Dhanya Ramkumar: ಅಣ್ಣಾವ್ರ ಕುಟುಂಬದಿಂದ ಮೊದಲ ಹೀರೋಯಿನ್: ಸೊಸೆಯ ಚೊಚ್ಚಲ ಚಿತ್ರದ ಬಗ್ಗೆ ಅಪ್ಪು ಹೇಳಿದ್ದೇನು?

ಅಣ್ಣಾವ್ರ ಮಗಳು ಪುರ್ಣಿಮಾ-ನಟ ರಾಮ್ ಕುಮಾರ್ ಪುತ್ರ ಧೀರೆನ್ ರಾಜ್​ಕುಮಾರ್ ದಾರಿ ತಪ್ಪಿದ ಮಗ ಚಿತ್ರದೊಂದಿಗೆ ಸಿನಿರಂಗದಲ್ಲಿ ದಾರಿ ಹುಡುಕಲು ಹೊರಟಿದ್ದಾರೆ. ಹಾಗೆಯೇ ಶಿವರಾಜ್​ ಕುಮಾರ್ ಅವರ ಪುತ್ರಿ ನಿವೇದಿತಾ ಹೇಟ್ ಯೂ ರೋಮಿಯೋ ಎಂಬ ವೆಬ್​ ಸಿರೀಸ್ ಮೂಲಕ ಬಣ್ಣದ ಲೋಕದಲ್ಲಿ ನಿರ್ಮಾಪಕಿಯಾಗಿ ಕಾಲಿರಿಸಿದ್ದಾರೆ.

zahir | news18-kannada
Updated:August 21, 2019, 6:14 PM IST
Dhanya Ramkumar: ಅಣ್ಣಾವ್ರ ಕುಟುಂಬದಿಂದ ಮೊದಲ ಹೀರೋಯಿನ್: ಸೊಸೆಯ ಚೊಚ್ಚಲ ಚಿತ್ರದ ಬಗ್ಗೆ ಅಪ್ಪು ಹೇಳಿದ್ದೇನು?
puneeth rajkumar
  • Share this:
ಕನ್ನಡಿಗರ ಕಣ್ಮಣಿ ವರನಟ ಡಾ.ರಾಜ್​ಕುಮಾರ್​ ಅವರ ಮೊಮ್ಮಗಳು ಧನ್ಯಾ ರಾಮ್​ಕುಮಾರ್ ಸಿನಿರಂಗಕ್ಕೆ ಎಂಟ್ರಿ ಕೊಡುವ ವಿಚಾರ ಗೊತ್ತೇ ಇದೆ. ನಿನ್ನ ಸನಿಹಕೆ ಎಂಬ ಚಿತ್ರದೊಂದಿಗೆ ಇದೇ ಮೊದಲ ಬಾರಿಗೆ ರಾಜ್​ ಕುಟುಂಬದಿಂದ ಹಿರೋಯಿನ್ ರಂಗ ಪ್ರವೇಶವಾಗುತ್ತಿದೆ.

ಇದೀಗ ಚಿತ್ರಕ್ಕೆ ಬೆಂಗಳೂರಿನ ಬಸವನಗುಡಿ ರಸ್ತೆಯ ದೊಡ್ಡ ಗಣೇಶ ದೇವಸ್ಥಾನದಲ್ಲಿ ಸರಳವಾಗಿ ಮುಹೂರ್ತ ಪೂಜೆ ನೆರವೇರಿಸಲಾಗಿದೆ. ಈ ಸಮಾರಂಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ , ರಾಘವೇಂದ್ರ ರಾಜ್​ಕುಮಾರ್ ಹಾಗೂ ದಿನಕರ್ ತೂಗುದೀಪ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ನಿನ್ನ ಸನಿಹಕೆ ಮುಹೂರ್ತ


ಅಕ್ಕನ ಮಗಳ ಚೊಚ್ಚಲ ಸಿನಿಮಾಗೆ ಕ್ಲಾಪ್ ಮಾಡಿದ ಪವರ್​ ಸ್ಟಾರ್ ಚಿತ್ರತಂಡಕ್ಕೆ ಶುಭ ಹಾರೈಸಿದರು. ಆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ರಾಜರತ್ನ, ಹೇಗೆ ನಮ್ಮ ಕುಟುಂಬದಿಂದ ವಿನಯ್, ಧಿರೇನ್, ಗುರು ಬಣ್ಣದಲೋಕಕ್ಕೆ ಬರುತ್ತಿದ್ದಾರೆ ಹಾಗೆಯೇ ಧನ್ಯಾ ಕೂಡ ಚಿತ್ರರಂಗಕ್ಕೆ ಎಂಟ್ರಿಯಾಗಿದ್ದಾರೆ. ಒಬ್ಬ ಮಾವನಾಗಿ ನಾನು ವಿಶ್ ಮಾಡುತ್ತಿದ್ದೇನೆ. ನಮ್ಮ ಕುಟುಂಬದಿಂದ ಹೊಸ ತಲೆಮಾರಿನಲ್ಲಿ ಧನ್ಯಾ ನಾಲ್ಕನೇಯವಳು ಸಿನಿರಂಗಕ್ಕೆ ಬರುತ್ತಿರುವುದು ಎಲ್ಲರೂ ಆಶಿರ್ವಾದ ಮಾಡಿ ಎಂದು ಕೇಳಿಕೊಂಡರು.

ಧನ್ಯಾ ರಾಮ್​ಕುಮಾರ್


ಇದೇ ವೇಳೆ ರಾಜವಂಶದಿಂದ ಮೊದಲ ಹೀರೋಯಿನ್ ಬರುತ್ತಿದ್ದಾರೆ ಎಂಬ ಪ್ರಶ್ನೆಗೆ, ಇಲ್ಲಿ ಹೆಣ್ಣಾಗಿ ಗಂಡಾಗಲಿ ಇಲ್ಲ. ವೃತ್ತಿಯಲ್ಲಿ ನಾನು ಯಾರನ್ನೂ ವ್ಯತ್ಯಾಸದಿಂದ ನೋಡುವುದಿಲ್ಲ. ನನಗೆ ಯಾವತ್ತೂ ನಾಯಕಿ ಆಗ್ತೀನಿ ಎಂದು ಧನ್ಯಾ ಹೇಳಿಲ್ಲ. ಅಕ್ಕ ಹೇಳಿದ ಮೇಲೆ ಗೊತ್ತಾಯ್ತು. ನಾನು ಕಥೆ ಕೇಳಿಲ್ಲ. ಆದರೆ ಚಿತ್ರದ ಫೋಟೋಗ್ರಾಫ್ಸ್ ಎಲ್ಲವನ್ನು ನೋಡಿದ್ದೇನೆ. ಒಂದು ಒಳ್ಳೆ ಟೀಂ ಚಿತ್ರಕ್ಕಾಗಿ ಕೆಲಸ ಮಾಡುತ್ತಿದೆ ಎಲ್ಲರನ್ನು ಹರಸಬೇಕೆಂದು ಪವರ್ ಸ್ಟಾರ್ ಹೇಳಿದರು.


 
View this post on Instagram
 

Not much has changed ❤️😋 @dheerenramkumar


A post shared by Dhanya Ramkumar (@dhanya_ramkumar) on


ನಿನ್ನ ಸನಿಹಕೆ ಚಿತ್ರವು ರೊಮ್ಯಾಂಟಿಕ್ ಸಬ್ಜೆಕ್ಟ್ ಹೊಂದಿರುವ ಚಿತ್ರಕಥೆಯನ್ನು ಹೊಂದಿದ್ದು, ಇಲ್ಲಿ ಧನ್ಯಾಗೆ 'ಮದುವೆಯ ಮಮತೆಯ ಕರೆಯೋಲೆ' ಚಿತ್ರದ ಹೀರೋ ಸೂರಜ್ ಗೌಡ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ 'ರಸಿಕರ ರಾಜ'ನ ಮೊಮ್ಮಗಳ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ಕೂಡ ಹೊಸ ನಿರ್ದೇಶಕ ಸುಮನ್ ಜಾದುಗರ್. ಕನಡದ 'ಸಿಲಿಕಾನ್ ಸಿಟಿ', ತಮಿಳಿನ 'ಉತ್ತಮ ವಿಲನ್' ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ದುಡಿದಿರುವ ಸುಮನ್, ಹೊಸ ಕಥೆಯೊಂದಿಗೆ ಡೈರೆಕ್ಟರ್ ಕ್ಯಾಪ್ ಧರಿಸಿದ್ದಾರೆ.
ಅಣ್ಣಾವ್ರ ಮಗಳು ಪುರ್ಣಿಮಾ-ನಟ ರಾಮ್ ಕುಮಾರ್ ಪುತ್ರ ಧೀರೆನ್ ರಾಜ್​ಕುಮಾರ್ 'ದಾರಿ ತಪ್ಪಿದ ಮಗ' ಚಿತ್ರದೊಂದಿಗೆ ಸಿನಿರಂಗದಲ್ಲಿ ದಾರಿ ಹುಡುಕಲು ಹೊರಟಿದ್ದಾರೆ. ಹಾಗೆಯೇ ಶಿವರಾಜ್​ ಕುಮಾರ್ ಅವರ ಪುತ್ರಿ ನಿವೇದಿತಾ 'ಹೇಟ್ ಯೂ ರೋಮಿಯೋ' ಎಂಬ ವೆಬ್​ ಸಿರೀಸ್ ಮೂಲಕ ಬಣ್ಣದ ಲೋಕದಲ್ಲಿ ನಿರ್ಮಾಪಕಿಯಾಗಿ ಕಾಲಿರಿಸಿದ್ದಾರೆ. ಇನ್ನು ವಿನಯ್ ರಾಜ್​ಕುಮಾರ್ ಈಗಾಗಲೇ ನಾಯಕರಾಗಿದ್ದು, ಶೀಘ್ರದಲ್ಲೇ ಯುವರಾಜ್​ ಕುಮಾರ್ (ಗುರು) ಸಹ ಸ್ಯಾಂಡಲ್​ವುಡ್​ಗೆ ಪಾದರ್ಪಣೆ ಮಾಡಲಿದ್ದಾರೆ. 
View this post on Instagram
 

The first of many 🔥 #Guri


A post shared by Dhanya Ramkumar (@dhanya_ramkumar) on


ಇದೀಗ ಪುರ್ಣಿಮಾ-ನಟ ರಾಮ್ ಕುಮಾರ್ ಅವರ ಮಗಳು ಧನ್ಯಾ ನಿನ್ನ ಸನಿಹಕೆ ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿಯಾಗುತ್ತಿದ್ದಾರೆ. ಇದೇ ಮೊದಲ ಬಾರಿಗೆ ರಾಜ್​ ಕುಟುಂಬದಿಂದ ಹೀರೋಯಿನ್ ಬರುತ್ತಿರುವುದರಿಂದ ಚಿತ್ರದ ಹೊಸ ನಿರೀಕ್ಷೆಯನ್ನು ಹುಟ್ಟುಹಾಕಿದೆ.First published: August 21, 2019, 5:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading