• Home
  • »
  • News
  • »
  • entertainment
  • »
  • Puneeth Rajkumar: 'ನಾನು ಹುಷಾರಾಗಿದ್ದೀನಿ, ಡೋಂಟ್ ವರಿ' ಎಲ್ಲೆಡೆ ಪೋಸ್ಟ್ ವೈರಲ್, ಅಪ್ಪು ಮತ್ತೆ ಹುಟ್ಟಿ ಬನ್ನಿ!

Puneeth Rajkumar: 'ನಾನು ಹುಷಾರಾಗಿದ್ದೀನಿ, ಡೋಂಟ್ ವರಿ' ಎಲ್ಲೆಡೆ ಪೋಸ್ಟ್ ವೈರಲ್, ಅಪ್ಪು ಮತ್ತೆ ಹುಟ್ಟಿ ಬನ್ನಿ!

ಅಪ್ಪು ಮತ್ತೆ ಹುಟ್ಟಿ ಬನ್ನಿ!

ಅಪ್ಪು ಮತ್ತೆ ಹುಟ್ಟಿ ಬನ್ನಿ!

'ನಾನು ಹುಷಾರಾಗಿದ್ದೀನಿ, ಡೋಂಟ್ ವರಿ, ನಿಮ್ಮೆಲ್ಲರ ಕಾಳಜಿಗೆ ಧನ್ಯವಾದಗಳು' ಈ ಪೋಸ್ಟ್ ನ್ನು ಮತ್ತೊಮ್ಮೆ ಹಾಕಿ ಅಪ್ಪು ಸರ್ ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ.

  • News18 Kannada
  • Last Updated :
  • Karnataka, India
  • Share this:

    ಒಂದು ವರ್ಷವಾದ್ರೂ ಒಂದು ಸಾವು (Death) ಅಭಿಮಾನಿಗಳನ್ನು ಕಾಡುತ್ತಲೇ ಇದೆ. ಅವರ ನೆನೆದ ತಕ್ಷಣ ಕಣ್ಣೀರು ಬರುತ್ತೆ. ಸಂಬಂಧಿಕರಲ್ಲ, ಒಡ ಹುಟ್ಟಿದವರಲ್ಲ, ಸ್ನೇಹಿತರಲ್ಲ, ಸಹದ್ಯೋಗಿಯಲ್ಲ, ಆದ್ರೂ ಯಾಕಿಷ್ಟು ಅವರ ಸಾವು ನೆನೆದಾಗ ನೋವಾಗುತ್ತೆ. ಹೌದು ಪುನೀತ್ ರಾಜ್ ಕುಮಾರ್ (Puneeth Rajkumar) ಆ ಎಲ್ಲಾ ಸಂಬಂಧಗಳಿಗಿಂದ ಮಿಗಿಲಾದವರು. ಅಭಿಮಾನಿಗಳನ್ನು ದೇವರಂತೆ (God) ಕಂಡವರು. ಎಷ್ಟೋ ಮನೆಗೆ ಬೆಳಕಾದವರು. ಅವರ ಸಾವು ನೆನೆದ್ರೆ ಈಗ ಕೂಡ ನೋವಾಗುತ್ತೆ. ಪುನೀತ್ ರಾಜ್‍ಕುಮಾರ್ ನಮ್ಮನ್ನು ಅಗಲಿ ಒಂದು ವರ್ಷವಾಗಿದೆ. ವರ್ಷದ ಪುಣ್ಯ ತಿಥಿ ಬಂದ್ರೂ 'ಆಕಾಶ್' ನನ್ನು ಮರೆಯಲು ಸಾಧ್ಯವಾಗುತ್ತಿಲ್ಲ. ಈ ನಡುವೆ ಒಂದು ಪೋಸ್ಟ್ ಎಲ್ಲೆಡೆ ಹರಿದಾಡ್ತಿದೆ. 'ನಾನು ಹುಷಾರಾಗಿದ್ದೀನಿ, ಡೋಂಟ್ ವರಿ' ಎನ್ನುವ ಪುನೀತ್ ಪೋಸ್ಟ್ (Post) ವೈರಲ್ (Viral) ಆಗಿದೆ.


    2018 ರಲ್ಲಿ ಮಾಡಿದ್ದ ಪೋಸ್ಟ್
    4 ವರ್ಷದ ಹಿಂದೆ ಅಂದ್ರೆ, 2018ರಲ್ಲಿ ಪುನೀತ್ ರಾಜ್‍ಕುಮಾರ್ ಅವರಿಗೆ ಹುಷಾರಿಲ್ಲ ಎಂಬ ಗಾಳಿ ಸುದ್ದಿ ಹರಡಿತ್ತು. ಎಲ್ಲರೂ ಗಾಬರಿಯಾಗಿದ್ದರು. ಅಭಿಮಾನಿಗಳು ಸಹ ಭಯಪಟ್ಟಿದ್ದರು.


    ಆಗ ಪುನೀತ್ ರಾಜ್‍ಕುಮಾರ್ ಒಂದು ಪೋಸ್ಟ್ ಮಾಡಿದ್ದರು. 'ನಾನು ಹುಷಾರಾಗಿದೀನಿ, ಡೋಂಟ್ ವರಿ, ನಿಮ್ಮೆಲ್ಲರ ಕಾಳಜಿಗೆ ಧನ್ಯವಾದಗಳು' ಎಂದು ಫೇಸ್‍ಬುಕ್ ಪೋಸ್ಟ್ ಹಂಚಿಕೊಂಡಿದ್ದರು. ಆ ಪೋಸ್ಟ್ ಈಗೆ ಎಲ್ಲೆಡೆ ವೈರಲ್ ಆಗ್ತಾ ಇದೆ. ಎಲ್ಲರೂ ತಮ್ಮ ಸ್ಟೇಟಸ್ ಹಾಕಿಕೊಳ್ತಾ ಇದ್ದಾರೆ.


    ಮತ್ತೆ ಅದೇ ಪೋಸ್ಟ್ ಹಾಕಿ ಸರ್
    'ನಾನು ಹುಷಾರಾಗಿದ್ದೀನಿ, ಡೋಂಟ್ ವರಿ, ನಿಮ್ಮೆಲ್ಲರ ಕಾಳಜಿಗೆ ಧನ್ಯವಾದಗಳು' ಈ ಪೋಸ್ಟ್ ನ್ನು ಮತ್ತೊಮ್ಮೆ ಹಾಕಿ ಅಪ್ಪು ಸರ್ ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ. ಸಿನಿಮಾದ ರೀತಿ ಏನಾದ್ರೂ ಜಾದು ಮಾಡಪ್ಪ ದೇವರೇ, ಅಪ್ಪು ಸರ್ ನ ವಾಪಸ್ ಕಳಿಸಿಕೊಡಿ ಎಂದು ಬೇಡಿಕೊಳ್ತಾ ಇದ್ದಾರೆ. ಸಿನಿಮಾಗಳಲ್ಲಿ ಹೀರೋ ಸತ್ತರೂ, ನಿಜ ಜೀವನದಲ್ಲಿ ಇರುತ್ತಾರೆ. ಹಾಗೇ ಅಪ್ಪು ಸರ್ ಬದುಕಿ ಬರಲಿ ಎಂದು ಅಭಿಮಾನಿಗಳು ಕೇಳಿಕೋಳ್ತಾ ಇದ್ದಾರೆ.


    ಇದನ್ನೂ ಓದಿ: BBK Season 09: ಎಲ್ಲೆಲ್ಲೂ ಅಪ್ಪು ಆರಾಧನೆ, ಪುನೀತ್ ರಾಜ್‍ಕುಮಾರ್ ನೆನೆದ ಬಿಗ್ ಬಾಸ್ ಮಂದಿ! 


    ಪುನೀತ್ ವರ್ಷದ ಪುಣ್ಯ ತಿಥಿ
    ಅಪ್ಪು ಇಂದಿಗೆ ನಮ್ಮನ್ನು ಅಗಲಿ ಒಂದು ವರ್ಷ ಕಳೆಯಿತು. ವರ್ಷದ ಪುಣ್ಯ ತಿಥಿಗೆ ಎಲ್ಲೆಡೆ ಅಪ್ಪು ಆರಾಧನೆ ನಡೆಯುತ್ತಿದೆ. ಅಪ್ಪು ಸಮಾಧಿ ದರ್ಶನ ಮಾಡಲು ಸಾವಿರಾರು ಅಭಿಮಾನಿಗಳು ದೂರದ ಊರುಗಳಿಂದ ಬರುತ್ತಿದ್ದಾರೆ. ಪ್ರೀತಿಯ ದೇವರ ದರ್ಶನ ಮಾಡಲು ಬರುತ್ತಿದ್ದಾರೆ. ದೂರದ ಊರಿನ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಕೂಡ ಮಾಡಲಾಗಿದೆ. ಅಷ್ಟೋ ಮಂದಿ ಅಪ್ಪು ನೆನೆದು ಕಣ್ಣೀರು ಹಾಕುತ್ತಿದ್ದಾರೆ.


    Puneeth Rajkumar death anniversary, fans share the 4 years back Puneeth facebook post, Puneeth films, Puneeth songs, 'ನಾನು ಹುಷಾರಾಗಿದ್ದೀನಿ, ಡೋಂಟ್ ವರಿ' ಎಲ್ಲೆಡೆ ಪೋಸ್ಟ್ ವೈರಲ್, ಅಪ್ಪು ಮತ್ತೆ ಹುಟ್ಟಿ ಬನ್ನಿ, kannada news, karnataka news.
    ಅಪ್ಪು ಮತ್ತೆ ಹುಟ್ಟಿ ಬನ್ನಿ!


    ಗಂಧದಗುಡಿ ಸಿನಿಮಾ ಅದ್ಭುತ
    ಪುನೀತ್ ರಾಜ್‍ಕುಮಾರ್ ತುಂಬಾ ಕನಸಿಟ್ಟು ಮಾಡಿದ ಪ್ರಾಜೆಕ್ಟ್ ಗಂಧದಗುಡಿ. ನಿನ್ನೆ ಗಂಧದಗುಡಿ ಸಿನಿಮಾ ರಿಲೀಸ್ ಆಗಿದೆ. ಚಿತ್ರ ನೋಡಿದ ಪ್ರತಿಯೊಬ್ಬರು ವಾವ್ ಅದ್ಭುತವಾದ ಸಿನಿಮಾ ಎಂದಿದ್ದಾರೆ. ನೆಲ, ಜಲ, ಕಾಡು, ಪ್ರಾಣಿ, ಪಕ್ಷಿಗಳ ಜೀವ ಸಂಕೋಲೆ ಉಳಿಸಬೇಕು ಎಂದು ಸಿನಿಮಾ ಮೂಲಕ ರಾಜ್ಯದ ಜನರಿಗೆ ಸಂದೇಶ ನೀಡಿದ್ದಾರೆ.


    Puneeth Rajkumar death anniversary, fans share the 4 years back Puneeth facebook post, Puneeth films, Puneeth songs, 'ನಾನು ಹುಷಾರಾಗಿದ್ದೀನಿ, ಡೋಂಟ್ ವರಿ' ಎಲ್ಲೆಡೆ ಪೋಸ್ಟ್ ವೈರಲ್, ಅಪ್ಪು ಮತ್ತೆ ಹುಟ್ಟಿ ಬನ್ನಿ, kannada news, karnataka news.
    ಅಪ್ಪು


    ಇದನ್ನೂ ಓದಿ: BBK Season 09: ಅಣ್ಣ ಎಂದು ರಾಕೇಶ್ ಜೊತೆ ಕ್ಲೋಸ್ ಆಗಿದ್ದ ಕಾವ್ಯಶ್ರೀ ಕಣ್ಣೀರು! ಅವರಿಬ್ಬರ ಮನಸ್ಥಾಪಕ್ಕೆ ಕಾರಣ ಏನು? 


    ಸಿನಿಮಾ ನೋಡಿದವರು ಕಣ್ಣೀರು
    ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಕೈ ಹಿಡಿದು ಕಾಡು ತೋರಿಸುತ್ತಾರೆ. ಕೊನೆಯಲ್ಲಿ ನಮ್ಮನ್ನು ಬಿಟ್ಟು ಹೋಗಿದ್ದಾರೆ. ಆ ನೋವು ಅಭಿಮಾನಿಗಳನ್ನು ಕಾಡುತ್ತಾ ಇದೆ. ಸಿನಿಮಾದ ಮೂಲಕ ಮತ್ತೊಮ್ಮೆ ಅಪ್ಪುವನ್ನು ಕಣ್ತುಂಬಿಕೊಂಡವರು, ಕಣ್ಣೀರು ಹಾಕುತ್ತಾ ಸಿನಿಮಾ ಹಾಲ್‍ನಿಂದ ಹೊರ ಬಂದಿದ್ದಾರೆ.

    Published by:Savitha Savitha
    First published: