Puneeth Rajkumar: 'ಪುನೀತ ನಮನ' ಕಾರ್ಯಕ್ರಮದಲ್ಲಿ ಅನಾವರಣಗೊಳ್ಳಲಿದೆ ವಿಶೇಷ ಪುತ್ಥಳಿ..!

ನೀತ ನಮನ ಕಾರ್ಯಕ್ರಮಕ್ಕಾಗಿಯೇ ವಿಶೇಷವಾಗಿ ಥ್ರೀಡಿ ಪುತ್ಥಳಿ ನಿರ್ಮಾಣ ಮಾಡಲಾಗುತ್ತಿದೆ. ಹೆಸರಾಂತ ಕಲಾ ನಿರ್ದೇಶಕ ಮೋಹನ್ ಬಿ ಕೆರೆ, ಕಳೆದ 10 ದಿನಗಳಿಂದ ವಿನೂತನ ರೀತಿಯಲ್ಲಿ ಪುತ್ಥಳಿ ತಯಾರಿಸುತ್ತಿದ್ದಾರೆ.

ಪುನೀತ್​ ಪುತ್ಥಳಿ (file photo)

ಪುನೀತ್​ ಪುತ್ಥಳಿ (file photo)

  • Share this:
ದೊಡ್ಮನೆ ಹುಡುಗ, ಕನ್ನಡಿಗರ ಕಣ್ಮಣಿ, ಪವರ್ ಸ್ಟಾರ್​ ಪುನೀತ್ ರಾಜ್‍ಕುಮಾರ್​ಗೆ (Puneeth Rajkumar) ದೊಡ್ಡಮಟ್ಟದಲ್ಲಿ ನಮನ ಸಲ್ಲಿಸೋಕೆ ಅರಮನೆ ಮೈದಾನ ಸಜ್ಜಾಗಿದೆ. ಇಂದು ಮಧ್ಯಾಹ್ನ ಅಗಲಿದ ಸಾಧಕನಿಗೆ ಶ್ರದ್ಧಾಂಜಲಿ ಸಲ್ಲಿಸಲು ಇಡೀ ಭಾರತೀಯ ಚಿತ್ರರಂಗದ ಗಣ್ಯಾತಿಗಣ್ಯರು ಆಗಮಿಸಲಿದ್ದಾರೆ. ರಾಜರತ್ನ, ದೊಡ್ಮನೆ ಹುಡುಗನ ನೆನಪು ಅಜರಾಮರ. ಕನ್ನಡಿಗರ ಹೃದಯದಲ್ಲಿ ಅಪ್ಪು ಎಂದೆಂದಿಗೂ ಅರಸನೇ. ಸ್ಯಾಂಡಲ್‍ವುಡ್‍ನ ಅಚ್ಚಳಿಯದ ಸೂಪರ್ ​ಸ್ಟಾರ್​. ಬಾಕ್ಸಾಫೀಸ್‍ನ ದಶಕದ ತಾರೆ ಪವರ್​ ಸ್ಟಾರ್​ಗೆ ಇಡೀ ಚಿತ್ರರಂಗ ನಮನ  (Puneeth Namana) ಸಲ್ಲಿಸಲು ಸಜ್ಜಾಗಿದೆ. ಅರಮನೆ ಮೈದಾನದಲ್ಲಿ ಇದಕ್ಕಾಗಿ ವೇದಿಕೆ ರೂಪುಗೊಂಡಿದೆ.

ಪುನೀತ್​ ನಮನ ಕಾರ್ಯಕ್ರಮ ಹೇಗಿರಲಿದೆ ಅಂತ ಗಾಯತ್ರಿ ವಿಹಾರ್ ಮಾಲೀಕರು ಪಂಕಜ್ ಕೊಠಾರಿ ಹಾಗೂ ಮ್ಯಾನೇಜರ್ ಜಿಗ್ನೇಶ್ ನ್ಯೂಸ್​ 18 ಕನ್ನಡದ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

PHANA Demands Protection for Puneethb Rajkumar Doctor Raman Rao
ಪುನೀರ್ ರಾಜ್ ಕುಮಾರ್


3D ಪುತ್ಥಳಿಯ ಅನಾವರಣ

ಪುನೀತ ನಮನ ಕಾರ್ಯಕ್ರಮಕ್ಕಾಗಿಯೇ ವಿಶೇಷವಾಗಿ 3D ಪುತ್ಥಳಿ ನಿರ್ಮಾಣ ಮಾಡಲಾಗುತ್ತಿದೆ. ಹೆಸರಾಂತ ಕಲಾ ನಿರ್ದೇಶಕ ಮೋಹನ್ ಬಿ ಕೆರೆ, ಕಳೆದ 10 ದಿನಗಳಿಂದ ವಿನೂತನ ರೀತಿಯಲ್ಲಿ ಪುತ್ಥಳಿ ತಯಾರಿಸುತ್ತಿದ್ದಾರೆ. 4 ಅಡಿ ಅಗಲ, 4 ಅಡಿ ಎತ್ತರದ ಸುಮಾರಿ 35 ರಿಂದ 40 ಕೆಜಿ ತೂಕದ ಈ ಪುತ್ಥಳಿಯ ಅನಾವರಣವೂ ಇಂದು ಪುನೀತ ನಮನ ಕಾರ್ಯಕ್ರಮದ ವೇದಿಕೆಯಲ್ಲಿ ಆಗಲಿದೆ.

ಇದನ್ನೂ ಓದಿ: ಅದ್ದೂರಿಯಾಗಿ ನಡೆಯಲಿದೆ ರಾಧಾ ರಮಣ ಧಾರಾವಾಹಿ ಖ್ಯಾತಿಯ ನಟಿ Kavya Gowda ಮದುವೆ..!

ಕಾರ್ಯಕ್ರಮಕ್ಕೆ ಬರುವ ಗಣ್ಯರಿಗೆ ವಿಐಪಿ, ವಿವಿಐಪಿ ಹಾಗೂ ಎಮ್ಐಪಿ ಹೀಗೆ ಮೂರು ಬಗೆಯ ಪಾಸ್​ಗಳ ವ್ಯವಸ್ಥೆ ಮಾಡಲಾಗಿದೆ. ಸಾಮಾನ್ಯ ಜನರಿಗೆ ಪ್ರವೇಶವಿಲ್ಲ. 2000 ಸಾವಿರ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮೊದಲು ಸ್ಯಾಕ್ಸೋಫೋನ್ ಮೂಲಕ ಕಾರ್ಯಕ್ರಮ ಆರಂಭವಾಗಲಿದೆ. ನಂತರ ನಾಗೇಂದ್ರ ಪ್ರಸಾದ್ ಬರೆದಿರೋ ಅಪ್ಪು ಕುರಿತ 5 ನಿಮಿಷಗಳ ಹಾಡು ಪ್ಲೇ ಮಾಡಲಾಗುತ್ತೆ. ಬಳಿಕ ಪುನೀತ್ ರಾಜ್‍ಕುಮಾರ್ ಅವರ ಜೀವನದ ಕುರಿತ 10 ನಿಮಿಷಗಳ ವಿಡಿಯೋ ಪ್ರಸಾರ ಮಾಡಲಾಗುತ್ತೆ. ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚಿತ್ರ ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಮಾಹಿತಿ ಹಂಚಿಕೊಂಡರು.

ಇದನ್ನೂ ಓದಿ: RRR VS Gangubai Kathiawadi: ಹೊಸ ರಿಲೀಸ್​ ದಿನಾಂಕ ಪ್ರಕಟಿಸಿದ ಸಂಜಯ್​ ಲೀಲಾ ಬನ್ಸಾಲಿ

ನಂತರ, ಗುರುಕಿರಣ್ ಅವರಿಂದ ಸಂಗೀತ ನಮನ. ಅದಾದ ನಂತರ ಎಲ್ಲರೂ ಕ್ಯಾಂಡಲ್ ಹಿಡಿದು ಬೆಳಕಿನ ನಮನ. ಬಳಿಕ ವೇದಿಕೆ ಏರಿ ಪುನೀತ್ ಪುತ್ಥಳಿಗೆ ಒಬ್ಬೊಬ್ಬರಿಂದಲೇ ಪುಷ್ಪ ನಮನ. ಫಿಲ್ಮ್ ಛೇಂಬರ್ ನ ಪ್ರಮುಖರು ನಿನ್ನೆಯೇ ಅರಮನೆ ಮೈದಾನಕ್ಕೆ ಆಗಮಿಸಿ
ಸಿದ್ಧತೆ ಪರಿಶೀಲಿಸಿದ್ದಾರೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಹೇಳಿದ್ದಾರೆ.

ಅಮಿತಾಭ್​ ಬಚ್ಚನ್​ ಭಾಗಿಯಾಗುವ ಸಾಧ್ಯತೆ ಇದೆ

ಅಂದಹಾಗೆ ಈ ಕಾರ್ಯಕ್ರಮದಲ್ಲಿ ಇಡೀ ಸ್ಯಾಂಡಲ್‍ವುಡ್ ತಾರೆಯರಾದ ಸುದೀಪ್, ಯಶ್, ರವಿಚಂದ್ರನ್, ಉಪೇಂದ್ರ, ಧೃವ, ಗಣೇಶ್, ರಕ್ಷಿತ್ ಶೆಟ್ಟಿ ಸೇರಿದಂತೆ 150ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಇಷ್ಟೇ ಅಲ್ಲದೆ ಪರಭಾಷೆ ತಾರೆಯರಾದ ರಜನಿಕಾಂತ್, ಚಿರಂಜೀವಿ, ಬಾಲಕೃಷ್ಣ, ವಿಶಾಲ್, ಜೂನಿಯರ್ ಎನ್‍ಟಿಆರ್, ಮೋಹನ್‍ಲಾಲ್, ಮಮ್ಮೂಟಿ, ರಾಮದ ಚರಣ್ ತೇಜ, ವಿಜಯ್, ಸೇರಿದಂತೆ ಬಾಲಿವುಡ್‌ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.

ಇದೇ 16ರಂದು ಅಂದರೆ ಇಂದು ಶೂಟಿಂಗ್ ಸೇರಿದಂತೆ ಚಿತ್ರರಂಗದ ಯಾವುದೇ ಕೆಲಸಗಳು ನಡೆಯುವುದಿಲ್ಲ. ಆದರೆ, ಅಂದು ಥಿಯೇಟರ್​ಗಳು ಕಾರ್ಯ ನಿರ್ವಹಿಸಲಿವೆ. ಆದರೆ, ಸಿನಿಮಾ ಶೂಟಿಂಗ್ ಮಾತ್ರ ಇರುವುದಿಲ್ಲ. ಧಾರಾವಾಹಿ ಶೂಟಿಂಗ್ ಇರಲಿದೆ.

ವರದಿ ಹರ್ಷವರ್ಧನ್
Published by:Anitha E
First published: