ಶಬರಿಮಲೆ ಮಣಿಕಂಠನ ಮಹಿಮೆಯನ್ನ ಸಾರುವಂತಹ, ಕೋಟ್ಯಾಂತರ ಭಕ್ತರು ಆರಾಧಿಸುವಂತಹ ಸ್ವಾಮಿ ಅಯ್ಯಪ್ಪನ ಹಾಡುಗಳು, ಭಜನೆಗಳು ಎಷ್ಟೋ ಇವೆ. ಸ್ವಾಮಿ ಅಯ್ಯಪ್ಪನನ್ನು ಸ್ಮರಿಸೋ ಜಪಿಸೋ ಅನೇಕ ಸಿನಿಮಾ ಹಾಡುಗಳು ಕೂಡ ಬಂದಿವೆ. ಇದೀಗ ಆ ಸಾಲಿಗೆ ಕನ್ನಡ ಚಿತ್ರರಂಗದ ಲೇಟೆಸ್ಟ್ ಸಿನಿಮಾ ‘ಪುಕ್ಸಟ್ಟೆ ಲೈಫು‘ ಚಿತ್ರದ ಭಜನೆ ಹಾಡು ಸೇರ್ಪಡೆಯಾಗಿದೆ.
‘ಪುಕ್ಸಟ್ಟೆ ಲೈಫು‘ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಚಾರಿ ವಿಜಯ್, ಅಚ್ಯುತ್ ಕುಮಾರ್ , ರಂಗಾಯಣ ರಘು, ಮಾತಂಗಿ ಪ್ರಸನ್ನ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರೋ ಸಿನಿಮಾ. ಸರ್ವಸ್ವ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ನಾಗರಾಜ್ ಸೋಮಯಾಜಿ ನಿರ್ಮಿಸಿರೋ ಈ ಚಿತ್ರವನ್ನ ಅರವಿಂದ್ ಕುಪ್ಳೀಕರ್ ನಿರ್ದೇಶಿಸಿದ್ದಾರೆ. ಅದೈತ ಗುರುಮೂರ್ತಿ ಛಾಯಾಗ್ರಹಣ, ವಾಸು ದೀಕ್ಷಿತ್ ಸಂಗೀತ ಸಂಯೋಜಿಸಿದ್ದಾರೆ.
‘ಪೂರ್ ಸೊತ್ತೇ ಇಲ್ಲ‘ ಅನ್ನೋ ಟ್ಯಾಗ್ ಲೈನ್ ಇರೋ ‘ಪುಕ್ಸಟ್ಟೆ ಲೈಫು‘ ಚಿತ್ರದ ಅಯಪ್ಪನ ಭಜನೆ ಹಾಡು ಇತ್ತೀಚೆಗಷ್ಟೇ ಸರ್ವಸ್ವ ಪ್ರೊಡಕ್ಷನ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಿದೆ. ಜೊತೆಗೆ ಎಲ್ಲಾ ಆನ್ ಲೈನ್ ಮ್ಯೂಸಿಕ್ ಫ್ಲಾಟ್ ಫಾರಂ ಹಾಗೂ ಎಫ್ ಎಮ್ ಗಳಲ್ಲಿ ಈ ಹಾಡು ಪ್ರಸಾರ ಆಗುತ್ತಿದ್ದು, ಕೇಳುಗರಿಂದ ಒಳ್ಳೆಯ ರೆಸ್ಪಾನ್ಸ್ ಕೂಡ ಸಿಗುತ್ತಿದೆ. ಅಯ್ಯಪ್ಪನ ಭಜನೆಯನ್ನ ಈಗಿನ ಮ್ಯೂಸಿಕ್ ಟ್ರೆಂಡಿಗೆ ತಕ್ಕಂತೆ ವಾಸು ದೀಕ್ಷಿತ್ ಕಂಪೋಸ್ ಮಾಡಿದ್ದಾರೆ.
ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಮತ್ತು ವಾಸು ದೀಕ್ಷಿತ್ ಹಾಡಿರೋ ಈ ಹಾಡು ಕೇಳೋದಕ್ಕೆ ಸಖತ್ ಮಜವಾಗಿದ್ದು, ಟ್ರೆಂಡಿಯಾಗಿದೆ. ವಿಶಿಷ್ಠ ಕಥಾಹಂದರವಿರೋ ಈ ಚಿತ್ರದಲ್ಲಿ ಎಲ್ಲಾ ಹಾಡುಗಳು ಕಥೆಯ ಜೊತೆಜೊತೆ ಸಾಗುತ್ತವಂತೆ. ಅಂದಹಾಗೆ ‘ಪುಕ್ಸಟ್ಟೆ ಲೈಫು‘ ಚಿತ್ರತಂಡ ಈ ಭಜನೆ ಹಾಡಿನ ಲಿರಿಕಲ್ ವಿಡಿಯೋವನ್ನ ರಿಲೀಸ್ ಮಾಡೋ ಮೂಲಕ ಪ್ರಚಾರ ಕಾರ್ಯವನ್ನ ಶುರುಮಾಡಿದ್ದು, ಹಂತಹಂತವಾಗಿ ಚಿತ್ರದ ಮತ್ತಷ್ಟು ವಿಶೇಷಗಳನ್ನ ಹೇಳಲಿದ್ದಾರಂತೆ.
ಇದನ್ನೂ ಓದಿ: ರಾಷ್ಟ್ರಧ್ವಜ ನೇಯುವ ನೇಕಾರ ಮಹಿಳೆಯರ ಗೋಳು ಕೇಳತ್ತಾ ಬಿಎಸ್ ಯಡಿಯೂರಪ್ಪ ಸರ್ಕಾರ?
ಇದನ್ನೂ ಓದಿ: ‘ಮನ್ನತ್‘ ಮನೆಯ ಕೋಣೆಯನ್ನ ಬಾಡಿಗೆ ಕೇಳಿದ ಅಭಿಮಾನಿ!; ಶಾರುಖ್ ಖಾನ್ ನೀಡಿದ ಉತ್ತರವೇನು ಗೊತ್ತಾ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ