Sugarless: ಚಿತ್ರೀಕರಣ ಪೂರ್ಣಗೊಳಿಸಿದ ಶುಗರ್​ಲೆಸ್​ ಚಿತ್ರತಂಡ: ಸದ್ಯದಲ್ಲೇ ರಿಲೀಸ್ ಆಗಲಿದೆ ಟೀಸರ್​..!

ಶೂಗರ್​ಲೆಸ್​ ಸಿನಿಮಾಗಾಗಿ ಕರ್ನಾಟಕದಾದ್ಯಂತ 45 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಇದೀಗ ಶೂಟಿಂಗ್​ ಮುಗಿಸಿರುವ ಚಿತ್ರತಂಡ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಲ್ಲಿ ವ್ಯಸ್ತವಾಗಿದೆ. ಇದು ತುಂಬಾ ಹ್ಯೂಮರಸ್ ನಿರೂಪಣೆ ಹೊಂದಿರುವ ಚಿತ್ರವಾಗಿದೆ.

ಚಿತ್ರೀಕರಣ ಮುಗಿಸಿದ ಶುಗರ್​ಲೆಸ್​ ಚಿತ್ರತಂಡ

ಚಿತ್ರೀಕರಣ ಮುಗಿಸಿದ ಶುಗರ್​ಲೆಸ್​ ಚಿತ್ರತಂಡ

  • Share this:
ಕೊರೋನಾ ಕಾರಣದಿಂದಾಗಿ ಚಿತ್ರೀಕರಣ ನಿಲ್ಲಿಸಿದ್ದ ಚಿತ್ರತಂಡಗಳು ಮೆಲ್ಲನೆ ಸಿನಿಮಾ ಶೂಟಿಂಗ್​ ಆರಂಭಿಸಿದ್ದು, ಚಿತ್ರೀಕರಣ ಮುಗಿಸುತ್ತಿದ್ದಾರೆ. ದಿಯಾ ಖ್ಯಾತಿಯ ಪೃಥ್ವಿ ಅಂಬರ್​ ನಟನೆಯ ಶುಗರ್​ಲೆಸ್​ ಚಿತ್ರತಂಡ ಸಹ ಈಗ ಸಿನಿಮಾದ ಶೂಟಿಂಗ್​ ಮಗಿಸಿದೆ. ಡಾಟರ್ ಆಫ್ ಪಾರ್ವತಮ್ಮ ಖ್ಯಾತಿಯ ನಿರ್ಮಾಪಕ ಶಶಿಧರ ಕೆ.ಎಂ. ಅವರು ಇದೇ ಮೊದಲಬಾರಿಗೆ ನಿರ್ದೇಶನ ಮಾಡಿರುವ ಚಿತ್ರ ಇದಾಗಿದೆ. ಈ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಸಹ ಶಶಿಧರ್ ಕೆ.ಎಂ. ಅವರೇ ಮಾಡಿದ್ದಾರೆ. ಲಾಕ್‍ಡೌನ್ ಕಾರಣದಿಂದ ತಡವಾದರೂ ಈಗ ಚಿತ್ರದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದ್ದಾರೆ. ಅವರ ಜೊತೆ ಸಹಾಯಕ ನಿರ್ಮಾಪಕರಾಗಿ ಪ್ರಜ್ವಲ್ ಎಂ.ರಾಜ ಹಾಗೂ ವಿಜಯಲಕ್ಷ್ಮಿ ಕೃಷ್ಣೇಗೌಡ ಜೊತೆಯಾಗಿದ್ದಾರೆ. ಲವಿತ್ ಅವರ ಛಾಯಾಗ್ರಹಣ ಇರುವ ಈ ಸಿನಿಮಾಗೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ವಿ. ನಾಗೇಂದ್ರಪ್ರಸಾದ್ ಅವರ ಸಾಹಿತ್ಯ, ಗುರು ಕಶ್ಯಪ್ ಅವರ ಸಂಭಾಷಣೆ ಈ ಚಿತ್ರಕ್ಕಿದೆ. 

ಶೂಗರ್​ಲೆಸ್​ ಸಿನಿಮಾಗಾಗಿ ಕರ್ನಾಟಕದಾದ್ಯಂತ 45 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಇದೀಗ ಶೂಟಿಂಗ್​ ಮುಗಿಸಿರುವ ಚಿತ್ರತಂಡ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಲ್ಲಿ ವ್ಯಸ್ತವಾಗಿದೆ. ಇದು ತುಂಬಾ ಹ್ಯೂಮರಸ್ ನಿರೂಪಣೆ ಹೊಂದಿರುವ ಚಿತ್ರವಾಗಿದೆ.
'ಈ ಕಥೆಯಲ್ಲಿ ಹಾಸ್ಯವೇ ಪ್ರಧಾನವಾಗಿರುತ್ತದೆ. ನಾನು ಸ್ಕ್ರಿಪ್ಟ್ ಮಾಡುವಾಗ ನನ್ನ ಸಿನಿಮಾದ ಹೀರೋ ಪಾತ್ರ ಹೇಗೆಲ್ಲ ಇರಬೇಕು ಎಂದುಕೊಂಡಿದ್ದೆನೋ, ಅದೇ ರೀತಿಯ ಹುಡುಗನಾಗಿ ನಟ ಪೃಥ್ವಿ ಅಂಬರ್ ನಾಯಕನಾಗಿ ನಟಿಸಿದ್ದಾರೆ. ನಮ್ಮ ಚಿತ್ರದ ಟೀಸರ್, ಹಾಗೂ ಟ್ರೇಲರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ' ಎಂದು ನಿರ್ಮಾಪಕ ಹಾಗೂ ನಿರ್ದೇಶಕ ಶಶಿಧರ ಕೆ.ಎಂ. ಅವರು ತಿಳಿಸಿದ್ದಾರೆ.

Pushkar Mallikarjunayya Produced Sugarless Movie Heroin Priyanka Timmesh Interview
ಪ್ರಿಯಾಂಕಾ ತಿಮ್ಮೇಶ್


ದಿಯಾ ಸಿನಿಮಾದ ನಂತರ ಪೃಥ್ವಿ ಅಂಬರ್​ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್​ಡೌನ್​ಗೂ ಮುಂಚೆ ತೆರೆಕಂಡಿದ್ದ ದಿಯಾ ಸಿನಿಮಾ ಈಗ ಮತ್ತೆ ರಿರಿಲೀಸ್ ಆಗಿದೆ. ಇದರ ಜೊತೆಗೆ ತಮ್ಮ ಹೊಸ ಸಿನಿಮಾದ ಪೋಸ್ಟರ್​ ಅನ್ನು ದೀಪಾವಳಿ ಹಬ್ಬದ ಉಡುಗೊರೆಯಾಗಿ ರಿಲೀಸ್ ಮಾಡಿದರು.
ಈ ಸಿನಿಮಾದ ದೀಪಾವಳಿ ಪೋಸ್ಟರ್​ನಲ್ಲಿ ಪೃಥ್ವಿ ಕೃಷ್ಣನಾಗಿ ಹಾಗೂ ಪ್ರಿಯಾಂಕಾ ರಾಧೆಯಾಗಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್​ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಇನ್ನು ಚಿಕ್ಕವಯಸ್ಸಿನಲ್ಲೇ ಶುಗರ್​ ಬಂದು ನಾನಾ ರೀತಿಯ ಪಾಡುಪಡುವ ಪಾತ್ರದಲ್ಲಿ ಪೃಥ್ವಿ ಮಿಂಚಲಿದ್ದಾರೆ.
ಇನ್ನು ಶಿವಪ್ಪ ಸಿನಿಮಾದಲ್ಲಿ ಪೃಥ್ವಿ ನಟಿಸುತ್ತಿದ್ದು, ಅದಕ್ಕಾಗಿ ತಮ್ಮ ಲುಕ್​ ಬದಲಾಯಿಸಿಕೊಂಡಿದ್ದಾರೆ. ಹೊಸ ಲುಕ್​ ಫೋಟೋವನ್ನು ಇತ್ತೀಚೆಗಷ್ಟೆ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಧನಂಜಯ್​ ಸಹ ಇದ್ದಾರೆ. ಇದರ ಚಿತ್ರೀಕರಣ ಈಗಾಗಲೇ ಆರಂಭವಾಗಿದೆ.
Published by:Anitha E
First published: