ಪವರ್ ಸ್ಟಾರ್(Power Star) ಸಿನಿಮಾ ರಿಲೀಸ್ ಆಯ್ತು ಅಂದರೆ, ಅಲ್ಲಿ ಹಬ್ಬದ ವಾತಾವರಣ. ಚಿತ್ರಮಂದಿರಗಳ ಮುಂದೆ ದೊಡ್ಡ ಕಟೌಟ್, ದೊಡ್ಡ ದೊಡ್ಡ ಹೂವಿನ ಹಾರಗಳು. ಬ್ಯಾನರ್ಗಳಿಂದ ಚಿತ್ರಮಂದಿರಗಳೇ ಮುಚ್ಚಿ ಹೋಗುತ್ತಿದ್ದವು. ಪಟಾಕಿ ಸಿಡಿಸಿ, ಸಿಹಿ ಹಂಚಿ ಅಪ್ಪು ಸಿನಿಮಾಗಳನ್ನು ನೋಡುತ್ತಿದ್ದರು. ಇನ್ನೇಲ್ಲಿ ಅಪ್ಪು(Appu).. ಇನ್ನೇಲ್ಲಿ ಅಪ್ಪು ಸಿನಿಮಾಗಳು.. ಅಪ್ಪುನೇ ಇಲ್ಲ ಅಂದಮೇಲೆ ಇನ್ಯಾವ ಸಿನಿಮಾಗಳು.. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸಿನಿಮಾಗಳಲ್ಲಿ ಒಂದಲ್ಲ ಒಂದು ಮೆಸೇಜ್(Message) ಇದ್ದೆ ಇರುತ್ತೆ. ಇನ್ನು ಅದೆಷ್ಟೋ ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳನ್ನು ಅಪ್ಪು ರಂಜಿಸಬೇಕಿತ್ತು. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಅಪ್ಪು ಅವರ ಅಕಾಲಿಕ ಮರಣ ನೋವು ಇನ್ನೂ ಕಡಿಮೆಯಾಗಿಲ್ಲ. ಎಲ್ಲೆ ಹೋದರು, ಬಂದರೂ ಅಪ್ಪು ನೆನಪು ಇಡೀ ಕರುನಾಡನ್ನೇ ಕಾಡುತ್ತಿದೆ. ಪ್ರತಿದಿನ ಪುನೀತ್ ರಾಜ್ಕುಮಾರ್(Puneeth Rajkumar) ಅವರ ಒಂದಲ್ಲ ಒಂದು ಸುದ್ದಿಗಳು ಹೊರಬರುತ್ತಲೇ ಇದೆ. ಇದೀಗ ಅಂಥದ್ದೇ ಒಂದು ವಿಚಾರ ಬಹಿರಂಗವಾಗಿದೆ. ಈ ಸುದ್ದಿಯನ್ನು ತಿಳಿದು ಅಭಿಮಾನಿಗಳು ಮತ್ತೆ ದೇವರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಶಿವಣ್ಣ(Shivanna) ಹಾಗೂ ಪುನೀತ್ ರಾಜ್ಕುಮಾರ್ ಅವರು ಇಬ್ಬರು ಒಟ್ಟಿಗೆ ಸಿನಿಮಾ ಮಾಡುವ ವೇದಿಕೆ ಕೂಡ ರೆಡಿಯಾಗಿತ್ತಂತೆ. ಇನ್ನೇನು ಎಲ್ಲ ಶುರು ಮಾಡೋಣ ಅನ್ನುವಷ್ಟರಲ್ಲಿ ಅಪ್ಪು ನಮ್ಮನ್ನೆಲ್ಲ ಬಿಟ್ಟು ದೂರ ಹೋಗಿದ್ದಾರೆ.
ಒಂದೇ ಸಿನಿಮಾಲ್ಲಿ ಶಿವಣ್ಣ-ಪುನೀತ್ ನಟಿಸಬೇಕಿತ್ತು!
ಪುನೀತ್ ಹಾಗೂ ಶಿವಣ್ಣ ಇಬ್ಬರ ಕಾಂಬಿನೇಷನ್ನಲ್ಲಿ ಒಂದು ಸಿನಿಮಾ ಬರಬೇಕು. ಅಣ್ಣಾವ್ರ ಮಕ್ಕಳನ್ನು ಒಟ್ಟಿಗೆ ನೋಡಬೇಕು ಅಂತ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಇದಕ್ಕೆ ವೇದಿಕೆನೂ ಸಿದ್ಧವಾಗಿತ್ತು. ಶಿವಣ್ಣ ಹಾಗೂ ಪುನೀತ್ ಒಂದೇ ಸಿನಿಮಾದಲ್ಲಿ ನಟಿಸುವುದಕ್ಕೆ ಸದ್ದಿಲ್ಲದೆ ಮಾತುಕತೆ ನಡೆಯುತ್ತಿತ್ತು. ಅಷ್ಟರಲ್ಲೇ ಪುನೀತ್ ರಾಜ್ಕುಮಾರ್ ದಿಢೀರ್ ನಿಧನ ಈ ಎಲ್ಲಾ ಯೋಜನೆಗಳು ತಲೆಕೆಳಗಾಗುವಂತೆ ಮಾಡಿತ್ತು. ಅಭಿಮಾನಿಗಳು ಕೂಡ ತುಂಬಾ ವರ್ಷದಿಂದ ಶಿವಣ್ಣ-ಪುನೀತ್ ರಾಜ್ಕುಮಾರ್ ಅವರು ಒಟ್ಟಿಗೆ ನಟಿಸಬೇಕೆಂದು ಮನವಿ ಮಾಡಿಕೊಂಡಿದ್ದರು. ಅದರಂತೆ ಎಲ್ಲವೂ ರೆಡಿಯಾಗಿತ್ತು. ಈ ಸಿನಿಮಾವನ್ನು ವಿಲನ್ ಸಿನಿಮಾಗೆ ಬಂಡವಾಳ ಹೂಡಿದ್ದ ಸಿ.ಆರ್.ಮನೋಹರ್ ನಿರ್ಮಾಣ ಮಾಡಬೇಕಿತ್ತು. ಆದರೆ ಅದು ಸಾಧ್ಯವಾಗಲ್ಲ..
ಇದನ್ನು ಓದಿ : ಅಪ್ಪು ಕನಸು ನನಸು ಮಾಡುತ್ತಿರೋ ಅಶ್ವಿನಿ: ಪುನೀತ್ ಪತ್ನಿ ಕಡೆಯಿಂದ ಬಿಗ್ ಅನೌನ್ಸ್ಮೆಂಟ್!
ಯೋಗರಾಜ್ ಭಟ್ ನಿರ್ದೇಶನದಲ್ಲಿ ರೆಡಿಯಾಗಬೇಕಿದ್ದ ಸಿನಿಮಾ!
ಹೌದು, ಈ ಹಿಂದೆ ಪುನೀತ್ ರಾಜ್ಕುಮಾರ್ ಅವರ ಜೊತೆ ಯೋಗರಾಜ್ ಭಟ್ ಪರಮಾತ್ನ ಸಿನಿಮಾ ಮಾಡಿದ್ದರು. ಇದಾದ ಬಳಿಕ ಮತ್ತೆ ಅಪ್ಪುಗೆ ಆಕ್ಷನ್ ಕಟ್ ಹೇಳಬೇಕು ಅಂದುಕೊಂಡಿದ್ದರು. ಆಗ ಸಿ,ಆರ್,ಮನೋಹರ್ ಶಿವಣ್ಣ ಹಾಗೂ ಅಪ್ಪು ಅವರನ್ನು ಒಂದೇ ಸಿನಿಮಾದಲ್ಲಿ ನಟಿಸುವ ಆಸೆಯನ್ನು ಹೊಂದಿದ್ದರು. ಈ ಬಗ್ಗೆ ಅಪ್ಪು, ಶಿವಣ್ಣ ಜೊತೆ ಒಂದು ಸುತ್ತಿನ ಮಾತುಕತೆ ಕೂಡ ನಡೆದಿದ್ದಂತೆ. ಕೊರೊನಾ ಹಿನ್ನೆಲೆ ಎಲ್ಲ ಸಿನಿಮಾಗಳ ಶೂಟಿಂಗ್ ಸ್ಥಗಿತಗೊಂಡಿದ್ದು. ಎಲ್ಲವೂ ಸರಿಯಾದ ಮೇಲೆ ಒಂದಾದ ಮೇಲೆ ಒಂದು ಸಿನಿಮಾಗಳನ್ನು ಮಾಡಬೇಕೆಂದು ಅಪ್ಪು ಅಂದುಕೊಂಡಿದ್ದರು. ಯೋಗರಾಜ್ ಭಟ್ ಬಳಿ ಅಪ್ಪು ಅವರ ಡೇಟ್ಸ್ ಕೂಡ ಇತ್ತು.
ಇದನ್ನು ಓದಿ : ಫೈಟ್ ಸೀನ್ಗೆ ಎಂದೂ Dupe ಬಳಸೇ ಇಲ್ಲ ಪವರ್ ಸ್ಟಾರ್, ಅವರ ಆಕ್ಷನ್ ನೋಡಿ Allu Arjun ಕೂಡಾ ಶಾಕ್ ಆಗಿದ್ರಂತೆ!
ಅಪ್ಪು ನೆನೆದು ಸಿ.ಆರ್.ಮನೋಹರ್!
ರೇಮೊ ಸಿನಿಮಾದ ಕಾರ್ಯಕ್ರಮದಲ್ಲಿ ಸಿ. ಆರ್ ಮನೋಹರ್ ತಮ್ಮ ಡ್ರೀಮ್ ಪ್ರಾಜೆಕ್ಟ್ ರಿವೀಲ್ ಮಾಡಿದ್ದರು. "ಇವತ್ತು ಅಂತಹ ಒಬ್ಬ ಮಹಾನ್ ವ್ಯಕ್ತಿಯನ್ನ ನಾವು ಇವತ್ತು ಕಳೆದುಕೊಂಡು ಇಡೀ ಕರ್ನಾಟಕ ದು:ಖದಲ್ಲಿದೆ. ಆದರೆ, ಏನೂ ಮಾಡಲಿಕ್ಕೆ ಆಗುವುದಿಲ್ಲ. ಆ ವಿಧಿಯ ಮುಂದೆ ನಾವೆಲ್ಲಾ ನಗಣ್ಯ. ಈ ಸಂದರ್ಭದಲ್ಲಿ ಅಪ್ಪು ಸರ್ ಮತ್ತೆ ಹುಟ್ಟಿ ಬರಲಿ ಅಂತ ಬಯಸುತ್ತೇನೆ." ಎಂದ ಸಿ.ಆರ್. ಮನೋಹರ್ ಭಾವುಕರಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ