ಸ್ಯಾಂಡಲ್ವುಡ್ನ ದೊಡ್ಮನೆ ಅಂದರೆ ಅದು ಡಾ.ರಾಜ್ ಅವರ ಕುಟುಂಬ ಎಂದು ಬಿಡಿಸಿ ಹೇಳಬೇಕಿಲ್ಲ. ಇಲ್ಲಿ ಯಾವುದೇ ಹಬ್ಬವಾದರೂ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತದೆ. ಅದರಲ್ಲೂ ಗಣೇಶ ಹಬ್ಬ ಬಂದರಂತೂ ಕೇಳಲೇಬೇಕಿಲ್ಲ. ಪ್ರತಿ ವರ್ಷದಂತೆ ಈ ಸಲವೂ ದೊಡ್ಮನೆಯಲ್ಲಿ ಗಣೇಶ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ರಾಜ್ ಅವರು ಇದ್ದಾಗಿನಿಂದಲೂ ಅವರ ಮನೆಯಲ್ಲಿ ಅಯ್ಯಪ್ಪನ ಪೂಜೆ ಇರಲಿ... ಗಣಪನ ಪ್ರತಿಷ್ಠಾಪನೆ ಇರಲಿ... ಎಲ್ಲವೂ ಹಬ್ಬದಂತೆಯೇ ಆಚರಿಸಲಾಗುತ್ತದೆ. ಇದು ಡಾ. ರಾಜ್ಕುಮಾರ್ ಅವರ ಕಾಲದಿಂದಲೂ ನಡೆದುಕೊಂಡು ಬಂದಿರುವ ಆಚರಣೆ. ಈ ಸಲವೂ ದೊಡ್ಮನೆಯಲ್ಲಿ ಗಣಪನನ್ನು ಪ್ರತಿಷ್ಠಾಪಿಸಿ, ಪೂಜಿಸಲಾಯಿತು. ಅದರಲ್ಲೂ ಒಂದು ವಿಶೇಷ ಇದೆ.
ಈ ವರ್ಷವೂ ಸದಾಶಿವನಗರ ಫ್ರೆಂಡ್ಸ್ ಅಸೋಸಿಯೇಷನ್ನ ಹುಡುಗರು ಸದಾಶಿವನಗರದ ಪಿಪಿಇಸಿ ಮೈದಾನದಲ್ಲಿ ಗಣಪನ್ನು ಪ್ರತಿಷ್ಠಾಪಿಸಿದ್ದರು. ಇಲ್ಲಿಗೆ ರಾಜ್ ಕುಟುಂಬದ ಕುಡಿಗಳಾದ ರಾಘವೇಂದ್ರ ರಾಜ್ಕುಮಾರ್ ಹಾಗೂ ಅಪ್ಪು ಕುಟುಂಬದವರು ಬಂದು ಪೂಜೆ ನೆರವೇರಿಸಿದ್ದರು. ಅಷ್ಟೇ ಅಲ್ಲ ರೋರಿಂಗ್ ಸ್ಟಾರ್ ಶ್ರೀಮುರಳಿ ಸಹ ಬಂದು ವಿಘ್ನ ನಿವಾರಕನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: Kurukshetra: ನೂರು ಕೋಟಿಯತ್ತ ಕುರುಕ್ಷೇತ್ರ: ಕೌರವೇಶ್ವರನನ್ನು ಹಾಡಿ ಹೊಗಳಿದ ಜಗ್ಗೇಶ್
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ವಿನಯ್ ರಾಜ್ಕುಮಾರ್, ಯುವರಾಜ್, ಧಿರೇನ್ ರಾಮ್ಕುಮಾರ್ ಸೇರಿದಂತೆ ಇಡಿಯ ದೊಡ್ಮನೆ ಕುಟುಂಬದ ಹುಡುಗರು ತಮ್ಮ ಗೆಳೆಯರ ಜತೆ ದಾರಿಯುದ್ದಕ್ಕೂ ತಮಟೆ ಸದ್ದಿಗೆ ಟಪ್ಪಾಂಗುಚ್ಚಿ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ.
ಸದಾಶಿವನಗರ ಗಣೇಶೋತ್ಸವದಲ್ಲಿ ವಿನಯ್ ರಾಜ್ ಕುಮಾರ್ ಟಪಂಗ್ಗುಚ್ಚಿ 😍😃@PuneethRajkumar @mailrrk @NimmaShivanna @srivajreshwari @PRK_Productions @VinayRajkumar_ @yuva_rajkumar @lakki_gopal @kp_sreekanth pic.twitter.com/CdgMQheCYl
ಅದ್ರಲ್ಲಂತೂ ಧಿರೇನ್ ರಾಮ್ಕುಮಾರ್, ವಿನಯ್ ಮತ್ತು ಯುವರಾಜ್ ಅವರಂತೂ ತಮಟೆ ಸದ್ದಿಗೆ ಸಖತ್ ಆಗಿ ಕುಣಿದಿದ್ದಾರೆ. ದೊಡ್ಮನೆ ಕುಟುಂಬದವರು, ಸ್ಯಾಂಡಲ್ವುಡ್ ಸ್ಟಾರ್ ಮಕ್ಕಳು ಅನ್ನೋದನ್ನು ಮರೆತು, ಯಾವುದೇ ಅಹಂ ಇಲ್ಲದೇ ತಮ್ಮ ಏರಿಯಾದ ಹುಡುಗರ ಜತೆ ಡ್ಯಾನ್ಸ್ ಮಾಡಿ ಸಂಭ್ರಮಿಸಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ.
ಸಿನಿಮಾಗಿಂತ ಹೆಚ್ಚಾಗಿ ಹಾಟ್ ಫೋಟೋಗಳಿಂದಲೇ ಸುದ್ದಿಯಲ್ಲಿರುವ ನಟಿ ಇವರು..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ