ಪುನೀತ್ ರಾಜ್ಕುಮಾರ್ (Puneeth Rajkumar) ನಮ್ಮನ್ನು ಅಗಲಿ ಇವತ್ತಿಗೆ ಒಂದು ವರ್ಷ (1 Year) ಆಯ್ತು. ಆದರೆ ಅವರನ್ನು ಮರೆಯಲು ಆಗುತ್ತಿಲ್ಲ. ಅವರ ನೆನಪುಗಳು ಇಂದಿಗೂ ಕಾಡುತ್ತಿವೆ. ಅಭಿಮಾನಿಗಳು ಇಂದಿಗೂ ಕಣ್ಣೀರಿಡುತ್ತಿದ್ದಾರೆ. ಅವರ ಚಿತ್ರಗಳ ಮೂಲಕ ಅವರು ಇನ್ನೂ ಜೀವಂತವಾಗಿದ್ದಾರೆ. ಗಂಧದಗುಡಿ ನಿನ್ನೆ ರಿಲೀಸ್ ಆಗಿದ್ದು. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೇ ವರ್ಷದ ಪುಣ್ಯ ತಿಥಿಗೆ (Death Anniversary) ಎಲ್ಲೆಡೆ ಅಪ್ಪು ಆರಾಧನೆ ನಡೆಯುತ್ತಿದೆ. ಅಪ್ಪು ಸಮಾಧಿ ದರ್ಶನ ಮಾಡಲು ಸಾವಿರಾರು ಅಭಿಮಾನಿಗಳು (Fans) ಬರುತ್ತಿದ್ದಾರೆ. ರಾಜ್ಕುಮಾರ್ ಕುಟುಂಬದವರು ಸಹ ಸಮಾಧಿಗೆ ಬಂದು ಪೂಜೆ ಸಲ್ಲಿಸಿದ್ದಾರೆ. ಅಲ್ಲದೇ ಅಶ್ವಿನಿ (Ashwini) ಅವರು ಭಾವನಾತ್ಮಕ ಪೋಸ್ಟ್ (Emotional Post) ಮಾಡಿದ್ದಾರೆ. ಅಪ್ಪುವನ್ನು ಸದಾ ಕಾಲ ಅವರನ್ನು ಜೀವಂತವಾಗಿರಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
ಅಶ್ವಿನಿ ಅವರ ಪ್ರತ್ರದಲ್ಲಿ ಏನಿದೆ?
ನೆನಪಿನ ಸಾಗರದಲ್ಲಿ ಎಂಬ ಸಾಲುಗಳೊಂದಿಗೆ ಪತ್ರ ಆರಂಭಿಸಿದ್ದಾರೆ ಅಶ್ವಿನಿ. 'ಅಪ್ಪು ಅವರು ನಮ್ಮ ನೆನಪುಗಳಲ್ಲಿ ಮಾತ್ರವಲ್ಲದೆ, ನಮ್ಮ ಆಲೋಚನೆಗಳಲ್ಲಿ, ನಾವು ಮಾಡುವ ಸತ್ಕಾರ್ಯಗಳಲ್ಲಿ, ನಮ್ಮ ನಡುವೆ ಸದಾ ಜೀವಂತವಾಗಿದ್ದಾರೆ. ಅವರ ಕನಸು ಮತ್ತು ಮೌಲ್ಯಗಳನ್ನು ಜೀವಂತವಾಗಿಡಲು ನೂರಾರು ಕುಟುಂಬ ಸದಸ್ಯರು, ಅವರ ಸಾವಿರಾರು ಸ್ನೇಹಿತರು ಹಾಗು ಕೋಟ್ಯಾಂತರ ಅಭಿಮಾನಿಗಳಿಂದ ನಾನು ಪಡೆದ ಬೆಂಬಲದ ಶಕ್ತಿಯೇ ನನಗೆ ದಾರಿ ಮಾಡಿಕೊಟ್ಟಿದೆ.
ಅಪ್ಪು ಅವರ ಮೇಲೆ ನಿಮ್ಮೆಲ್ಲರಿಗೆ ಇರುವ ಪ್ರೀತಿ ಮತ್ತು ಗೌರವದಿಂದ, ಸದಾ ಕಾಲ ಅವರನ್ನು ಜೀವಂತವಾಗಿರಿಸಿದ್ದಕ್ಕಾಗಿ ಎಲ್ಲರಿಗೂ ನನ್ನ ನಮನಗಳು' ಎಂದು ಅಶ್ವಿನಿ ಪುನೀತ್ ರಾಜ್ಕುಮರ್ ಭಾವನಾತ್ಮಕ ಟ್ವೀಟ್ ಮಾಡಿದ್ದಾರೆ.
ನೆನಪಿನ ಸಾಗರದಲ್ಲಿ ಒಂದು ವರ್ಷ...
In the ocean of memories...#DrPuneethRajkumar pic.twitter.com/7J702hv6zG
— Ashwini Puneeth Rajkumar (@Ashwini_PRK) October 29, 2022
ಪುನೀತ್ ವರ್ಷದ ಪುಣ್ಯ ತಿಥಿ
ಅಪ್ಪು ಇಂದಿಗೆ ನಮ್ಮನ್ನು ಅಗಲಿ ಒಂದು ವರ್ಷ ಕಳೆಯಿತು. ವರ್ಷದ ಪುಣ್ಯ ತಿಥಿಗೆ ಎಲ್ಲೆಡೆ ಅಪ್ಪು ಆರಾಧನೆ ನಡೆಯುತ್ತಿದೆ. ಅಪ್ಪು ಸಮಾಧಿ ದರ್ಶನ ಮಾಡಲು ಸಾವಿರಾರು ಅಭಿಮಾನಿಗಳು ದೂರದ ಊರುಗಳಿಂದ ಬರುತ್ತಿದ್ದಾರೆ. ಪ್ರೀತಿಯ ದೇವರ ದರ್ಶನ ಮಾಡಲು ಬರುತ್ತಿದ್ದಾರೆ. ದೂರದ ಊರಿನ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಕೂಡ ಮಾಡಲಾಗಿದೆ. ಅಷ್ಟೋ ಮಂದಿ ಅಪ್ಪು ನೆನೆದು ಕಣ್ಣೀರು ಹಾಕುತ್ತಿದ್ದಾರೆ.
ಇದನ್ನೂ ಓದಿ: Punit Rajkumar: ನವೆಂಬರ್ 1ಕ್ಕೆ ಪುನೀತ್ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ, ಅತಿಥಿಯಾಗಿ ಬರಲಿದ್ದಾರೆ ಜೂನಿಯರ್ ಎನ್ಟಿಆರ್
ಗಂಧದಗುಡಿ ಸಿನಿಮಾ ಅದ್ಭುತ
ಪುನೀತ್ ರಾಜ್ಕುಮಾರ್ ತುಂಬಾ ಕನಸಿಟ್ಟು ಮಾಡಿದ ಪ್ರಾಜೆಕ್ಟ್ ಗಂಧದಗುಡಿ. ನಿನ್ನೆ ಗಂಧದಗುಡಿ ಸಿನಿಮಾ ರಿಲೀಸ್ ಆಗಿದೆ. ಚಿತ್ರ ನೋಡಿದ ಪ್ರತಿಯೊಬ್ಬರ ವಾವ್ ಅದ್ಭುತವಾದ ಸಿನಿಮಾ ಎಂದಿದ್ದಾರೆ. ನೆಲ, ಜಲ, ಕಾಡು, ಪ್ರಾಣಿ, ಪಕ್ಷಿಗಳ ಜೀವ ಸಂಕೋಲೆ ಉಳಿಸಬೇಕು ಎಂದು ಸಿನಿಮಾ ಮೂಲಕ ರಾಜ್ಯದ ಜನರಿಗೆ ಸಂದೇಶ ನೀಡಿದ್ದಾರೆ.
ಕರ್ನಾಟಕ ರತ್ನ ಪ್ರಶಸ್ತಿ
ಕನ್ನಡ ರಾಜ್ಯೋತ್ಸವದ ದಿನ ಅಂದ್ರೆ ನವೆಂಬರ್ 01ರಂದು ಅಗಲಿದ ಪುನೀತ್ ರಾಜ್ಕುಮಾರ್ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತೆ. ಆ ಕಾರ್ಯಕ್ರಮಕ್ಕೆ ಜೂನಿಯರ್ ಎನ್ಟಿಆರ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ವಿಧಾನಸೌಧದಲ್ಲಿ ಈ ಸಮಾರಂಭ ನಡೆಯಲಿದೆ. ಕನ್ನಡ ರಾಜ್ಯೋತ್ಸವದ ದಿನವೇ ಅಪ್ಪುಗೆ ಮರಣೋತ್ತರ ಪ್ರಶಸ್ತಿ ನೀಡಿ ಗೌರವ ಸಲ್ಲಿಸಲು ಸಕಲ ಸಿದ್ಧತೆ ನಡೆದಿದೆ.
ಇದನ್ನೂ ಓದಿ: Punit Rajkumar: 'ನಾನು ಹುಷಾರಾಗಿದ್ದೀನಿ, ಡೋಂಟ್ ವರಿ' ಎಲ್ಲೆಡೆ ಪೋಸ್ಟ್ ವೈರಲ್, ಅಪ್ಪು ಮತ್ತೆ ಹುಟ್ಟಿ ಬನ್ನಿ!
ಜೊತೆಗಿರದ ಜೀವ ಎಂದಿಂಗೂ ಜೀವಂತ. ಅಪ್ಪು ಸರ್ ಮತ್ತೆ ಹುಟ್ಟಿ ಬನ್ನಿ ಎಂದು ಅಭಿಮಾನಿಗಳು ದೇವರ ಬಳಿ ಕೇಳ್ತಾ ಇದ್ದಾರೆ. ಅಲ್ಲದೇ ಗಂಧದಗುಡಿ ಚಿತ್ರ ನೋಡಿ ಹಲವರು ಭಾವುಕರಾಗಿದ್ದಾರೆ. ಅಪ್ಪು ಚಿತ್ರದ ಮೂಲಕ ನಮಗೆ ದರ್ಶನ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ