12 ವರ್ಷದಿಂದ ಅಜ್ಜಿ ಕಂಡಿದ್ದ ಕನಸು; ಕೊನೆಗೂ ನನಸು ಮಾಡಿದ ಪುನೀತ್ ರಾಜ್​ಕುಮಾರ್​

Puneeth Rajkumar: ಜೋಯಿಡಾದ ಬಾಳೆಗೌಡ ನಾಯ್ಕ ಮತ್ತು ಇವರ ಪತ್ನಿ ಕರಿಯವ್ವ ಇಬ್ಬರು ಡಾ. ರಾಜ್​ ಕುಮಾರ್​ ಅಭಿಮಾನಿ. ಗೋಕಾಕ್​​ ಚಳುವಳಿ ವೇಳೆ ಡಾ. ರಾಜ್​ಕುಮಾರ್​ ಜೊತೆಗೆ ಬಾಳೆಗೌಡ ನಾಯ್ಕ ಕೂಡ ಪಾಲ್ಗೊಂಡಿದ್ದರು.

ನಟ ಪುನೀತ್​ ರಾಜ್​ ಕುಮಾರ್​ - ಕರಿಯವ್ವ

ನಟ ಪುನೀತ್​ ರಾಜ್​ ಕುಮಾರ್​ - ಕರಿಯವ್ವ

 • Share this:
  ಸಾಮಾನ್ಯವಾಗಿ ಸಿನಿಮಾ ಸ್ಟಾರ್​ ನಟ, ನಟಿಯರನ್ನು ಹತ್ತಿರದಿಂದ ನೋಡಬೇಕು, ಮಾತನಾಡಬೇಕು ಎಂಬ ಆಸೆ ಹೆಚ್ಚಿನವರಿಗೆ ಇರುತ್ತದೆ. ಅಭಿಮಾನಿಯಾದವನಿಗೆ ಇಂತಹ ಆಸೆಗಳು ಇರುವುದು ಸಾಮಾನ್ಯ. ಅದರಂತೆ ಇಲ್ಲೊಬ್ಬರು 75 ವರ್ಷ ಅಜ್ಜಿ 12 ವರ್ಷದಿಂದ ನಟ ಪುನೀತ್​ ರಾಜ್​ ಕುಮಾರ್​ ಅವರನ್ನು ಭೇಟಿ ಮಾಡಬೇಕು ಎಂಬ ಕನಸು ಕಟ್ಟಿಕೊಂಡಿದ್ದರು. ಅದರಂತೆ ಇದೀಗ ಅವರ ಕನಸನ್ನು ಅಪ್ಪು ನನಸು ಮಾಡಿದ್ದಾರೆ.
  ಜೋಯಿಡಾದ ಬಾಳೆಗೌಡ ನಾಯ್ಕ ಮತ್ತು ಇವರ ಪತ್ನಿ ಕರಿಯವ್ವ ಇಬ್ಬರು ಡಾ. ರಾಜ್​ ಕುಮಾರ್​ ಅಭಿಮಾನಿ. ಗೋಕಾಕ್​​ ಚಳುವಳಿ ವೇಳೆ ಡಾ. ರಾಜ್​ಕುಮಾರ್​ ಜೊತೆಗೆ ಬಾಳೆಗೌಡ ನಾಯ್ಕ ಕೂಡ ಪಾಲ್ಗೊಂಡಿದ್ದರು.


  ಇತ್ತೀಚೆಗೆ ಕಾಳಿ ನದಿ ಸಾಕ್ಷ್ಯಚಿತ್ರ ಶೂಟಿಂಗ್​ನಲ್ಲಿ ನಟ ಪುನೀತ್​ ರಾಜ್​ಕುಮಾರ್​ ಭಾಗಿಯಾಗಿದ್ದರು. ಜೋಯಿಡಾದ ಬಳಿ ಶೂಟಿಂಗ್​ ನಡೆಯುತ್ತಿತ್ತು. ಈ ವೇಳೆ ಕರಿಯವ್ವ (75) ಅವರು ಪುನೀತ್​ ರಾಜ್​ಕುಮಾರ್​ ಅವರನ್ನು ಭೇಟಿ ಮಾಡಿದ್ದಾರೆ.  ಕೆಲಹೊತ್ತು ಕರಿಯವ್ವ ಜೊತೆಗೆ ಪುನೀತ್​ ರಾಜ್​ಕುಮಾರ್​ ಮಾತನಾಡಿದ್ದಾರೆ. ಅವರ ಅಭಿಮಾನವನ್ನು ಕಂಡು ಅಪ್ಪು ಭಾವುಕರಾಗಿದ್ದಾರೆ. 12 ವರ್ಷದಿಂದ ನೋಡಬೇಕೆಂದಿದ್ದ ಅಜ್ಜಿಯ ಕನಸನ್ನು ದೊಡ್ಮನೆ ಹುಡುಗ ನನಸು ಮಾಡಿದ್ದಾರೆ.
  Published by:Harshith AS
  First published: