Sanvi Shetty: ದ್ವಿತೀಯ PUC ಅಲ್ಲಿ ಶೇ.99 ಅಂಕಗಳಿಸಿದ ಗಾಯಕಿ ಸಾನ್ವಿ ಶೆಟ್ಟಿ

ಕನ್ನಡದ ಗಾಯಕಿ ಸಾನ್ವಿ ಶೆಟ್ಟಿ (Sanvi Shetty) ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 99ರಷ್ಟು ಅಂಕ ಗಳಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸಾನ್ವಿ ಶೆಟ್ಟಿ

ಸಾನ್ವಿ ಶೆಟ್ಟಿ

  • Share this:
ಇಂದು ದ್ವಿತೀಯ ಪಿಯುಸಿ (PUC) ಫಲಿತಾಂಶ ಪ್ರಕಟಗೊಂಡಿದ್ದು, ಎಂದಿನಂತೆ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. . ಮಧ್ಯಾಹ್ನ 1 ಗಂಟೆಗೆ ವೆಬ್ ಸೈಟ್​ನಲ್ಲಿ (Website) ಫಲಿತಾಂಶ ಪ್ರಕಟವಾಗಿದ್ದು, 5,99,794 ಮಕ್ಕಳಲ್ಲಿ 4,02,697 ಮಕ್ಕಳು ಪಾಸ್ ಆಗಿದ್ದು, ಶೇ.61ರಷ್ಟು ಫಲಿತಾಂಶ ಬಂದಿದೆ. ಅದರಲ್ಲಿಯೂ ಕನ್ನಡದ ಗಾಯಕಿ ಸಾನ್ವಿ ಶೆಟ್ಟಿ (Sanvi Shetty) ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 99ರಷ್ಟು ಅಂಕ ಗಳಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಬಗ್ಗೆ ಸಾನ್ವಿ ಶೆಟ್ಟಿ ನನ್ನ 2 ನೇ ಪಿಯು ಪರೀಕ್ಷೆಯಲ್ಲಿ ನಾನು 99% ಅಂಕ ಗಳಿಸಿದ್ದೇನೆ ಎಂದು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗಿದೆ ಎಂದು ತಮ್ಮ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ನಲ್ಲಿ (Instagram) ಪಿಯುಸಿ ಫಲಿತಾಂಶದ ಫೊಟೋ ಹಂಚಿಕೊಂಡು ಬರೆದುಕೊಂಡಿದ್ದಾರೆ. ಅವರ ಈ ಸಾಧನೆಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಎಲ್ಲಡೆಯಿಂದ ಪ್ರಶಂಸೆಗಳು ಕೇಳಿಬರುತ್ತಿದೆ. ಓದು ಮತ್ತು ಗಾಯನ (Singing) ಎರಡನ್ನು ಸಮದೂಗಿಸಿಕೊಂಡು ಹೋಗುತ್ತಿರುವ ಸಾನ್ವಿ ಅವರು ಅನೇಕರಿಗೆ ಮಾದರಿಯಾಗಿದ್ದಾರೆ.

99.75 ಶೇಕಡಾ ಅಂಕ ಪಡೆದ ಸಾನ್ವಿ:

ಇನ್ನು, ಗಾಯಕಿ ಸಾನ್ವಿ ಶೆಟ್ಟಿ ಅವರು ದ್ವಿತಿಯ ಪಿಯುಸಿ ಅಲ್ಲಿ  ಶೇಕಡಾ 99.75 ಅಂಕದೊಂದಿಗೆ ಪಾಸ್ ಆಗಿದ್ದಾರೆ. ಈ ವಿಷಯವನ್ನು ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿರುವ ಅವರು, ‘ದ್ವಿತಿಯ ಪಿಯುಸಿ ಪರೀಕ್ಷೆಯಲ್ಲಿ ನಾನು 99% ಅಂಕ ಗಳಿಸಿದ್ದೇನೆ ಎಂದು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗಿದೆ. ಮತ್ತು PCM ನಲ್ಲಿ 99.75 ಪಡೆದುಕೊಂಡಿದ್ದೇನೆ. ನನ್ನ ಎಲ್ಲಾ ಶಿಕ್ಷಕರಿಗೆ ಮತ್ತು ನನ್ನ ಸ್ನೇಹಿತರಿಗೆ ನಾನು ಆಭಾರಿಯಾಗಿದ್ದೇನೆ. ನನ್ನ ಅಧ್ಯಯನದಲ್ಲಿ ನಿಮ್ಮ ಬೆಂಬಲಕ್ಕಾಗಿ ನನ್ನ ಹೆತ್ತವರು ಕುಮಾರನ್ಸ್ ಕಾಲೇಜು ಮತ್ತು ನನ್ನ ಕೋಚಿಂಗ್ ಇನ್ಸ್ಟಿಟ್ಯೂಟ್ ಶ್ರೀ ಕೃಷ್ಣ ವಿದ್ಯಾಶ್ರಮದ ನನ್ನ ಉಪನ್ಯಾಸಕರು ಮತ್ತು ಸಿಬ್ಬಂದಿ ಸದಸ್ಯರಿಗೆ ಧನ್ಯವಾದಗಳು, ಹಾಗೂ ನಿಮ್ಮ ಬೆಂಬಲ ಮತ್ತು ಆಶೀರ್ವಾದಕ್ಕಾಗಿ ಎಲ್ಲರಿಗೂ ಧನ್ಯವಾದಗಳು‘ ಎಂದು ಬರೆದುಕೊಂಡಿದ್ದಾರೆ.


ಯಾವ ಯಾವ ವಿಷಯಕ್ಕೆ ಎಷ್ಟು ಅಂಕ:

ಇನ್ನು ಸಾನ್ವಿ ಶೆಟ್ಟಿ ಅವರು, ಕನ್ನಡಕ್ಕೆ 99 ಅಂಕ, ಇಂಗ್ಲಿಷ್​ಗೆ 95 ಅಂಕ, ಭೌತಶಾಸ್ತ್ರಕ್ಕೆ 100ಕ್ಕೆ 100 ಅಂಕ, ರಸಾಯನಶಾಸ್ತ್ರ ವಿಷಯಕ್ಕೆ 99 ಅಂಕ, ಗಣಿತ 100 ಮತ್ತು ಎಲೆಕ್ಟ್ರಾನಿಕ್ಸ್ ವಿಷಯಕ್ಕೆ 100 ಅಂಕ ಗಳಿಸುವ ಮೂಲಕ ಒಟ್ಟಾರೆಯಾಗಿ 99. 75 ಶೇಕಡಾ ಪಡೆಯುವ ಮೂಲಕ ಸಾನ್ವಿ ಸಾಧನೆ ಮಾಡಿದ್ದಾರೆ. 

ಇದನ್ನೂ ಓದಿ: 2nd PUC Results: ದಕ್ಷಿಣ ಕನ್ನಡ ಫಸ್ಟ್, ಚಿತ್ರದುರ್ಗ ಲಾಸ್ಟ್; ಅತಿ ಹೆಚ್ಚು ವಿಜ್ಞಾನ ವಿದ್ಯಾರ್ಥಿಗಳು ಪಾಸ್

ಸರೆಗಮಪ ಮೂಲಕ ಖ್ಯಾತರಾದ ಸಾನ್ವಿ:

ಇನ್ನು, ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ, ಸರೆಗಮಪ ಸೀಸನ್ 17ರ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದ್ದ ಸಾನ್ವಿ ಶೆಟ್ಟಿ ಮುಂದೆ ಅನೇಕ ಹಾಡುಗಳನ್ನು ಹಾಡುವ ಮೂಲಕ ಪ್ರಸಿದ್ಧರಾದರು. ಇವರ ಹಾಡಿಗೆ ಮ್ಯೂಸಿಕಲ್ ಕಂಪೋಸರ್ ಅರ್ಜುನ್ ಜನ್ಯಾ, ಹಂಸಲೇಖ, ರಾಜೇಶ್ ಕೃಷ್ಣನ್ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರಾಜೇಶ್ ಕೃಷ್ಣನ್ ಅವರೊಂದಿಗೆ ಖಾಸಗಿ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಸಹ ಹಾಡನ್ನು ಹಾಡಿದ್ದು, ಇವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ. ಅಲ್ಲದೇ ಇವರ ಪಿಯುಸಿ ಫಲಿತಾಂಶಕ್ಕೆ ಅನೇಕರು ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: 2nd PUC Result: PUC ಪರೀಕ್ಷೆಯಲ್ಲಿ ಸಾರಾ ಮಹೇಶ್​ ಪತ್ನಿ ಕಮಾಲ್​; 30 ವರ್ಷಗಳ ಬಳಿಕ ಫಸ್ಟ್​ ಕ್ಲಾಸ್​ನಲ್ಲಿ ಅನಿತಾ ಪಾಸ್​

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ:

ಕಳೆದ ಏಪ್ರಿಲ್ 23 ರಿಂದ ಮೇ 18ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗಾಗಿ ಒಟ್ಟು 6,84,255 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿದರು. ಈ ಪೈಕಿ 3 40,956 ಬಾಲಕರು ಹಾಗೂ 3,37319 ಬಾಲಕಿಯರು ದಾಖಲಾಗಿದ್ದರು. ರಾಜ್ಯಾದ್ಯಂತ 5,000 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಕಲಾ ವಿಭಾಗಕ್ಕೆ 2,28,167 ಮಂದಿ, ವಾಣಿಜ್ಯ, ವಿಭಾಗಕ್ಕೆ 245519 ಮಂದಿ ಮತ್ತು  ಸೈನ್ಸ್​ ವಿಭಾಗದಲ್ಲಿ 1,10,569 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಶೇ.72.53 ವಿಜ್ಞಾನ ವಿದ್ಯಾರ್ಥಿಗಳು, ಶೇ.64.97 ವಾಣಿಜ್ಯ, ಶೇ.48.71 ಕಲಾ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
Published by:shrikrishna bhat
First published: