Puneeth Rajkumar: ಅಪ್ಪು ಅಭಿಮಾನಿಗಳಿಗೆ ಗುಡ್ ನ್ಯೂಸ್, Amazon Primeನಲ್ಲಿ ಉಚಿತವಾಗಿ ನೋಡಿ PRK ಸಿನಿಮಾಗಳು

ಕವಲುದಾರಿ, ಮಾಯಾಬಜಾರ್, ಲಾ, ಫ್ರೆಂಚ್ ಬಿರಿಯಾನಿ ಹಾಗೂ ಪುನೀತ್ ಅಭಿನಯದ ಯುವರತ್ನ ಸಿನಿಮಾವನ್ನು ವೀಕ್ಷಿಸಬಹುದಾಗಿದೆ.

ಪುನೀತ್​ ರಾಜ್​​ಕುಮಾರ್​

ಪುನೀತ್​ ರಾಜ್​​ಕುಮಾರ್​

 • Share this:
  ಪುನೀತ್ ರಾಜ್​ಕುಮಾರ್ (Puneeth Rajkumar) ನಮ್ಮನ್ನು ಅಗಲಿ ಸುಮಾರು ಮೂರು ತಿಂಗಳು ಆಗುತ್ತಾ ಬಂತು. ಆದ್ರೆ ಕನ್ನಡಿಗರ ಮನೆ ಮನಗಳಲ್ಲಿ ಅಪ್ಪು (Appu) ಎಂದಿಗೂ ಅಮರ. ‘ರಾಜಕುಮಾರ’ ದೈಹಿಕವಾಗಿ ನಮ್ಮನ್ನು ಅಗಲಿರಬಹುದು. ಆದ್ರೆ ನೆನಪುಗಳ ಮೂಲಕ ಅವರು ನಮ್ಮೊಂದಿಗಿದ್ದಾರೆ. ಅವರ ಸಿನಿಮಾಗಳ ಮೂಲಕ, ಅವರ ಸಾಮಾಜಿಕ ಸೇವೆಗಳ ಮೂಲಕ ಚಿರಸ್ಥಾಯಿಯಾಗಿರ್ತಾರೆ. ಅಪ್ಪು ಅಮರ ಅಂತ ಅಭಿಮಾನಿಗಳು ಹೇಳ್ತಿದ್ದಾರೆ. ಇಷ್ಟು ದಿನವಾದರೂ ಸೋಶಿಯಲ್ ಸೈಟ್’ಗಳ (Social Sites) ಮೂಲಕ, ಪುನೀತ್ ಸಿನಿಮಾದ ವಿಡಿಯೋಗಳು, ಹಾಡುಗಳ ಮೂಲಕ ಪ್ರತಿನಿತ್ಯ ಪವರ್ ಸ್ಟಾರ್ (Power Star) ನೆನಪಾಗುತ್ತಲೇ ಇರ್ತಾರೆ. ಇದೀಗ ಅಪ್ಪು ಅಭಿಮಾನಿಗಳು ಖುಷಿ ಪಡೋಕೆ ಮತ್ತೊಂದು ಕಾರಣ ಸಿಕ್ಕಿದೆ. ಅಮೇಜಾನ್ ಪ್ರೈಮ್ (Amazon Prime) ಪುನೀತ್ ಅಭಿಮಾನಿಗಳಿಗೆ ಬಿಗ್ ಗಿಫ್ಟ್ ಒಂದನ್ನು ಕೊಡುತ್ತಿದೆ.

  ಹೊಸ ಮೂರು ಸಿನಿಮಾ ಜೊತೆಗೆ ಹಳೆಯ ಐದು ಸಿನಿಮಾ ಉಚಿತ
  ಪುನೀತ್ ರಾಜ್ಕುಮಾರ್ ನೆನಪಿಗಾಗಿ ಅವರ ಮಾಲೀಕತ್ವದ ಪಿಆರ್ಕೆ ಸ್ಟುಡಿಯೋದ ಹೊಸ ಮೂರು ಸಿನಿಮಾಗಳ ಎಕ್ಸ್ಕ್ಲೂಸಿವ್ ಪ್ರೀಮಿಯರ್ ಘೋಷಿಸಿದೆ. ಜೊತೆಗೆ ಅವರ ಪ್ರೊಡಕ್ಷನ್’ನ ಹಿಂದಿನ ಐದು ಸಿನಿಮಾಗಳನ್ನು ಎಲ್ಲರಿಗೂ ಉಚಿತವಾಗಿ ವೀಕ್ಷಿಸುವ ಅವಕಾಶವನ್ನು ಅಮೇಜಾನ್ ಪ್ರೈಮ್ ನೀಡುತ್ತಿದೆ.

  ಪಿಆರ್ಕೆ ಪ್ರೊಡಕ್ಷನ್ಸ್ನಿಂದ ‘ಮ್ಯಾನ್ ಆಫ್ ದಿ ಮ್ಯಾಚ್’, ‘ಒನ್ ಕಟ್ ಟು ಕಟ್’ ಮತ್ತು ‘ಫ್ಯಾಮಿಲಿ ಪ್ಯಾಕ್’ ಸಿನಿಮಾಗಳ ಎಕ್ಸ್ಕ್ಲೂಸಿವ್ ವರ್ಲ್ಡ್ ಪ್ರೀಮಿಯರ್ ಘೋಷಿಸಲಾಗಿದೆ. ಜೊತೆಗೆ ಅವರದ್ದೇ ಬ್ಯಾನರ್’ನ ಕವಲುದಾರಿ, ಮಾಯಾಬಜಾರ್, ಲಾ, ಫ್ರೆಂಚ್ ಬಿರಿಯಾನಿ ಹಾಗೂ ಪುನೀತ್ ಅಭಿನಯದ ಯುವರತ್ನ ಸಿನಿಮಾವನ್ನು ವೀಕ್ಷಿಸಬಹುದಾಗಿದೆ.

  ಇದನ್ನೂ ಓದಿ: Jaggesh Kannada Cinema: ‘ರಾಘವೇಂದ್ರ ಸ್ಟೋರ್ಸ್’ಗೆ ಬಂದ ಸಿಂಪಲ್ ಸುಂದರಿ ಶ್ವೇತಾ: ಗ್ರಾಹಕಿಯೋ, ಮಾಲಕಿಯೋ?

  ಫೆಬ್ರವರಿಯಲ್ಲಿ ಫ್ರೀಯಾಗಿ ನೋಡಿ!

  ಪುನೀತ್ ರಾಜ್ಕುಮಾರ್ ಅವರ ಇತ್ತೀಚಿನ ಐದು ಅತ್ಯಂತ ಜನಪ್ರಿಯ ಸಿನಿಮಾಗಳನ್ನು ಫೆಬ್ರವರಿ 1 ರಿಂದ ಎಲ್ಲರಿಗೂ ಉಚಿತವಾಗಿ ನೋಡಬಹುದಾಗಿದೆ. ಫೆಬ್ರವರಿ 28ರವರೆಗೆ ಅಂದರೆ ಪೂರ್ತಿ ಒಂದು ತಿಂಗಳು ಅಮೇಜಾನ್ ಪ್ರೈಮ್’ನಲ್ಲಿ ಈ ಸಿನಿಮಾಗಳನ್ನು ನೋಡಿ ಆನಂದಿಸಬಹುದಾಗಿದೆ.

  ಅಪ್ಪು ಅಭಿಮಾನಕ್ಕಾಗಿ ಈ ಸೇವೆ

  ದಿವಂಗತ ಪುನೀತ್ ರಾಜ್ಕುಮಾರ್ ಅವರ ಸೃಜನಶೀಲ ಪ್ರತಿಭೆಯನ್ನು ಗೌರವಿಸಿ, ಪ್ರೈಮ್ ವಿಡಿಯೋ ಪಿಆರ್ಕೆ ಪ್ರೊಡಕ್ಷನ್ನೊಂದಿಗೆ ಮೂರು ಹೊಸ ಕನ್ನಡ ಚಲನಚಿತ್ರಗಳ ಬಿಡುಗಡೆಯನ್ನು ಪ್ರಕಟಿಸಿದೆ. ಇದರಲ್ಲಿ ಮ್ಯಾನ್ ಆಫ್ ದಿ ಮ್ಯಾಚ್, ಒನ್ ಕಟ್ ಟು ಕಟ್ ಮತ್ತು ಫ್ಯಾಮಿಲಿ ಪ್ಯಾಕ್ ಪ್ರೈಮ್ ಸದಸ್ಯರಿಗೆ ವಿಶೇಷವಾಗಿ ಲಭ್ಯವಿರುತ್ತದೆ. ಕನ್ನಡ ಸಿನಿಮಾ ರಂಗದ ಮೇರು ವ್ಯಕ್ತಿ ಪುನೀತ್ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ನಿಟ್ಟಿನಲ್ಲಿ, ಅವರ ಐದು ಸ್ಮರಣೀಯ ಚಲನಚಿತ್ರಗಳನ್ನು ಪ್ರೈಮ್ ವೀಡಿಯೋ ಉಚಿತವಾಗಿ ಒದಗಿಸುತ್ತದೆ. ಕಾನೂನು, ಫ್ರೆಂಚ್ ಬಿರಿಯಾನಿ, ಕವಲುದಾರಿ, ಮಾಯಾಬಜಾರ್ ಮತ್ತು ಯುವರತ್ನ, ಫೆಬ್ರವರಿ 1 ರಿಂದ ಒಂದು ತಿಂಗಳವರೆಗೆ ಪ್ರೈಮ್ ಸದಸ್ಯರಲ್ಲದವರಿಗೂ ಉಚಿತವಾಗಿ ವೀಕ್ಷಿಸಲು ಲಭ್ಯವಿರುತ್ತದೆ.

  ಅಮೇಜಾನ್ ಗ್ರಾಹಕರೆಲ್ಲರೂ ಸಿನಿಮಾ ನೋಡಬಹುದು

  ಇನ್ನು ಇವೆಲ್ಲ ಕೇವಲ ಪ್ರೈಮ್ ಸದಸ್ಯರಿಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಈ ಐದು ಚಲನಚಿತ್ರಗಳನ್ನು ಅಮೆಜಾನ್ ಖಾತೆಯನ್ನು ಹೊಂದಿರುವ ಎಲ್ಲರೂ ಉಚಿತವಾಗಿ ವೀಕ್ಷಿಸಬಹುದಾಗಿದೆ.

  ಪಿಆರ್ಕೆ ಪ್ರೊಡಕ್ಷನ್ಸ್ ಜೊತೆಗಿನ ಒಡನಾಟದ ಬಗ್ಗೆ ಮಾತನಾಡುತ್ತಾ, ಅಮೆಜಾನ್ ಪ್ರೈಮ್ ವಿಡಿಯೋದ ಕಂಟೆಂಟ್ ಲೈಸೆನ್ಸಿಂಗ್ ಮುಖ್ಯಸ್ಥ ಮನೀಶ್ ಮೆಂಘಾನಿ, "ಕಳೆದ ಕೆಲವು ವರ್ಷಗಳಿಂದ, ನಾವು ಪಿಆರ್ಕೆ ಪ್ರೊಡಕ್ಷನ್ಸ್ ಜೊತೆಗೆ ಯಶಸ್ವಿ ಸಹಯೋಗವನ್ನು ಹೊಂದಿದ್ದೇವೆ. ಈ ಸಹಯೋಗವು, ದಿವಂಗತ ಪುನೀತ್ ರಾಜ್ಕುಮಾರ್ ಅವರ ಸೃಜನಶೀಲ ಪ್ರತಿಭೆ ಮತ್ತು ಕಥೆ ಹೇಳುವ ಅವರ ವಿಶಿಷ್ಟ ದೃಷ್ಟಿಗೆ ನಮ್ರ ಗೌರವವನ್ನು ಸಲ್ಲಿಸುವ ಪ್ರಯತ್ನವಾಗಿದೆ. ಚಿತ್ರರಂಗಕ್ಕೆ ಅವರ ಅಪಾರ ಕೊಡುಗೆ ಸ್ಮರಿಸುತ್ತಾ, ವಿಶ್ವದಾದ್ಯಂತ ಅವರ ಅಭಿಮಾನಿಗಳಿಗೆ ಈ ಕೊಡುಗೆ ನೀಡಲಾಗುತ್ತಿದೆ” ಎಂದಿದ್ದಾರೆ.

  ಪಿಆರ್ಕೆ ಪ್ರೊಡಕ್ಷನ್ಸ್ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಮಾತನಾಡಿ, "ಪುನೀತ್ ರಾಜ್ಕುಮಾರ್ ಅವರ ವಿಭಿನ್ನ ದೃಷ್ಟಿಕೋನವು ಹಲವಾರು ವರ್ಷಗಳಿಂದ ಪ್ರೇಕ್ಷಕರನ್ನು ಆಕರ್ಷಿಸಿತು, ಆ ಪರಂಪರೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಇದು ನಮ್ಮ ಪ್ರಯತ್ನವಾಗಿದೆ. ಪ್ರೈಮ್ ವೀಡಿಯೋ ಜೊತೆಗೆ ನಮ್ಮ ಯಶಸ್ವಿ ಒಡನಾಟ ಮತ್ತು ನಮ್ಮ ಚಲನಚಿತ್ರಗಳನ್ನು ಪ್ರಪಂಚದಾದ್ಯಂತದ ವೀಕ್ಷಕರಿಗೆ ಸಿಗುವಂತೆ ಮಾಡುತ್ತಿರುವುದಕ್ಕೆ ಸಂತೋಷ ಹೊಂದಿದ್ದೇವೆ” ಎಂದಿದ್ದಾರೆ.

  ಇದನ್ನೂ ಓದಿ: Actress Amulya: ಸೀಮಂತದ ‘ಅಮೂಲ್ಯ’ ವಿಡಿಯೋ ವೈರಲ್: ‘ಬೇಬಿ’ ನಿರೀಕ್ಷೆಯಲ್ಲಿ ‘ಐಶು’

  ಅಮೆಜಾನ್ ಪ್ರೈಮ್ ಎಕ್ಸ್​​ಕ್ಲೂಸಿವ್ ಚಲನಚಿತ್ರಗಳು, ಟಿವಿ ಶೋಗಳು, ಸ್ಟ್ಯಾಂಡ್-ಅಪ್ ಕಾಮಿಡಿ, ಅಮೆಜಾನ್ ಒರಿಜಿನಲ್ಗಳ ಅನಿಯಮಿತ ಸ್ಟ್ರೀಮಿಂಗ್, ಅಮೆಜಾನ್ ಪ್ರೈಮ್ ಮ್ಯೂಸಿಕ್, ಜಾಹೀರಾತು ಮುಕ್ತ ಸಂಗೀತಗಳ ಮೂಲಕ ಜನಪ್ರಿಯವಾಗಿದೆ. ಭಾರತದ ಅತಿದೊಡ್ಡ ಉತ್ಪನ್ನಗಳ ಮೇಲೆ ಉಚಿತ ವೇಗದ ಡೆಲಿವರಿ, ಪ್ರಮುಖ ಡೀಲ್ಗಳಿಗೆ ಮೊದಲೇ ಅವಕಾಶ, ಪ್ರೈಮ್ ರೀಡಿಂಗ್ನೊಂದಿಗೆ ಅನಿಯಮಿತ ಓದುವಿಕೆ ಮತ್ತು ಪ್ರೈಮ್ ಗೇಮಿಂಗ್ನೊಂದಿಗೆ ಮೊಬೈಲ್ ಗೇಮಿಂಗ್ ಕಂಟೆಂಟ್ ಅನ್ನು ಒದಗಿಸುತ್ತದೆ.

  ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಗೆ ಚಂದಾದಾರರಾಗುವ ಮೂಲಕವೂ ಗ್ರಾಹಕರು ಈ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಪ್ರೈಮ್ ವೀಡಿಯೊ ಮೊಬೈಲ್ ಆವೃತ್ತಿಯು ಏಕ-ಬಳಕೆದಾರ, ಮೊಬೈಲ್-ಮಾತ್ರ ಯೋಜನೆಯಾಗಿದ್ದು, ಏರ್ಟೆಲ್ ಪ್ರಿಪೇಯ್ಡ್ ಗ್ರಾಹಕರಿಗೆ ಪ್ರಸ್ತುತ ಲಭ್ಯವಿದೆ.

  ವರದಿ: ಅಣ್ಣಪ್ಪ ಆಚಾರ್ಯ
  Published by:Latha CG
  First published: