HOME » NEWS » Entertainment » PUNEETH RAJKUMAR AND YUVARATHNAA TEAM WILL START YUVASAMBHRAMA FROM TOMORROW IN NORTH KARNATAKA AE

ನಿಮ್ಮ ಊರಿಗೆ ನಿಮ್ಮ ಅಪ್ಪು: ಯುವರತ್ನನೊಂದಿಗೆ ಯುವಸಂಭ್ರಮಕ್ಕೆ ದಿನಾಂಕ ನಿಗದಿ.!

ಪುನೀತ್​ ರಾಜ್​ಕುಮಾರ್​ ಅವರು ಹೇಳಿದಂತೆ ನಾಳೆಯಿಂದ ಯುವಸಂಭ್ರಮ ಯಾತ್ರೆ ಆರಂಭಿಸಲಿದದಾರೆ. ಮಾ.21ರಂದು ಮೊದಲಿಗೆ ಕಲಬುರ್ಗಿ, ಬೆಳಗಾವಿ ಹಾಗೂ ಹುಬ್ಬಳ್ಳಿಗೆ ಪುನೀತ್​ ರಾಜ್​ಕುಮಾರ್​ ಹಾಗೂ ಯುವರತ್ನ ತಂಡ ಭೇಟಿ ನೀಡಲಿದ್ದಾರೆ. 

Anitha E | news18-kannada
Updated:March 20, 2021, 12:04 PM IST
ನಿಮ್ಮ ಊರಿಗೆ ನಿಮ್ಮ ಅಪ್ಪು: ಯುವರತ್ನನೊಂದಿಗೆ ಯುವಸಂಭ್ರಮಕ್ಕೆ ದಿನಾಂಕ ನಿಗದಿ.!
ನಾಳೆಯಿಂದ ಯುವಸಂಭ್ರಮ ಆರಂಭ
  • Share this:
ಯುವರತ್ನ ಚಿತ್ರತಂಡ ಸುದ್ದಿಗೋಷ್ಠಿಯಲ್ಲಿ ಹೇಳಿದಂತೆ ಆಗಿದ್ದರೆ ಇಂದು ಮೈಸೂರಿನಲ್ಲಿ ಯುವಸಂಭ್ರಮ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ಇಡೀ ರಾಜ್ಯದ ಜನರು ತಮ್ಮ ಜಿಲ್ಲೆಗಳಿಗೆ ಬರುವಂತೆ ಮನವಿ ಮಾಡಿದ್ದರಿಂದಾಗಿ ಮೈಸೂರಿನಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸಿತು ಚಿತ್ರತಂಡ. ಈ ವಿಷಯವನ್ನು ಪುನೀತ್​ ಫೇಸ್​ಬುಕ್​ನಲ್ಲಿ ಲೈವ್​ ಬರುವ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಅಲ್ಲದೆ ಪುನೀತ್​ ರಾಜ್​ಕುಮಾರ್​ ತಮ್ಮ ಯುವರತ್ನ ಸಿನಿಮಾದ ತಂಡದೊಂದಿಗೆ ಅಭಿಮಾನಿಗಳು ಇರುವಲ್ಲಿಗೆ ಬರುವುದಾಗಿಯೂ ತಿಳಿಸಿದ್ದರು. ಅಂದರೆ ನಿಮ್ಮ ಊರಿಗೆ ನಿಮ್ಮ ಅಪ್ಪು ಎಂದಿದ್ದ ಪುನೀತ್​, ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. ಆದರೆ ಅವರ ಭೇಟಿ ಯಾವಾಗ, ಎಲ್ಲಿ, ಸಮಯ ಏನು ಎಂದು ಸದ್ಯದಲ್ಲೇ ಬಹಿರಂಗಪಡಿಸಲಾಗುವುದು ಎಂದೂ ಹೇಳಿದ್ದರು. ಈಗ ಚಿತ್ರತಂಡ ಯುವರತ್ನ ಸಿನಿಮಾದ ಪ್ರೀ-ರಿಲೀಸ್​ ಕಾರ್ಯಕ್ರಮವಾದ ಯುವಸಂಭ್ರಮ ಯಾತ್ರೆ ಆರಂಭಿಸಲು ದಿನಾಂಕ, ಸ್ಥಳ ಹಾಗೂ ಸಮಯವನ್ನು ನಿಗದಿ ಮಾಡಿದೆ. 

ಪುನೀತ್​ ರಾಜ್​ಕುಮಾರ್​ ಅವರು ಹೇಳಿದಂತೆ ನಾಳೆಯಿಂದ ಯುವಸಂಭ್ರಮ ಯಾತ್ರೆ ಆರಂಭಿಸಲಿದದಾರೆ. ಮಾ.21ರಂದು ಮೊದಲಿಗೆ ಕಲಬುರ್ಗಿ, ಬೆಳಗಾವಿ ಹಾಗೂ ಹುಬ್ಬಳ್ಳಿಗೆ ಪುನೀತ್​ ರಾಜ್​ಕುಮಾರ್​ ಹಾಗೂ ಯುವರತ್ನ ತಂಡ ಭೇಟಿ ನೀಡಲಿದ್ದಾರೆ.
ಮಾ 21 ಅಂದರೆ ನಾಳೆ ಬೆಳಿಗ್ಗೆ 10:30ಕ್ಕೆ ಕಲಬುರ್ಗಿಯಲ್ಲಿ ಏಶಿಯನ್​ ಮಾಲ್​ ಪಕ್ಕ, ಮಧ್ಯಾಹ್ನ 1ಕ್ಕೆ ಬೆಳಗಾವಿಯಲ್ಲಿ ಐನಾಕ್ಸ್​ ಚಂದನ್​ ಪಾರ್ಕಿಂಗ್​ನಲ್ಲಿ ಹಾಗೂ ಸಂಜೆ 4:30ಕ್ಕೆ ಹುಬ್ಬಳ್ಳಿಯಲ್ಲಿ ಅರ್ಬನ್​ ಒಯಾಸಿಸ್​ ಮಾಲ್​ ಬಳಿ ಯುವಸಂಭ್ರಮ ಕಾರ್ಯಕ್ರಮ ನಡೆಯಲಿದೆ.
yuvaratna release date, Yuva Sambhrama, Puneeth Rajkumar movie Yuvaratna, Puneeth Rajkumar meet fans, ಯುವರತ್ನ ಬಿಡುಗಡೆ ದಿನಾಂಕ, ಯುವ ಸಂಭ್ರಮ, ಯುವರತ್ನ ಚಿತ್ರತಂಡ, ಅಭಿಮಾನಿಗಳನ್ನು ಭೇಟಿ ಮಾಡಲಿರುವ ಪುನೀತ್ ರಾಜ್ ಕುಮಾರ್, Yuvarathnaa Movie Pre Release Event, Yuvarathnaa Movie, Puneeth Rajkumar, Yuvarathnaa Movie Pre Release Event date, Yuvarathnaa Movie Pre Release Event venue, ಯುವರತ್ನ ಬಿಡುಗಡೆ ದಿನಾಂಕ, ಪುನೀತ್ ರಾಜ್ ಕುಮಾರ್ ಯುವರತ್ನ, ಯುವರತ್ನ ಸುದ್ದಿಗೋಷ್ಠಿ, ಯುವರತ್ನ ಪ್ರಿ-ರಿಲೀಸ್ ಕಾರ್ಯಕ್ರಮ, Yuvarathnaa Release Date, Puneeth Rajkumar Fitness Video, ಗೋಕರ್ಣದಲ್ಲಿ ಪುನೀತ್​, ಪುನೀತ್​ ಫಿಟ್ನೆಸ್​ ವಿಡಿಯೋ, Puneeth in Gokarna, Sandalwood, Puneeth Rajkumar Movie, Yuvarathna Movie, Yuvarathna Shooting Completed, Santhosh ananddram, ಪುನೀತ್ ರಾಜ್ ಕುಮಾರ್, ಯುವರತ್ನ ಸಿನಿಮಾ ಶೂಟಿಂಗ್, ಸಂತೋಷ್ ಆನಂದ್ ರಾಮ್, Yuvarathnaa Rampage Soon, Yuvarathnaa, thaman, Santhosh Anand Ram, Puneeth Rajkumar, Yuvarathna First Single, Sandalwood
ನಾಳೆಯಿಂದ ಯುವಸಂಭ್ರಮ ಆರಂಭ


ಮಾ.22ರಂದು ಬೆಳಿಗ್ಗೆ 9ಕ್ಕೆ ಬಳ್ಳಾರಿಯ ದುರ್ಗಾಂಬ ದೇವಾಲಯದಲ್ಲಿ, ಮಧ್ಯಾಹ್ನ 1ಕ್ಕೆ ಚಿತ್ರದುರ್ಗದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಹಾಗೂ ಸಂಜೆ 4:30ಕ್ಕೆ ತುಮಕೂರಿನ ಎಸ್​ಐಟಿ ಎಂಜಿನಿಯರಿಂಗ್​ ಕಾಲೇಜು ಮೈದಾನದಲ್ಲಿ ಅಪ್ಪು ಜೊತೆ ಯುವಸಂಭ್ರಮ ಕಾರ್ಯಕ್ರಮ ನಡೆಯಲಿದೆ.

ಇದನ್ನೂ ಓದಿ: Puneeth Rajkumar: ಪುನೀತ್​ ರಾಜ್​ಕುಮಾರ್​ ಟ್ವಿಟರ್​ ಖಾತೆಯಲ್ಲಿ ಹಿಂದಿ ಪದದ ಬಳಕೆ: ಗರಂ ಆದ ನೆಟ್ಟಿಗರು..!

ಮಾ.23ರಂದು ಮೈಸೂರಿನ ಮಾನಸಗಂಗೋತ್ರಿ ಆವರಣದಲ್ಲಿರುವ ಓಪನ್​ ಏರ್​ ಥಿಯೇಟರ್​ನಲ್ಲಿ ಬೆಳಿಗ್ಗೆ 1ಕ್ಕೆ ಹಾಗೂ ಮಧ್ಯಾಹ್ನ 1:30ಕ್ಕೆ ಮಂಡ್ಯದ ಸಿಲ್ವರ್​ ಜುಬಿಲಿ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಯುವರತ್ನ ಸಿನಿಮಾದ ಎರಡನೇ ಹಂತದ ಯುವಸಂಭ್ರಮ ಕಾರ್ಯಕ್ರಮ ದಿನಾಂಕವನನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸಲಾಗುವುದು ಎಂದು ಹೇಳಲಾಗುತ್ತಿದೆ.

ಸಂತೋಷ್ ಆನಂದರಾಮ್ ನಿರ್ದೇಶನದ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟಿಸಿರುವ ಸಿನಿಮಾ ಯುವರತ್ನ ಈಗಾಗಲೇ ಸಿನಿಮಾದ ರಿಲೀಸ್​ ದಿನಾಂಕ ಪ್ರಕಟಿಸಿರುವ ಚಿತ್ರತಂಡ ಈಗ ಪ್ರೀ-ರಿಲೀಸ್​ ಇವೆಂಟ್​ ತಯಾರಿಯಲ್ಲಿದೆ. ನಾಳೆಯಿಂದ ಸಿನಿಮಾದ ಪ್ರಚಾರ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ಸಿಗಲಿದೆ.

ಇದನ್ನೂ ಓದಿ: ಟಾಲಿವುಡ್​ಗೆ ಕಾಲಿಟ್ಟ ಟಗರು ಪುಟ್ಟಿ: ಮತ್ತೆ ಆರಂಭ ಎಂದ ಮಾನ್ವಿತಾ..!

ರಾಜಕುಮಾರ ಸಿನಿಮಾದ ನಂತರ ಸಂತೋಷ್​ ಆನಂದ್​ ರಾಮ್​ ಹಾಗೂ ಪುನೀತ್ ರಾಜ್​ಕುಮಾರ್​ ಕಾಂಬಿನೇಶನ್​ನಲ್ಲಿ ಮೂಡಿ ಬರುತ್ತಿರುವ ಚಿತ್ರ ಇದಾಗಿದೆ.ಏ.1ರಂದು ಯುವರತ್ನ ಸಿನಿಮಾ ರಾಜ್ಯದಾದ್ಯಂತ ರಿಲೀಸ್ ಆಗಲಿದೆ. ಈ ಸಲ ಯುವರತ್ನ ಕನ್ನಡ ಹಾಗೂ ತೆಲುಗಿನಲ್ಲಿ ತೆರೆ ಕಾಣಲಿದೆ.

ಧನಂಜಯ್​ ಈ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಪುನೀತ್​ಗೆ ನಾಯಕಿಯಾಗಿ ಸಯೇಷಾ ಕಾಣಿಸಿಕೊಂಡಿದ್ದಾರೆ. ಸಿನಿಮಾ ದಿನಾಂಕ ಪ್ರಕಟಿಸಿದ ನಂತರ ನಿರ್ನಾಪಕ ವಿಜಯ್​ ಕಿರಗಂದೂರು, ಸಂತೋಷ್​ ಆನಂದ್​ ರಾಮ್​ ಹಾಗೂ ಪುನೀತ್​ ರಾಜ್​ಕುಮಾರ್​ ಕೊಲ್ಲಾಪುರದ ಮಹಾಲಕ್ಷ್ಮಿ ಹಾಗೂ ಶಿರಡಿಯ ಸಾಯಿಬಾಬಾನ ದರ್ಶನ ಪಡೆದಿದ್ದಾರೆ.
Published by: Anitha E
First published: March 20, 2021, 12:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories