪುನೀತ್‌ರಾಜ್‌ಕುಮಾರ್‌ ನಿಧನ ಹೊಂದಿರುವ ವಿಚಾರ ಇನ್ನೂ ಕೂಡ ತಿಳಿಸಿಲ್ಲ. ಕುಟುಂಬಸ್ಥರು ಕೂಡ ಉದ್ದೇಶ ಪೂರ್ವಕವಾಗಿ ಈ ವಿಚಾರವನ್ನು ಅವರಿಂದ ಮುಚ್ಚಿಟ್ಟಿದ್ದಾರೆ. ಅವರಿಂದ ಈ ವಿಚಾರವನ್ನು ಮುಚ್ಚಿಡಲು ಮುಖ್ಯ ಕಾರಣ ಎಂದರೆ ಅವರಿಗೆ ವಯಸ್ಸಾಗಿದೆ. ಜೊತೆಗೆ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪುನೀತ್ ನಿಧನದ ವಿಚಾರ ತಿಳಿದರೆ ಅವರಿಗೆ ತಡೆದುಕೊಳ್ಳುವ ಶಕ್ತಿ ಇಲ್ಲ. ಆದರೆ, ಅಪ್ಪು ಬಗ್ಗೆ ಏನು ಗೊತ್ತಿರುದ ನಾಗಮ್ಮ ‘ಜೇಮ್ಸ್​’ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಶುಭ ಕೋರಿದ್ದಾರೆ.

ಹುಟ್ಟುಹಬ್ಬದ ಶುಭಾಶಯಗಳು ಅಪ್ಪು ಎಂದ ನಾಗಮ್ಮ!

ಪುನೀತ್ ರಾಜ್ ಕುಮಾರ್ ಸೊದರತ್ತೆ ನಾಗಮ್ಮ ಜೇಮ್ಸ್ ಚಿತ್ರ ನೋಡುವ ಸಾಧ್ಯತೆಯಿದೆ. ಅವರಿಗೆ ಅಪ್ಪು ಇಲ್ಲ ಅನ್ನುವ ವಿಚಾರವನ್ನು ಯಾರು ಹೇಳಿಲ್ಲ. ಇನ್ನೂ ಇಂದು ಅಪ್ಪು ಹುಟ್ಟುಹಬ್ಬ, ಹೀಗಾಗಿ ನಾಗಮ್ಮ ಪಕ್ಕದಲ್ಲಿದ್ದವರು ವಿಶ್​ ಮಾಡಿ ಎಂದು ಹೇಳಿದಾಗ ನಾಗಮ್ಮ ಹುಟ್ಟುಹಬ್ಬದ ಶುಭಾಶಯಗಳು ಎಂದು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಈ ವಿಡಿಯೋ ನೋಡಿ ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ.

ಇದನ್ನೂ ಓದಿ: ಲೈಫ್ ಬಾಯ್ ಸೋಪ್​​ನಲ್ಲಿ ಮೂಡಿದ `ಜೇಮ್ಸ್​’! ಅಬ್ಬಬ್ಬಾ.. ಇದನ್ನು ನೋಡೋಕೆ ಎರಡು ಕಣ್ಣು ಸಾಲದು..

ರಾಜ್​ ಕುಟುಂಬದಲ್ಲಿ ಹಿರಿಯ ಜೀವ ನಾಗಮ್ಮ!

ನಾಗಮ್ಮ ಅವರು ಸದ್ಯ ಗಾಜನೂರಿನಲ್ಲಿ ವಾಸವಿದ್ದಾರೆ. ಮಗ ಮತ್ತು ಸೊಸೆ ಅವರನ್ನು ನೋಡಿಕೊಳ್ಳುತ್ತಿದ್ದಾರೆ.ರಾಜ್‌ಕುಮಾರ್‌ ಕುಟುಂಬದಲ್ಲಿ ಈಕೆಯೆ ಹಿರಿಯ ಜೀವ. ಹಾಗಾಗಿ ಅವರ ಆರೋಗ್ಯ ಕಾಪಾಡುವುದು ಮನೆಯ ಎಲ್ಲರಿಗೂ ಬಹಳ ಮುಖ್ಯ ಆಗಿದೆ. ಪುನೀತ್‌ ರಾಜ್‌ಕುಮಾರ್‌ ನಿಧನದ ಸುದ್ದಿ ಅವರಿಗೆ ತಿಳಿಯದಂತೆ ಮನೆಯವರು ಸಾಕಷ್ಟು ಮುತುವರ್ಜಿ ವಹಿಸಿದ್ದಾರೆ. ಮನೆಯಲ್ಲಿರುವ ಪುನೀತ್‌ ರಾಜ್‌ಕುಮಾರ್‌ ಫೋಟೊಗೆ ಹಾರ ಹಾಕಿ ಪೂಜೆ ಮಾಡಲ್ಲ, ನ್ಯೂಸ್‌ ಚಾನೆಲ್‌ಗಳನ್ನು ಹಾಕುವುದಿಲ್ಲ, ಊರಿನವರು ಮನೆಗೆ ಬಂದರೆ, ನಾಗಮ್ಮ ಅವರನ್ನು ಭೇಟಿ ಮಾಡಲು ಬಿಡುವುದಿಲ್ಲ. ಹೀಗೆ ಅವರಿಂದ ಈ ವಿಚಾರವನ್ನು ಮುಚ್ಚಿಟ್ಟಿದ್ದಾರೆ ಕುಟುಂಬಸ್ಥರು.

ಇದನ್ನೂ ಓದಿ: ಅಪ್ಪು ಬ್ಯಾನರ್​ ಹಿಡಿದು ಬಾನಂಗಳದಲ್ಲಿ ಹಾರಾಡುತ್ತಿದೆ ಪುಷ್ಪಕ ವಿಮಾನ!

ಲೈಫ್​ ಬಾಯ್​ ಸೋಪಿನಲ್ಲಿ ಅರಳಿದ ‘ಜೇಮ್ಸ್​’

ಮಂಗಳೂರಿನಲ್ಲೊಬ್ಬ ಅಪ್ಪಟ ಅಪ್ಪು ಅಭಿಮಾನಿಯೊಬ್ಬರು ಲೈಫ್ ಬಾಯ್ ಸೋಪ್​​ನಲ್ಲಿ ಪುನೀತ್ ರಾಜ್‍ಕುಮಾರ್ ಅವರ ಚಿತ್ರ ರಚಿಸಿ ತಮ್ಮ ಅಭಿಮಾನವನ್ನು ವಿಶಿಷ್ಟ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ.ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಂಗಳೂರಿನ ಗಣೇಶಪುರ ನಿವಾಸಿಯಾದ ಕಲಾವಿದ ದೇವಿಕಿರಣ್ ಸೋಪ್​ನಲ್ಲಿ ಅಪ್ಪು ಚಿತ್ರ ಬಿಡಿಸಿದ್ದಾರೆ. ಕೇವಲ ಎರಡು ಗಂಟೆಗಳಲ್ಲಿ ಸೋಪ್ ಅನ್ನು ಗುಂಡು ಪಿನ್ ಮೂಲಕ ಕೊರೆದು ಪುನೀತ್ ರಾಜ್‍ಕುಮಾರ್ ಅವರ ಚಿತ್ರ ಅರಳಿಸಿದ್ದಾರೆ.
Published by:Vasudeva M
First published: