Pruthvi Ambaar: ಪೃಥ್ವಿ ಅಂಬರ್​ಗೆ ಜೊತೆಯಾದ ನಟಿ ಆಯಾನಾ, ದೂರದರ್ಶನ ಸಿನಿಮಾದ ಹೊಸ ಅಪ್​ಡೇಟ್​

Dooradarshana: ಈಗಾಗಲೇ ಹಲವಾರು ಸಿನಿಮಾಗೆ ಸಂಭಾಷಣೆ ಬರೆದು ಹಾಗೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುವ ಅನುಭವ ಹೊಂದಿದ್ದಾರೆ. ಕೇವಲ ನಿರ್ದೇಶನ ಮಾತ್ರವಲ್ಲದೇ ಈ ಸಿನಿಮಾಗೆ ಕಥೆ ಬರೆದಿದ್ದಾರೆ.

ನಟ ಪೃಥ್ವಿ ಅಂಬರ್

ನಟ ಪೃಥ್ವಿ ಅಂಬರ್

  • Share this:
ಪೃಥ್ವಿ ಅಂಬರ್ (Pruthvi Ambaar) ಕನ್ನಡ ಚಿತ್ರರಂಗದಲ್ಲಿ (sandalwood) ಸಕ್ರಿಯವಾಗಿರುವ ಪ್ರತಿಭಾನ್ವಿತ ನಟ. ದಿಯಾ (Dia) ಸಿನಿಮಾ ಮೂಲಕ ಎಲ್ಲರ ಮನಗೆದ್ದು, ಅದ್ಭುತ ನಟ ಎನಿಸಿಕೊಂಡಿದ್ದಾರೆ. ಈ ಸಿನಿಮಾ ನಂತರ ಪೃಥ್ವಿ ಅವರಿಗೆ ಸಾಲು ಸಾಲು ಅವಕಾಶಗಳು ಬರುತ್ತಿದ್ದು, ಹಲವಾರು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇದೀಗ ಮತ್ತೊಂದು ಚಿತ್ರದ ಶೂಟಿಂಗ್ ಮುಗಿದಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ದೂರದರ್ಶನ ಎಂಬ ಹೆಸರಿನ ಈ ಸಿನಿಮಾ ಟೈಟಲ್​  ಟೀಸರ್ ಇತ್ತೀಚೆಗೆ ರಿವೀಲ್ ಆಗಿದ್ದು, ಎಲ್ಲೆಡೆ ಸದ್ದು ಮಾಡುತ್ತಿದೆ. ಇದೀಗ ದೂರದರ್ಶನ (Dooradarshana ) ಸಿನಿಮಾ ತಂಡ ಚಿತ್ರದ ನಾಯಕಿಯನ್ನು ಪರಿಚಯಿಸಿದೆ. ಇಲ್ಲಿ ಇರಲಾರೆ ಅಲ್ಲಿಗೆ ಹೋಗಲಾರೆ ಎಂಬ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದ್ದ ನಾಯಕಿ ಆಯಾನಾ ಈ ದೂರದರ್ಶನ ಸಿನಿಮಾದಲ್ಲಿ  ಪೃಥ್ವಿ ಅಂಬರ್ ಗೆ ಜೋಡಿಯಾಗಿ ನಟಿಸುತ್ತಿದ್ದಾರೆ.  

ಹೊಸ ಕಥೆ ಹೇಳಲು ಹೊರಟಿದ್ದಾರೆ ನಿರ್ದೇಶಕರು

ಈ ಸಿನಿಮಾದ ಟೈಟಲ್​ ಹೇಗೆ ವಿಭಿನ್ನವಾಗಿದಿಯೋ ಹಾಗೆಯೇ ಕಥೆ ಕೂಡ ವಿಭಿನ್ನವಾಗಿದೆ. ಈ ಸಿನಿಮಾ ಬಗ್ಗೆ ಮಾಹಿತಿ ಕೊಟ್ಟ ನಿರ್ದೇಶಕ ಸುಕೇಶ್​ ಶೆಟ್ಟಿ, ದೂರದರ್ಶನ ಸಿನಿಮಾಗೆ ನಾಯಕಿ ಪಾತ್ರಕ್ಕೆ ಆಡಿಷನ್ ಕರೆಯಲಾಗಿತ್ತು. 30 ರಿಂದ 40 ಜನರು ಈ ಆಡಿಷನ್ ನಲ್ಲಿ ಭಾಗವಹಿಸಿದ್ದರು. ಆದರೆ ಕೊನೆಯದಾಗಿ ಆಯಾನಾ ಈ ಪಾತ್ರಕ್ಕೆ ಸೂಕ್ತ ಎನಿಸಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಆಯಾನಾ, ಮೈತ್ರಿ ಎನ್ನುವ ಹುಡುಗಿಯ ಪಾತ್ರದಲ್ಲಿ ನಟಿಸುತ್ತಿದ್ದು, ಆಟೋ ಡ್ರೈವರ್ ಮಗಳಾಗಿ ಅಪ್ಪನ ಆಸರೆಯಲ್ಲಿ ಬೆಳೆಯುವ ಹುಡುಗಿ ಪ್ರೀತಿಸಿದಾಗ ಏನಾಗುತ್ತದೆ ಎಂಬುದು ಇಲ್ಲಿ ತಿರುವು, ಇದೇ ಈ ಕತೆಯ ಜೀವಾಳ ಎಂದಿದ್ದಾರೆ.ಈ ಸಿನಿಮಾದಲ್ಲಿ ಉಗ್ರಂ ಮಂಜು, ಸುಂದರ್ ವೀಣಾ  ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಜೊತೆಗೆ  ಹರಿಣಿ, ದೀಪಕ್ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್, ಸೂರಜ್ ಮಂಗಳೂರು, ಸೂರ್ಯ ಕುಂದಾಪುರ ಸೇರಿದಂತೆ ಅದ್ಬುತ ಕಲಾವಿದರ ದಂಡು ಈ ಸಿನಿಮಾದಲ್ಲಿದೆ.

ಇದನ್ನೂ ಓದಿ: ನೂರು ದಿನ ಪೂರೈಸಿದ ಆರ್​ಆರ್​ಆರ್​, ರಾಜಮೌಳಿ ಸಿನಿಮಾಗೆ ಬಹುಪರಾಕ್ ಎಂದ ಫ್ಯಾನ್ಸ್

ಈ ಸಿನಿಮಾದ ನಿರ್ದೇಶನದ ಜವಾಬ್ದಾರಿಯನ್ನು ಸುಕೇಶ್​ ಶೆಟ್ಟಿ ವಹಿಸಿಕೊಂಡಿದ್ದು, ಈಗಾಗಲೇ ಹಲವಾರು ಸಿನಿಮಾಗೆ ಸಂಭಾಷಣೆ ಬರೆದು ಹಾಗೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುವ ಅನುಭವ ಹೊಂದಿದ್ದಾರೆ. ಕೇವಲ ನಿರ್ದೇಶನ ಮಾತ್ರವಲ್ಲದೇ ಈ ಸಿನಿಮಾಗೆ ಕಥೆ ಬರೆದಿದ್ದಾರೆ. ಇದು ಅವರ ಮೊದಲ ಸಿನಿಮಾವಾಗಿದ್ದು, ವಿಭಿನ್ನ ಕಥೆಯನ್ನು ಹೊಂದಿದೆ ಎನ್ನಲಾಗುತ್ತಿದೆ.

ಸದ್ಯದಲ್ಲಿಯೇ ಸಿನಿಮಾ ಬಿಡುಗಡೆ

ಇನ್ನು ಈಗಾಗಲೇ ಈ ಸಿನಿಮಾದ ಶೂಟಿಂಗ್ ಮಂಗಳೂರು ಹಾಗೂ ಪುತ್ತೂರಿನ ಬಳಿ ಆಗಿದೆ. ಇನ್ನು ಈ ಸಿನಿಮಾಗೆ ವಿಎಸ್ ಮೀಡಿಯಾ ಎಂಟರ್ ಪ್ರೈಸಸ್ ಬ್ಯಾನರ್ ನಡಿ ರಾಜೇಶ್ ಭಟ್ ಬಂಡವಾಳ ಹಾಕಿದ್ದು, ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಉಗ್ರಂ ಮಂಜು ಜವಾಬ್ದಾರಿ ಹೊತ್ತಿದ್ದಾರೆ. ಇನ್ನು ವಾಸುಕಿ ವೈಭವ್ ಸಂಗೀತ, ಅರುಣ್ ಸುರೇಶ್ ಕ್ಯಾಮೆರಾ ವರ್ಕ್, ನಂದೀಶ್ ಟಿಜಿ ಸಂಭಾಷಣೆ, ಪ್ರದೀಪ್ ಆರ್ ರಾವ್ ಸಂಕಲನವಿದೆ.

ದಿಯಾ ಸಿನಿಮಾದ ಅಭಿನಯಕ್ಕಾಗಿ ಪೃಥ್ವಿ ಅಂಬರ್ ಅವರಿಗೆ ಚೊಚ್ಚಲ ಸಿನಿಮಾದ ಅತ್ಯುತ್ತಮ ನಟ ಎಂದು ಸೈಮಾ ಪ್ರಶಸ್ತಿ ಕೂಡ ಲಭಿಸಿತ್ತು. ದಿಯಾ ಚಿತ್ರ ಕಥೆ , ಮೇಕಿಂಗ್ ಮತ್ತು ಕಲಾವಿದರ ನಟನೆಯ ಕಾರಣದಿಂದ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು ಎಂಬುವುದು ಇದೀಗ ಹಳೆಯ ಸಂಗತಿ. ಈಗ ದಿಯಾ ಸಿನಿಮಾದ ಹಿಂದಿ ಅವೃತ್ತಿ ಕೂಡ ಸಿದ್ಧವಾಗುತ್ತಿದ್ದು, ಪೃಥ್ವಿ ಅಂಬರ್ ಅವರನ್ನು ಕೂಡ ಅದರಲ್ಲಿ ಕಾಣಬಹುದು. ಹಿಂದಿಯಲ್ಲಿ ದಿಯಾ ಸಿನಿಮಾದ ಹೆಸರನ್ನು ಡಿಯರ್ ದಿಯಾ ಎಂದು ಬದಲಾಯಿಸಲಾಗಿದೆ.

ಇದನ್ನೂ ಓದಿ: ಶಿವಣ್ಣನಿಗೂ ಟ್ರೋಲ್​ಗಳ ಕಾಟ! ಬೇಸರಗೊಂಡು ಈ ರೀತಿ ನಿರ್ಧಾರ ಮಾಡಿದ್ರಾ ಹ್ಯಾಟ್ರಿಕ್ ಹೀರೋ?

ಇನ್ನು ನಟ ಫುಲ್ ಬ್ಯುಸಿ ಇದ್ದು, ಅವರು ಅಬ ಜಬ ಡಬ , ಶುಗರ್‌ಲೆಸ್‌ , ಲೈಫ್ ಇಸ್ ಬ್ಯೂಟಿಫುಲ್ ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲ, ವಿಜಯ್ ಮಿಲ್ಟನ್ ಅವರು ನಿರ್ದೇಶಿಸುತ್ತಿರುವ ಒಂದು ತಮಿಳು ಸಿನಿಮಾದಲ್ಲೂ ಪೃಥ್ವಿ ಅಭಿನಯಿಸುತ್ತಿದ್ದಾರೆ.
Published by:Sandhya M
First published: