Puneeth Rajkumar Fan: ತೆಂಗಿನ ಗರಿಯಲ್ಲಿ ‘ಅಪ್ಪು‘ ಸಿರಿ, 17 ಬಗೆಯ ವಸ್ತಗಳಲ್ಲಿ ಪುನೀತ್ ಚಿತ್ರ ಮೂಡಿಸಿದ ಕಲಾವಿದನಿಗೆ ಸೆಲ್ಯೂಟ್

ಅಪ್ಪು ಹುಟ್ಟಿದ ದಿನಕ್ಕೆಂದು 17 ವಿಧದಲ್ಲಿ ಅಪ್ಪುವನ್ನು ಚಿತ್ರಿಸುವ ಪ್ರಯತ್ನ ಮಾಡಿದ್ದಾರೆ ನವೀನ್ ಕುಮಾರ್. ಈ ಎಲ್ಲಾ 17 ಅದ್ಭುತ ಚಿತ್ರಗಳನ್ನು ಒಬ್ಬನೇ ಆರ್ಟಿಸ್ಟ್ ಬಿಡಿಸಿದ್ದಾರೆ.

ತೆಂಗಿನ ಗರಿಯಲ್ಲಿ ಮೂಡಿದ ಅಪ್ಪು

ತೆಂಗಿನ ಗರಿಯಲ್ಲಿ ಮೂಡಿದ ಅಪ್ಪು

  • Share this:
ಪುನೀತ್​ ರಾಜ್​ಕುಮಾರ್ (Puneeth Rajkumar) ಹುಟ್ಟುಹಬ್ಬವಾದ (Birthday) ಇಂದು ಅವರ ಕೊನೇಯ ಚಿತ್ರ ಬಿಡುಗಡೆಯಾಗಿದ್ದು, ಅಭಿಮಾನಿಗಳಿಗೆ ದೊಡ್ಡ ಹಬ್ಬವಾಗಿದೆ, ಪುನೀತ್ ರಾಜ್ ಕುಮಾರ್ ಜೇಮ್ಸ್  (James) ಚಿತ್ರ ಹಲವಾರು ರೆಕಾರ್ಡ್ಸ್ ಮಾಡುತ್ತಿದೆ. ಅಪ್ಪು ಇದ್ದಾಗ ಅವರ ಸಿನಿಮಾಗಳು ದಾಖಲೆ ಮಾಡುತ್ತಿದ್ದವು. ಅವರು ಜೀವಂತವಾಗಿ ನಮ್ಮ ಜೊತೆ ಇರದಿದ್ದರೂ, ಇಂದು ಅವರ ಅಭಿಮಾನಿಗಳು ಹೊಸ ದಾಖಲೆ (Record) ಬರೆಯುತ್ತಿದ್ದಾರೆ. ಅದಕ್ಕೊಂದು ಉದಾಹರಣೆಯಾಗಿ ಇಲ್ಲೊಬ್ಬರು ಕಲಾವಿದರಿದ್ದಾರೆ. ಈ ಕಲೆಗಾರ ಅಪೂರ್ವವಾದ ದಾಖಲೆ ಬರೆಯಲು ಮುಂದಾಗಿದ್ದಾರೆ.

ಜೇಮ್ಸ್ ಬಿಡುಗಡೆಯಾಗಿ ಇಡೀ ರಾಜ್ಯವೇ ಅಪ್ಪು ಗುಂಗಲ್ಲಿದೆ. ಬೆಲೆ ಕಟ್ಟಲಾಗದ ರೀತಿಯಲ್ಲಿ ಅಪ್ಪುವಿನ ಮೇಲಿರುವ ಪ್ರೀತಿಯನ್ನು ತೋರಿಸುತ್ತಿದ್ದಾರೆ. ಆದರೆ ಇಲ್ಲೊಬ್ಬ ಕಲಾವಿದನ ರೀತಿಯೇ ವಿಭಿನ್ನ. ಇವರ ಹೆಸರು ನವೀನ್ ಕುಮಾರ್. ಬೆಂಗಳೂರಿನ, ತಲಘಟ್ಟಪುರ ನಿವಾಸಿಯಾಗಿರುವ ನವೀನ್, ಹೆಸರಿಗೆ ತಕ್ಕ ಹಾಗೆ ಒಂದು ನವೀನ ಪ್ರಯೋಗವನ್ನೇ ಮಾಡಿದ್ದಾರೆ.

17 ವಿಧದಲ್ಲಿ ಅಪ್ಪುವನ್ನು ಚಿತ್ರ

ಅಪ್ಪು ಹುಟ್ಟಿದ ದಿನಕ್ಕೆಂದು 17 ವಿಧದಲ್ಲಿ ಅಪ್ಪುವನ್ನು ಚಿತ್ರಿಸುವ ಪ್ರಯತ್ನ ಮಾಡಿದ್ದಾರೆ ನವೀನ್ ಕುಮಾರ್. ಈ ಎಲ್ಲಾ 17 ಅದ್ಭುತ ಚಿತ್ರಗಳನ್ನು ಒಬ್ಬನೇ ಆರ್ಟಿಸ್ಟ್ ಬಿಡಿಸಿದ್ದಾರೆ. ಕಲಾವಿದನೋರ್ವ 17 ವಿವಿಧ ವಸ್ತುಗಳನ್ನೂ ಬಳಸಿಕೊಂಡು ಚಿತ್ರ ಮಾಡ್ತಿರೋದು ಇದೇ ಮೊದಲು. ಅದು ಕೂಡ ಒಂದೇ ವ್ಯಕ್ತಿಯ ಚಿತ್ರ. ಈ ಕಾರಣದಿಂದಲೇ ಇದೊಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಂದಹಾಗೆ ನವೀನ್ ಅವರಿಗೆ ಈ ಕಲ್ಪನೆ ಮೂಡಲು ಯುವರತ್ನ ನೇ ಸ್ಫೂರ್ತಿ ಎನ್ನುತ್ತಾರೆ.

ಕಲಾವಿದ ನವೀನ್​ ಅಪ್ಪು ಬಿಗ್​ ಫ್ಯಾನ್​

ನವೀನ್ ಕುಮಾರ್ ಬೆಂಗಳೂರಿನ ಹುಡುಗ. ಅಪ್ಪು ಮೇಲಿನ ಅಭಿಮಾನದಿಂದಲೇ ಗಾಂಧಿನಗರಕ್ಕೆ ಬಂದಿದ್ದಾನೆ. ನಾಲ್ಕೈದು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿಯೂ ಕೆಲಸ ಮಾಡಿದ್ದಾನೆ. ಆದರೆ ದುರಾದೃಷ್ಟವಶಾತ್ ಅಪ್ಪು ಜೊತೆಗೆ ಕೆಲಸ ಮಾಡೋ ಅವಕಾಶವೇ ಲಭಿಸಿಲ್ಲ. ದೂರದಿಂದ ನೋಡಿದ್ದರೂ, ಹೋಗಿ ಪರಿಚಯ ಮಾಡಿಸ್ಕೊಂಡಿಲ್ಲ. ಏನಾದರೂ ಸ್ವಲ್ಪ ಹೆಸರು ಮಾಡಿದ ಮೇಲೇನೇ ಭೇಟಿಯಾಗಬೇಕು ಅನ್ನೋದು ನವೀನ್ ಕನಸಾಗಿತ್ತು. ಆದರೆ ವಿಧಿ ತುಂಬಾನೇ ಕ್ರೂರಿ. ಅರ್ಧದಾರಿಯಲ್ಲೇ ಅಪ್ಪುವನ್ನು ಕರೆದೊಯ್ದ. ಆದರೆ ನವೀನ್ ಕುಮಾರ್ ಅಪ್ಪು ಮೇಲಿನ ಅಭಿಮಾನ ಬಿಡಲಿಲ್ಲ. ಅಪ್ಪು ನೆನಪಿಗಾಗಿ ನಿರಂತರ ಚಿತ್ರಗಳನ್ನು ರಚಿಸುವ ತೀರ್ಮಾನ ಮಾಡಿದ್ದಾರೆ.

ಇದನ್ನೂ ಓದಿ: Puneeth Rajkumar ನಮ್​ ಜೊತೆ ಇಲ್ಲ ಅಂತ ಅದೊಂದು ಜೀವಕ್ಕೆ ಗೊತ್ತೇ ಇಲ್ಲ.. `ಜೇಮ್ಸ್​’ಗೆ ವಿಶ್​ ಮಾಡಿದ ಸೋದರತ್ತೆ ನಾಗಮ್ಮ!

ತೆಂಗಿನ ಗರಿಯಲ್ಲೂ ಅಪ್ಪುವಿನ ಸಿರಿ

ನವೀನ್ ತರಬೇತಿ ಪಡೆದ ಕಲಾವಿದನಲ್ಲ. ಆದರೆ ಅಪ್ಪು ಮೇಲಿನ ಪ್ರೀತಿ, ಈತನಿಂದ ತೆಂಗಿನ ಗರಿಯಲ್ಲೂ ಅಪ್ಪುವಿನ ಸಿರಿ ಮೂಡಿಸಿದೆ. ಹಕ್ಕಿಯ ಗರಿಯಲ್ಲಿ, ಅಕ್ಕಿಯ ಕಾಳಲ್ಲಿಯೂ, ಅಪ್ಪು ಬಾಳಿ ಬದುಕಿದಂಥ ಕಳೆ ತುಂಬಲಾಗಿದೆ. ಕಲಾವಿದರ ಕೈಗೆ ಕಲ್ಲು ಸಿಕ್ಕರೂ ಕಲೆಯಾಗುತ್ತೆ ಅನ್ನೋ ಮಾತಿದೆ. ಪಿನ್ಗಳಲ್ಲೇ ದೊಡ್ನೆ ಹುಡುಗನನ್ನು ತೋರಿಸಿರುವ ನವೀನ್ ಅದಕ್ಕೊಂದು ಉದಾಹರಣೆ.

ಅಪ್ಪು ಸ್ಟಾರ್ ಮಾತ್ರ ಆಗಿರಲಿಲ್ಲ. ಹಲವರ ಬಾಳಿಗೆ ಆಶಾದೀಪವಾಗಿದ್ದರು ಅನ್ನೋದು ಅವರ ನಿಧನದ ಬಳಿಕವೇ ಹೊರಗೆ ಬಂದ ಸತ್ಯವಾಗಿತ್ತು. ಆದರೆ ಈಗ ಆಕಾಶ ದೀಪವಾಗಿದ್ದಾರೆ. ಈ ಎಲ್ಲದರ ಸಂಕೇತವೆನ್ನುವ ಹಾಗೆ ದೀಪದಲ್ಲೇ ಅಪ್ಪುವಿಗೆ ಒಂದು ರೂಪ ನೀಡಿಲಾಗಿದೆ. ಮಿಂಚಿನಂತೆ ಬಂದು ಮರೆಯಾದ ನಟ ಅಪ್ಪು. ಮಿಂಚಿನ ಪವರ್ ನೆನಪಿಸುವಂತೆ, ಚಿನ್ನದ ಬಣ್ಣದ ಹುಡಿಯಲ್ಲೇ ಪವರ್ ಸ್ಟಾರ್​ಗೆ ರೂಪ ಕೊಡಲಾಗಿದೆ.

ಇದನ್ನೂ ಓದಿ: Puneeth Rajkumar: ಲೈಫ್ ಬಾಯ್ ಸೋಪ್​​ನಲ್ಲಿ ಮೂಡಿದ `ಜೇಮ್ಸ್​’! ಅಬ್ಬಬ್ಬಾ.. ಇದನ್ನು ನೋಡೋಕೆ ಎರಡು ಕಣ್ಣು ಸಾಲದು..

ವಿಶ್ವರೂಪವನ್ನು ಮೂಡಿಸುವ ಪ್ರಯತ್ನ

ಗ್ಲಿಟ್ಟರ್ ಮೂಲಕ ನವೀನ್ ನೀಡಿರುವ ರೂಪ ಅಪರೂಪದ್ದೇ ಸರಿ. ಮಣ್ಣು ಸೇರಿದರೂ ನಾಡಿನ ಕಣ್ಣಾಗಿರುವ ಅಪ್ಪುವಿಗೆ ಮಣ್ಣ್ಲಲ್ಲೇ ಜೀವ ತುಂಬುವ ಪ್ರಯತ್ನವನ್ನೂ ನವೀನ್ ಮಾಡಿದ್ದಾರೆ. ಒಟ್ಟು 17 ವಿಧದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ವಿಶ್ವರೂಪವನ್ನು ಮೂಡಿಸುವ ಪ್ರಯತ್ನ ಈ ಕಲಾವಿದನದ್ದು. ಪುನೀತ್ ರಾಜ್ ಕುಮಾರ್ ಎಂಬ ಅಪ್ರತಿಮ ವ್ಯಕ್ತಿತ್ವ ಸಾವಿನ ನಂತರೂ ಹೀಗೆ ಬದುಕುತ್ತಿದೆ ಎಂದರೆ ತಪ್ಪಾಗಲಾರದು.
Published by:Pavana HS
First published: