HOME » NEWS » Entertainment » PRUTHVI AMBAAR TURNS SINGER FOR LIFE IS BEAUTIFUL MOVIE HTV ZP

ನಟನೆಗೂ ಜೈ...ಹಾಡೋಕೂ ಸೈ ಅಂತಿದ್ದಾರೆ ದಿಯಾ ಖ್ಯಾತಿಯ ಪೃಥ್ವಿ ಅಂಬರ್..!

ಪೃಥ್ವಿ ಅಂಬರ್ ನಾಯಕನಾಗಿರುವ ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಮತ್ತು ಲಾಸ್ಯಾ ನಾಗರಾಜ್ ಪ್ರಮುಖ ತಾರಾಗಣದಲ್ಲಿದ್ದಾರೆ. ಮಮ್ಮಿ ಸೇವ್ ಮಿ ಹಾಗೂ ದೇವಕಿ ಖ್ಯಾತಿಯ ನಿರ್ದೇಶಕ ಲೋಹಿತ್ ರಾಜ್ ಅವರು ಫ್ರೈಡೇ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಚೊಚ್ಚಲ ಬಾರಿಗೆ ನಿರ್ಮಾಣ ಮಾಡುತ್ತಿದ್ದಾರೆ.

news18-kannada
Updated:December 17, 2020, 9:07 PM IST
ನಟನೆಗೂ ಜೈ...ಹಾಡೋಕೂ ಸೈ ಅಂತಿದ್ದಾರೆ ದಿಯಾ ಖ್ಯಾತಿಯ ಪೃಥ್ವಿ ಅಂಬರ್..!
ಪೃಥ್ವಿ ಅಂಬರ್
  • Share this:
ದಿಯಾ ಚಿತ್ರದಲ್ಲಿನ ಅಮೋಘ ನಟನೆಯ ಮೂಲಕ ಎಲ್ಲರ ಮನಗೆದ್ದ ಯುವನಟ ಪೃಥ್ವಿ ಅಂಬರ್. ಇಂತಹ ಪೃಥ್ವಿ ಅಂಬರ್ ಈಗ ಲೈಫ್ ಈಸ್ ಬ್ಯೂಟಿಫುಲ್ ಚಿತ್ರದ ಮೂಲಕ ಗಾಯಕ ಕೂಡ ಆಗಿದ್ದಾರೆ. ಖುಷಿಗಾಗಿ ಹಾಡುಗಳನ್ನು ಗುನುಗುತ್ತಿದ್ದವ ಇದೇ ಮೊದಲ ಬಾರಿಗೆ ಸಿನಿಮಾ ಒಂದಕ್ಕೆ ಹಾಡಿರುವ ಖುಷಿಯಲ್ಲಿದ್ದಾರೆ ಪೃಥ್ವಿ. ನಾನು ಸಂಗೀತ ಕಲಿತಿಲ್ಲ. ಆದರೆ ಆಗಾಗ ಅವಕಾಶ ಸಿಕ್ಕಾಗ ಆರ್ಕೆಸ್ಟ್ರಾಗಳಲ್ಲಿ ಖುಷಿಗಾಗಿ ಹಾಡುತ್ತಿದ್ದೆ. ಮೈಕಲ್ ಜ್ಯಾಕ್ಸನ್ ನನ್ನ ಅಚ್ಚುಮೆಚ್ಚಿನ ಸಿಂಗರ್. ಅವರಂತೆ ಹಾಡುವುದನ್ನು ಮತ್ತು ಡ್ಯಾನ್ಸ್ ಮಾಡುವುದನ್ನು ಪ್ರ್ಯಾಕ್ಟೀಸ್ ಮಾಡುತ್ತಿದ್ದೆ. ಆ ಒಲವೇ ಇಂದು ನನ್ನದೇ ಚಿತ್ರಕ್ಕೆ ಹಾಡಲು ಅವಕಾಶ ಮಾಡಿಕೊಟ್ಟಿದೆ' ಎಂದು ಲೈಫ್ ಈಸ್ ಬ್ಯೂಟಿಫುಲ್ ಚಿತ್ರದಲ್ಲಿ ಮೊದಲ ಬಾರಿಗೆ ಹಾಡಿದ ಅನುಭವವನ್ನು ಬಿಚ್ಚಿಡುತ್ತಾರೆ ಪೃಥ್ವಿ ಅಂಬರ್.

ಇದೊಂದು ಮೋಟಿವೇಷನಲ್ ಸಾಂಗ್ ಆಗಿದ್ದು ನೊಬಿನ್ ಪೌಲ್ ಹಾಡಿಗೆ ಸಂಗೀತ ಸಂಯೋಜಿಸಿದ್ದಾರೆ. ಈ ರಾಗವನ್ನು ಕೇಳಿಸಲು ನಿರ್ದೇಶಕರಾದ ಅರುಣ್ ಕುಮಾರ್ ಹಾಗೂ ಸಾಬು ಅಲೋಶಿಯಸ್ ಅವರಿಗೆ ಕಳುಹಿಸಿದ್ದಾರೆ. ಆ ಮ್ಯೂಸಿಕ್ ಟ್ರ್ಯಾಕ್‍ಅನ್ನು ಕೇಳಿಸಿಕೊಂಡ ಪೃಥ್ವಿ ಅಂಬರ್ ತಾವೇ ಒಮ್ಮೆ ತಮ್ಮದೇ ಸಾಲುಗಳನ್ನು ಸೇರಿಸಿ ಹಾಡಿದ್ದಾರೆ. ಅದನ್ನು ಕೇಳಿದ ನಿರ್ದೇಶಕರು ಹಾಗೂ ಸಂಗೀತ ನಿರ್ದೇಶಕ ನೊಬಿನ್ ಪೌಲ್ ನೀವೇ ಹಾಡಿ ಎಂದು ಬಿಟ್ಟರು. ಆ ಮೂಲಕ ಚೊಚ್ಚಲ ಬಾರಿಗೆ ಮೈಕ್ ಮುಂದೆ ನಿಂತು ಪೃಥ್ವಿ ಅಂಬರ್ ಗಾಯಕನಾಗಿಯೂ ಕಂಠದಾನವನ್ನೂ ಮಾಡಿದ್ದಾರೆ.

ಪೃಥ್ವಿ ಅಂಬರ್


ಇನ್ನು ಪೃಥ್ವಿ ಹಾಡುಗಾರಿಕೆಯ ಟ್ಯಾಲೆಂಟ್ ನೋಡಿ ಲೈಫ್ ಈಸ್ ಬ್ಯೂಟಿಫುಲ್ ಚಿತ್ರತಂಡವೂ ಆಶ್ಚರ್ಯಪಟ್ಟಿದೆ. ಚೆನ್ನಾಗಿಯೇ ಹಾಡುತ್ತಾರಲ್ಲಾ ಎಂಬ ಕಾರಣಕ್ಕೆ ಸಂಗೀತ ನಿರ್ದೇಶಕರು, ಅವಕಾಶ ನೀಡಿದ್ದಾರೆ. ಇದೊಂದು ಬಯಸದೇ ಬಂದ ಭಾಗ್ಯ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಪೃಥ್ವಿ ಅಂಬರ್.

ಲೈಫ್ ಈಸ್ ಬ್ಯೂಟಿಫುಲ್


ಪೃಥ್ವಿ ಅಂಬರ್ ನಾಯಕನಾಗಿರುವ ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಮತ್ತು ಲಾಸ್ಯಾ ನಾಗರಾಜ್ ಪ್ರಮುಖ ತಾರಾಗಣದಲ್ಲಿದ್ದಾರೆ. ಮಮ್ಮಿ ಸೇವ್ ಮಿ ಹಾಗೂ ದೇವಕಿ ಖ್ಯಾತಿಯ ನಿರ್ದೇಶಕ ಲೋಹಿತ್ ರಾಜ್ ಅವರು ಫ್ರೈಡೇ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಚೊಚ್ಚಲ ಬಾರಿಗೆ ನಿರ್ಮಾಣ ಮಾಡುತ್ತಿರುವ ಲೈಫ್ ಈಸ್ ಬ್ಯೂಟಿಫುಲ್ ಚಿತ್ರಕ್ಕೆ ಸಿಲ್ವರ್ ಟ್ರೈನ್ ಇಂಟರ್​ನ್ಯಾಷನಲ್ ಬ್ಯಾನರ್​ ಅಡಿಯಲ್ಲಿ ಕಿಶೋರ್ ನರಸಿಂಹಯ್ಯ ಕೂಡ ಕೈಜೋಡಿಸಿದ್ದಾರೆ.
Published by: zahir
First published: December 17, 2020, 9:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories